Sunday 19th, November 2017
canara news

ಆಶ್ರಮದ ಮಕ್ಕಳ ನೆರವಿಗಾಗಿ ಸೈಂಟ್ ಜೋನ್ ಕೊಂಕಣಿ ಸಮುದಾಯ ವತಿಯಿಂದ ಅಂಧೇರಿಯಲ್ಲಿ ಸೊಫಿಯಾ ಕೊಂಕಣಿ ಚಲನಚಿತ್ರ ಪ್ರದರ್ಶನ

Published On : 09 Nov 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ನ.09: ಸೈಂಟ್ ಜೋನ್ ಕೊಂಕಣಿ ಸಮುದಾಯ ವತಿಯಿಂದ ಆಶ್ರಮದಲ್ಲಿನ ಮಕ್ಕಳ ನೆರವಿಗಾಗಿ ಸೊಫಿಯಾ ಕೊಂಕಣಿ ಚಲನಚಿತ್ರವನ್ನು ಕಳೆದ ರವಿವಾರ ಅಂಧೇರಿ ಪೂರ್ವದಲ್ಲಿನ ಸಂಗಮ್ ಥಿüಯೇಟರ್‍ನಲ್ಲಿ ಅಯೋಜಿಸಲಾಗಿದ್ದು, ಸೈಂಟ್ ಜೋನ್ ಇಗರ್ಜಿಯ ಪ್ರಧಾನ ಧರ್ಮಗುರು ರೆ| ಫಾ| ಕ್ಲೆಮೆಂಟ್ ಡಿ'ಲಿಮಾ ಮಾರ್ಗದರ್ಶನದಲ್ಲಿ ನೇರವೇರಿದ ಕಾರ್ಯಕ್ರಮದಲ್ಲಿ ಅತಿಥಿsಗಳಾಗಿ ರೆ| ಫಾ| ಸಿರಿಲ್ ಡಿ'ಸೋ ಜಾ ಬಾಂದ್ರಾ, ರೆ| ನಿರ್ಮಾಪಕ ಹ್ಯಾರಿ ಫೆರ್ನಾಂಡಿಸ್, ಚಲನಚಿತ್ರ ನಿರ್ಮಾಪಕಿ ಜಾನೆಟ್ ನೊರೋನ್ಹಾ, ನಟ ಪ್ರಿನ್ಸ್ ಜಾಕೊಬ್, ನಟಿ ಎಸ್ತೆರ್ ನೊರೋನ್ಹಾ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಧಾನ ಸಂಘಟಕ ಕ್ಲೋಡಿ ಮೊಂತೇರೊ ಮೊಡಂಕಾಪು, ಸಾಂ. ಜುವಾಂವ್ (ಸೈಂಟ್ ಜೋನ್) ಕೊಂಕಣಿ ಸಮುದಾಯ್ ಇದರ ಉಪಾಧ್ಯಕ್ಷೆ ಸುನೀತಾ ಸುವಾರಿಸ್, ಕಾರ್ಯದರ್ಶಿ ಮೇರಿ ಫೆರ್ನಾಂಡಿಸ್, ಜೊತೆ ಕಾರ್ಯದರ್ಶಿ ತೋಮಾಸ್ ಪಿರೇರಾ, ಕೋಶಾಧಿಕಾರಿ ಜೇಮ್ಸ್ ಡೆ'ಸಾ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರೀಟಾ ಡಿ'ಸೋಜಾ, ಸುನೀತಾ ಎ.ಸುವಾರೆಸ್, ವೀರಾ ಮೊಂತೇರೊ, ಪ್ರವಿೂಳಾ ಡಿ'ಅಲ್ಮೇಡಾ ಮತ್ತಿತರ ಪದಾಧಿಕಾರಿ, ಸದಸ್ಯರು ಉಪಸ್ಥಿತರಿದ್ದರು.

ಐಡಾ ಪಿಂಟೋ ಸ್ವಾಗತಿಸಿದರು. ವೀರಾ ಮೊಂತೇರೊ, ಲೀನಾ ಲಸ್ರಾದೊ, ತೆಲ್ಮಾ ಡೆಸಾ, ಹಿಲ್ಡಾ ಪಿರೇರಾ, ಹಿಲ್ಡಾ ಮಥಾಯಸ್, ಆಲಿಸ್ ಡಿ'ಸೋಜಾ ಅತಿಥಿsಗಳಿಗೆ ಪುಷ್ಪಗುಚ್ಛ ನೀಡಿದರು. ಉಪಾಧ್ಯಕ್ಷೆ ಜೆಸ್ಸಿ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

 

 
More News

ಮಂಗಳೂರಿಗೆ ಕಾದಿದೆ ಅಪಾಯ!
ಮಂಗಳೂರಿಗೆ ಕಾದಿದೆ ಅಪಾಯ!
ಬಂಟ್ವಾಳದಲ್ಲಿ ಗರ್ಭಿಣಿ ಮಹಿಳೆ ಮೇಲೆ ಬೀದಿ ನಾಯಿಗಳ ದಾಳಿ
ಬಂಟ್ವಾಳದಲ್ಲಿ ಗರ್ಭಿಣಿ ಮಹಿಳೆ ಮೇಲೆ ಬೀದಿ ನಾಯಿಗಳ ದಾಳಿ
15 ಮಂದಿ ಸಾಧಕರಿಗೆ 2017ರ 'ಆಳ್ವಾಸ್ ನುಡಿಸಿರಿ' ಪುರಸ್ಕಾರ
15 ಮಂದಿ ಸಾಧಕರಿಗೆ 2017ರ 'ಆಳ್ವಾಸ್ ನುಡಿಸಿರಿ' ಪುರಸ್ಕಾರ

Comment Here