Friday 26th, April 2024
canara news

ಅರವಿಂದ ಶ್ಯಾನಭಾಗರಿಗೆ ಕೊಂಕಣಿ ಮಾನ್ಯತಾ ಪುರಸ್ಕಾರ

Published On : 15 Feb 2018   |  Reported By : Rons Bantwal


ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಭಾಷೆಗೆ 25 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಕೊಂಕಣಿ ಮಾನ್ಯತಾ ಬೆಳ್ಳಿಹಬ್ಬವನ್ನು ಇತ್ತೀಚೆಗೆ ದಾಂಡೇಲಿಯಲ್ಲಿ ಆಯೋಜಿಸಿತ್ತು. ವೆಸ್ಟ್ ಕೋಸ್ಟ್ ಪೇಪರ್ ಮಿಲ್ ದಾಂಡೇಲಿ ಇವರ ರಂಗನಾಥ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಮೂರು ದಿನಗಳ ದಂಡಕಾರಣ್ಯ ಕೊಂಕಣಿ ಮಾನ್ಯತೋತ್ಸವ 25 ಕಾರ್ಯಕ್ರಮದ ಮೂರನೇ ದಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರಾಜ್ಯದ 25 ಸಾಧಕರಿಗೆ ಕೊಂಕಣಿ ಮಾನ್ಯತಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೊಂಕಣಿ, ಕನ್ನಡ ಮತ್ತು ಸಂಸ್ಕøತ ಹೀಗೆ ಮೂರು ಭಾಷೆಗಳಲ್ಲಿ ಅಧ್ಯಾಪಕರಾಗಿ ಬೋಧನಾನುಭವ ಇರುವ ನಗರದ ಡಾ. ಅರವಿಂದ ಚಂದ್ರಕಾಂತ ಶ್ಯಾನಭಾಗರನ್ನು ಅವರು ಮಾಡಿರುವ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಶಿಕ್ಷಣ ಮಾನ್ಯತಾ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಡಾ. ಅರವಿಂದ ಶ್ಯಾನಭಾಗರವರು ಈ ಹಿಂದೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮೂರು ವರ್ಷಗಳ ಅವಧಿಗೆ ಸದಸ್ಯರಾಗಿ ಕೆಲಸ ಮಾಡಿದ್ದರು. 22 ವರ್ಷಗಳ ಅಕಾಡೆಮಿಯ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಕೊಂಕಣಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಬರುವ ವಿಶೇಷ ಘಟಕ ಯೋಜನೆಯ ಅನುದಾನದಲ್ಲಿ ಸಿದ್ದಿ ಮತ್ತು ಮಹಾರ್ ಸಮುದಾಯಗಳ ಸಾಕ್ಷ್ಯಚಿತ್ರವನ್ನು ತಯಾರಿಸಿ ಅಕಾಡೆಮಿಗೆ ಒಪ್ಪಿಸಿದ ವಿಶೇಷ ಕೆಲಸವನ್ನು ಮಾಡಿದ ಅನುಭವಿಕರಾಗಿದ್ದಾರೆ. ಸ್ನಾತಕೋತ್ತರ ಹಂತದಲ್ಲಿ ಕೊಂಕಣಿ ಬರಬೇಕೆಂದು ಸ್ಥಾಯಿ ಸಮಿತಿ ಸಭೆಗಳಲ್ಲಿ ವಾದಮಂಡಿಸಿ ರಾಯ್ ಕ್ಯಾಸ್ತೊಲಿನೋರವರ ನೇತೃತ್ವದಲ್ಲಿ ಮಂಗಳೂರು ವಿಶ್ವವವಿದ್ಯಾಲಯದಲ್ಲಿ ಅಧ್ಯಯನ ವಿಭಾಗ ಬರಲು ಈ ಹಿಂದಿನ ಅಕಾಡೆಮಿ ಸಮಿತಿಯೊಂದಿಗೆ ಪ್ರಯತ್ನಿಸಿದ್ದರು. ಪದವಿಪೂರ್ವ ಹಂತದ ಪಠ್ಯಪುಸ್ತಕ ನಿರ್ಮಾಣ ಸಮಿತಿಯ ಸದಸ್ಯರಾಗಿದ್ದಾರೆ. ಕೊಂಕಣಿ ಭಾಷೆ ಶಾಲೆಗಳಲ್ಲಿ ದ್ವಿತೀಯ ಭಾಷೆಯಾಗಿ ಬೋಧನೆಗೆ ಸೇರ್ಪಡೆಯಾಗಬೇಕೆಂದು ಕನಸು ಕಾಣುತ್ತಿರುವವರಲ್ಲಿ ಇವರೊಬ್ಬರು.

ಕಾಳಿದಾಸನ ಮೇಘದೂತವನ್ನು ಕೊಂಕಣಿಗೆ ಅನುವಾದಿಸಿದ್ದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಇದನ್ನು ಪ್ರಕಟಿಸಿತ್ತು. ಬೆಂಗಳೂರಿನ ಕನಕದಾಸ ಸಂಶೋಧನಾ ಕೇಂದ್ರದಿಂದ ಜಾರಿಯಾದ ಕನಕದಾಸರ ಸಾಹಿತ್ಯವನ್ನು ಕೊಂಕಣಿಗೆ ಅನುವಾದಿಸುವ ಯೋಜನೆಯಲ್ಲಿ ಅನುವಾದಕರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಕೊಡಿಯಾಲ ಖಬರ ಪಾಕ್ಷಿಕ, ಸರಸ್ವತಿ ಪ್ರಭ ಮಾಸಿಕ, ಕಿಟಾಳ್ ಅಂತರ್ಜಾಲ ಪತ್ರಗಳಿಗೆ ಸುಮಾರು ಕೊಂಕಣಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಸಮಾಜಸೇವೆಯಲ್ಲಿ ಆಸಕ್ತರಾಗಿರುವ ಇವರು 6 ಅಲ ಸ್ವಯಂಪ್ರೇರಿತ ರಕ್ತದಾನ ನಡೆಸಿಕೊಟ್ಟಿದ್ದಾರೆ.

ಕೊಂಕಣಿ ಭಾಷೆ ಮತ್ತು ಶಿಕ್ಷಣದ ಅಭಿವೃದ್ದಿಗಾಗಿ ಕಾರ್ಯಕ್ರಮಗಳ ಆಯೋಜನೆ, ವೈಚಾರಿಕ ಸರಣಿ ಉಪನ್ಯಾಸಗಳು, ಕಾರ್ಯಾಗಾರಗಳನ್ನು ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಬೇರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯಾದ್ಯಂತ ನಡೆಸಿಕೊಂಡು ಬಂದಿರುವ ಡಾ. ಅರವಿಂದ ಶ್ಯಾನಭಾಗರದು ಬಹುಮುಖ ಪ್ರತಿಭೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here