Sunday 18th, February 2018
canara news

ಕಾರ್ಪೋರೇಟರ್ ಪ್ರತಿಭಾ ಕುಳಾಯಿಗೆ ಶಾಸಕ ಸುನೀಲ್ ಕುಮಾರ್ ಎಚ್ಚರಿಕೆ

Published On : 11 Feb 2018   |  Reported By : canaranews network


ಮಂಗಳೂರು : ಕಾಂಗ್ರೆಸ್ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಸಂಘಪರಿವಾರದ ವಿರುದ್ಧ ನಡೆಸಿದ ವಾಗ್ದಾಳಿಗೆ ಕಾರ್ಕಳದ ಶಾಸಕ ಸುನೀಲ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಸಂಘ ಪರಿವಾರ ಕಳೆದ 75 ವರ್ಷಗಳಿಂದ ದೇಶದಲ್ಲಿ ಕೆಲಸ ಕಾರ್ಯದಲ್ಲಿ ತೊಡಗಿದೆ ಅನ್ನೋದು ಜಗತ್ತಿಗೆ ತಿಳಿದಿದೆ.

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಲ್ಲೆ ಮತ್ತು ಹತ್ಯೆಗಳು ಆರಂಭವಾಗಿದ್ದು ಇದೆಲ್ಲವೂ ಸರ್ಕಾರಿ ಪ್ರಾಯೋಜಿತವಾಗಿದೆ. ಬಾಯಿಗೆ ಬಂದತೆ ಮಾತನಾಡಿದರೆ ಪ್ರಚಾರ ಸಿಗುತ್ತೆ ಅನ್ನೋದಕ್ಕೆ ಮಾತನಾಡಿದ್ದಾರೆ. ಕಾರ್ಪೋರೇಟರ್ ಹೇಳಿಕೆಯನ್ನ ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯ ಇಲ್ಲ.

ಟೆನ್ ಪರ್ಸಂಟ್ ಸರ್ಕಾರದವರಿಂದ ಹಣಕಾಸಿನ ಬಗ್ಗೆ ನಮ್ಮನ್ನ ಉಲ್ಲೇಖ ಮಾಡಿ ಮಾತನಾಡುವಂತಹ ಅವಶ್ಯಕತೆಯಿಲ್ಲ. ಸಂಘ ಪರಿವಾರದ ಬಗ್ಗೆ ಗೌರವನ್ನಿಟ್ಟು ಮಾತನಾಡಬೇಕು. ನಾಲಿಗೆ ಬಿಗಿ ಹಿಡಿದು ಮತನಾಡಬೇಕು ಎಂದು ಕಾರ್ಪರೇಟರ್ ಗೆ ಪ್ರತಿಭಾ ಕುಳಾಯಿಗೆ ಸುನೀಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
More News

ಬೀಜಾಡಿಯಲ್ಲಿ ಗಂಡು ಕಲೆ ಯಕ್ಷಗಾನ ಉತ್ಸವ ಉದ್ಘಾಟನೆ
ಬೀಜಾಡಿಯಲ್ಲಿ ಗಂಡು ಕಲೆ ಯಕ್ಷಗಾನ ಉತ್ಸವ ಉದ್ಘಾಟನೆ
ಕೇಂದ್ರ ಸರ್ಕಾರದಿಂದ ಅಡಿಕೆ ಬೆಳೆಗಾರರಿಗೆ ಗಂಡಾಂತರ: ಐವನ್ ಡಿಸೋಜಾ
ಕೇಂದ್ರ ಸರ್ಕಾರದಿಂದ ಅಡಿಕೆ ಬೆಳೆಗಾರರಿಗೆ ಗಂಡಾಂತರ: ಐವನ್ ಡಿಸೋಜಾ
ಉಪ್ಪಿನಂಗಡಿಯಲ್ಲಿ ದಲಿತ ಯುವತಿಯ ಮೇಲೆ ಗ್ಯಾಂಗ್ ರೇಪ್
ಉಪ್ಪಿನಂಗಡಿಯಲ್ಲಿ ದಲಿತ ಯುವತಿಯ ಮೇಲೆ ಗ್ಯಾಂಗ್ ರೇಪ್

Comment Here