Monday 6th, May 2024
canara news

ಕಾಮನ್‍ವೆಲ್ತ್ ಪವರ್‍ಲಿಫ್ಟಿಂಗ್‍ನಲ್ಲಿ ಸ್ವರ್ಣ ಪದಕ ವಿಜೇತ ಪ್ರದೀಪ್ ಕುಮಾರ್ ಆಚಾರ್ಯ ತಾಯ್ನಾಡಿಗೆ ಆಗಮನ

Published On : 23 Sep 2017   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಸೆ.23: ಕರ್ನಾಟಕದ ಪ್ರತಿಭಾನ್ವಿತ ಕ್ರೀಡಾಪಟು, ಪವರ್‍ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಅವರು ದಕ್ಷಿಣ ಆಫ್ರಿಕಾದ ಪೆÇಚೆಫ್ ಸ್ಟೋಮ್‍ನಲ್ಲಿ ನಡೆದ ಕಾಮನ್‍ವೆಲ್ತ್ ಪವರ್‍ಲಿಫ್ಟಿಂಗ್ ಹಾಗೂ ಬೆಂಚ್‍ಪ್ರೆಸ್ ಚಾಂಪಿಯಾನ್ ಶಿಪ್‍ನಲ್ಲಿ ಸ್ಪರ್ಧಿಸಿ ಸ್ವರ್ಣ ಪದಕ ಹಾಗೂ ಬೆಸ್ಟ್ ಲಿಫ್ಟರ್ ಪ್ರಶಸ್ತಿ ಮುಡಿಗೇರಿಸಿಕೊಂಡು ವಿಶ್ವದ ಗಮನ ಸೆಳೆದು ಕಳೆದ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತವರೂರಿಗೆ ಹರ್ಷದಾಯಕವಾಗಿ ಮರಳಿದ್ದಾರೆ.

ಪ್ರದೀಪ್ ಕಾಮನ್‍ವೆಲ್ತ್ ಪವರ್ ಲಿಪ್ಟಿಂಗ್ ಇತಿಹಾಸದಲ್ಲಿ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಹೆಗ್ಗಳಿಕೆಗೆ ಪಾತ್ರರಾದ ಪ್ರದೀಪ್ ಇತ್ತೀಚೆಗೆ ನಡೆದ ಟೂರ್ನಿಯ ಇನ್ನೂ ಮೂರು ವಿಭಾಗಗಳ ಸ್ಪರ್ಧೆಯಾದ ಪವರ್ ಲಿಪ್ಟಿಂಗ್‍ಗಳಲ್ಲೂ ಪ್ರದೀಪ್ 1 ಚಿನ್ನ ಹಾ¥sóÀÇ 2 ಬೆಳ್ಳಿ ಪದಕ ಜಯಿಸಿದ್ದಾರೆ.

ಮಂಗಳೂರು ಊರ್ವ ಸ್ಟೋರ್ ನಿವಾಸಿ ಆಗಿರುವ ಪ್ರದೀಪ್ ಉರ್ವಾ ಇಲ್ಲಿನ ಬಾಲಾಂಜನೇಯ ಜಿಮ್ ಕೇಂದ್ರದಲ್ಲಿ ಸತೀಶ್ ಕುಮಾರ್ ಕುದ್ರೋಳಿ ಹಾಗೂ ಪ್ರಚೇತ್ ಕೆ ಅವರ ಮಾರ್ಗದರ್ಶನದಲ್ಲಿ ಪವರ್‍ಲಿಫ್ಟಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಫಿಟ್‍ನೆಸ್ ಉದ್ಯೋಗಿ ಆಗಿರುವ ಪ್ರದೀಪ್ ಭವಿಷ್ಯದಲ್ಲೂ ಭಾರತಕ್ಕಾಗಿ ಹಲವು ಪದಕ ಗೆಲ್ಲುವ ಗುರಿ ಇರಿಸಿದ್ದಾರೆ.

ಸೋಮವಾರ ಮುಂಬಯಿಗೆ ಆಗಮಿಸಿದ್ದ ಪ್ರದೀಪ್ ಪರೇಲ್‍ನಲ್ಲಿದ್ದು ಮಂಗಳವಾರ ಸಂಜೆ ಜೆಟ್‍ಎರ್‍ವೇಸ್ ವಿಮಾನ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದರು. ಪ್ರದೀಪ್ ಕುಮಾರ್ ಅವರನ್ನು ಬಂಧುಮಿತ್ರರು ಸ್ವಾಗತ ಕೋರಿದರು.




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here