Friday 26th, April 2024
canara news

‘ನಮ್ಮ ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳ ಬೇಕು’

Published On : 09 Dec 2017   |  Reported By : Bernard D'Costa


ಕುಂದಾಪುರ, ಡಿ.9: ‘ನಮ್ಮ ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳ ಬೇಕು’ ಸಂಬಂಧಗಳ ಮೌಲ್ಯಗಳು ಕಡಿಮೆಯಾಗುವ ಈ ಕಾಲದಲ್ಲಿ ಮಕ್ಕಳು ಪೆÇೀಷಕರಿಂದ ಪ್ರೀತಿ ಮಮತೆಯನ್ನು ಆಶಿಸುತ್ತಾರೆ, ಇಲ್ಲದಿದ್ದಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಆಕರ್ಷಿಕರಾಗುತ್ತಾರೆ ಶಿಕ್ಷಕ ಮತ್ತು ವಿಧ್ಯಾರ್ಥಿಗಳ ಸಂಬಂಧವು ಉತ್ತಮವಾಗಿರ ಬೇಕು’ ಕುಂದಾಪುರ ನಗರದ ಹೆಸಾರಾಂತ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ದಿನ ಮುಖ್ಯ ಅತಿಥಿ, ರಾಜ್ಯದ ಕೆ.ಎಸ್.ಆರ್.ಟಿ.ಸಿ. ಸಾರಿಗೆ ಸಂಸ್ಥೆಯ ಸುರಕ್ಷತ ಮತ್ತು ಜಾಗ್ರತಿ ವಿಭಾಗದ ಮುಖ್ಯಸ್ಥ ಹಾಗೂ ಕುಂದಾಪುರ ಡೀಪೆÇಗೆ ಹೆಚ್ಚುವರಿ ಮೆನೇಜರ್ ಆಗಿ ಹುದ್ದೆ ನಿರ್ವಹಿಸುತ್ತಿರುವ ಸತ್ಯ ಸುಂದರನ್ ಸಂದೇಶವನ್ನು ನೀಡಿದರು.

ಗೌರವ ಅಥಿತಿಗಳಾಗಿ ಬಂದ ಚಿನ್ಮಯಿ ವೈದ್ಯಕೀಯ ಸಂಸ್ಥೆಯ ನಿರ್ದೇಶಕ ಉಮೇಶ್ ಪುತ್ರನ್ ‘ಕೆಲವು ವಿಧ್ಯಾರ್ಥಿಗಳಿಗೆ ವಿಧ್ಯೆಯಲ್ಲಿ ಕಡಿಮೆ ಶ್ರಮ ಪಡ ಬೇಕಾಗುತ್ತದೆಯಾದರೆ, ಕೆಲವು ಮಕ್ಕಳಿಗೆ ಅಧಿಕ ಶ್ರಮ ಪಟ್ಟು ಕಲಿಯ ಬೇಕಾಗುತ್ತದೆ, ಇಂತಹ ವಿಧ್ಯಾರ್ಥಿಗಳಿಗೆ ಮೆಮೊರಿ ಟೆಕ್ನಿಕ್ ಕೋರ್ಸಗಳು ಉಪಯೋಗಕ್ಕೆ ಬೀಳುತ್ತವೆ, ಈ ಕಾಲೇಜು ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಲ್ಲಿಯೂ, ಅವಕಾಶ ನೀಡುವುದರಿಂದ ವಿಧಾರ್ಥಿಗಳನ್ನು ಮುಂದೆ ಸಮಾಜದ ಸೇವೆ ನೀಡಲು ಸಿದ್ದಗೊಳಿಸುವುದು, ಹೆಮ್ಮೆಯ ವಿಚಾರವಾಗಿದೆಯೆಂದು’ ಶ್ಲಾಘಿಸಿದರು.

ಸ0ತ ಮೇರಿಸ್ ಸಮೂಹ ವಿಧ್ಯಾ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಕುಂದಾಪುರ ಇಗರ್ಜಿಯ ವ|ಧರ್ಮಗುರು, ಅನೀಲ್ ಡಿಸೋಜಾ ಅಧ್ಯಕ್ಷತೆಯನ್ನು ವಹಿಸಿ ‘ನಮ್ಮ ಸಂಸ್ಥೆಯಲ್ಲಿ ಶಿಸ್ತು ಬದ್ದವಾದ ಶಿಕ್ಷಣ ಮತ್ತು ಶಿಕ್ಷಣೇತರ ವಿಷಯಗಳನ್ನು ವಿಧ್ಯಾರ್ಥಿಗಳಿಗೆ ಕಲಿಸಿ ಒಳ್ಳೆಯ ನಾಗರಿಕರನ್ನಾಗಿ ಮಾಡುವಲ್ಲಿ ಶ್ರಮಿಸುತ್ತಾರೆ, ಪೆÇೀಷಕರು ಮಕ್ಕಳಿಂದ ಉತ್ತಮವಾದುದನ್ನು ನಿರೀಕ್ಷೆ ಇಟ್ಟುಕೊಂಡಲ್ಲಿ, ಮೊದಲು ಪೆÇೀಷಕರ ನೆಡತೆ ಉತ್ತಮವಾಗಿರ ಬೇಕು, ಮಕ್ಕಳು ಹೆತ್ತವರನ್ನು ಅನುಕರಿಸುತ್ತಾರೆ ಎಂಬುದು ನಮಗೆ ತಿಳಿದಿರಲಿ’ ಎಂದು ವಾರ್ಷಿಕೋತ್ಸವಕ್ಕ್ಕೆ ಅವರು ಶುಭ ನುಡಿದರು.

ವೇದಿಕೆಯಲ್ಲಿ ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಗಳ ಎಲ್ಲಾ ಮುಖ್ಯಸ್ಥರು, ಕಾಲೇಜು ಸಂಸತ್ತಿನ ಅಧ್ಯಕ್ಷ ಜಾನ್ಸನ್ ಲುವಿಸ್ ಉಪಸ್ಥಿತರಿದರು. ಧರ್ಮಗುರು ವ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಹಾಗೂ ಅತಿಥಿಗಳು ಆಟ ಪಾಠಗಳಲ್ಲಿ ವೀಜೆತಾರಾದ ವಿಧ್ಯಾರ್ಥಿಗಳಿಗೆ ಬಹುಮಾನ ಹ0ಚಿದರು. ಹಾಗೇ ಕಾಲೇಜಿಗೆ ಹೆಚ್ಚು ಅಂಕ ಗಳಿಸಿದ ವಿಧ್ಯಾರ್ಥಿನಿ ಮತ್ತು ಕಾಲೇಜಿಗೆ ದಾನ ನೀಡಿದವರನ್ನು, ಹತ್ತು ವರ್ಷ ಸೇವೆ ಸಲ್ಲಿಸಿದ ಎಟೆಂಡರ್ ಜೋನ್ ಡಿಸೋಜಾರನ್ನು ಸನ್ಮಾನಿಸಲಾಯಿತು. ಸಾಂಸ್ಕ್ರತಿಕ ಮತ್ತು ಇತರ ಚಟುವಟಿಕೆಗಳಲ್ಲಿ ಸಹಕಾರ ನೀಡಿದವರಿಗೆ ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲಾರಾದ ವ|ಪ್ರವೀಣ್ ಅಮ್ರತ್ ಮಾರ್ಟಿಸ್ ಕಾಲೇಜಿನ ಸಾಧನೆಯ ಬಗ್ಗೆ ವರದಿಯನ್ನು ನೀಡಿದರು.

ಸಾಂಸ್ಕ್ರತಿಕ ಕಾರ್ಯಕ್ರಮವಾಗಿ ಹಲವಾರು, ಹಾಡು, ನ್ರತ್ಯ, ರೂಪಕಗಳು ಪ್ರದರ್ಶನದ ಗೊಂಡವು. ಉಪ ಪ್ರಾಂಶುಪಾಲೆ ಮಂಜುಳಾ ನಾಯರ್ ಸ್ವಾಗತಿಸಿದರು. ಉಪನ್ಯಾಸಕ ನಾಗರಾಜ್ ಶೆಟ್ಟಿ ಉಪನ್ಯಾಸಕಿ ಜೊಯ್‍ಸ್ಲಿನ್ ಸಾಲಿನ್ಸ್, ರೇಶ್ಮಾ ಫೆರ್ನಾಂಡಿಸ್, ಮತ್ತಿತರರು ಕಾರ್ಯಕ್ರಮ ನೆಡಿಸಿಕೊಟ್ಟರು, ಕಾಲೇಜು ಸಂಸತ್ತಿನ ಕಾರ್ಯದರ್ಶಿ ವೆನ್ಸಿಟಾ ಡಿಸೋಜಾ ವಂದಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here