Tuesday 7th, May 2024
canara news

ರೋಜರಿ ಕ್ರೆಡಿಟ್ ಕೋ-ಒಪರೇಟಿವ್ ಸೊಸೈಟಿ ಲಿ. ಕುಂದಾಪುರ. 26ನೇ ವಾರ್ಷಿಕ ಸಭೆ - ಸಾಧನೆಯತ್ತ - ಶೇ. 16.50 ಡಿವಿಡೆಂಡ್ ಘೋಷಣೆ

Published On : 26 Sep 2017   |  Reported By : Bernard J Costa


ರಜತ ಮಹೋತ್ಸವದ ಸಂಭ್ರಮದಲ್ಲಿರುವ ಕುಂದಾಪುರದ ಪ್ರತಿಷ್ಟಿತ ರೋಜರಿ ಕ್ರೆಡಿಟ್ ಕೋ-ಒಪರೇಟಿವ್ ಸೊಸೈಟಿ ಲಿ., ಪ್ರಗತಿಯ ಪಥದಲ್ಲಿ ಮುನ್ನೆಡೆಯುತ್ತಿದ್ದು ವರದಿ ವರ್ಷದಲ್ಲಿ ರೂ. 41,37,987.73 ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.16.50 ಡಿವಿಡೆಂಡ್ ವಿತರಿಸಲು ನಿರ್ಧರಿಸಲಾಗಿದೆ ಎಂದು ರೋಜರಿ ಕ್ರೆಡಿಟ್ ಕೋ-ಒಪರೇಟಿವ್ ಸೊಸೈಟಿ ಅಧ್ಯಕ್ಷರಾದ ಜೋನ್ಸನ್ ಡಿ’ ಆಲ್ಮೇಡಾ ತಿಳಿಸಿದರು. ಹಾಗೂ ನಮ್ಮ ಹಿರಿಯರು ಸಹಕಾರ ತತ್ವದಡಿಯಲ್ಲಿ ನಮ್ಮ ಅಭಿವೃದ್ಧಿಗಾಗಿ ಸ್ಥಾಪಿಸಿದ ಸಂಸ್ಥೆಯನ್ನು ಸಮಾಜದ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕು. ಸೊಸೈಟಿಯನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವುದೆ ನಮ್ಮ ಗುರಿಯಾಗಬೇಕು” ಎಂದು ನುಡಿದರು. ಸೆ.24 ರಂದು ಕುಂದಾಪುರದ ಸೈಂಟ್ ಮೇರಿಸ್ ಶಾಲೆಯ ಸಭಾಂಗಣದಲ್ಲಿ ನಡೆದ ರೋಜರಿ ಕ್ರೆಡಿಟ್ ಕೋ-ಒಪರೇಟಿವ್ ಸೊಸೈಟಿಯ 26ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 

ಮುಂದಿನ ದಿನಗಳಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಸಂತೆಕಟ್ಟೆಯಲ್ಲಿ ಸಂಘದ ಸ್ವಂತ ಕಟ್ಟಡದಲ್ಲಿ ನೂತನ ಶಾಖೆ ಆರಂಭ, ಬೈಂದೂರು ಹಾಗೂ ಬಸ್ರೂರು ಶಾಖೆಗೆ ಸ್ವಂತ ಕಟ್ಟಡ, ಪ್ರಧಾನ ಕಛೇರಿಯನ್ನು ಸಂಘದ 2ನೇ ಮಹಡಿಯಲ್ಲಿ ಸ್ಥಳಾಂತರ, ಕುಂದಾಪುರ ಶಾಖೆಯನ್ನು ಪ್ರತ್ಯೇಕಿಸುವ ಬಗ್ಗೆ ಮಾತಾಡಿದರು ಅಲ್ಲದೆ ಮುಂದೊಂದು ದಿನಗಳಲ್ಲಿ ಸಂಘಕ್ಕೆ ನಮ್ಮದೇ ಆದ “ರೋಜರಿ ಸೌಧ” ಕಟ್ಟಡವನ್ನು ಕಟ್ಟುವ ಯೋಜನೆಯ ಕನಸನ್ನು ವ್ಯಕ್ತಪಡಿಸಿದರು. ಪ್ರಸ್ತುತ ಸಂಘದಲ್ಲಿ ರೂ.42 ಕೋಟಿ ಠೇವಣಾತಿ ಹೊಂದಿದ್ದು ರೂ. 38 ಕೋಟಿ ಸಾಲವನ್ನು ವಿತರಿಸಲಾಗಿದೆ.

ಸಂಘವು ಆಕರ್ಷಕ ಬಡ್ಡಿದರದಲ್ಲಿ ಠೇವಣಿ ಸ್ವೀಕಾರ, ವಿವಿಧ ಉದ್ದೇಶಗಳಿಗೆ ಸಾಲ ಸೌಲಭ್ಯ, ಕಡಿಮೆ ಬಾಡಿಗೆ ವೆಚ್ಚದಲ್ಲಿ ಸೇಪ್ ಡೆಪೋಸಿಟ್ ಸೌಲಭ್ಯ, ವೆಸ್ಟರ್ನ್ ಯೂನಿಯನ್ ಮನಿಟ್ರಾನ್ಸ್‍ಫರ್ ಸೌಲಭ್ಯ ನೆಪ್ಟ್ ಆರ್‍ಟಿಜಿಎಸ್ ಸೌಲಭ್ಯ ಇದೆ ಎಂದರು. ಲೆಕ್ಕ ಪರೀಶೋಧಕರಾದ ಶ್ರೀ ಪ್ರದೀಪ್ ಜೋಗಿ ಉಡುಪಿ ಇವರು ಆದಾಯ ತೆರಿಗೆ, ಹಾಗೂ ಉSಖಿ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಸಭೆಗೆ ನೀಡಿದರು. ಸಂಘದ ನಿರ್ದೇಶಕರಾದ ಫಿಲಿಪ್ ಡಿ’ ಕೋಸ್ತ (ಶಾಖಾ ಸಭಾಪತಿ ಬಸ್ರೂರು), ಮಾರ್ಟಿನ್ ಎವರೆಸ್ಟ್ ಡಾಯಸ್ (ಶಾಖಾ ಸಭಾಪತಿ ಬೈಂದೂರು), ಕಿರಣ್ ಮೆಲ್ವಿನ್ ಲೋಬೋ (ಶಾಖಾ ಸಭಾಪತಿ ಪಡುಕೋಣೆ), ಜಾಕೋಬ್ ಡಿ’ ಸೋಜ, ಸ್ಟೇನಿ ಡಿ’ ಸೋಜ, ಶಾಂತಿ ಆರ್. ಕರ್ವಾಲ್ಲೊ, ಡೈನಾ ಡಿ ಆಲ್ಮೇಡಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾಸ್ಕಲ್ ಡಿ’ ಸೋಜ, ಶಾಖಾಧಿಕಾರಿ ಮೇಬಲ್ ಡಿ’ ಆಲ್ಮೇಡಾ ಉಪಸ್ಥಿತರಿದ್ದರು.

ಸಂಘದ ನಿದೇಶಕರಾದ ಜೆರಾಲ್ಡ್ ಕ್ರಾಸ್ತಾರವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಪಾಸ್ಕಲ್ ಡಿ’ ಸೋಜ ವರದಿ ಮಂಡಿಸಿದರು. ಮೇಬಲ್ ಡಿ’ ಆಲ್ಮೇಡಾ ಸಂಘದ ಲೆಕ್ಕ ಪತ್ರಗಳನ್ನು ಹಾಗೂ ಲಾಭಾಂಶ ವಿಂಗಡನೆಯನ್ನು ಸಭೆಯ ಮುಂದಿಟ್ಟರು. ಉಪಾಧ್ಯಕ್ಷರಾದ ಜೋನ್ ಮಿನೇಜಸ್ ರವರು ವಂದಿಸಿದರು ವಿನೋದ್ ಕ್ರಾಸ್ಟೊ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಸಂಘದ ಸಲಹೆಗಾರರಾದ ಅತೀ ವಂದನೀಯ ಧರ್ಮಗುರುಗಳಾದ ಅನಿಲ್ ಡಿ’ ಸೋಜರು ಮಾತನಾಡಿ ‘ಸಂಸ್ಥೆಯ ಅಭಿವೃದ್ಧಿಯನ್ನು ಎಲ್ಲಾ ಸಮುದಾಯದವರು ಸೇರಿ ವ್ಯವಹರಿಸಿ ಈ ಸಂಸ್ಥೆ ಗುರಿ ಯಶಸ್ಸಿನತ್ತ ಮುಂದುವರಿದಿದೆ. ಈ ಸಂಸ್ಥೆಯಲ್ಲಿ ಮುಖ್ಯವಾಗಿ ಇರುವುದು ನಂಬಿಕೆ. ಆಡಳಿತಮಂಡಳಿಯವರಿಗೆ ಗ್ರಾಹಕ ಹಾಗೂ ಸದಸ್ಯರ ಮೇಲೆ ನಂಬಿಕೆ ಮತ್ತು ಸದಸ್ಯರಿಗೆ ಆಡಳಿತ ಮಂಡಳಿಯವರ ಮೇಲೆ ನಂಬಿಕೆ ಇರಬೇಕು’ ಎಂದು ‘ರಜತ ಮಹೋತ್ಸವವು ತುಂಬಾ ಸಡಗರದಿಂದ ನಡೆಯಲಿ ಹಾಗೂ ಸುವರ್ಣ ಮಹೋತ್ಸವವು ಆಚರಿಸುವ ಭಾಗ್ಯ ಲಭಿಸಲಿ ಸಂಸ್ಥೆಯಲ್ಲಿ ವ್ಯವಹರಿಸಿದ ಎಲ್ಲರಿಗೂ ನಿಜವಾದ ಸಂತೋಷ ಸಮಧಾನ ಆರ್ಥಿಕ ಸಹಕಾರ ಸಿಗಲಿ ಎಂದು ಹಾರೈಸಿ ಹಿಂದೆ ಈ ಸಂಸ್ಥೆಯಲ್ಲಿ ದುಡಿದ ಎಲ್ಲಾ ನಿರ್ದೇಶಕ ವೃಂದದವರಿಗೂ ಅಭಿನಂದಿಸಿದರು.




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here