Friday 26th, April 2024
canara news

ಮಾಲತಿ ಯಶವಂತ ಚಿತ್ತಾಲ ನಿಧನ

Published On : 16 Feb 2018   |  Reported By : Rons Bantwal


ಮಹಾನಗರದಲ್ಲಿನ ಹಿರಿಯ ಸಾಹಿತಿಯಾಗಿದ್ದು, ಕನ್ನಡ ಸಾಹಿತ್ಯ ಸಂಸ್ಕೃತಿಯ ಧವಳಕಾಂತಿಗೆ ಓಜಸ್ಸಿನ ತೇಜಸ್ಸು ನೀಡಿದ `ಪುರುಷೋತ್ತಮ' ನಾಮಾಂಕಿತರಾಗಿದ್ದ ಸ್ವರ್ಗಸ್ಥ ಯಶವಂತ ಚಿತ್ತಾಲ ಅವರ ಪತ್ನಿ ಮಾಲತಿ ಚಿತ್ತಾಲ(84.) ಅವರು ನಗರದ ಲೀಲಾವತಿ ಆಸ್ಪತ್ರೆಯಲ್ಲಿ ಇಂದಿಲ್ಲಿ ಗುರುವಾರ ಮುಂಜಾನೆ ಅಲ್ಪಕಾಲದ ಅಸ್ಥತೆಯೊಂದಿಗೆ ನಿಧನರಾದರು.

ಹೊರನಾಡಿನಲ್ಲಿಂದು ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಸ್ವಂತಿಕೆಯ ಛಾಪು ಮೂಡಿಸಿದ್ದ ಯಶವಂತ ಚಿತ್ತಾಲರ ಸಾಹಿತ್ಯ ಕ್ಷೇತ್ರಕ್ಕೆ ಮಡದಿ ಮಾಲತಿ ಸ್ಥೈರ್ಯ ತುಂಬಿ ಬೆನ್ನೆಲುಬುವಾಗಿ ಪೆÇ್ರೀತ್ಸಹಿಸುತ್ತಿದ್ದರು. ಕಾರವಾರದ ಬಾಡ ಶಾಲೆಯಲ್ಲಿ ಕೆಲಕಾಲ ಶಿಕ್ಷಕರಾಗಿದ್ದ ಯಶವಂತ ಚಿತ್ತಾಲರು ತಮ್ಮ ವಿದ್ಯಾಥಿರ್üನಿ ಆಗಿದ್ದ ಮಾಲತಿ ಅವರನ್ನು ಪ್ರೀತಿಸಿ ವರಿಸಿದ್ದರು. ಮುಂಬೈಯ ತಮ್ಮ ನಿವಾಸದಲ್ಲಿ ಮಗ ಡಾ| ರವೀಂದ್ರ ಚಿತ್ತಾಲ ಅವರೊಂದಿಗೆ ವಾಸವಿದ್ದ ಮಾಲತಿ, ಬಂಧು-ಮಿತ್ರರ ಅಕ್ಕ ಎಂದೆಣಿಸಿ ಕೊಂಡಿದ್ದರು.

ಸಂತಾಪ: ಮಾಲತಿ ಅವರ ನಿಧನಕ್ಕೆ ಚಿತ್ತಾಲರ ಆಪ್ತವಲಯದ ಸಾಹಿತಿ ಜಯಂತ ಕಾಯ್ಕಿಣಿ ಸಂತಾಪ ಸೂಚಿಸಿದ್ದು, ಮಾಲತಿ ಚಿತ್ತಾಲರು ಸಹೃದಯಿ ಗೃಹಿಣಿ ಆಗಿದ್ದು ಮುಂಬಯಿಗೆ ಆಗಮಿಸುತ್ತಿದ್ದ ಸಾಹಿತಿಗಳಿಗೆ ಬಂಧುಗಳಂತೆ ಬರಮಾಡಿಕೊಂಡು ಉಪಚಾರಗೈಯುತ್ತಿದ್ದರು ಎಂದು ಸ್ಮರಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಉಮಾಶ್ರೀ, ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ಮೋಹನ್ ಮಾರ್ನಾಡ್, ಡಾ| ಭರತ್‍ಕುಮಾರ್ ಪೆÇಲಿಪು, ಓಂದಾಸ್ ಕಣ್ಣಾಂಗಾರ್, ಅರವಿಂದ ಬಳ್ಳಾಲ್, ಸಾ.ದಯಾ, ಶ್ಯಾಮಲಾ ಮಾಧವ್, ನ್ಯಾ| ಅಮಿತಾ ಭಾಗವತ್, ಗೋಪಾಲ್ ತ್ರಾಸಿ, ತುಳಸೀ ವೇಣುಗೋಪಾಲ್, ಮಿತ್ರಾ ವೆಂಕಟ್ರಾಜ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರುಗ ಳಾದ ರೋಯ್ ಕಾಸ್ತೇಲಿನೋ, ಕಾಸರಗೋಡು ಚಿನ್ನಾ, ಬಸ್ತಿ ವಾಮನ ಶೆಣೈ ಸೇರಿದಂತೆ ನೂರಾರು ಗಣ್ಯರು ಮತ್ತಿತರ ಸಾಹಿತಿಗಳೂ ಸಂತಾಪ ವ್ಯಕ್ತಪಡಿಸಿ ಚಿತ್ತಾಲರ ಕನ್ನಡದ ಸಾಹಿತ್ಯ ಸೇವೆ ಹಿಂದೆ ಮಾಲತಿ ಅವರ ಸೇವೆಯು ಅತ್ಯಮೂಲ್ಯ, ಅಮರವಾದುದು ಎಂದಿದ್ದಾರೆ.

ಬಾಂದ್ರ ಪಶ್ಚಿಮದಲ್ಲಿನ ಬಾಂಡ್‍ಸ್ಟ್ಯಾಂಡ್ ಅಪಾರ್ಟ್‍ಮೆಂಟ್‍ನಲ್ಲಿನ ನಿವಾಸದಲ್ಲಿ ಕಳೆದ ಅನೇಕ ವರ್ಷಗಳಿಂದ ನೆಲೆಯಾಗಿದ್ದ ಮೃತರು ಇಬ್ಬರು ಸುಪುತ್ರರು ಹಾಗೂ ಅಪಾರ ಸಾಹಿತ್ಯಾಭಿಮಾನಿಗಳು, ಬಂಧು-ಬಳಗವನ್ನು ಅಗಲಿದ್ದಾರೆ.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here