Saturday 27th, April 2024
canara news

ಇರ್ಲಾದಲ್ಲಿನ ಶ್ರೀ ಅದಮಾರು ಮಠದ ಮುಂಬಯಿ ಶಾಖೆಯಲ್ಲಿ

Published On : 24 Aug 2017   |  Reported By : Rons Bantwal


ಎಡನೀರುಶ್ರೀಗಳಿಂದ ಪ್ರಸ್ತುತಗೊಂಡ ಭಕ್ತಿ ಸಂಗೀತಾರ್ಚನೆ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ,: ಅಂಧೇರಿ ಪಶ್ಚಿಮದ ಇರ್ಲಾ ಇಲ್ಲಿನ ಶ್ರೀ ಅದಮಾರು ಮಠದ ಮುಂಬಯಿ ಶಾಖೆಯಲ್ಲಿ ಇಂದಿಲ್ಲಿ ಬುಧವಾರ ಸಂಜೆ ಮಹಾನಗರ ಮುಂಬಯಿಯಲ್ಲಿ 57ನೇ ವಾರ್ಷಿಕ ಚಾತುರ್ಮಾಸ್ಯ ವೃತಾಚರಣೆ ಯಲ್ಲಿರುವ ಎಡನೀರು ಮಠದ ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಥೋಟಕಾಚಾರ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮಿಜಿ ಅವರು ಭಕ್ತಿ ಸಂಗೀತಾರ್ಚನೆ ನಡೆಸಿದರು.

ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮಿಜಿ ಅವರ ಸಹಕಾರ ಮತ್ತು ಮಠದ ಮುಂಬಯಿ ಶಾಖೆಯ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಪ್ರಸಿದ್ಧಿಯ ಹಿಮ್ಮೇಳ ವಾದಕರ ಭಕ್ತಿ ಸಂಗೀತಾರ್ಚನೆ ನಡೆಸುವ ಮುನ್ನ ಉಪಸ್ಥಿತ ಭಕ್ತರನ್ನು ಹರಸಿದ ಎಡನೀರುಶ್ರೀಗಳು ಪಂಚೇಂದ್ರಿಯಗಳಿಗೆ ಏಕ ಕಾಲದಲ್ಲಿ ಶಕ್ತಿ ಭರಿಸುವ ತಾಕತ್ತು ಭಕ್ತಿಯಲ್ಲಿದ್ದು ಇಂತಹ ಭಕ್ತಿ ಭಜನೆಗಳಲ್ಲಿ ಅನುಗ್ರಹವಿದೆ. ಭಕ್ತಿಸುಧಾ ಕಾರ್ಯಕ್ರಮಗಳು ಜೀೀವನ ಜ್ಯೋತಿ ಬೆಳಗಿಸುತ್ತಿದ್ದು ಭಕ್ತಿಯ ನೀನಾದ ಮನಸ್ಸನ್ನು ಶುದ್ಧಿಸಿ ಆತ್ಮೋದ್ಧಾರಕ್ಕೆ ಪ್ರೇರೆಪಿಸ್ತುದೆ. ಭಕ್ತಿ ಸಂಗೀತಾರ್ಚನೆ ಅಂತಹ ಭಕ್ತಿಸುಧಾ ಕಾರ್ಯಕ್ರಮಗಳು ಮಾನವನ ಮನವನ್ನು ಭಕ್ತಿರಸದಿಂದ ತುಂಬುತ್ತಿದ್ದು ಪೂರ್ಣಪ್ರಜ್ಞಾತ್ವಕ್ಕೆ ಭಜನೆ, ಸಂಗೀತ ಪ್ರೇರಣೆಯಾಗಿದೆ. ಈ ಮೂಲಕ ಭಕ್ತಿಸುಧಾದಿಂದ ಆತ್ಮವಿಶ್ವಾಸ ತುಂಬುತ್ತದೆ ಎಂದರು.

ಭಾರತೀಶ್ರೀಗಳು ತನ್ನ ಸ್ವರಚಿತ ಮಹಾಗಣಪತಿ ಸ್ತುತಿಯನ್ನಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭೂಷಣ್ ಪರ್ಚುರೆ (ತಬಲಾ), ಎ.ಎಲ್ ನಾಥ (ಮೃದಂಗ) ಮತ್ತು ಕುಮಾರ್ ಕೃಷ್ಣನ್ (ಹಾರ್ಮೋನಿಯಂ) ಸಂಗೀತಕ್ಕೆ ಹಿನ್ನಲೆ ವಾದಕರಾಗಿ ಸಹಕರಿಸಿದ್ದು, ಕಾರ್ಯಕ್ರಮದಲ್ಲಿ ಎಡನೀರು ಮಠದ ಕಾರ್ಯದರ್ಶಿ ರಾಜೇಂದ್ರ ಕಲ್ಲೂರಾಯ, ಶ್ರೀಪತಿ ಭಟ್ ಕಲ್ಮಾಂಜೆ, ವಾಸುದೇವ ಉಡುಪ, ಗೋಪಾಲ ಭಟ್, ಮಾಳ ಶ್ರೀನಿವಾಸ ಭಟ್, ಮದ್ಭಾರತ ಮಂಡಳಿಯ ಜಗನ್ನಾಥ ಪುತ್ರನ್, ಜಗನ್ನಾಥ ಕಾಂಚನ್, ಪಿ.ವಿ ಐತಾಳ್, ನ್ಯಾ| ಗೀತಾ ಆರ್.ಎಲ್ ಭಟ್, ವಾಣಿ ಆರ್.ರಾವ್, ಮಾ| ಶ್ರೀಷ ಆರ್.ರಾವ್ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪ್ರಮುಖರಾಗಿ ಉಪಸ್ಥಿತರಿದ್ದರು.

ಅದಮಾರು ಮಠ ಮುಂಬಯಿ ಶಾಖಾ ದಿವಾನ ಲಕ್ಷಿ ್ಮೀನಾರಾಯಣ ಮುಚ್ಚಿತ್ತಾಂಯ ಮತ್ತು ಲಕ್ಷಿ ್ಮೀ ಎಲ್. ಮುಚ್ಚಿತ್ತಾಂಯ ದಂಪತಿ ಶ್ರೀಗಳಿ ಸಾಂಪ್ರದಾಯಿಕವಾಗಿ ಸುಖಾಗಮನ ಬಯಸಿದರು. ವಿದ್ವಾನ್ ಆರ್.ಎಲ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಮಠದ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ವಂದಿಸಿದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು

Comment Here