Friday 26th, April 2024
canara news

ದೇಶ, ಸಂಸ್ಕøತಿ, ಗೋವಿನ ಉಳಿವಿಗೆ ಒಗ್ಗೂಡಿ ಹೋರಾಡಿ: ರಾಘವೇಶ್ವರ ಶ್ರೀ

Published On : 06 Jan 2018   |  Reported By : media release


ಉಪ್ಪಿನಂಗಡಿ: ದೇಶ, ಸಂಸ್ಕøತಿ, ಗೋವು ಉಳಿಯಬೇಕಾದರೆ ನಾವೆಲ್ಲ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ಕರೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಗೋ ಅಭಯಾಕ್ಷರ ಸಮರ್ಪಣಾ ಸಮಾರಂಭ ಮತ್ತು ಅಭಯ ಗೋಯಾತ್ರೆ ಸಂದೇಶ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ದೇಶದಲ್ಲಿ ನೂರು ಕೋಟಿಗೂ ಅಧಿಕ ಮಂದಿ ಗೋಹತ್ಯೆಯಾಗಬಾರದು ಎಂದು ಬಯಸುತ್ತಾರೆ. ಅವರ ಅಭಿಪ್ರಾಯವನ್ನು ಅಭಿವ್ಯಕ್ತಪಡಿಸಲು ಇರುವ ವೇದಿಕೆಯೇ ಅಭಯಾಕ್ಷರ ಅಭಿಯಾನ ಎಂದು ವಿವರಿಸಿದರು. ಪರೇಶ್ ಮೇಸ್ತ, ದೀಪಕ್ ರಾವ್ ಅವರಂಥ ಮೊಗ್ಗುಗಳು ಅರಳುವ ಮುನ್ನವೇ ಮರೆಯಾಗಿವೆ. ನಿನ್ನೆ ಗೋಹತ್ಯೆ, ಇಂದು ನಮ್ಮ ಹತ್ಯೆ, ನಾಳೆ ನಮ್ಮ ಮಕ್ಕಳೂ ಹತ್ಯೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ನಮ್ಮ ದೇಶದಲ್ಲಿ ನಾವು ನಾವಾಗಿ ಬದುಕಲು ಅವಕಾಶವಿಲ್ಲವೇ? ಬದುಕಬೇಕು ಎಂದರೆ ಮುಸ್ಲಿಮರಾಗಬೇಕೇ? ಇಲ್ಲದಿದ್ದರೆ ಸಂವಿಧಾನ, ನ್ಯಾಯಾಲಯ, ಪೊಲೀಸ್, ಶಾಸನಸಭೆಗಳು ಏಕಿರಬೇಕು ಎಂದು ಪ್ರಶ್ನಿಸಿದರು.

ಅಭಯಾಕ್ಷರ ಯಾರ ವಿರುದ್ಧವೂ ಅಲ್ಲ. ಅಭಯಾಕ್ಷರ ಸಂಗ್ರಹಿಸಿದ ಬಗ್ಗೆ ಕೂಡಾ ಸಂಗ್ರಹಿಸಿದವರ ವಿರುದ್ಧ ಪ್ರಕರಣ ದಾಖಲಿಸುವ ಷಡ್ಯಂತ್ರ ನಡೆದಿದೆ. ನಮಗಾಗಿ ಜೀವ ಸವೆಸುವ ಗೋವನ್ನು ಉಳಿಸಲು ಈ ಆಂದೋಲನ. ನಾವೆಲ್ಲ ಒಗ್ಗಟ್ಟಾಗಿ ಹೋರಾಡಿದರೆ ಮಾತ್ರ ನಮ್ಮ ಅಸ್ತಿತ್ವ ಉಳಿಯುತ್ತದೆ. ಈ ಹೋರಾಟಕ್ಕೆ ನಾವೆಲ್ಲ ಸಜ್ಜಾಗಬೇಕು ಎನ್ನುವುದೇ ಅಭಯಾಕ್ಷರದ ಆಶಯ ಎಂದರು.

ದೇಶದಲ್ಲಿ ಇಂದು ಗೋಹತ್ಯೆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರೆ ಕೆಲವರ ಬುದ್ಧಿ ಸರಿ ಇಲ್ಲ ಎನ್ನುವುದನ್ನು ಸೂಚಿಸುತ್ತದೆ. ತಥಾಕಥಿತ ಬುದ್ಧಿಜೀವಿಗಳು ಈ ಬಗ್ಗೆ ಅನಗತ್ಯ ಚರ್ಚೆ ಹುಟ್ಟುಹಾಕುತ್ತಿದ್ದಾರೆ. ನಿತ್ಯ ನಿತ್ಯ ಸಾವಿರ ಸಾವಿರ ಗೋವುಗಳ ಹತ್ಯೆಯಾಗುತ್ತಿದ್ದರೆ ಅವರ ಮನಸ್ಸು ಎಲ್ಲಿಗೆ ಹೋಗಿರುತ್ತದೆ ಎಂದು ಖಾರವಾಗಿ ಪ್ರಶ್ನಿಸಿದರು. ಗೋಹತ್ಯೆ ಮಾಡಬಾರದು ಎನ್ನುವವರು ದೇಶದ ಬಹುತೇಕ ಮಂದಿ. ಆದರೆ ಗೋವನ್ನು ಕೊಲ್ಲಬೇಕು ಎನ್ನುವವರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದು ವಿಶ್ಲೇಷಿಸಿದರು.

ಸಂಯಮ, ದಾನಶೀಲತೆ, ಕರುಣೆ ಜೀವನಕ್ಕೆ ಅನಿವಾರ್ಯ. ನಮಗೆ ಅಹಿತವಾದ್ದನ್ನು ಬೇರೆಯವರಿಗೆ ಮಾಡಬಾರದು. ಎಷ್ಟು ದೊಡ್ಡ ಲಾಭವಿದ್ದರೂ, ಗೋಹತ್ಯೆಯಂಥ ಪಾಪಕೃತ್ಯಕ್ಕೆ ಕೈಹಾಕಬಾರದು. ಹೆತ್ತ ತಾಯಿಯ ಎದೆ ಸೀಳಲು ಸಾಧ್ಯವೇ? ನಮ್ಮ ಮಗುವನ್ನು ಕೊಲ್ಲಲು ಸಾಧ್ಯವೇ ಎಂದು ಪ್ರಶ್ನಿಸಿದರು. ಇದನ್ನು ತಡೆಯುವುದೇ ಸಂವಿಧಾನದ ಹಾಗೂ ದೇಶದ ಕಾನೂನುಗಳಿವೆ ಎಂದು ಅಭಿಪ್ರಾಯಪಟ್ಟರು.

ಗೋಹತ್ಯೆ ಮಾಡುವವರನ್ನು, ನಿಮ್ಮನ್ನು ಕೊಲ್ಲಬಹುದೇ ಎಂದು ಕೇಳಿ. ಅದು ಸಾಧ್ಯವಾಗಬಾರದು ಎಂದರೆ ಗೋವಿನ ಹತ್ಯೆಯನ್ನು ಮಾಡುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದು ಕೇಳಿದರು.

ಗೋವಿನ ಬದುಕು ಕತ್ತಲಾಗುತ್ತಿದೆ. ಆ ಕತ್ತಲನ್ನು ಹೋಗಲಾಡಿಸುವುದೇ ಅಭಯಾಕ್ಷರ ಆಂದೋಲನದ ಉದ್ದೇಶ ಎಂದು ಸ್ಪಷ್ಟಪಡಿಸಿದರು. ಗೋವು ಎಂಬ ಪದಕ್ಕೆ ಸೂರ್ಯ ಎಂಬ ಅರ್ಥವೂ ಇದೆ. ಭಾರತ ಎಂಬ ಪದದಲ್ಲಿ ಭಾ ಎನ್ನುವುದು ಕೂಡಾ ಬೆಳಕಿನಲ್ಲಿ ಕಾಲ ಕಳೆಯುವವರ ನಾಡು. ಪರಮಾತ್ಮ ಸೂರ್ಯನಾದರೆ ಅದರ ಒಂದೊಂದು ಕಿರಣ ಗೋವು. ಅದು ಮರೆಯಾಗುತ್ತಿರುವುದು ಎಲ್ಲ ವಿಪತ್ತಿಗೆ ಕಾರಣ ಎಂದು ವಿಶ್ಲೇಷಿಸಿದರು.

ದೇವರು ನಮ್ಮ ಕಾಣಿಗೆ ಸದಾ ಕಾಣುವಂತೆ ಮಾಡುವ ಸಲುವಾಗಿಯೇ ಗೋಮಾತೆಯ ರೂಪದಲ್ಲಿ ಅವತರಿಸಿದ್ದಾರೆ. ಗೊವಿಗೆ ಭೂಮಿ ಎಂಬ ಅರ್ಥವೂ ಇದೆ. ಗೋವಿನೊಳಗೆ ಹಲವು ಅದ್ಭುತಗಳಿವೆ. ಅದನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕು ಎಂದು ಆಶಿಸಿದರು.

ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದಲ್ಲಿ ಸಂತರ ಮನಸ್ಸು ಒಂದಾಗಬೇಕು. ಆ ಮೂಲಕ ಗೋವಿನ ಸಂರಕ್ಷಣೆಯಾಗಬೇಕು ಎಂಬ ಸಂಕಲ್ಪದೊಂದಿಗೆ ಅಭಯಾಕ್ಷರದ ಮೂಲಕ ನಮ್ಮೆಲ್ಲರ ಗೋವಿನ ಪ್ರೇಮವನ್ನು ಅಭಿವ್ಯಕ್ತಪಡಿಸಲು ಶ್ರೀರಾಮಚಂದ್ರಾಪುರಮಠ ಅವಕಾಶ ಮಾಡಿಕೊಟ್ಟಿದೆ ಎಂದು ಬಣ್ಣಿಸಿದರು.

ಗೋವು ಉಳಿದರೆ ನಮ್ಮತನ ಉಳಿಯುತ್ತದೆ. ಮಣ್ಣಿನ ಅಂತಃಸತ್ವ ಉಳಿಯಬೇಕಾದರೆ ಗೋಮೂತ್ರ ಗೋಮಯ ಮಣ್ಣಿಗೆ ಸೇರಬೇಕು. ಇಂದಿನ ದುಃಸ್ಥಿತಿಗೆ ಗೋವಿನ ಆಕ್ರಂದನ ಕಾರಣ. ಇದನ್ನು ತಡೆಯಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಸಲಹೆ ಮಾಡಿದರು.

ಉತ್ತರಕಾಶಿಯ ಕಪಿಲಾಶ್ರಮದ ರಾಮಚಂದ್ರ ಗುರೂಜಿ ಗೋಸಂದೇಶ ನೀಡಿ, ಗೋಹತ್ಯೆ ನಿಷೇಧದ ಒತ್ತಾಯ ಇಂದು ನಿನ್ನೆಯದಲ್ಲ. ಶ್ರೀರಾಮಚಂದ್ರಾಪುರಮಠದಿಂದ ಈ ಆಂದೋಲನವನ್ನು ಎರಡು ದಶಕಗಳಿಂದ ಹಮ್ಮಿಕೊಂಡು ಬಂದಿದೆ ಎಂದರು. ಗೋಮಾತೆಯ ರಕ್ಷಣೆಗೆ ಇಡೀ ದೇಶದ ಜನ ಕಂಕಣಬದ್ಧರಾಗಬೇಕು ಎಂದು ಸೂಚಿಸಿದರು.

ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕರಾವಳಿಯಲ್ಲಿ ಗೋವಿನ ಹಾರೂ ಜನರ ರಕ್ತ ಹರಿಯುತ್ತಿದೆ. ಇದನ್ನು ತಡೆಯಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಗೋವನ್ನು ಉಳಿಸಲು ಜನಾಂದೋಲನವೇ ನಡೆಯಬೇಕು. ರಾಜ್ಯದ ಜನರಿಗೆ ಹಲವು ಭಾಗ್ಯಗಳನ್ನು ಕರುಣಿಸಿರುವ ಮುಖ್ಯಮಂತ್ರಿಗಳು ಗೋಸಂರಕ್ಷಣೆಯ ಭಾಗ್ಯವನ್ನು ಇನ್ನೂ ಏಕೆ ನೀಡಿಲ್ಲ ಎಂದು ವ್ಯಂಗ್ಯವಾಡಿದರು.

ಗೋಸಂರಕ್ಷಣೆಯ ಹಾಗೂ ಗೋಹತ್ಯೆ ನಿಷೇಧದ ಕಾನೂನು ಕೇಂದ್ರ ಹಾಗೂ ರಾಜ್ಯಮಟ್ಟದಲ್ಲಿ ಜಾರಿಯಾಗಬೇಕು ಎಂದು ಆಗ್ರಹಿಸಿದರು. ಗೋವಿಗಾಗಿ ಕೇವಲ ರಕ್ತದ ಹಕ್ಕೊತ್ತಾಯ ಪತ್ರ ನೀಡುವುದು ಮಾತ್ರವಲ್ಲ; ತಾಯಿಗಾಗಿ ರಕ್ತ ನೀಡುವುದು ಶ್ರೇಷ್ಠ ದಾನ. ಗೋವಿಗಾಗಿ ಇಡೀ ಜೀವನವನ್ನೇ ಮುಡಿಪಾಗಿಡಬೇಕು ಎಂದು ಸೂಚಿಸಿದರು.

ಪ್ರತಿಯೊಬ್ಬರೂ ಮನೆಯಲ್ಲಿ ಕನಿಷ್ಠ ಒಂದು ಗೋವನ್ನಾದರೂ ಸಾಕಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಸಲಹೆ ಮಾಡಿದರು. ಗೋಸಂರಕ್ಷಣೆಯ ಚಳವಳಿಗೆ ಅಂತಿಮವಾಗಿ ಜಯ ಶತಃಸಿದ್ಧ. ಆದರೆ ತಾಳ್ಮೆಯಿಂದ ನಿರಂತರ ಹೋರಾಟ ನಡೆಸಬೇಕು ಎಂದು ಅಭಿಪ್ರಾಯಪಟ್ಟರು. ಗೋಮಾತೆ ಕೇವಲ ದೇಶಮಾತೆಯಾಗಿರದೇ ವಿಶ್ವಮಾತೆಯಾಗಬೇಕು ಎಂದು ಆಗ್ರಹಿಸಿದರು.

ಶ್ರೀರಾಮಚಂದ್ರಾಪುರ ಮಠದ ಜಿಲ್ಲಾ ಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು, ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಗೋಯಾತ್ರೆ ಸಂಚಾಲನಾ ಸಮಿತಿಯ ಹೇರಂಭ ಶಾಸ್ತ್ರಿ, ಜ್ಯೋತಿ ಹೇರಂಭ ಶಾಸ್ತ್ರಿ, ಉಪ್ಪಿನಂಗಡಿ ಹವ್ಯಕ ವಲಯ ಅಧ್ಯಕ್ಷ ಕೆದ್ಲ ಅಶೋಕ ಭಟ್, ಕಾರ್ಯದರ್ಶಿ ಶ್ರೀಧರ ಭಟ್, ಮಂಗಳೂರು ದಕ್ಷಿಣ ವಲಯ ಅಧ್ಯಕ್ಷ ರಮೇಶ್ ಭಟ್ ಸರವು, ರಾಜ್ಯ ಗೋ ಪರಿವಾರದ ಮಧುಗೋಮತಿ, ವಿನಾಯಕ ಭಟ್ ತಲವಟ್ಟ ಸಾರಂಗ ಶ್ರೀನಾಥ್, ಶಿಶಿರ್ ಹೆಗಡೆ, ಉದಯಶಂಕರ ಭಟ್,ಮುರಳೀಕೃಷ್ಣ ಹಸಂತಡ್ಕ, ಸಂಜೀವ ಮಠಂದೂರು, ಅಶೋಕ್ ಕುಮಾರ್ ರೈ ಕೊಡಿಂಬಾಡಿ, ಅನಿಲ್ ಕುಮಾರ್ ದಡ್ಡು, ಅಲಮಾರ್ ರಘುನಾಥ ರೈ, ರಾಧಾಕೃಷ್ಣ ನಾಯಕ್ ನೆಕ್ಕಿಲಾಡಿ, ಮಹೇಶ್ ಬಜತ್ತೂರು ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಗಾಂಧಿಪಾರ್ಕ್‍ನಿಂದ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. ಸಾವಿರಾರು ಗೋಪ್ರೇಮಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here