Saturday 27th, April 2024
canara news

ಅ.08: ಬರೋಡಾದಲ್ಲಿ `ಅಕ್ಷಯ' ಮಾಸಿಕದ ವಿಶೇಷಾಂಕ ಸಂಚಿಕೆ ಬಿಡುಗಡೆ

Published On : 03 Oct 2017   |  Reported By : Rons Bantwal


ಬರೋಡಾ, ಅ.03: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮುಖವಾಣಿ ಅಕ್ಷಯ ಮಾಸಿಕ ಇದರ ವಿಶೇಷಾಂಕ ಸಂಚಿಕೆ ಬಿಡುಗಡೆಯನ್ನು ಇದೇ ಅ.08ನೇ ಆದಿತ್ಯವಾರ ಪೂವಾಹ್ನ 10.00 ಗಂಟೆಗೆ ಗುಜರಾತ್ ಅಲ್ಲಿನ ಬರೋಡಾ ಅಲ್ಕಾಪುರಾ ಅಲ್ಲಿರುವ ಗುಜರಾತ್ ಬಿಲ್ಲವರ ಸಂಘದ ಬೈದಶ್ರೀ ಸಾಂಸ್ಕೃತಿಕ ಕೇಂದ್ರದ ಸಭಾಗೃಹದಲ್ಲಿ ನಡೆಸಲಾಗುವುದು ಎಂದು ಅಕ್ಷಯ ಬಳಗ ತಿಳಿಸಿದೆ.

     

 Dayanand Bontra             Mohan C Poojary                                 Jaya C.Suvarna

     

Nityanad D. Kotyan                         Shashidar B.Shetty                                    Ishwar Alevooru

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನೆರವೇರಲಿರುವ ಸಮಾರಂಭವನ್ನು ಸಂಘದ ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿüಯಾಗಿ ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ, ಗೌರವ ಅತಿಥಿüಯಾಗಿ ಕರ್ನಾಟಕ ಸಂಘ ಬರೋಡಾ ಅಧ್ಯಕ್ಷ ಡಿ.ಕೆ ನರಸಿಂಹ ಆಗಮಿಸಲಿದ್ದಾರೆ .

ಸಮಾರಂಭದಲ್ಲಿ ಪ್ರಸಿದ್ಧ ಅಧ್ಯಾತ್ಮಿಕ ಚಿಂತಕ ಹಾಗೂ ಲೇಖಕ ಶ್ರೀಕೃಷ್ಣ ಆಚಾರ್ಯ (ಧನ್ವಂತಿ ಬರೋಡ) ಅವರು 2017ರ ವಾರ್ಷಿಕ `ಅಕ್ಷಯ' ಮಾಸಿಕ ವಿಶೇಷಾಂಕ ಸಂಚಿಕೆಯನ್ನು ಹಾಗೂ ಸಾಹಿತ್ಯ ಬಳಗ ಮುಂಬಯಿ ಪ್ರಕಟಿತ ಎಸ್ಕೆ ಹಳೆಯಂಗಡಿ ರಚಿತ, ಗುಜರಾತ್‍ನ ಹಿರಿಯ ಉದ್ಯೋಗ, ಸಮಾಜ ಸೇವಾಕರ್ತ ಹಾಗೂ ಗುಜರಾತ್ ಬಿಲ್ಲವರ ಸಂಘದ ಸ್ಥಾಪಕ ರೂವಾರಿ ಪ್ರಸಕ್ತ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ಅವರ ಜೀವನ ಸಾಧನೆ `ಅಲಕಾಪುರಿಯ ಮಹಾನುಭಾವ ದಯಾನಂದ ಬೋಂಟ್ರಾ' ಕೃತಿಯನ್ನು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಮೂಲ್ಕಿ ಅಧ್ಯಕ್ಷ ಜಯ ಸಿ.ಸುವರ್ಣ ಬಿಡುಗಡೆ ಗೊಳಿಸಲಿದ್ದಾರೆ.

ಸಮಾರಂಭದಲ್ಲಿ ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು, ಸಹಾಯಕ ಸಂಪಾದಕ ಹರೀಶ್ ಹೆಜ್ಮಾಡಿ, ಪ್ರಶಸ್ತಿ ಪುರಸ್ಕೃತ ನಾಟಕಕಾರ ಸಾ.ದಯಾ, ಎಸ್ಕೆ ಹಳೆಯಂಗಡಿ, ಎಂ.ಎಸ್ ರಾವ್ ಅಹ್ಮದಾಬಾದ್ ಉಪಸ್ಥಿತರಿರುವರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಪರಾಹ್ನ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ `ಸಮುದ್ರ ಮಥನ' ಹರಿಕಥೆ ನಡೆಸಲಿದ್ದಾರೆ.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಬರೋಡ ಆಸುಪಾಸಿನ ತುಳು-ಕನ್ನಡಿಗ ಹಿತೈಷಿಗಳು, ಸಾಹಿತ್ಯಾಭಿಮಾನಿಗಳು ಅಕ್ಷಯ ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಅಕ್ಷಯ ಬಳಗ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಹಾಗೂ ಗುಜರಾತ್ ಬಿಲ್ಲವರ ಸಂಘದ ಪದಾಧಿಕಾರಿಗಳು ಈ ಮೂಲಕ ತಿಳಿಸಿದ್ದಾರೆ.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here