Sunday 28th, April 2024
canara news

ಚೆಂಬೂರು ಕರ್ನಾಟಕ ಸಂಘದ ವಾರ್ಷಿಕ `ಸಾಹಿತ್ಯ ಸಹವಾಸ 2017-18 ಸಂಭ್ರಮ'

Published On : 25 Dec 2017   |  Reported By : Rons Bantwal


ಬದುಕು ಚಿಮ್ಮುವ ಹಲಗೆಯಂತೆ : ಕೆ.ಎಂ.ಎಂ ಪ್ರಸನ್ನ ಐಪಿಎಸ್
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.25: ಶಿಕ್ಷಣಾಲಯಗಳು ಸಂಸ್ಕೃತಿ ಸಂಸ್ಕಾರವನ್ನು ಕೊಡುತ್ತವೆ. ಕಲಿಕೆಯು ಜೀವನಯಾತ್ರೆ ಆಗಿದ್ದು ಇದು ಮುಗಿಯದ ಪ್ರಕ್ರಿಯೆಯಾಗಿದೆ. ಎಲ್ಲಾ ಎರಡು ತೊಡರುಗಳನ್ನು ದಾಟಿ ಮರಾಠಿ ನೆಲದಲ್ಲಿ ಸುಮಾರು ಆರು ದಶಕಗಳ ಶಿಕ್ಷಣ ಸೇವೆಯನ್ನು ಕೊಟ್ಟಿರುವ ಚೆಂಬೂರು ಕರ್ನಾಟಕ ಸಂಘವನ್ನು ಶ್ಲಾಘಿಸಲು ಅಭಿನಂದಿಸಲು ಅಭಿಮಾನವಾಗುತ್ತದೆ. ಜೊತೆಗೆ ನಮ್ಮ ನಡುವೆ ಇರುವ ನಡೆದಾಡುವ ಅಚ್ಚರಿ ಹಜಬ್ಬ ಅವರನ್ನು ಗೌರವಿಸುವ ಮೂಲಕ ಸಂಸ್ಥೆ ತನ್ನ ಕಿರೀಟಕ್ಕೆ ಇನ್ನೊಂದು ಗರಿ ಮೂಡಿಸಿ ಕೊಂಡಿದೆ ಎಂದು ಮುಂಬಯಿ ಕ್ರೈಂ ವಿಭಾಗದ ಹೆಚ್ಚುವರಿ ಪೆÇೀಲಿಸ್ ಆಯುಕ್ತ ಕೆ.ಎಂ.ಎಂ ಪ್ರಸನ್ನ (ಐಪಿಎಸ್) ನುಡಿದರು.

ಚೆಂಬೂರು ಘಾಟ್ಲಾ ಅಲ್ಲಿನ ಸಂಸ್ಥೆಯ ಸಂಕುಲದಲ್ಲಿ ಇಂದಿಲ್ಲಿ ಸಂಜೆ ಚೆಂಬೂರು ಕರ್ನಾಟಕ ಸಂಘ ಇದರ ವಾರ್ಷಿಕ ಸಾಹಿತ್ಯ-ಸಂಸ್ಕೃತಿ, ಸಮ್ಮಾನ ಸಂಭ್ರಮ `ಸಾಹಿತ್ಯ ಸಹವಾಸ-2017-18'ಕಾರ್ಯಕ್ರಮದಲ್ಲಿ ಪ್ರದಾನ ಅಭ್ಯಾಗತರಾಗಿದ್ದು ಸಮಾರಂಭ ಉದ್ಘಾಟಿಸಿ ಆಯುಕ್ತ ಪ್ರಸನ್ನ ಮಾತನಾಡಿದರು.

ಸಂಘದ ಅಧ್ಯಕ್ಷ ನ್ಯಾಯವಾದಿ ಹೆಚ್.ಕೆ ಸುಧಾಕರ ಅರಾಟೆ ಅಧ್ಯಕ್ಷತೆಯಲ್ಲಿ ಜರುಗಿದ ವಾರ್ಷಿಕ ಸಮಾರಂಭ ದಲ್ಲಿ ಉಪಾಧ್ಯಕ್ಷ ಪ್ರಭಾಕರ ಬಿ.ಬೋಳಾರ್, ಗೌರವ ಪ್ರಧಾನ ಕಾರ್ಯದರ್ಶಿ ರಂಜನ್‍ಕುಮಾರ್ ಆರ್. ಅಮೀನ್, ಗೌರವ ಕೋಶಾಧಿಕಾರಿ ಟಿ.ಆರ್ ಶೆಟ್ಟಿ ಮತ್ತು ಮಾಜಿ ಅಧ್ಯಕ್ಷ ಜಯ ಎನ್.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂಘದ ವಾರ್ಷಿಕ ಪ್ರತಿಷ್ಠಿತ `ರಾಷ್ಟ್ರೀಯ ಕನ್ನಡರತ್ನ ಪ್ರಶಸ್ತಿ-2017'ನ್ನು ಸಮಾಜ ಸೇವಕ ಹರೇಕಲ ಹಜ್ಜಬ್ಬ, `ದಿ|ವೈ.ಜಿ ಶೆಟ್ಟಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ'ಯನ್ನು ನಿವೃತ್ತ ಶಿಕ್ಷಕಿ ಲೀಲಾವತಿ ಕೆ.ಶೆಟ್ಟಿ, `ಸುಬ್ಬಯ್ಯ ಶೆಟ್ಟಿ ದತ್ತಿ' ಗೌರವ ಪುರಸ್ಕಾರವನ್ನು ಹಿರಿಯ ರಂಗ ನಟ, ನಿರ್ದೇಶಕ ಉಮೇಶ್ ಎನ್.ಶೆಟ್ಟಿ ಹಾಗೂ `ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ ಪ್ರಶಸ್ತಿ'ಯನ್ನು ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ಅವರಿಗೆ ಪ್ರದಾನಿಸಿ ಶುಭಾರೈದರು.

ನಾವು ಸಾಧಕರಿಂದ ಕಲಿಯುವುದು ಬಹಳಷ್ಟಿದೆ. ಆದುದರಿಂದ ಭವಿಷ್ಯತ್ತಿನ ಪ್ರಜೆಗಳಾದ ಮಕ್ಕಳು ತಮ್ಮ ಜೀವನ ಧ್ಯೇಯ ಏನೆಂದು ತಿಳಿದು ಕೊಳ್ಳಬೇಕು. ಸಾಕಷ್ಟು ಕನಸುಗಳನ್ನು ಕಂಡು ನಿರಂತರ ಪ್ರಯತ್ನದಿಂದ ಕನಸುಗಳನ್ನು ನನಸಾಗಿಸಿರಿ. ಸತತ ಅಭ್ಯಾಸದಿಂದ ಸಾಧನೆ ಸಿದ್ಧಿಸಿರಿ. ಬದುಕು ಚಿಮ್ಮುವ ಹಲಗೆಯಂತೆ. ಆದ್ದರಿಂದ ಸಮಾಜದಿಂದ ಬಹಳಷ್ಟು ಪಡೆದ ನಾವುಗಳು ಸೇವೆ ಮೂಲಕ ಸಮಾಜಕ್ಕೆ ಹಿಂತಿರುಗಿಸಿ ಜೀವನ ಪಾವನ ಗೊಳಿಸಬೇಕು ಎಂದೂ ಐಪಿಎಸ್ ಪ್ರಸನ್ನ ಹಿತನುಡಿಗಳನ್ನಾಡಿದರು.


1955ರಲ್ಲಿ ಶೆಟ್ರ ಜಾಗದಲ್ಲಿ ಹುಟ್ಟಿದರೂ ಅಂದು ಒಂದು ರೂಪಾಯಿ ಬೆಲೆಯಿಲ್ಲದ ನನಗೆ ತಮ್ಮಂತಹವರ ಪೆÇ್ರೀತ್ಸಾಹವೇ ಉಮೇದು ತುಂಬಿದೆ. ತೀವ್ರ ಬಡತನದಲ್ಲಿದ್ದ ನನಗೆ ಕಿತ್ತಾಳೆ ಮಾರಾಟವೇ ಜೀವನೋಪಾಯ ಆಯಿತು. ಪತ್ರಕರ್ತ ಗುರುವಪ್ಪ ಬಾಳೆಪುಣಿ ಅವರ ಕಿತ್ತಾಳೆ ಬುಟ್ಟಿಯ ಲೇಖನ ನನ್ನನ್ನು ಇಷ್ಟೆತ್ತರಕ್ಕೆ ಬೆಳೆಸಿತು. ಎಂದೂ ಬೊಂಬಾಯಿ ಕಾಣದ ನನಗೆ ಇಂದು ತಾವು ಆಹ್ವಾನಿಸಿ ಈ ಪುರಸ್ಕಾರ ನೀಡಿದಿರಿ. ತಮ್ಮೆಲ್ಲರ ಪ್ರೀತಿವಾತ್ಸಲ್ಯದ ಈ ಗೌರವ ಪಡೆದ 64ರ ವ್ಯಕ್ತಿಯ ಜೀವನವೇ ಸಾರ್ಥಕವಾಯಿತು. ಗೌರವಕ್ಕೆ ಕಾರಣಕರ್ತರಾದ ದಯಸಾಗರ್ ಚೌಟ ಮತ್ತು ಸಂಘಕ್ಕೆ ಋಣಿಯಾಗಿದ್ದೇನೆ. ಈ ಸಂಘವು ಹೆಮ್ಮರವಾಗಿ ಬೆಳೆಯಲಿ ಎಂದು ಧನ್ಯತಾಭಾವದಿಂದ ಹರೇಕಲ ಹಜ್ಜಬ್ಬ ತಿಳಿಸಿದರು.


ಲೀಲಾವತಿ ಶೆಟ್ಟಿ ಮಾತನಾಡಿ ನಾನು ಬರೇ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ನಿವೃತ್ತಿ ಹೊಂದಿವಳು ಅಷ್ಟೇ. ಅಂತಹದ್ದೇನು ಸಾಧನೆ ಮಾಡಿಲ್ಲ. ಆದರೆ ಅಂದಿನ ದಿನಗಳಲ್ಲಿ ಸರಕಾರ, ಸಂಸ್ಥೆಗಳ ಸಹಯೋಗ ಅಷ್ಟೇನಿರದ ಕಾರಣ ನಾವೇ ಜವಾಬ್ದಾರಿಯುತವಾಗಿ ಸಲ್ಲಿಸಿದ ಶ್ರಮದಾಯಕ ಸೇವೆ ನನ್ನನ್ನು ಇಷ್ಟರ ಮಟ್ಟಕ್ಕೆ ಬೆಳೆಸಿದೆ. ಆ ಶ್ರಮಕ್ಕೆ ಈ ಗೌರವ ಪೂರಾಕ ಎಂದೆಣಿಸುವೆ ಎಂದರು.

ಮುಂಬಯಿಯಲ್ಲಿ ಕನ್ನಡಕ್ಕಾಗಿ ದುಡಿಯುವ (ವ್ಯಕ್ತಿಯೊಬ್ಬರು) ಮೊಮ್ಮಗ ಅಜ್ಜಿಯ ಹೆಸರಲ್ಲಿ ಪ್ರಶಸ್ತಿ ಅದೇ ನಗರದಲ್ಲಿದ್ದು ಕನ್ನಡ ಸೇವೆ ಮಾಡಿದ ಅಜ್ಜಿಯಾಗಿರುವ ನನಗೆ ಈ ಇಳಿವಯಸ್ಸಿನಲ್ಲಿ ಸಂದಿರುವುದು ನನ್ನ ಅನುಭವವನ್ನು ಹೆಚ್ಚಿಸಿದೆ. ಕನ್ನಡದ ಮನಸ್ಸುಗಳ ಇಂತಹ ವೈಶಾಲ್ಯವನ್ನು ನಾನು ಮೆಚ್ಚುವೆ, ಅಭಿನಂದಿಸುವೆ ಎಂದು ಗೌರವಕ್ಕೆ ಉತ್ತರಿಸಿ ಡಾ| ಸುನೀತಾ ಶೆಟ್ಟಿ ತಿಳಿಸಿದರು.

ಚೆಂಬೂರು ಕರ್ನಾಟಕ ಸಂಘದ ಮಟ್ಟಿಗೆ ಸಾಹಿತ್ಯ ಸಹವಾಸ ನಮ್ಮ ಮೇರು ಕಾರ್ಯಕ್ರಮ. ಶೈಕ್ಷಣಿಕವಾಗಿ ಬೆಳೆದ ನಮಗೆ ಸಾಂಸ್ಕೃತಿಕವಾಗಿ ಅಸ್ತಿತ್ವವನ್ನು, ಆಸ್ಮಿತೆಯನ್ನು ಕೊಟ್ಟದ್ದೂ ಇಂತಹ ಕಾರ್ಯಕ್ರಮಗಳೇ. ಈ ವರ್ಷ ರಾಷ್ಟ್ರೀಯ ಪುರಸ್ಕಾರವನ್ನು ರಾಷ್ಟ್ರದ ಅಪೂರ್ವ ಶೈಕ್ಷಣಿಕ ಸಾಧಕ ನಡೆದಾಡುವ ಅಕ್ಷರ ಸಂತ ಹರೇಕಳ ಹಜಬ್ಬ ಅವರಿಗೆ ಸಾಧ್ಯವಾದದ್ದು ನಮ್ಮ ಸಂಸ್ಥೆಯ ಅಸ್ತಿತ್ವಕ್ಕೆ ಸಂದ ಗೌರವ. ಹೆಚ್ಚುಗಾರಿಕೆ ಕೊಡುವುದು ಹೆಮ್ಮೆ ತಂದಿದ್ದು ನಮ್ಮನ್ನು ಧನ್ಯಗೊಳಿಸಿದೆ. ಬರುವ ವರ್ಷಗಳಲ್ಲಿ ಇಂತಹದ್ದೇ ಕಾರ್ಯಕ್ರಮಗಳ ಮೂಲಕ ನಿಮ್ಮನ್ನು ತಲುಪುವ ಭರವಸೆ ನೀಡುತ್ತೇನೆ ಎಂದು ಅಧ್ಯಕ್ಷೀಯತೆಯಲ್ಲಿ ಸುಧಾಕರ್ ಅರಾಟೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಜೊತೆ ಕಾರ್ಯದರ್ಶಿ ದೇವದಾಸ್ ಕೆ.ಶೆಟ್ಟಿಗಾರ್, ಜೊತೆ ಕೋಶಾಧಿಕಾರಿ ಸುಂದರ್ ಎನ್.ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಗುಣಾಕರ್ ಹೆಚ್.ಹೆಗ್ಡೆ, ಯೋಗೆಶ್ ವಿ.ಗು ಜರನ್, ಮಧುಕರ್ ಜಿ.ಬೈಲೂರು, ಮೋಹನ್ ಎಸ್.ಕಾಂಚನ್, ಚಂದ್ರಶೇಖರ್ ಎ.ಅಂಚನ್, ಅಶೋಕ್ ಸಾಲ್ಯಾನ್, ಜಯ ಎಂ.ಶೆಟ್ಟಿ, ಸುಧೀರ್ ಪುತ್ರನ್, ಸಂಜೀವ ಎಸ್.ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಜಯ ಎನ್.ಶೆಟ್ಟಿ ಸೇರಿದಂತೆ ಕನ್ನಡ ಶಿಕ್ಷಣಾಭಿಮಾನಿಗಳು, ಸಂಸ್ಕೃತಿ ಪ್ರಿಯರು, ಕಲಾಸಕ್ತರು, ಸಂಘದ ವಿವಿಧ ವಿದ್ಯಾಲಯಗಳ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾಥಿರ್üಗಳು ಉಪಸ್ಥಿತರಿದ್ದರು.

ಭರತ್ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ದಕ್ಷಿಣ ಕನ್ನಡ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ ಬಾಳೆಪುಣಿ ಅವರು ಹಜನಬ್ಬರ ಬದುಕನ್ನು ಸ್ಥೂಲವಾಗಿ ಬಣ್ಣಿಸಿದರು. ಗೌರಿ ಜಗ್ತಾಪ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಉಪ ಸಮಿತಿ ಕಾರ್ಯದರ್ಶಿ ದಯಸಾಗರ್ ಚೌಟ ಸ್ವಾಗತಿಸಿ ಪುರಸ್ಕೃತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ರಂಜನ್‍ಕುಮಾರ್ ಆರ್.ಅಮೀನ್ ಧನ್ಯವದಿಸಿದರು.

ನೂಪುರ್ ಡ್ಯಾನ್ಸ್ ಆಕಾಡೆಮಿ ತಂಡ ಹಾಗೂ ಭರತ್ ಶೆಟ್ಟಿ ಬಳಗ ಸಾಂಸ್ಕೃತಿಕ ಹಾಗೂ ಜಾನಪದ ನೃತ್ಯ ವೈಭವ ಸಾರುವ ಸಂಸ್ಕೃತಿ ಉತ್ಸವವನ್ನು ಹಾಗೂ ಸಂಘದ ಚೆಂಬೂರು ಕರ್ನಾಟಕ ಪೂರ್ವ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಮತ್ತು ಕಿರಿಯ ಮಹಾ ವಿದ್ಯಾಲಯ ಮತ್ತು ಕಾನೂನು ಕಾಲೇಜು ವಿದ್ಯಾಥಿರ್üಗಳು ವೈವಿದ್ಯಮಯ ವಿನೋದಾ ವಳಿಗಳನ್ನು ಪ್ರಸ್ತುತ ಪಡಿಸಿದರು.

 

 

 

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು

Comment Here