Friday 26th, April 2024
canara news

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐದು ದಿನಗಳ ಕಾರ್ಯಾಗಾರ

Published On : 11 Jan 2018   |  Reported By : Gurudatt Somayaji


ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ , ಚೆನ್ನೈ ನ ಐ.ಟಿ.ಸಿ. ಅಕಾಡೆಮಿಯ ಸಹಯೋಗದೊಂದಿಗೆ ಫೈರ್ ವಾಲ್ ತಂತ್ರಜ್ಞಾನದ ಬಳಕೆಯ ಕುರಿತು ಐದು ದಿನಗಳ ಕಾರ್ಯಾಗಾರದ ಉದ್ಘಾಟನೆ ಇತ್ತೀಚಿಗೆ ನಡೆಯಿತು . ಪಾಲೊ ಆಲ್ಟೊ ನೆಟ್ ವರ್ಕ್ ನ ತರಬೇತುದಾರರಾದ ಷಣ್ಮುಗ ವೇಲು ಸೋಮು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು .

ಜನವರಿ 8 ರಿಂದ 12 ರವರೆಗೆ ನಡೆಯುವ ಈ ತರಬೇತಿಯ ಮಹತ್ವವನ್ನು ವಿವರಿಸಿ ಮಾತನಾಡಿದ ಷಣ್ಮುಗ ಅವರು, ಇಂದಿನ ಕ್ಲೌಡ್ ಕಂಪ್ಯೂಟಿಂಗ್ ಯುಗದಲ್ಲಿ ನಾವು ದತ್ತಾಂಶವನ್ನು ಸುರಕ್ಷಿತವಾಗಿಡುವುದು ಬಹು ಮುಖ್ಯವಾಗಿದ್ದು ಫೈರ್ ವಾಲ್ ತಂತ್ರಜ್ಞಾನವು ಈ ದತ್ತಾಂಶವನ್ನು ಸುರಕ್ಷಿತವಾಗಿಡಲು ಸಹಕರಿಸುತ್ತದೆ. ಹಾಗೂ ದತ್ತಾಂಶವನ್ನು ಅಧಿಕೃತವಾಗಿ ಉಪಯೋಗಿಸುವವರು ಸುರಕ್ಷಿತವಾಗಿ ಉಪಯೋಗಿಸಬಹುದು ಎಂದರು.

ಐ.ಸಿ.ಟಿ. ಅಕಾಡೆಮಿ ಯ ಪ್ರತಿನಿಧಿ ಬಸವದರ್ಶನ ಅವರು ಮಾತನಾಡಿ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜ್ ನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ವಯ ಕಾರ್ಯಗಾರದಲ್ಲಿ ಭಾಗವಹಿಸಿದ ಪ್ರತಿ ಪ್ರಾಧ್ಯಪಕರುಗಳಿಗೆ ಐ.ಸಿ.ಟಿ ಅಕಾಡೆಮಿಯ ವತಿಯಿಂದ ಫೈರ್ ವಾಲ್ ಲೈಸೆನ್ಸ್ ನೀಡಲಾಗುವುದು ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಆಳ್ವಾಸ್ ಪದವಿ ಕಾಲೇಜಿನ ಡಾ.ಕುರಿಯನ್ ಮಾತನಾಡಿ, ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು ತಮ್ಮ ಕೌಶಲ್ಯವನ್ನು ದಿನೇ ದಿನೇ ಅಭಿವೃದ್ಧಿ ಪಡಿಸಿಕೊಳ್ಳಬೇಕು. ಇಂದಿನ ಕಂಪ್ಯೂಟರ್ ಯುಗದಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರು ಹೊಸ ಹೊಸ ವಿಷಯವನ್ನು ಕಲಿತು ಕಲಿಸಬೇಕಾದ ಸಂದರ್ಭ ಸೃಷ್ಟಿಯಾಗಿದೆ ಎಂದರು.

ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೊಠಾರಿ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ಮತ್ತು ಐ.ಸಿ.ಟಿ ಅಕಾಡಮಿಯ ಒಡಂಬಡಿಕೆಯನ್ವಯ ಇದು ಪ್ರಥಮ ಕಾರ್ಯಾಗಾರವಾಗಿದ್ದು ರಾಜ್ಯದ ವಿವಿಧ ಐ.ಸಿ.ಟಿ ಅಕಾಡೆಮಿಯ ಪಾಲುದಾರ ಕಾಲೇಜುಗಳಿಂದ ಸುಮಾರು 40 ಜನ ಪ್ರಾಧ್ಯಾಪಕರು ಭಾಗವಹಿಸಿದ್ದಾರೆ ಎಂದರು. ಪ್ರೊ.ವಾಸುದೇವ ಶಹಪುರ ವಂದಿಸಿದರು. ಪ್ರೊ ಹರೀಶ್ ಕುಂದರ್ ಸಂಯೋಜಿಸಿ ಮೇಘಾ ನಿರೂಪಿಸಿದರು .




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here