Saturday 27th, April 2024
canara news

ಸಂತ ಮೇರಿಸ್ ಸುವರ್ಣ ಮಹೋತ್ಸವ - ಹಳೆ ವಿದ್ಯಾರ್ಥಿಗಳ ಉತ್ಸವ

Published On : 24 Dec 2017   |  Reported By : Bernard D'Costa


ನಮ್ಮ ಶಿಕ್ಷಣ ಸಂಸ್ಥೆಗಳು ದೇಶದ ಮಂಚೂಣಿಯಲ್ಲಿವೆ – ಕೋಟಾ ಶ್ರೀನಿವಾಸ ಪೂಜಾರಿ

ಕುಂದಾಪುರ, ಡಿ.23: ‘ನಮ್ಮ ರಾಜ್ಯದಲ್ಲಿ ನಮ್ಮ ಜಿಲ್ಲೆಗಳಿಗೆ ಹೋಲಿಸಿದರೆ ಇತರ ಜಿಲ್ಲೆಗಳಲ್ಲಿ ಶಿಕ್ಷಣ ಅಸ್ಟು ಗುಣ ಮಟ್ಟದಲ್ಲಿ ಇಲ್ಲಾ, ಅಲ್ಲಿನ ವ್ಯವಸ್ಥೆಗಳು ಸರಿಯಿಲ್ಲಾ, ಸರಕಾರ ಖರ್ಚು ಮಾಡುವ ಹಣಕ್ಕೆ ತಕ್ಕಂತೆ ಶಿಕ್ಷಣ ಸಂಸ್ಥೆಗಳು, ಶಿಕ್ಷಣದ ಮಟ್ಟ ಸುಧಾರಿಸಿಲ್ಲಾ, ಆದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣದಲ್ಲಿ ಮಂಚೂಣಿಯಲ್ಲಿವೆ, ಅವು ಉತ್ತಮ ಗುಣ ಮಟ್ಟದ ಶಿಕ್ಷಣ ನೀಡುತ್ತಾ, ಸುಪ್ರಜೆಗಳನ್ನಾಗಿ ರೂಪಿಸುವಲ್ಲಿ ಶ್ರಮಿಸುತ್ತಿವೆ, ನಮ್ಮ ಶಿಕ್ಷಣ ಕ್ಷೇತ್ರಗಳು ರಾಜ್ಯದಲ್ಲೆ ಅಲ್ಲಾ, ದೇಶದಲ್ಲೇ ಮಂಚೂಣಿಯಲ್ಲಿವೆ, ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತರು ನೀಡಿದ ಕೊಡುಗೆ ಬಹಳ ಅಪಾರಾವಾದದ್ದು, ಸುವರ್ಣ ಮಹೋತ್ಸವ ಆಚರಿಸುವ ಈ ವಿಧ್ಯಾ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ’ ಎಂದು ವಿಧಾನ ಸಭಾ ಸದಸ್ಯ, ಮಾಜಿ ಮಂತ್ರಿ ಕೋಟಾ ಶ್ರೀನಿವಾಸ ಪೂಜಾರಿ ನುಡಿದರು.

ಅವರು ಕುಂದಾಪುರ ಸಂತ ಮೇರಿಸ್ ಸುವರ್ಣ ಪ್ರೌಢಶಾಲೆಯ ಮಹೋತ್ಸವದ ಹಳೆ ವಿದ್ಯಾರ್ಥಿಗಳ ಉತ್ಸವದಂದು ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಸಂದೇಶ ನೀಡಿದರು. ಮತ್ತೋರ್ವ ಅತಿಥಿ ದಾನಿ, ಇನ್ನೋವೇಶನ್ ಬೋಯಿಂಗ್ ಸೀಟಲ್ ಯು.ಎಸ್.ಎ. ಯ ಆಡಳಿತ ನಿರ್ದೇಶಕ, ಶಾಲೆಯ ಹಳೆ ವಿದ್ಯಾರ್ಥಿಯಾದ ಪ್ರದೀಪ್ ಫೆರ್ನಾಂಡಿಸ್ ಆಶಯದ ಮಾತುಗಳನ್ನಾಡಿ ‘ನಾನು ಕನ್ನಡ ಮಾಧ್ಯಮದಲ್ಲಿ ಕಲಿತು ಈ ಹಂತಕ್ಕೆ ಮುಟ್ಟಿದ್ದೆನೆ, ಮಾಧ್ಯಮ ಮುಖ್ಯವಲ್ಲಾ, ಶಿಕ್ಷಣ ಗುಣ ಮಟ್ಟದಾಗಿರಬೇಕು, ಹಾಗೇ ನಾವು ಸಾಧನೆ ಮಾಡಲು ಸಿದ್ದರಿರಬೇಕು, ಅವಾಗ ಮಾತ್ರ ಯಶಸ್ಸು ಸಿಗುತ್ತದೆ ಎಂದು’ ಜೀವನದಲ್ಲಿ ಹೇಗೆ ಸಫಲತೆಯನ್ನು ಪಡೆಯಬಹುದೆಂದು’ ಅವರು ನುಡಿದರು.

ಅಧ್ಯಕ್ಷೆತೆಯನ್ನು ವಹಿಸಿದ ಶಾಲಾ ಜಂಟಿ ಕಾರ್ಯದರ್ಶಿ ವಂ|ಫಾ|ಅನಿಲ್ ಡಿಸೋಜಾ ‘ಹಳೆ ವಿದ್ಯಾರ್ಥಿಗಳು ಈ ಸುವರ್ಣ ಮಹೋತ್ಸವಕ್ಕೆ ಸಾಕಸ್ಟು ಶ್ರಮಿಸಿದ್ದಾರೆ, ಅವರು ಗುರುಗಳನ್ನು ಮರೆಯಲಿಲ್ಲಾ, ಗುರುಕುಲವನ್ನು ಮರೆಯಲಿಲ್ಲಾ, ಎಲ್ಲರಿಗೂ ಶುಭವಾಗಲೆಂದು ಹಾರೈಸಿದರು. ಈ ಸಂದರ್ಭದಲ್ಲಿ, ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ, ಮಹ್ಮದ್ ಘೌಸ್, ಶರ್ಮಾ, ಐತಾಳ್, ಶಂಕರ್ ಶೆಟ್ಟಿ, ನಾಗರಜ್ ಶೆಟ್ಟಿ, ಜೆಮ್ಸ್ ಡಿಸೋಜಾ ಇವರನ್ನು ಮತ್ತು ಈಗ ಸೇವೆ ನೀಡುತ್ತಿರುವ ಶಿಕ್ಷಕ ಮತ್ತು ಶಿಕ್ಷಕೇತರರನ್ನು ಹಾಗೇ ದಾನಿಗಳನ್ನು ಸನ್ಮಾನಿಸಲಾಯಿತು.

ಸುವರ್ಣ ಮಹೋತ್ಸವಕ್ಕಾಗಿ ನಿರ್ಮಿಸಿದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಟಿ.ಪ್ರವೀಣ್ ಕುಮಾರ್ ಸ್ವಾಗತಿಸಿದರು, ಕಾರ್ಯದರ್ಶಿ ಕಿರಣ್ ಕುಮಾರ್ ನಾಯಕ್, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಚೇತನ ಹಾಗೂ ಸಂತ ಮೇರಿಸ್ ಶಿಕ್ಷಣ ಸಮೂಹ ಸಂಸ್ಥೆಗಳ ಮುಖ್ಯೋಪಾಧ್ಯಾಯಕರು ಉಪಸ್ಥಿತರಿದ್ದರು. ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಲೂಯಿಸ್ ಫೆರ್ನಾಂಡಿಸ್ ಧನ್ಯವಾದಗಳನ್ನು ಅರ್ಪಿಸಿದರು. ಹಳೆ ವಿದ್ಯಾರ್ಥಿಗಳಿಂದ ನ್ರತ್ಯ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ನೆಡೆದವು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು

Comment Here