Monday 6th, May 2024
canara news

ಬಂಟವಾಳದ ಬಂಟರ ಸಂಘದ ಅಧ್ಯಕ್ಷರಾಗಿ ನಗ್ರಿಗುತ್ತು ವಿವೇಕ್ ಶೆಟ್ಟಿ ಪುನಾರಾಯ್ಕೆ

Published On : 23 Sep 2017   |  Reported By : Rons Bantwal


ಮುಂಬಯಿ, ಸೆ.22: ಕರ್ನಾಟಕ ರಾಜ್ಯದಲ್ಲಿನ ಬಂಟರ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿ ಕೊಂಡಿರುವ ಬಂಟವಾಳದ ಬಂಟರ ಸಂಘ ಇದರ ಅಧ್ಯಕ್ಷರಾಗಿ ಮುಂಬಯಿ ಅಲ್ಲಿನ ಕೈಗಾರಿಕೋದ್ಯಮಿ, ಸಮಾಜ ಸೇವಕ ನಗ್ರಿಗುತ್ತು ವಿವೇಕ್ ಶೆಟ್ಟಿ ಪುನಾರಾಯ್ಕೆ ಆಗಿದ್ದಾರೆ. ಕಳೆದ ಗುರುವಾರ (ಸೆ.21) ಬಂಟವಾಳದ ಬಂಟರ ಭವನದ ಲ್ಲಿ ಜರಗಿದ ಸಂಘದ ಸಭೆಯಲ್ಲಿ ನಾಡಿನ ಪ್ರಸಿದ್ಧ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಸಮಾಜ ಸೇವಕ ತುಂಬೆ ಜಯರಾಮ್ ಸಾಮನಿ, ಸಂಘದ ಟ್ರಸ್ಟಿ ಬೋಳಂತೂರುಗುತ್ತು ಶಾಂತಾರಾಮ ಶೆಟ್ಟಿ ಮತ್ತಿತರ ಗಣ್ಯರ ಉಪಸ್ಥಿತಿ ಹಾಗೂ 500ಕ್ಕೂ ಅಧಿಕವಾಗಿ ನೆರೆದ ಬಂಟ ಬಾಂಧವರು ಸಮರ್ಥ ನಾಯಕ ವಿವೇಕ್ ಶೆಟ್ಟಿ ಅವರನ್ನೇ ಅವಿರೋಧವಾಗಿ ಆಯ್ಕೆ ಗೊಳಿಸಿದರು.

ಕಳೆದ ಮೂರು ವರ್ಷಗಳಿಂದ ಬಂಟವಾಳದ ಬಂಟರ ಸಂಘ ಅಧ್ಯರಾಗಿದ್ದು ತಮ್ಮ ಸೇವಾವಧಿಯಲ್ಲಿ ಸಂಘದ ಭವ್ಯ ಬಂಟರ ಭವನದ ನಿರ್ಮಾಣಗೈದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಉದ್ಘಾಟಿಸುವಲ್ಲಿ ಮಹತ್ತರ ಪಾತ್ರವಹಿಸಿ ಜನಮೆಚ್ಚುಗೆ ಪಡೆದ ಉದಯೋನ್ಮುಖ ನಾಯಕ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರು ದ್ವಿತೀಯ ಬಾರಿಗೆ ಅಂದರೆ 2017-2020ನೇ ಸಾಲಿಗೆ ಸಂಘದ ಅಧ್ಯಕ್ಷರನ್ನಾಗಿ ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು.

ನಗ್ರಿಗುತ್ತು ವಿವೇಕ್ ಶೆಟ್ಟಿ:
ಶಿಸ್ತುಬದ್ಧ ಮೇಸ್ಟ್ರು ಆಗಿದ್ದ ಮಠಂತಬೆಟ್ಟು ವಿಠಲ್ ಶೆಟ್ಟಿ ಮತ್ತು ಮೊಡಂಕಾಪುಗುತ್ತು ಚಂದ್ರಾವತಿ ವಿ.ಶೆಟ್ಟಿ ದಂಪತಿಯ ಸುಪುತ್ರರಾಗಿ ನಗ್ರಿಗುತ್ತು ಮನೆತನದ ಪ್ರತಿಷ್ಠೆಯನ್ನು ಮತ್ತಷ್ಟು ಶಿಖರಕ್ಕೇರಿಸುವಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟ ವಿವೇಕ್ ಶೆಟ್ಟಿ ಅವರು ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರು ಮತ್ತು ಸುರತ್ಕಲ್‍ನ ಕೆಆರ್‍ಇಸಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವೀಧರರು. ನಂತರ ತನ್ನ ಅಪಾರ ಅನುಭವ ಕ್ರೋಢಿಕರಿಸಿ ತನ್ನ ಸೃಜನಶೀಲತೆಯೊಂದಿಗೆ ಸ್ವಂತಿಕೆಯ ಟೆಕ್ನೊಥರ್ಮಾ ಫರ್ನೇಸಸ್ ಪ್ರೈವೇಟ್ ಲಿಮಿಟೆಡ್ ಔದ್ಯೋಗಿಕ ಉದ್ಯಮ (ಕಂಪನಿ) ಸ್ಥಾಪಿಸಿ ಇಂದು ದೇಶವಿದೇಶಗಳಲ್ಲಿ ಕಾರ್ಯನಿರ್ವಹಿಸುವ ಯಶಸ್ವಿ ಉದ್ಯಮಿ ಆಗಿದ್ದಾರೆ.

ಸದಾ ಲವಲವಿಕೆ, ಹಸನ್ಮುಖಿಯಾಗಿ ಕಾರ್ಯೋನ್ಮುಖರಾಗುವ ನಡುವೆಯೂ ಅಲ್ಫಾವಧಿಯನ್ನು ಸಮಾಜದ ಋಣ ಸಂದಾಯಕ್ಕೆ ಮುಡುಪಾಗಿರಿಸುತ್ತಿರುವ ಇವರು ವೃತ್ತಿಯಲ್ಲಿ ಉದ್ಯಮಿಯಾಗಿದ್ದರೂ, ಪ್ರವೃತ್ತಿಯಲ್ಲಿ ಸಮಾಜ ಸೇವೆ ಮತ್ತು ಸಂಸ್ಕೃತಿ ಪ್ರಿಯರಾಗಿ ಆಧುನಿಕ ಯುಗದ ಪೀಳಿಗೆಗೆ ಮಾದರಿಯಾಗಿದ್ದಾರೆ. ಮುಲುಂಡ್ ಬಂಟ್ಸ್ ಸಂಸ್ಥೆಯನ್ನು ಸ್ಥಾಪಿಸಿ `ಮುಲುಂಡ್ ಗುತ್ತು' ಎಂದೇ ಪ್ರಸಿದ್ಧಿಯಾದ ಮುಲುಂಡ್ ಬಂಟ್ಸ್ ಎಂದರೆ ನಗ್ರಿಗುತ್ತು ಎಂದೇ ಜನಜನಿತ. ಬಂಟರ ಸಂಘ ಮುಂಬಯಿ ಇದರ ಟ್ರಸ್ಟಿಯಾಗಿದ್ದು, ಉನ್ನತ ಶಿಕ್ಷಣ ಸಮಿತಿಯ ಉಪ ಕಾರ್ಯಾಧ್ಯಕ್ಷರಾಗಿ ಸೇವೆಗೈದÀು ಪ್ರಸ್ತುತ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷರಾಗಿ ಶ್ರಮಿಸುತ್ತಾ ಸಮಾಜ ಬಾಂಧವರ ಮಕ್ಕಳಿಗೆ ಸುಮಾರು 1.5 ಕೋಟಿ ರೂಪಾಯಿಗೂ ಅಧಿಕ ಆಥಿರ್sಕನೆರವು ನೀಡುವಲ್ಲಿ ಇವರ ಪಾತ್ರ ಹಿರಿದು. ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ (ಐಬಿಸಿಸಿಐ) ಇದರ ಕಾರ್ಯಧ್ಯಕ್ಷ ಆಗಿಯೂ ಶ್ರಮಿಸುತ್ತಿದ್ದಾರೆ. ವಿವೇಕ್ ಶೆಟ್ಟಿ ವಿಶೇಷವಾಗಿ ಪ್ರತಿಭಾನ್ವಿತ ಮಕ್ಕಳಿಗೆ ಹಾಗೂ ವಿಧವೆಯರಿಗೆ ಆಥಿರ್üಕ ನೆರವುಗಳಂತಹ ಪುಣಾಧಿ ಸೇವೆಗಳಲ್ಲಿ ತಲ್ಲೀನತೆ ಸಾಧಿಸಿದ್ದರು. ಪರರಿಗೆ ನೆರವಾಗುವ ಸದ್ಗುಣಗಳನ್ನು ಅವರ ಹೆತ್ತವರಿಂದಲೇ ಬಳುವಳಿಯಾಗಿ ಪಡೆದು ಕೊಂಡಿದ್ದಾರೆ. ವಿವೇಕ್ ಅವರ ಸಮಾಜ ಸೇವೆಗೈಯುವ ಪರಿ ಯುವಪೀಳಿಗೆಗೂ ಆದರಣೀಯ. ಬಾಳಸಂಗಾತಿ ಸಂಧ್ಯಾ ವಿ.ಶೆಟ್ಟಿ ಮತ್ತು ಸುಪುತ್ರಿಯರಾದ ವರ್ಷಾ ಹಾಗೂ ವರ್ಣಾ ಅವರ ಪರಿವಾರ. : ರೋನ್ಸ್ ಬಂಟ್ವಾಳ್




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here