Wednesday 8th, May 2024
canara news

ಮಂಗಳೂರು ವಿಮಾನ ನಿಲ್ದಾಣ ಕೈಚೀಲಗಳ ಟ್ಯಾಗ್ ಪದ್ಧತಿ ಶೀಘ್ರ ಕೊನೆ

Published On : 14 Sep 2017   |  Reported By : Canaranews network


ಮಂಗಳೂರು: ವಿಮಾನದ ಪ್ರಯಾಣಿಕರ ಕೈಚೀಲಗಳ ಸ್ಟಾಂಪಿಂಗ್ ಟ್ಯಾಗ್ ಪದ್ಧತಿ ರಾಂಚಿ, ಮಂಗಳೂರು ಸಹಿತ ದೇಶದ 10 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಶೀಘ್ರದಲ್ಲೇ ಕೊನೆಗೊಳ್ಳಲಿದೆ.ಸದ್ಯ ಹ್ಯಾಂಡ್ ಬ್ಯಾಗ್ಗಳಿಗೆ ಟ್ಯಾಗ್ ಹಾಕಿ, ಅದನ್ನು ಸಿಐಎಸ್ಎಫ್ ಸಿಬ್ಬಂದಿ ಪರಿಶೀಲನೆ ಮಾಡುತ್ತಿದ್ದಾರೆ.

ಚೀಲದಲ್ಲಿ ಯಾವುದೇ ಆಕ್ಷೇಪಾರ್ಹ ವಸ್ತುಗಳಿಲ್ಲ ಎಂದು ಖಾತ್ರಿಯಾದ ಬಳಿಕ ಅದಕ್ಕೆ ಸೀಲ್ ಒತ್ತುತ್ತಾರೆ. ಈ ಪದ್ಧತಿಯಿಂದಾಗಿ ದೇಶದೊಳಗೆ ವಿಮಾನದಲ್ಲಿ ಪ್ರಯಾಣಿಸುವವರಿಗೆ ತುಂಬ ಕಿರಿಕಿರಿ ಉಂಟಾಗುತ್ತಿತ್ತು. ಕೆಲ ಪ್ರಯಾಣಿಕರು ಸ್ಟ್ಯಾಪಿಂಗ್ ಮಾಡಿಸುವುದನ್ನು ಮರೆತರೆ ತುಂಬ ಸಮಯ ಹಿಡಿಯುತ್ತಿತ್ತು. ಕೆಲವು ತಿಂಗಳಲ್ಲಿ ಈ ಪದ್ಧತಿ ರದ್ದುಗೊಳಿಸಲು ನಿರ್ಧರಿಸಲಾಗಿದ್ದು, ಪ್ರಯಾಣಿಕರ ಸಾಕಷ್ಟು ಸಮಯ ಉಳಿತಾಯವಾಗಲಿದೆ.ಕೈಚೀಲಗಳ ಸ್ಟ್ಯಾಂಪಿಂಗ್ ಟ್ಯಾಗ್ ಪದ್ಧತಿಯ ಬದಲಿಗೆ ಆಧುನಿಕ ಸ್ಮಾರ್ಟ್ ಕೆಮರಾ ಹಾಗೂ ಭದ್ರತಾ ಕ್ರಮಗಳನ್ನು ಅಳವಡಿಸಲಾಗಿದೆ.




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here