Tuesday 7th, May 2024
canara news

ಸ್ಕಿಲ್ ಗೇಮ್ ಸೆಂಟರ್ ಮೇಲೆ ದಾಳಿ: ಮಂಗಳೂರು ಮೇಯರ್ ಗೆ ಹೈಕೋರ್ಟ್ ನೋಟಿಸ್

Published On : 08 Feb 2018   |  Reported By : canaranews network


ಮಂಗಳೂರು: ಮಂಗಳೂರಿನ ಸ್ಕಿಲ್ ಗೇಮ್ ಅಡ್ಡೆಗಳ ಮೇಲೆ ದಾಳಿ ನಡೆಸಿ ರಫ್ ಆ್ಯಂಡ್ ಟಫ್ ಮೇಯರ್ ಎಂಬ ಹೆಗ್ಗಳಿಕೆ ಪಡೆದಿದ್ದ ಮೇಯರ್ ಕವಿತಾ ಸನಿಲ್ ಅವರು ಈಗ ಪೇಚಿಗೆ ಸಿಲುಕಿದ್ದಾರೆ. ಕಾರ್ಯಾಚರಣೆಗಳ ಮೂಲಕ ಭಾರೀ ಗಮನ ಸೆಳೆದಿದ್ದ ಕವಿತಾ ಸನಿಲ್ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.ಸ್ಕಿಲ್ ಗೇಮ್ ಕೇಂದ್ರಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ಯಾವುದೇ ನೋಟಿಸ್ ನೀಡದೇ ದಾಳಿ ಮಾಡಲಾಗಿತ್ತು ಎಂದು ಸ್ಕಿಲ್ ಗೇಮ್ ಸೆಂಟರ್ ಒಡತಿ ಸುಜಿತಾ ರೈ ಎಂಬವರು ಕವಿತಾ ಸನೀಲ್ ವಿರುದ್ಧ ಹೈಕೋರ್ಟ್ ನಲ್ಲಿ ದಾವೆ ಸಲ್ಲಿಸಿದ್ದರು.

ದಾಳಿಯ ಸಂದರ್ಭದಲ್ಲಿ ಮೇಯರ್ ಕವಿತಾ ಸನಿಲ್ ಅವರು ಟ್ರೇಡ್ ಲೈಸನ್ಸ್ ನೀಡುವಂತೆ ಒತ್ತಾಯಿಸಿದ್ದರು. ಅಲ್ಲದೆ ಹೈಕೋರ್ಟ್ ನೀಡಿದ ತಡೆಯಾಜ್ಞೆ ದಾಖಲೆಗಳನ್ನು ತೋರಿಸಿದ್ದರೂ ಮನ್ನಣೆ ನೀಡಲಿಲ್ಲ ಎಂದು ದಾವೆಯಲ್ಲಿ ಆರೋಪಿಸಿದ್ದರು. ದಾಳಿಯಿಂದ ಆದ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದೂ ಅವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.ಹೀಗಾಗಿ ಮೇಯರ್ ಕವಿತಾ ಸನಿಲ್ ಅವರಿಗೆ ನೊಟೀಸ್ ಜಾರಿ ಮಾಡಿರುವ ಹೈಕೋರ್ಟ್ ಸ್ಕಿಲ್ ಗೇಮ್ ಸೆಂಟರ್ ವಿರುದ್ಧ ಪಾಲಿಕೆ ತೆಗೆದುಕೊಂಡ ಕ್ರಮಗಳಿಗೆ ತಡೆಯಾಜ್ಞೆ ನೀಡಿದೆ. ಇದರ ಜತೆಗೆ ಮಂಗಳೂರು ಪೊಲೀಸ್ ಆಯುಕ್ತರು ಹಾಗೂ ಆರೋಗ್ಯಾಧಿಕಾರಿ ಅವರಿಗೂ ನೋಟಿಸ್ ಜಾರಿ ಮಾಡಿದೆ.




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here