Friday 26th, April 2024
canara news

ಫೆ.25: ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ವಾರ್ಷಿಕ ಸಮಾವೇಶ

Published On : 16 Feb 2018   |  Reported By : Rons Bantwal


ಚಕ್ರಧಾರಿ ಪ್ರಶಸ್ತಿ-ಕೃಷಿ ಬಂಧು ಪುರಸ್ಕಾರ ಪ್ರದಾನ-ಚೈತನ್ಯದ ಚಿಲುಮೆ ಗ್ರಂಥ ಬಿಡುಗಡೆ


ಮುಂಬಯಿ, ಫೆ.16: ಸಾಮಾಜಿಕ, ಸಾಹಿತಿಕ ಮತ್ತು ಕೃಷಿ ಇತ್ಯಾದಿ ಸೇವಎಗಳಲ್ಲಿ ತೊಡಗಿಸಿ ಕೊಂಡು, ಮುಂಬಯಿನ ಕನ್ನಡಿಗರ ದೇವಾಲಯಗಳ ಮಾಹಿತಿ ಕೋಶ, ಕನ್ನಡ ಶಾಲೆಯ ಸವಿ ನೆನಪುಗಳ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ ಐತಿಹಾಸಿಕ ಕಾರ್ಯದಲ್ಲಿ ತನ್ನ ಹೆಜ್ಜೆ ಗುರುತನ್ನು ಮೂಡಿಸಿದ್ದು, ಈ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನವು ತನ್ನ 9ನೇ ವಾರ್ಷಿಕ ಸಮಾವೇಶವನ್ನು ಇದೇ ಫೆ.25ರ ರವಿವಾರ ಮಾಟುಂಗಾ ಪೂರ್ವದ ಮೈಸೂರು ಅಸೋಸಿಯೇಶನ್‍ನ ಸಭಾಗೃಹದಲ್ಲಿ ಸಂಜೆ 3.00 ಗಂಟೆಗೆ ನೇರವೇರಿಸಲಿದೆ.

ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕಡಂದಲೆ ಸುರೇಶ ಎಸ್.ಭಂಡಾರಿ ಕಡಂದಲೆ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಾಹಿತಿ ಮತ್ತು ನ್ಯಾಯವಾದಿ ವಿ.ಎಸ್.ಎನ್ ಹೆಬ್ಬಾರ್, ಸಮಾಜ ಸೇವಕ ಮೋಹನ್ ಕುಮಾರ್ ಜೆ.ಗೌಡ, ಉದ್ಯಮಿ ಅನಂತ ಸದಾನಂದ ಪೈ ಮುಲುಂಡ್, ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನದ ಸಂಸ್ಥಾಪಕ ವಿದ್ವಾನ್ ವಿಶ್ವನಾಥ ಭಟ್ ಕೈರಬೆಟ್ಟು, ಹವ್ಯಕ ಸಂದೇಶ ಮಾಸಿಕದ ಸಂಪಾದಕಿ ನ್ಯಾ| ಅಮಿತಾ ಭಾಗವತ್, ಸಂಯುಕ್ತ ಕರ್ನಾಟಕ ದೈನಿಕ ಹುಬ್ಬಳ್ಳಿ ಆವೃತ್ತಿಯ ಸಹಾಯಕ ಸಂಪಾದಕ, ಅಜಿತ್ ಘೋರ್ಪಡೆ ಗದಗ ಅತಿಥಿüಗಳಾಗಿ ಆಗಮಿಸಲಿದ್ದಾರೆ.

ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರ ಉಪಸ್ಥಿತಿಯಲ್ಲಿ ಪೆÇ್ರ.ವೆಂಕಟೇಶ ಪೈ ಸಂಚಾಲಕತ್ವದ `ಫ್ರೆಂಡ್ಸ್ ಸ್ವಾವಲಂಬನ ಕೇಂದ್ರ'ದ `ಚಕ್ರಧಾರಿ ಪ್ರಶಸ್ತಿ' ಹಾಗೂ ಪ್ರತಿಷ್ಠಾನ ವಾರ್ಷಿಕ `ಕೃಷಿಬಂಧು' ಪುರಸ್ಕಾರವನ್ನು ಡಾ| ತಾಳ್ತಜೆ ವಸಂತ ಕುಮಾರ್ ಪ್ರದಾನಿಸಿ ಇದೇ ಸಂದರ್ಭದಲ್ಲಿ ಪೆÇ್ರ.ವೆಂಕಟೇಶ ಪೈ ಡೊಂಬಿವಿಲಿ ಅವರ `ಚೈತನ್ಯದ ಚಿಲುಮೆ' ಅಭಿನಂದನ ಗ್ರಂಥ ಬಿಡುಗಡೆ ನಡೆಸಲಿದೆ.

    

 Dr. Vasantkumar Taltaje                Pro. Venkatesh Pai                    Suresh S.Bhandary

Vishwanath Dodmane

ಪೆÇ್ರ. ವೆಂಕಟೇಶ ಪೈ ಡೊಂಬಿವಿಲಿ:
ಮುಂಬಯಿ ಹಾಗೂ ಉಪನಗರಗಳಲ್ಲಿ ಕಳೆದ ಸುಮಾರು ಮೂರು ದಶಕದಿಂದ ಸಾಹಿತ್ಯ, ಯಕ್ಷಗಾನ, ಸಂಘಟನೆ, ಕನ್ನಡ ಪುಸ್ತಕ ಮಳಿಗೆ, ಯಕ್ಷಗಾನ ಗ್ರಂಥಾಲಯ, ಕುಂದ ಕನ್ನಡ ಬಳಗ ಎಂದೆಲ್ಲಾ ಶ್ರಮಿಸುತ್ತಿರುವ ಹಾಗೂ ಸಾಮಾಜಿಕ ಬದ್ಧತೆ, ಪರಿಸರ ಜಾಗೃತಿ, ಜನ ಜಾಗೃತಿ, ಕುಟೀರ ಉದ್ಯೋಗ ಇತ್ಯಾದಿ ಸೇವೆಗಳನ್ನು ನಡೆಸುವ ಪೆÇ್ರ.ವೆಂಕಟೇಶ ಪೈ ಸಂಚಾಲಕತ್ವದ `ಫ್ರೆಂಡ್ಸ್ ಸ್ವಾವಲಂಬನ ಕೇಂದ್ರ'ಕ್ಕೆÀ `ಚಕ್ರಧಾರಿ ಪ್ರಶಸ್ತಿ' ನೀಡಿ ಗೌರವಿಸುತ್ತಿದೆ.


ಡಾ| ತಾಳ್ತಜೆ ವಸಂತ ಕುಮಾರ್:
ನಮ್ಮ ಪ್ರತಿಷ್ಠಾನವು ನೀಡುತ್ತಿರುವ `ಕೃಷಿಬಂಧು' ಪುರಸ್ಕಾರವನ್ನು ಡಾ| ತಾಳ್ತಜೆ ವಸಂತ ಕುಮಾರ್ ಪ್ರದಾನಿಸಿ ಗೌರವಿಸಲಾಗುವುದು. ತಾಳ್ತಜೆ ಅವರು ವೃತ್ತಿಯಿಂದ ಪ್ರಾಧ್ಯಾಪಕರು ವಿವೇಕಾನಂದ ಕಾಲೇಜ್‍ನಲ್ಲಿ ಶಿಕ್ಷಕರಾಗಿ ಮುಂದೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದರು. ಮೂಲತಃ ಕೃಷಿ ಕುಟುಂಬದಿಂದ ಬಂದವರು ಕಾಸರಗೋಡಿನ ತಾಳ್ತಜೆಯವರಾದ ಶ್ರೀಯುತರ ಪೂರ್ವಜರು ಪುತ್ತೂರು ತಾಲೂಕಿನ ಪಂಜಳದಲ್ಲಿ ನೆಲೆನಿಂತು ಕೃಷಿಯನ್ನು ಮುಂದುವರೆಸಿದರು. ತಮ್ಮ ಬಾಲ್ಯದಲ್ಲಿ ಆಡುಂಬೋಲವನ್ನು ಕಳೆದ ಪಂಜಳದ ಕೃಷಿಯತ್ತ ಚಿತ್ತ ಹರಿಸಿದರು. ತನ್ನ ಬದುಕಿನ ಎಲ್ಲಾ ನೋವು-ನಲಿವನ್ನು ಹಚ್ಚ ಹಸಿರಾದ ಕೃಷಿಯ ಒಡನಾಟದಲ್ಲಿ ಕಳೆಯುವ ಶ್ರೀಯುತರಿಗೆ ಪ್ರಶಸ್ತಿಗಳು ಹೊಸದಲ್ಲ, ಅವರ ಕೃಷಿಪ್ರೇಮ, ಕೃಷಿಯನ್ನು ಪೆÇ್ರೀತ್ಸಾಹಿಸುತ್ತಿರುವ ಡಾ| ವಸಂತ ಕುಮಾರ್ ಅವರನ್ನು ಕೃಷಿಬಂಧು ಪುರಸ್ಕಾರದಿಂದ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಗೌರವಿಸುತ್ತಿದೆ.

ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಸ್ವಾವಲಂಬನ ಕೇಂದ್ರ ವಿದ್ಯಾಥಿರ್üಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ರಾಧಾಕೃಷ್ಣ ನೃತ್ಯ ಅಕಾಡೆಮಿ ವಿೂರಾರೋಡ್ ಇದರ ನಿರ್ದೇಶಕಿ ಸುಕನ್ಯಾ ಸುಬ್ರಹ್ಮಣ್ಯ ಭಟ್ ತಂಡವು ನೃತ್ಯ ಸಿಂಚನ, ಭಾವಗೀತೆ, ಜನಪದ ಗೀತೆಗಳನ್ನು ಸಾದರಪಡಿಸಲಿವೆ. ಹಾಗೂ ಸಮೂಹ ಗಾನ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮಹಾನಗರದ ಎಲ್ಲಾ ಸಾಹಿತ್ಯ, ಕೃಷಿ, ಕಲಾಭಿಮಾನಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವ ಪ್ರದಾನ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಈ ಮೂಲಕ ವಿನಂತಿಸ್ಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here