Friday 26th, April 2024
canara news

ಶ್ರೀ ಉಮಾ ಮಹೇಶ್ವರೀ ದೇವಸ್ಥಾನದ ಸಂಸ್ಥಾಪಕ ಬಿ.ಕೆ ಶೀನ ನಿಧನ

Published On : 18 Feb 2018   |  Reported By : Rons Bantwal


ಮುಂಬಯಿ, ಫೆ.17: ಉಪನಗರ ಕುರ್ಲಾ ಪಶ್ಚಿಮದ ಜೆರಿಮೆರಿಯಲ್ಲಿನ ಶ್ರೀ ಉಮಾ ಮಹೇಶ್ವರೀ ದೇವಸ್ಥಾನದ ಸಂಸ್ಥಾಪಕ, ಬೀಕೇ ಮೆಟಲ್ ಇಂಡಸ್ಟ್ರೀಸ್, ನೀಶಾ ವೈರ್ ಪೆÇ್ರಡಕ್ಟ್‍ಸ್, ಆನಂದ್ ವೈರ್ ನೆಟ್ಟಿಂಗ್ ಕಂಪೆನಿ ಮಾಲೀಕ, ಧಾರ್ಮಿಕ ಮುಂದಾಳು, ಸಮಾಜ ಸೇವಕ, ಕೊಡುಗೈದಾನಿ ಬಿ.ಕೆ ಶೀನ ಪೂಜಾರಿ (75.) ಇಂದಿಲ್ಲಿ ಸಂಜೆ ಅಲ್ಪಕಾಲದ ಅನಾರೋಗ್ಯದಿಂದ ಸಯಾನ್ ಪೂರ್ವದ ರೂಪಮ್ ಸರ್ಕಲ್ ಅಲ್ಲಿನ ಸತ್ಯಂ ಅಪಾರ್ಟ್‍ಮೆಂಟ್ ನಿವಾಸದ ಸ್ವಗೃಹದಲ್ಲಿ ನಿಧನರಾದರು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂಗ್ರ ಕೂಳೂರು ಮೂಲತಃ ಮುಂಬಯಿಯಲ್ಲಿ ನೆಲೆಕಂಡು ಉದ್ಯಮಶೀಲರಾಗಿದ್ದ ಬಿ.ಕೆ ಶೀನ ತನ್ನ ಕುಟುಂಬದ ಟ್ರಸ್ಟ್ ಮೂಲಕ 1976ರಲ್ಲಿ ಜೆರಿಮೆರಿಯಲ್ಲಿ ಶ್ರೀ ಉಮಾ ಮಹೇಶ್ವರೀ ದೇವಸ್ಥಾನ ಸ್ಥಾಪಿಸಿದ್ದರು. 1992ರಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಕಣ್ಣುಗಳ ದೃಷ್ಠಿಯನ್ನು ಕಳಕೊಂಡಿದ್ದರೂ ಮೊದಲಿನಂತೆಯೇ ದಕ್ಷತೆ, ನಿಷ್ಠೆಯಿಂದ ಸೇವಾ ನಿತರರಾಗಿದ್ದರು.

ಮೃತರು ಪತ್ನಿ ಲಲಿತಾ ಶೀನ ಪೂಜಾರಿ, ಸುಪುತಿಯರಾದ ಸರಿತಾ ಪೂಜಾರಿ ನಿಶಾ ಪೂಜಾರಿ, ಸೋನಿಯ ಪೂಜಾರಿ ಮತ್ತು ನಿಖಿತಾ ಪೂಜಾರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here