Saturday 24th, March 2018
canara news

ಹಿಂದೂ ಜಾಗರಣ ವೇದಿಕೆಯ ಜಗದೀಶ್ ಕಾರಂತ್ಗೆ ಜಾಮೀನು

Published On : 09 Oct 2017   |  Reported By : Canaranews network


ಮಂಗಳೂರು : ಪುತ್ತೂರು ಪಿಎಸ್ಐ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿ ಬಂಧನಕ್ಕೊಳಗಾಗಿದ್ದ ಹಿಂದೂ ಜಾಗರಣಾ ವೇದಿಕೆ ಮುಖಂಡ ಜಗದೀಶ್ ಕಾರಂತ್ ಅವರಿಗೆ ಶನಿವಾರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಸೆಪ್ಟೆಂಬರ್ 15ರಂದು ಪುತ್ತೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ, ಪೊಲೀಸ್ ಅಧಿಕಾರಿಗೆ ಬೆದರಿಕೆ ಒಡ್ಡಿದ್ದ ಆರೋಪದ ಮೇಲೆ ಕಾರಂತ್ ವಿರುದ್ಧ ಪುತ್ತೂರು ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 20ರಂದು ಎಫ್ಐಆರ್ ದಾಖಲು ಮಾಡಲಾಗಿತ್ತು.

ಹೊರ ರಾಜ್ಯಕ್ಕೆ ತೆರಳಿದ್ದ ಕಾರಂತ್, ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಅವರನ್ನು ಬಂಧಿಸಲಾಗಿತ್ತು. ಅಕ್ಟೋಬರ್ 3 ರಂದು ಪ್ರಕರಣದ ಕುರಿತು ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯವು ಶನಿವಾರ ಜಗದೀಶ್ ಕಾರಂತ್ ಅವರಿಗೆ ಪೂರ್ಣಾವಧಿ ಜಾಮೀನು ನೀಡಿದೆ.

 
More News

 14 ವರ್ಷದ ಬಳಿಕ ಅತ್ಯಾಚಾರ ಪ್ರಕರಣದ ಆರೋಪಿ ಸೆರೆ
14 ವರ್ಷದ ಬಳಿಕ ಅತ್ಯಾಚಾರ ಪ್ರಕರಣದ ಆರೋಪಿ ಸೆರೆ
ಅಶಕ್ತರ ಕಣ್ಣೀರು ಒರೆಸುವ ಮುನಿಯಾಲು ಉದಯ ಕೆ.ಶೆಟ್ಟಿ
ಅಶಕ್ತರ ಕಣ್ಣೀರು ಒರೆಸುವ ಮುನಿಯಾಲು ಉದಯ ಕೆ.ಶೆಟ್ಟಿ
ಪ್ರವಾದಿಯವರ ಅನುಸರಣೆ ಇಹ-ಪರ ವಿಜಯಕ್ಕೆ ಹೇತು
ಪ್ರವಾದಿಯವರ ಅನುಸರಣೆ ಇಹ-ಪರ ವಿಜಯಕ್ಕೆ ಹೇತು

Comment Here