Monday 23rd, October 2017
canara news

ಡಾ| ಕೋಟ ಶಿವರಾಮ ಕಾರಂತ ಪ್ರಶಸ್ತಿಯಲ್ಲಿ ರಾಜಕಾರಣ ಸರಿಯಲ್ಲ : ಮಲ್ಯಾಡಿ

Published On : 09 Oct 2017   |  Reported By : Bernard D'Costa


ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಡಾ| ಕೋಟ ಶಿವರಾಮ ಕಾರಂತರ ಹೆಸರಿನಲ್ಲಿ ಡಾ| ಕೋಟ ಶಿವರಾಮ ಕಾರಂತ ಪ್ರತಿಷ್ಠಾನ ಮತ್ತು ಕೋಟತಟ್ಟು ಗ್ರಾಮ ಪಂಚಾಯತ್ ಕಳೆದ 10 - 12 ವರ್ಷಗಳಿಂದ ನೀಡುತ್ತಾ ಬಂದಿರುವ ಕಾರಂತ ಹುಟ್ಟೂರ ಪ್ರಶಸ್ತಿಗೆ ಈ ಬಾರಿ 5 ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಪಂಚಭಾಷಾ ನಟ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಿರುವುದು ಸ್ವಾಗತಾರ್ಹ ವಿಚಾರವಾಗಿದೆ.

ಪ್ರಶಸ್ತಿ ಆಯ್ಕೆ ಸಮಿತಿಯ ಈ ಆಯ್ಕೆ ಪ್ರಕ್ರಿಯೆಯು ಕನಿಷ್ಠ 2-3 ತಿಂಗಳುಗಳ ಹಿಂದೆಯೇ ಸಂಪೂರ್ಣಗೊಂಡು ನಟ ಪ್ರಕಾಶ್ ರೈಯವರ ಹೆಸರನ್ನು ಮಾಧ್ಯಮಗಳ ಮೂಲಕ ಘೋಷಿಸಿದ್ದರೂ ಕೂಡಾ ಇದೀಗ ನಟ ರೈಯವರು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕುರಿತಾಗಿ ಆಡಿದ ಮಾತಿನ ವಿಚಾರವಾಗಿ ಸ್ಥಳೀಯ ಕೆಲವು ಸಂಘಟನೆಗಳು ಏಕಾಏಕಿ ನಟ ರೈಯವರಿಗೆ ಡಾ| ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ನೀಡಬಾರದು.

ಇದಕ್ಕೂ ಮೀರಿ ಪ್ರಶಸ್ತಿ ನೀಡಿದರೆ ಪ್ರತಿಭಟಿಸಲಾಗುವುದು, ಕಪ್ಪು ಭಾವುಟ ಪ್ರದರ್ಶಿಸಲಾಗುವುದು ಎಂದು ಹೇಳಿಕೆ ನೀಡಿರುವುದು ನಿಜಕ್ಕೂ ಖಂಡನಾರ್ಹ ವಿಚಾರವಾಗಿರುತ್ತದೆ. ಮತ್ತು ಡಾ| ಕೋಟ ಶಿವರಾಮ ಕಾರಂತರಂತಹ ಮೇರು ವ್ಯಕ್ತಿತ್ವದ ವ್ಯಕ್ತಿಗಳ ಹೆಸರಿನಲ್ಲಿ ನೀಡುವ ಪ್ರಶಸ್ತಿಗಳಲ್ಲಿ ರಾಜಕಾರಣ ತರುವುದು ಸರಿಯಲ್ಲ.

ಇದು ಸ್ವತಃ ಶಿವರಾಮ ಕಾರಂತರಿಗೆ ಮತ್ತು ಕಾರಂತ ಪ್ರಶಸ್ತಿ ಪ್ರತಿಷ್ಠಾನಕ್ಕೆ, ಕೋಟತಟ್ಟು ಗ್ರಾಮ ಪಂಚಾಯತ್‍ಗೆ ಹಾಗೂ ಇಡೀ ಜಿಲ್ಲೆಗೆ ಮಾಡುವ ಅವಮಾನವಾಗಿರುತ್ತದೆ. ನಾವು ಕಾಂಗ್ರೇಸ್ ಪಕ್ಷದ ವತಿಯಿಂದ ಇದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

 
More News

ಅ.28: ಮಂಗಳೂರುನಲ್ಲಿ ತಾರಸಿ ತೋಟ ಕೃಷಿ ತರಬೇತಿ ಶಿಬಿರ
ಅ.28: ಮಂಗಳೂರುನಲ್ಲಿ ತಾರಸಿ ತೋಟ ಕೃಷಿ ತರಬೇತಿ ಶಿಬಿರ
ತುಳಸಿಗಿರೀಶ್ ಬಾಲರಾಮ ರಾವ್ ಹುನ್ನೂರು ನಿಧನ
ತುಳಸಿಗಿರೀಶ್ ಬಾಲರಾಮ ರಾವ್ ಹುನ್ನೂರು ನಿಧನ
ಸಿಎಂ ಸಮ್ಮುಖದಲ್ಲೇ ಕಾಂಗ್ರೆಸ್ ನಾಯಕರಿಬ್ಬರ ತಳ್ಳಾಟ
ಸಿಎಂ ಸಮ್ಮುಖದಲ್ಲೇ ಕಾಂಗ್ರೆಸ್ ನಾಯಕರಿಬ್ಬರ ತಳ್ಳಾಟ

Comment Here