Sunday 22nd, July 2018
canara news

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕ್ರೀಡಾಪಟು ವಿಶ್ವನಾಥ ಗಾಣಿಗರಿಗೆ ಸನ್ಮಾನ

Published On : 07 Nov 2017   |  Reported By : Bernard J Costa


ಕೋಟ: ನನ್ನ ಕ್ರೀಡಾ ಸಾಧನೆಗೆ ಹಲವು ಮಂದಿ ಸದಾ ನನ್ನೊಂದಿಗಿದ್ದು, ನನ್ನನ್ನು ಪ್ರೋತ್ಸಾಹಿಸಿದ್ದಾರೆ.ಕೋಟೇಶ್ವರ ಗಾಣಿಗ ಯುವ ಸಂಘಟನೆ ಈ ಹಿಂದೆಯೂ ಸಹ ನನ್ನ ಸಾಧನೆಗೆ ಬೆಂಬಲವಾಗಿ ನಿಂತಿದೆ. ಎಲ್ಲರ ಪ್ರೋತ್ಸಾಹದಿಂದ ಮುಂದಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರಯತ್ನಿಸುತ್ತೇನೆ ಎಂದು ಈ ಬಾರಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕ್ರೀಡಾಪಟು ವಿಶ್ವನಾಥ ಭಾಸ್ಕರ ಗಾಣಿಗ ಹೇಳಿದರು.

ಅವರು ಭಾನುವಾರ ಬೀಜಾಡಿ ಮಿತ್ರಸೌಧದಲ್ಲಿ ಕೋಟೇಶ್ವರ ಗಾಣಿಗ ಯುವ ಸಂಘಟನೆ,ಗಾಣಿಗ ಮಹಿಳಾ ಸಂಘಟನೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಮಾರಂಭ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೊಗ್ಗ ಗಾಣಿಗ ವಹಿಸಿದ್ದರು.ಪತ್ರಕರ್ತ ರಾಜೇಶ ಗಾಣಿಗ ಅಚ್ಲಾಡಿ ಅಭಿನಂದನೆಯ ಮಾತುಗಳನ್ನಾಡಿದರು.ಉಡುಪಿ ಜಿಲ್ಲಾ ಸೋಮಕ್ಷತ್ರೀಯ ಗಾಣಿಗ ಸಮಾಜದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ನಾಗರಾಜ ಗಾಣಿಗ ಶುಭ ಹಾರೈಸಿದರು.

ವೇದಿಕೆಯಲ್ಲಿ ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಬಿ.ಜಿ.ನಾಗರಾಜ,ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಭಾಸ್ಕರ ಗಾಣಿಗ,ಕೋಶಾಧಿಕಾರಿ ಪರಮೇಶ್ವರ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.

ಕೋಟೇಶ್ವರ ಗಾಣಿಗ ಯುವ ಸಂಘಟನೆ ಅಧ್ಯಕ್ಷಯ ಸುಧಾಕರ ಗಾಣಿಗ ಸ್ವಾಗತಿಸಿದರು.ಕಾರ್ಯದರ್ಶಿ ರಾಮಚಂದ್ರ ಗಾಣಿಗ ವಂದಿಸಿದರು.ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.
More News

ತುಳುವೆರೆ ಆಯನೊ ಕೂಟ ಕುಡ್ಲ (ರಿ.) ಗೌರವಾಧ್ಯಕ್ಷರಾಗಿ ಡಾ. ಆರೂರು ಪ್ರಸಾದ್ ರಾವ್ ಆಯ್ಕೆ
ತುಳುವೆರೆ ಆಯನೊ ಕೂಟ ಕುಡ್ಲ (ರಿ.) ಗೌರವಾಧ್ಯಕ್ಷರಾಗಿ ಡಾ. ಆರೂರು ಪ್ರಸಾದ್ ರಾವ್ ಆಯ್ಕೆ
ಬಿಎಂಸಿ ಪರಿಮಂಡಳ ಸಮಿತಿ ಸದದ್ಯರಾಗಿ ನಿರಂಜನ್ ಲಕ್ಷ ್ಮಣ್ ಪೂಜಾರಿ ನಿಯುಕ್ತಿ
ಬಿಎಂಸಿ ಪರಿಮಂಡಳ ಸಮಿತಿ ಸದದ್ಯರಾಗಿ ನಿರಂಜನ್ ಲಕ್ಷ ್ಮಣ್ ಪೂಜಾರಿ ನಿಯುಕ್ತಿ
ಜನರ ಖಾತೆಗೆ ಮೋದಿ ಈಗ 15 ಲಕ್ಷದ ಬದಲು 30 ಲಕ್ಷ ಹಾಕಬೇಕು'; ರೈ
ಜನರ ಖಾತೆಗೆ ಮೋದಿ ಈಗ 15 ಲಕ್ಷದ ಬದಲು 30 ಲಕ್ಷ ಹಾಕಬೇಕು'; ರೈ

Comment Here