Monday 6th, May 2024
canara news

ಫೆ.10: ಬೃಹನ್ಮುಂಬಯಿ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಸೇವಾರ್ಪಣೆ

Published On : 09 Feb 2018   |  Reported By : Rons Bantwal


ಹೊರನಾಡ ಕನ್ನಡಿಗರ ರಾಷ್ಟ್ರೀಯ ಸಮಾವೇಶ ಯಶಸ್ವಿ ಗೊಳಿಸಿ-ಡಾ| ಮನು ಬಳಿಗಾರ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಫೆ.08: ಹೊರನಾಡಿನ ಮುಂಬಯಿಯಲ್ಲಿ ಕನ್ನಡಿಗರ ಸಂಖ್ಯೆ ಅತೀ ಜಾಸ್ತಿಯಾಗಿದ್ದು, ಮುಂಬಯಿಗರ ಪ್ರಾತಿನಿಧ್ಯ ಗುರುತರವಾದದ್ದು. ಚರ್ಚೆ, ಸಂವಾದಗಳಿಂದ ಸಾಧ್ಯವಾಗುವುದು. ಮುಂಬಯಿಯಲ್ಲಿ ಕನ್ನಡದ ಕೆಲಸ ಅದ್ಭುತವಾಗಿ ನಡೆಯುತ್ತಿದೆ. ಮುಂಬಯಿ ನೆಲೆವಾಸಿ ಕನ್ನಡಿಗರ ಗೌರವದಿಂದಾಗಿ ಕನ್ನಡ ಸಾಹಿತ್ಯ ಪರಿಷತ್ತುವಿನ ಕೇಂದ್ರಾಡಳಿತಕ್ಕೆ ನೇರ ಆಡಳಿತಕ್ಕೆ ಒಳಪಟ್ಟಂತೆ ಹೆಚ್ಚಿನ ಸ್ಥಾನಮಾನಕೊಟ್ಟು ಅನುಮೋದನೆ ಗೊಳಿಸಿ ಬೃಹನ್ಮುಂಬ ಯಿ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಸೇವಾರ್ಪಣೆ ಮಾಡಲಿದ್ದೇವೆ ಆ ಮೂಲಕ ನಾವು ಕನ್ನಡಕ್ಕಾಗಿ ಇನ್ನಷ್ಟು ಒಟ್ಟಾಗಿ ಶ್ರಮಿಸೋಣ ಎಂದು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಅಧ್ಯಕ್ಷ ಡಾ| ಮನು ಬಳಿಗಾರ್ ತಿಳಿಸಿದರು.

ಕಳೆದ ಗುರುವಾರ ಸಂಜೆ ಮಾಟುಂಗಾ ಪೂರ್ವದಲ್ಲಿನ ಮೈಸೂರು ಅಸೋಸಿಯೇಶನ್‍ನ ಕಿರು ಸಭಾಗೃಹÀದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಈ ಬಾರಿ ಮುಂಬಯಿ ಮಹಾನಗರದಲ್ಲಿ ಫೆ.10-11ರ ದ್ವಿದಿನ ಗಳಲ್ಲಿ ಅಂಧೇರಿ ಪಶ್ಚಿಮದ ಮಹಾಲಕ್ಷ್ಮೀ ಕಾಲೋನಿ ಅಲ್ಲಿನ ಮೊಗವೀರ ಭವನದಲ್ಲಿ ಹಮ್ಮಿಕೊಡಿರುವ ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶದ ಬಗ್ಗೆ ಡಾ| ಮನು ಬಳಿಗಾರ್ ವಿವರಿಸಿದರು.

ಕಸಾಪ ಬೆಂಗಳೂರು ಇದರ ಸಾರಥ್ಯ ಹಾಗೂ ಬೃಹನ್ಮುಂಬಯಿ ಮತ್ತು ಉಪನಗರಗಳ ಸುಮಾರು ಮೂವತ್ತು ಸಂಘ ಸಂಸ್ಥೆಗಳ ಕೂಡುವಿಕೆಯಲ್ಲಿ ಏರ್ಪಡಿಸಲಾಗಿರುವ ರಾಷ್ಟ್ರೀಯ ಸಮಾವೇಶವನ್ನು ಫೆ.10ರ ಶನಿವಾರ ಪೂರ್ವಾಹ್ನ 10.00 ಗಂಟೆಗೆ ನಾಡಿನ ಪ್ರಸಿದ್ಧ ಕಾದಂಬರಿಕಾರ ಡಾ| ಎಸ್.ಎಲ್ ಭೈರಪ್ಪ ಮುಂಬಯಿ ಕನ್ನಡಿಗರ ಸಾಧನ ಮಂಟಪ ಉದ್ಘಾಟಿಸಿ ಸಮಾವೇಶಕ್ಕೆ ಚಾಲನೆಯನ್ನೀಡಲಿದ್ದಾರೆ. ಅತಿಥಿüಯಾಗಿ ಅಂಕಣಕಾರ ಎಸ್.ಷಡಕ್ಷರಿ ಆಗಮಿಸಲಿದ್ದು ಅಖಿಲ ಭಾರತ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ ನೆನಹೊತ್ತಿಗೆ ಬಿಡುಗಡೆ ಗೊಳಿಸುವರು.

ಸಮ್ಮೇಳನದಲ್ಲಿ ನಾಲ್ಕು ವಿಚಾರಗೋಷ್ಠಿಗಳು, ಒಂದು ಕವಿಗೋಷ್ಠಿ ನಡೆಯಲಿವೆ. ಎರಡೂ ದಿನಗಳಲ್ಲೂ ವಿವಿಧ ಸಂಸ್ಥೆಗಳ ಕಲಾವಿದರು ನೃತ್ಯ, ಜನಪದ ಗಾಯನಗಳೊಂದಿಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ಯಕ್ಷಗಾನ ಪ್ರದರ್ಶಿಸಲಿದ್ದಾರೆ.
ಫೆ.11ನೇ ರವಿವಾರ ಸಂಜೆ 5.00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಮುಖ್ಯ ಅತಿಥಿüಯಾಗಿ ಹಿರಿಯ ಸಾಹಿತಿ ಹಾಗೂ ಚಿಂತಕ ಪೆÇ್ರ| ಚಂದ್ರಶೇಖರ ಪಾಟೀಲ, ಅತಿಥಿü ಅಭ್ಯಾಗತರುಗಳಾಗಿ ಕನ್ನಡ ವಿಶ್ವವಿದ್ಯಾಲಯ ಹಂಪಿ ಇದರ ಕುಲಪತಿ ಡಾ| ಮಲ್ಲಿಕಾ ಘಂಟಿ, ಸಂಸ್ಕೃತಿ ಚಿಂತಕ ಡಾ| ಎಂ.ಮೋಹನ್ ಆಳ್ವ ಮೂಡಬಿದ್ರೆ ಆಗಮಿಸಲಿದ್ದು, ಮಹಾನಗರದಲ್ಲಿನ ನಾಲ್ವರು ಕನ್ನಡಿಗ ಸಾಧಕರನ್ನು ಸನ್ಮಾನಿಸಲಾಗುವುದು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮ್ಮೇಳನ ಅಂತ್ಯವಾಗಲಿದೆ. ಆ ಪ್ರಯುಕ್ತ ಮುಂಬಯಿವಾಸಿ ಕನ್ನಡಿಗರು ಅತ್ಯಾಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸುವಂತೆ ಪತ್ರಿಕಾ ಹೇಳಿಕೆಯಲ್ಲಿ ಬಳಿಗಾರ್ ವಿನಂತಿಸಿದರು.

ಬರುವ ಆಗಸ್ಟ್‍ನಲ್ಲಿ ಬೃಹನ್ಮುಂಬಯಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗುವುದು ಅದಕ್ಕಾಗಿ ಐದು ಲಕ್ಷ ರೂಪಾಯಿ ಸಾಂಕೇತಿಕವಾಗಿ ಬಿಡುಗಡೆ ಮಾಡುವುದಾಗಿ ಬಳಿಗಾರ್ ತಿಳಿಸಿದರು. ಇದು ಸಾಲದು ಆದರೆ ಮುಂಬಯಿ ಕನ್ನಡಿಗರಿಗೆ ದುಡ್ದಿನ ಸಮಸ್ಯೆ ಇಲ್ಲ. ಆದರೆ ಈ ಸಮ್ಮೇಳನ ಮುಂಬಯಿಗರ ಮನ್ನಣೆ, ಗೌರವ ಪ್ರತಿಷ್ಠೆಯ ಪ್ರೆಶ್ನೆ ಆಗಿದೆ.ಬೃಹನ್ಮುಂಬಯಿ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಉದ್ಘಾಟನೆಯೇ ಒಂದು ದೊಡ್ದ ಸಂಭ್ರಮ ಎಂದೂ ಬಳಿಗಾರ್ ಅಭಿಪ್ರಾಯ ವ್ಯಕ್ತ ಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೈಸೂರು ಅಸೋಸಿಯೇಶÀನ್ ಮುಂಬಯಿ ಇದರ ಪ್ರಧಾನ ಕಾರ್ಯದರ್ಶಿ ಡಾ| ಗಣಪತಿ ಶಂಕರಲಿಂಗ, ಡಾ| ಬಿ.ಆರ್ ಮಂಜುನಾಥ್, ಕೆ.ಮಂಜುನಾಥಯ್ಯ ಉಪಸ್ಥಿತರಿದ್ದು ಸಮಾವೇಶದ ಸಿದ್ಧತೆ ಬಗ್ಗೆ ಮಾಹಿತಿಯನ್ನಿತ್ತರು.




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here