Friday 26th, April 2024
canara news

ಯಥಾಸ್ಥಿತಿಗೆ ಮರುಕಳಿಸಿದ ರಾಷ್ಟ್ರದ ಆಥಿರ್üಕ ರಾಜಧಾನಿ ಎಲ್ಲೆಲ್ಲೂ ಮೆರೆಯಲಾರಂಭಿಸಿದ ಸಂಭ್ರಮದ ವಾತಾವರಣ

Published On : 30 Aug 2017   |  Reported By : Rons Bantwal


ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಆ.30: ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ತತ್ತರಿಸಿದ ಮುಂಬಯಿ ಹಾಗೂ ಉಪನಗರಗಳ ಜನತೆ ಇಂದು ಮಳೆ ಮತ್ತು ಭಯ ಮುಕ್ತರಾಗಿ ಯಥಾಸ್ಥಿತಿ ಕಾಪಾಡುವಲ್ಲಿ ಸಶಕ್ತವಾಗಿದೆ. ಆದುದರಿಂದ ರಾಷ್ಟ್ರದ ಆಥಿರ್üಕ ರಾಜಧಾನಿ ಮುಂಬಯಿಯಲ್ಲಿ ಮತ್ತೆ ಎಲ್ಲೆಲ್ಲೂ ಸಂಭ್ರಮದ ವಾತಾವರಣ ಮರುಕಳಿಸಿದೆ.

ಮುಖ್ಯವಾಗಿ ಸಂಚಾರ ವ್ಯವಸ್ಥೆ ಎಲ್ಲೆಲ್ಲೂ ಮಾಮೂಲಿ ಸ್ಥಿತಿಯತ್ತ ಮರುಕಳಿಸಿದ್ದು ಮಂಗಳವಾರ ರಾತ್ರಿಯಿಡೀ ರಸ್ತೆ, ಆಶ್ರಯ, ಕಚೇರಿಗಳಲ್ಲಿ ಕಳೆದ ಜನತೆ ರಾಜ್ಯ ಸರಕಾರವು ಆದೇಶಿಸಿ ಸರಕಾರಿ ರಜೆ ನಿಮಿತ್ತ ಬುಧವಾರ ಮುಂಜಾನೆಗೆ ಆರಂಭಗೊಂಡ ರೈಲು, ವಾಹನ ಸಂಚಾರದ ಮುಖೇನ ತಮತಮ್ಮ ಮನೆ ಸೇರಿದ್ದಾರೆ. ಈ ಬಾರಿಯ ಪ್ರಳಯಕ್ಕೆ ಮುಂಬಯಿ, ಥಾಣೆ, ನವಿಮುಂಬಯಿ ಉಪನಗರಗಳಲ್ಲಿ ಕೆಲವೊಂದು ಅಹಿತಕರ ಘಟನೆಗಳು ಸಂಭವಿಸಿದ್ದು ಮೃತರ ಸಂಖ್ಯೆ ಐದಕ್ಕೇರಿದೆ. ಆ ಪಯ್ಕಿ ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ವ್ಯಕ್ತಿಯೊಬ್ಬರು ಥಾಣೆ ರಬೋಡಿ ಅಲ್ಲಿನ ಕೊಲ್ಸೆವಾಡಿ ನಾಲದಲ್ಲಿ ಕೊಚ್ಚಿಕೊಂಡಿ ಹೋಗಿ ಮೃತಪಟ್ಟಿರುವರು. ವಿಕ್ರೋಲಿಯ ಸುಭಾಶ್‍ನಗರದಲ್ಲಿ ಮನೆಯೊಂದು ಕುಸಿದು ಬಿದ್ದು ಮಕ್ಕಳ ಸಹಿತ ಮೂವರು ವಿಧಿವಶರಾಗಿದ್ದಾರೆ.

ಹೌಸಿಂಗ್ ಸೊಸೈಟಿ, ಜೋಪಾಡ್‍ಪಟ್ಟಿ, ಮನೆಮಂದಿ, ಅಂಗಡಿ ಮುಗ್ಗಂಟುಗಳ ಮಾಲಿಕರು ತÀಮ್ಮ ವಾಸಸ್ಥಳ, ವ್ಯಾಪಾರಕೇಂದ್ರಗಳಲ್ಲಿ ನುಗ್ಗಿದ್ದ ನೀರನ್ನು ಹೊರಚೆಲ್ಲಿ ಮತ್ತೆ ವ್ಯಾಪಾರಕ್ಕೆ ಸಿದ್ಧತೆ ನಡೆಸಿದ್ದಾರೆ. ಮುನ್ನಚ್ಚರಿಕಾ ಕ್ರಮವಾಗಿ ಮುಂಬಯಿ ಪೆÇೀಲಿಸರು ಬ್ಯಾರಿಕೇಡ್ ಹಾಕಿ ಕ್ರಮಕೈಗೊಂಡಿದ್ದು, ಮಹಾರಾಷ್ಟ್ರ ಶಾಸನ, ಬಿಎಂಸಿ ಅಧಿಕಾರಿ, ಕರ್ಮಚಾರಿಗಳು ಸುಚಿತ್ವಕ್ಕಾಗಿ ವ್ಯವಸ್ಥೆಯಲ್ಲಿ ಕಾರ್ಯನಿರತರಾಗಿದ್ದಾರೆ.

ಆ ಮಧ್ಯೆಯೂ ಕಳೆದೆರಡು ದಿನಗಳಿಂದ ಮುಂಬಯಿಯಲ್ಲಿ ಏನೂ ನಡೆದೇ ಇಲ್ಲ ಎಂಬಂತೆ ತಿಳಿದ ಇಲ್ಲಿನ ಜನತೆ ಮತ್ತೆ ಕೆಲಸ, ವ್ಯಾಪಾರಕ್ಕೆ ಸನ್ನದ್ಧರಾಗಿ ಸಾಮರಸ್ಯದಿಂದಲೇ ತಮ್ಮತಮ್ಮ ಕರ್ತವ್ಯದಲ್ಲಿ ತೊಡಗಿಸಿ ಕೊಂಡು ತಮ್ಮ ಕರ್ತವ್ಯನಿಷ್ಠೆ ಮೆರೆದಿದ್ದಾರೆ.

ಎರಡು ದಿನಗಳಿಂದ ಕುಂಭಧ್ರೋಣ ಸದೃಶ ಮಹಾಮಳೆಗೆ ಮುಂಬಯಿ ಮಾಯಾನಗರಿ ಭಾಗಶಃ ಜನಜೀವನ ಅಸ್ತವ್ಯಸ್ತ ಗೊಂಡಿದ್ದು ಇನ್ನೂ ಅನೇಕ ಕಡೆಗಳಲ್ಲಿ ವಿದ್ಯುತ್ ಸಂಚಾರದಲ್ಲಿ ವ್ಯತ್ಯಯವಾಗಿದೆ. ಆದುದರಿಂದ ಕುಡಿಯುವ ನೀರೂ ಬಂದಿಲ್ಲ. ಆದರೂ ಸಾಮರಸ್ಯಕ್ಕೆ ಮಾದರಿಯಾದ ಮುಂಬಯಿಗರು ನೀರು, ಹಾಲು ಆಹಾರಧಾನ್ಯ ಇತ್ಯಾದಿಗಳನ್ನು ಪರಸ್ಪರ ಹಂಚಿಕೊಂಡು ಒಬ್ಬರಿಗೊಬ್ಬರು ಸಹಕರಿಸುತ್ತಾ ಬಾಳುತ್ತಿದ್ದಾರೆ. ಆದುದರಿಂದಲೇ ಭೀಕರ ಮುಸಲಧಾರೆಗೆ ತತ್ತರಿಸಿದ ಮುಂಬಯಿ ಕರ್ಮಭೂಮಿಯ ಜನತೆ ಇಂದು ಎಂದಿನಂತೆ ತಮ್ಮ ಕಾರ್ಯಕ್ರಮ ಕೆಲಸಗಳಲ್ಲಿ ಮಗ್ನರಾಗಿದ್ದರು. ಮುಂಬಯಿ ಸಂಚಾರದ ಜೀವನಾಡಿ ಲೋಕಲ್ ರೈಲು ಸೇವೆ ಎಂದಿನಂತೆ ಕಾರ್ಯನಿರ್ವಾಹಿಸಿದ್ದರೂ ಮಧ್ಯ ಹಾಗೂ ಹಾರ್ಬರ್ ರೈಲು ಯಾನದಲ್ಲಿ ಕೊಂಚ ವಿಳಂಬ ಕಾಣುತ್ತಿತ್ತು. ಕುರ್ಲಾ ಅಲ್ಲಿನ ಲೋಕಮಾನ್ಯ ತಿಲಕ್ ಟರ್ಮಿನಲ್ಸ್ ಸೇರಿದಂತೆ ಬಾಂಬೇ ಸೆಂಟ್ರಲ್, ವಿಟಿ ಅಲ್ಲಿನ ಛತ್ರಪತಿ ಶಿವಾಜಿ ಟರ್ಮಿನಲ್ಸ್, ಬಾಂದ್ರಾ ಟರ್ಮಿನಲ್ಸ್‍ನಿಂದಲೂ ಹೊರರಾಜ್ಯಗಳಿಗೆ ಹೋಗುವ ರೈಲು ಯಾನ ಆರಂಭವಾದ ಕಾರಣ ಪ್ರಯಾಣಿಕರು ನಿಟ್ಟಿಸಿರು ಬಿಡುವಂತಾಯಿತು. ವಿಮಾನಯಾನದಲ್ಲಿ ಕೆಲವೊಂದು ಪ್ರಯಾಣಗಳನ್ನು ರದ್ದುಗೊಳಿಸಿದ್ದರೂ ಮುಂಬಯಿ ಮಂಗಳೂರು ವಿಮಾನಯಾನ ಎಂದಿನಂತೆ ಸÀಂಚಾರ ನಡೆಸಿವೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here