Friday 19th, October 2018
canara news

ಕೂರ್ಗ್ ಅಸೋಸಿಯೇಶನ್ ಮುಂಬಯಿ ಪುನರ್ಮಿಲನ ಸಂಭ್ರಮ

Published On : 08 Jan 2018   |  Reported By : Rons Bantwal


ಅದ್ದೂರಿಯಾಗಿ ಆಚರಿಸಿದ ಸಂಪ್ರದಾಯಿಕ `ಪುಥರಿ ಉತ್ಸವ'

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.08: ರಾಷ್ಟ್ರದ ಆಥಿ೯ಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ತೆರೆಮರೆಯಲ್ಲಿದ್ದು ಸುಮಾರು ಶತಮಾನದ ಸೇವೆಯಲ್ಲಿ ನಿರತ ಕೂರ್ಗ್ ಅಸೋಸಿಯೇಶನ್ ಮುಂಬಯಿ ಪುನರ್ಮಿಲನಗೊಂಡು ಇಂದಿಲ್ಲಿ 97ನೇ ವಾರ್ಷಿಕ ಸಂಭ್ರಮವನ್ನು ಸಂಪ್ರದಾಯಿಕ `ಪುಥರಿ ಉತ್ಸವ-2018' (ತೆನೆಹಬ್ಬ)ವನ್ನು ಅದ್ದೂರಿಯಾಗಿ ಆಚರಿಸಿತು.

 ಉಪನಗರ ಐರೋಲಿ ಅಲ್ಲಿನ ಅಸೋಸಿಯೇಶನ್‍ನ ಕೂರ್ಗ್ ಭವದಲ್ಲಿ ಪೂರ್ವಾಹ್ನ ಸಮುದಾಯದ ಹಿರಿಯ ಮುಂದಾಳುಗಳನ್ನೊಳಗೊಂಡು ಅಧ್ಯಕ್ಷ ಬೊಪ್ಪಂಡ ಅಪ್ಪಾಜಿ ಅವರು ಕುಲ ಆರಾಧ್ಯಾರಾದ ಇಗ್ಗುತ್ತಪ್ಪ ಮತ್ತು ಕಾವೇರಿ ದೇವತೆಗೆ ಪೂಜೆ ನೆರವೇರಿಸಿ ಸಂಭ್ರಮಕ್ಕೆ ಚಾಲನೆ ನೀಡಿದರು. ಪೂಜೆ, ಪ್ರಾರ್ಥನೆಗಳೊಂದಿಗೆ ಐತಿಹ್ಯ `ಪುಥರಿ ಉತ್ಸವ'ಕ್ಕೆ ಚಾಲನೆ ನೀಡಿದರು. ಬಳಿಕ ಗೇಮ್ಸ್ ಸಂಗೀತ, ನೃತ್ಯಾವಳಿ ಹಾಗೂ ಮನೋರಂಜನಾ ಕಾರ್ಯಕ್ರಮ ನಡೆಸಲ್ಪಟ್ಟಿತು.

ಪುರುಷರು ಪರಂಪರಿಕಾ ಕುಪಿಯಾ ಛಾಲೆ ಹಾಗೂ ಮಹಿಳೆಯರು ಸಂಪ್ರದಾಯಿಕ ಕೊಡಗು ಉಡುಪು ಧರಿಸಿ ಗದ್ದೆಯಲ್ಲಿನ ಭತ್ತದ ತೆನೆಯನ್ನು ಪೂಜಿಸಿ ಬಳಿಕ ಸಂಭ್ರಮಾಚರಣೆಯನ್ನು ನಾಡಿಗೆ ಸಾರುವ ಪದ್ಧತಿ ಅನುಸಾರ ಗುಂಡು ಹಾರಿಸಿ, ಕೋಲಾಟ, ಕತ್ತಿವರಸೆ ಮೂಲಕ ದೇವರನ್ನು ಕರೆಯುತ್ತಾ ಕದಿರು ಮನೆಗೆ ತರÀಲಾಯಿತು. ಅಂತೆಯೇ ದೇವರಿಗೆ ತೆನೆಯನ್ನಿರಿಸಿ ಮನೆ ಬೆಳಗಿಸಲಾಯಿತು. ಅಂತೆಯೇ ಊರಿನ ಹಾಗೂ ಕುಂಟುಂಬದ ಹಿರಿಯರನ್ನು ನಮಿಸಿ, ಗೌರವಿಸಿ ಉಮ್ಮತ್ ಆಟ (ಮಹಿಳಾ ನೃತ್ಯ), ಹೊಸ ಬೆಳೆಯೊಂದಿಗೆ ಉಟೋಪಚಾರ ಗೈದು ವಿಜೃಂಭನೆಯಿಂದ `ಪುಥರಿ ಉತ್ಸವ' ಆಚರಿಸಿದರು.

ವಿಶ್ವಸ್ಥ ಸದಸ್ಯರುಗಳಾದ ಪಂಡಂಡ ರಮೇಶ್, ಬಿದ್ದಂಡ್ಡ ಜಗ್‍ದೀಪ್ ನಂಜಪ್ಪ, ಕುಪ್ಪಂಡ್ಡ ಮುದ್ದಯ್ಯ, ನಪಂಡ ರಮೇಶ್, ಬಿದ್ದಂಡ ಲೇಖ ನಂಜಪ್ಪ, ಕಲ್ಲಿಚಂಡ ಐಯ್ಯಣಾ, ಮನೆಪಂಡ ಸೋಮಯ್ಯ, ಅಧ್ಯಕ್ಷ ಬೊಪ್ಪಂಡ ಅಪ್ಪಾಜಿ, ಉಪಾಧ್ಯಕ್ಷರುಗಳಾದ ಪಂಡಂಡ ಪುಷ್ಪಾ ಮತ್ತು ಕುಪ್ಪಂಡ ಕವಿತಾ, ಗೌರವ ಕಾರ್ಯದರ್ಶಿ ಬೊಲ್ಲಚೆಟ್ಟಿರ ಮಂದಣ್ಣ, ಕೋಶಾಧಿಕಾರಿ ಅರೆಡ ರಾಜ, ಜೊತೆ ಕಾರ್ಯದರ್ಶಿ ಮುಕ್ಕಟಿರ ಸೋಮಯ್ಯ

ಅತಿಥಿüಗಳಾಗಿ ಉಪಸ್ಥಿತ ಚಿತ್ರಾ ಸುಬ್ಬಯ್ಯ, ಬಿದ್ದಂಡ ಮಾದಯ್ಯ, ಕಲಿಮಾಡ ಕ್ಯಾ| ರಾಮ ನಂಜಪ್ಪ, ಮೆಚಂಡ ಕರುಂಬಯ್ಯ, ಮೇಜರ್ ಜನರಲ್ ಬಚಿಮಡ ಕರಿಯಪ್ಪ, ಪಿ.ಕೆ ಕರುಂಬಯ್ಯ, ಪಟ್ಟಂಡ ಜಯ್‍ಕುಮಾರ್ ಮತ್ತಿತರ ಗಣ್ಯರು ಸಂದರ್ಭೋಜಿತವಾಗಿ ಮಾತನಾಡಿ ಹಬ್ಬದ ಸಂದೇಶವನ್ನೀಡಿ ಶುಭಾರೈಸಿದರು.

ಪ್ರಿಯಾ ಎಂ. ಪೂವಯ್ಯಗ್ ಮತ್ತು ಕಾವ್ಯ ಎಂ. ಪೂವಯ್ಯಗ್ ಪ್ರಾರ್ಥನೆಯನ್ನಾಡಿದರು. ಬೊಪ್ಪಂಡ ಅಪ್ಪಾಜಿ ಸ್ವಾಗತಿಸಿದರು. ಪುಥರಿ ಪ್ರಾಮುಖ್ಯತೆ ಬಗ್ಗೆ ಕಿರಿಯಮಡ ತಮ್ಮಯ್ಯ ವಿವರಿಸಿದರು. ಪಂಡಂಡ ರಮೇಶ್ ಹಾಗೂ ನಪಂಡ ರಮೇಶ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಜಗ್ಗಿ ಮಂಜಯ್ಯ ಕು| ಅಕ್ಷಯ ಚೆಂಗಯ್ಯ, ಮುಕತಿರ ಸೋಮಯ್ಯ, ಲೇಖಾ ನಂಜಪ್ಪ ಮತ್ತು ಮಾ| ನಿತಿನ್ ಚೆಂಗಯ್ಯ ಅತಿಥಿüಗಳನ್ನು ಪರಿಚಯಿಸಿದರು. ಕು| ಬಾಲ್ಯ ಮೆಡಿರಿರಿರ ಕೊಡವ ಹಾಡುಗಳನ್ನಾಡಿದರು. ಇತರರು ನೃತ್ಯಾವಳಿ, ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಗೌರವ ಕಾರ್ಯದರ್ಶಿ ಬೊಲ್ಲಚೆಟ್ಟಿರ ಮಂದಣ್ಣ ವಂದಿಸಿದರು.

Coorg Association Mumbai

Trustees1) Mr Pandanda Ramesh 2) Mr Biddanda Jagdeep Nanjappa 3) Mr Kuppanda Muddaiah 4) Mr Napanda Ramesh 5) Mrs Biddanda Lekha Nanjapa 6) Mr Kallichanda Aiyanna 7) Mr Manepanda Somaiah Managing Committee 1) Boppanda Appaji- President 3) Mrs Pandanda Pushpa- Vice President 2)Mrs Kuppanda Kavita - Vice President 3) Bollachettira Mandanna - Hon Secretary 4) Mukkatira Somaiah- Joint Secretary 4) Areda Raja- Treasurer
More News

ಬಿ.ಎ ಮೊಹಿದೀನ್ ಅವರು ತೆರೆದಿಟ್ಟ ನನ್ನೊಳಗಿನ ನಾನು
ಬಿ.ಎ ಮೊಹಿದೀನ್ ಅವರು ತೆರೆದಿಟ್ಟ ನನ್ನೊಳಗಿನ ನಾನು
ಪೇಜಾವರ ಮಠದಲ್ಲಿ ನೆರವೇರಿದ ವಾರ್ಷಿಕ ಶರನ್ನವರಾತ್ರಿ ದುರ್ಗಾಪೂಜೆ
ಪೇಜಾವರ ಮಠದಲ್ಲಿ ನೆರವೇರಿದ ವಾರ್ಷಿಕ ಶರನ್ನವರಾತ್ರಿ ದುರ್ಗಾಪೂಜೆ
ಮೈಸೂರು ಅಸೋಸಿಯೇಶನಲ್ಲಿ `ರಂಗಭೂಮಿಯಿಂದ ಸಮಾಜ ಸುಧಾರಣೆ' ವಿಚಾರ ಸಂಕಿರಣ
ಮೈಸೂರು ಅಸೋಸಿಯೇಶನಲ್ಲಿ `ರಂಗಭೂಮಿಯಿಂದ ಸಮಾಜ ಸುಧಾರಣೆ' ವಿಚಾರ ಸಂಕಿರಣ

Comment Here