Tuesday 7th, May 2024
canara news

ಕೋಸ್ಟ್ ಗಾರ್ಡ್ ಗೆ ಬಂತು ಹೈ ಸ್ಪೀಡ್ ಇಂಟರ್ ಸೆಪ್ಟರ್ ನೌಕೆ

Published On : 26 Sep 2017   |  Reported By : canaranews network


ಮಂಗಳೂರು : ಮಂಗಳೂರಿನ ತಣ್ಣೀರುಬಾವಿಯ ಭಾರತಿ ಡಿಫೆನ್ಸ್ ಅಂಡ್ ಇನ್ಫ್ರಾಸ್ಟಕ್ಚರ್ ಲಿಮಿಟೆಡ್ ಸಂಸ್ಥೆ ನಿರ್ಮಿತ ಹೈಸ್ಪೀಡ್ ಇಂಟರ್ ಸೆಪ್ಟರ್ ನೌಕೆಯನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಗೆ ಹಸ್ತಾಂತರಿಸಲಾಗಿದೆ.ತಣ್ಣೀರುಬಾವಿಯ ಬಿಐಎಎಲ್ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಡಿಎಲ್ ನ ಸಿಒಒ ನರೇಂದ್ರ ಕುಮಾರ್ ಹಾಗೂ ಇತರ ಅಧಿಕಾರಿಗಳ ಸಮ್ಮುಖದಲ್ಲಿ ನೌಕೆಯನ್ನು ನೀರಿಗೆ ಇಳಿಸುವ ಮೂಲಕ ಅಧಿಕೃತವಾಗಿ ಹಸ್ತಾಂತರಿಸಲಾಯಿತು.ಈ ನೌಕೆ ಸುಮಾರು 54 ಟನ್ ತೂಕವಿದೆ. ಇದನ್ನು ನಿರ್ಮಾಣ ಮಾಡಲು ಸುಮಾರು 18 ಕೋಟಿ ರೂ. ವೆಚ್ಚವಾಗಿದೆ.

ಈ ನೌಕೆ ಸಮುದ್ರದ ಯಾವುದೇ ಪರಿಸ್ಥಿತಿಗೆ ತಕ್ಕಂತೆ ಸಂಚರಿಸಬಲ್ಲರು. ಕಡಿಮೆ ನೀರಿನಲ್ಲೂ ಇದು ಸರಾಗವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.ಪ್ರಸ್ತುತ ಈ ನೌಕೆಯನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ. ಕೋಸ್ಟ್ ಗಾರ್ಡ್ ಅವರು ತಮಗೆ ಬೇಕಾದ ಆಂತರಿಕ ವಿನ್ಯಾಸದ ಕೆಲಸಗಳನ್ನು ಇನ್ನಷ್ಟೇ ನಡೆಸಬೇಕಾಗಿದೆ. ಮುಂದಿನ ತಿಂಗಳು ಈ ನೌಕೆ ಕೆಲಸ ಮಾಡಲು ಆರಂಭಿಸಲಿದೆ.ಭಾರತಿ ಡಿಫೆನ್ಸ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮೂಲಕ ಈಗಾಗಲೇ 5 ಸಣ್ಣ ನೌಕೆಗಳನ್ನು ಅನಾವರಣಗೊಳಿಸಲಾಗಿದೆ. ಇನ್ನೊಂದು ನೌಕೆ ಮುಂದಿನ ಡಿಸೆಂಬರ್ ಗೆ ಸಿದ್ಧವಾಗಿದೆ. ಒಟ್ಟಾರೆ ಇದುವರೆಗೆ ಸುಮಾರು 20 ನೌಕೆಗಳನ್ನು ನಿರ್ಮಿಸಲಾಗಿದೆ.




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here