Friday 26th, April 2024
canara news

ಮಿತ್ರ ಮಂಡಳಿ ಮುಲುಂಡ್ ಸಾಧನೆ-ಸಾಹಿತ್ಯ ಲೋಕಕ್ಕೆ ಹೊಸ ಕೊಡುಗೆ

Published On : 04 Apr 2018   |  Reported By : Rons Bantwal


ಮುಂಬಯಿ ವಿಶ್ವವಿದ್ಯಾಲಯದಲ್ಲಿ ಮಹಾಕವಿ ಕುವೆಂಪು ದತ್ತಿನಿಧಿ ಸ್ಥಾಪನೆ

ಮುಂಬಯಿ, ಎ.04: ಕನ್ನಡದ ಹೆಸರಾಂತ ಸಾಹಿತಿ, ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಮಿತ್ರಮಂಡಳಿ ಮುಲುಂಡ್ ಪ್ರಾಯೋಜಕತ್ವದಲ್ಲಿ ದತ್ತಿ ನಿಧಿಯೊಂದನ್ನು ಸ್ಥಾಪಿಸಲು ನಿರ್ಧರಿಸಿದೆ. ಯುಗದ ಕವಿ, ಜಗದ ಕವಿ, ಮಹಾ ಮಾನವತಾವಾದಿ ಕುವೆಂಪು ಅವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪನೆ ಆಗುತ್ತಿರುವುದಕ್ಕೆ ಕನ್ನಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಹರ್ಷ ವ್ಯಕ್ತ ಪಡಿಸಿದ್ದಾರೆ.

ಈ ದೇಶದ ಹಳೆಯ, ಮೊದಲ ಮೂರು ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಮಹಾಕವಿ ಕುವೆಂಪು ಅವರ ಹೆಸರಿನಲ್ಲಿ ಕನ್ನಡ ಸೇನಾನಿ ಎಸ್.ಕೆ ಸುಂದರ್ ಮತ್ತು ಮಿತ್ರರು ದತ್ತಿ ನಿಧಿಯೊಂದನ್ನು ಸ್ಥಾಪಿಸಿರುವುದು ಒಂದು ಐತಿಹಾಸಿಕ ಘಟನೆ. ಈಗಾಗಲೇ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕುಮಾರವ್ಯಾಸ, ಬೇಂದ್ರೆ, ಶಿವರಾಮ ಕಾರಂತ ಮೊದಲಾದ ಮಹಾನ್ ಚೇತನಗಳ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪನೆಯಾಗಿದ್ದು ಇದೀಗ ಕುವೆಂಪು ಅವರ ಹೆಸರು ಈ ಮಾಲಿಕೆಯಲ್ಲಿ ಸೇರ್ಪಡೆ ಗೊಂಡಿರುವುದು ಔಚಿತ್ಯಪೂರ್ಣ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ದತ್ತಿ ನಿಧಿ ಹಸ್ತಾಂತರ ಕಾರ್ಯಕ್ರಮ ದಿನಾಂಕ 7ರ ಶನಿವಾರ ಮಧ್ಯಾಹ್ನ 2.30ರಿಂದ ನಡೆಯಲಿರುವ ಕೃತಿ ಬಿಡುಗಡೆ ಮತ್ತು ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಕವಿವರ್ಯ ಡಾ| ಕುಸುಮಾಗ್ರಜ ಮರಾಠಿ ಭಾಷಾ ಭವನದ ಸಭಾಂಗಣದಲ್ಲಿ ನಡೆಯಲಿರುವುದು.

ಈ ಕಾರ್ಯಕ್ರಮದಲ್ಲಿ ಅತಿಥಿüಗಳಾಗಿ ಪ್ರಸಿದ್ಧ ಕಲಾವಿದ ಡಾ| ಅಪ್ಪಗೆರೆ ತಿಮ್ಮರಾಜು, ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾಧೀಶ ಜಸ್ಟೀಸ್ ಶ್ರೀ ಕೃಷ್ಣ, ನಿವೃತ್ತ ಪೆÇೀಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ, ನಾಮಾಂಕಿತ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಬಿಲ್ಲವರ ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ ಶೆಟ್ಟಿ, ಬಂಟರ ಸಂಘ ಮುಂಬಯಿ ಇದರ ಮಾಜಿ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಸಮಾಜ ಸೇವಕರು ಮತ್ತು ಉದ್ಯಮಿಗಳಾದ ಕಡಂದಲೆ ಸುರೇಶ್ ಎಸ್.ಭಂಡಾರಿ, ಮುದ್ರಾಡಿ ದಿವಾಕರ ಶೆಟ್ಟಿ, ಕರ್ನಾಟಕ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಭರತ್‍ಕುಮಾರ್ ಪೆÇಲಿಪು, ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಡಾ| ಜೀವಿ ಕುಲಕರ್ಣಿ, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ, ಜಾನಪದ ಕಲಾವಿದ ಸಿದ್ದಪ್ಪ ಬಿದರಿ, ಸಂಘಟಕ ಎಸ್.ಕೆ ಸುಂದರ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಿತ್ರವೃಂದ ಮಂಡಳಿ, ಮುಲುಂಡ್:
ಮಿತೃವೃಂದ ಕಳೆದ ಅನೇಕ ದಶಕಗಳಿಂದ ಮುಂಬಯಿಯ ಕನ್ನಡದ ಪರಿಚಾರಿಕೆಯಲ್ಲಿ, ಸಮಾಜಸೇವೆಯಲ್ಲಿ ತೊಡಗಿಸಿ ಕೊಂಡಿದೆ. ಹೋಟೇಲ್‍ನಲ್ಲಿ ಕೆಲಸ ಮಾಡುತ್ತಿದ್ದ, ಅಥಿರ್üಕವಾಗಿ ಹಿಂದುಳಿದ ರಾತ್ರಿ ಶಾಲೆಯ ವಿದ್ಯಾಥಿರ್üಗಳಿಗೆ ವಸತಿ ವ್ಯವಸ್ಥೆ ಇಲ್ಲದಿದ್ದಾಗ 1965ರಲ್ಲಿ ಈ ಸಂಸ್ಥೆ ಆರಂಭಿಸಲಾಯಿತು. ಸ್ವಂತ ಕಟ್ಟಡ ಖರೀದಿಸಿ ಉಚಿತ ವ್ಯವ¸ ಕಲ್ಪಿಸಿದ ಶ್ರೇಯ ಈ ಸಂಸ್ಥೆಗೆ ಸಲ್ಲುತ್ತದೆ. ನಾಟಕವನ್ನು ಆಡಿಸಿ ಧನಸಂಗ್ರಹ ಮಾಡಿ ಅನೇಕ ಬಡ ವಿದ್ಯಾಥಿರ್üಗಳ ಬಾಳಿಗೆ ಬೆಳಕಾದ ಸಂಸ್ಥೆ ಮಿತ್ರ ಮಂಡಳಿ ಮುಲುಂಡ್. ಕನ್ನಡದ ಹಿರಿಯ ಸಾಹಿತಿಗಳಾದ ಎಂ.ವಿ ಕಾಮತ್, ರಾಮಚಂದ್ರ ಉಚ್ಚಿಲ್, ಬಿ.ಎ ಸನದಿ ಮೊದಲಾದವರ ಕೃತಿಗಳನ್ನು ಹೊರತಂದ ಕೀರ್ತಿ ಸಹ ಈ ಸಂಸ್ಥೆಗಿದೆ. ಆಥಿರ್üಕವಾಗಿ ತೊಂದರೆಯಲ್ಲಿರುವ ವಿದ್ಯಾಥಿರ್üಗಳಿಗೆ ಇಂದಿಗೂ ಧನಸಹಾಯ ನೀಡುತ್ತ ಬರುತ್ತಿದೆ.

ಎಸ್.ಕೆ ಸುಂದರ್, ಎ.ನರಸಿಂಹ, ಜಯರಾಮ ಮೂಲ್ಯ, ಶಂಭು ಶೆಟ್ಟಿ, ಶೇಖರ ಶೆಟ್ಟಿ, ಬಿ.ಆರ್ ಹೆಗ್ಡೆ, ಎನ್.ಟಿ ಶೆಟ್ಟಿ, ನಾರಾಯಣ ಶೆಟ್ಟಿ, ಹೆಚ್.ಆರ್ ಚಂದನ್ ಮೊದಲಾದವರು ಸೇರಿ ಈ ಸಂಸ್ಥೆ ಕಟ್ಟಿ ಬೆಳೆಸಲು ವಿಶೇಷವಾದ ಪರಿಶ್ರಮ ವಹಿಸಿದ್ದರು. ಇದೀಗ ಕುವೆಂಪು ಅವರ ಹೆಸರಿನಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ದತ್ತಿನಿಧಿ ಸ್ಥಾಪಿಸಿದ ಹೆಚ್ಚುಗಾರಿಕೆ ಇವರದ್ದು.

ರಾಷ್ಟ್ರಕವಿ ಕುವೆಂಪು: ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು..." ಎಂದು ಕನ್ನಡಿಗರನ್ನು ಜಡತೆಯಿಂದ ಬಡಿದೆಬ್ಬಿಸಿ ಕನ್ನಡದ ದಿಂಡಿಮವನ್ನು ಬಾರಿಸಿದವರು ನಮ್ಮ ರಾಷ್ಟ್ರ ಕವಿ ಕುವೆಂಪು ಅವರು. ಇಪ್ಪತ್ತನೆಯ ಶತಮಾನದ ಮೂರನೇ ದಶಕದಲ್ಲಿ ಕನ್ನಡದ ಆಧುನಿಕ ಸಾಹಿತ್ಯ ಚಿಗುರೊಡೆಯುತ್ತಿದ್ದ ಪರ್ವಕಾಲದಲ್ಲಿ, ಕವನ, ಕಾವ್ಯ, ನಾಟಕ, ಸಣ್ಣಕತೆ, ಕಾದಂಬರಿ, ಖಂಡಕಾವ್ಯ, ಮಹಾಕಾವ್ಯ ಹೀಗೆ ಎಲ್ಲಾ ಪ್ರಕಾರಗಳಲ್ಲಿ ಗಣನೀಯವಾದ ಕೊಡುಗೆ ನೀಡಿ ಕನ್ನಡ ಸಾಹಿತ್ಯಕ್ಕೆ ಭಧ್ರ ಬುನಾದಿ ಹಾಕಿರುವ ಮೇರು ಕವಿಗಳಲ್ಲಿ ಕುವೆಂಪು ಓಬ್ಬರು. ಚಿಕ್ಕಂದಿನಲ್ಲೇ ಪೌರ್ವಾತ್ಯ, ಪಾಶ್ಚಾತ್ಯ ತತ್ವಜ್ಞರ ಚಿಂತನಶೀಲ ಬರವಣಿಗೆಗಳನ್ನು ಓದಿ ಅರಗಿಸಿಕೊಂಡು ತಮ್ಮದೇ ಆದ ವಿಚಾರಶೀಲ ವ್ಯಕ್ತಿತ್ವವನ್ನು ಬೆಳೆಸಿ ಕೊಂಡರು. ರಾಮಕೃಷ್ಣ ಪರಮಹಂಸ, ವಿವೇಕಾನಂದ ಮತ್ತಿತರ ಆದರ್ಶಗಳಿಂದ ಪ್ರೇರಿತರಾಗಿ ಕ್ರಾಂತಿಕಾರಕ ಮನೋಭಾವ ಬೆಳೆಸಿಕೊಂಡ ಕವಿ, ಸಮಾಜದಲ್ಲಿ ಅಸಮಾನತೆ, ಜಾತಿ ಪದ್ಧತಿಯಂತಹ ಜಾಡ್ಯಗಳು ನಿರ್ಮೂಲವಾಗಬೇಕು ಎಂಬ ಆದರ್ಶವನ್ನು ಹೊಂದಿದ್ದರು. ಮನುಜ ಮತ-ವಿಶ್ವಪಥದಂತಹ ಜೀವನದರ್ಶನ ಹೊಂದಿದ್ದ ಕವಿ ಜಗತ್ತಿಗೆ ವಿಶ್ವ ಮಾನವ ಸಂದೇಶವನ್ನು ಸಾರಿದರು.

ಕನ್ನಡದಲ್ಲಿ ಬಹಳಷ್ಟು "ಪ್ರಥಮ" ಪ್ರಶಸ್ತಿಗಳು ಕುವೆಂಪು ಅವರ ಕೊರಳನ್ನಲಂಕರಿಸಿದೆ.ಜ್ಞಾನ ಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಷ್ಟ್ರ ಕವಿ, ಕರ್ನಾಟಕರತ್ನ ಪದವಿಗಳು ಮೊದಲ ಬಾರಿಗೆ ಸಂದಿದ್ದು ಕುವೆಂಪು ಅವರಿಗೆ. ಅವರಿಗೆ ದೊರೆತ ಪದ್ಮ ಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ಕನ್ನಡಿಗರು ಕನ್ನಡ ಸಾಹಿತ್ಯ ಲೋಕಕ್ಕೆ ಸಂದ ಪ್ರಶಸ್ತಿ ಎಂದು ಸಂಭ್ರಮಿಸಿದ್ದರು. ಆದರೆ ಲೌಕಿಕ ಪದವಿಗಳನ್ನು ಎಂದೂ ಆಶಿಸದ ಕವಿ ಈ ಎಲ್ಲಾ ಪ್ರಶಸ್ತಿಗಳನ್ನು ಸ್ಥಿತಪ್ರಜ್ಞತೆಯಿಂದ (ನಿರ್ಲಿಪ್ತತೆಯಿಂದಲೇ) ಸ್ವೀಕರಿಸಿದ್ದರು.

ಸಮಕಾಲೀನ ಹಿರಿಯ ಕವಿಗಳಾದ ದ.ರಾ ಬೇಂದ್ರೆ ಅವರಿಂದ `ಜಗದ ಕವಿ, ಯುಗದ ಕವಿ' ಎಂದು ಕೀರ್ತಿತರಾದವರು. ತಮ್ಮ ಬಹುಮುಖವಾದ, ಬಹು ಮುಖ್ಯವಾದ ರಚನೆಗಳಿಂದ `ಕುವೆಂಪು ಯುಗ' ಎಂದು ಕರೆಯ ಬಹುದಾದ ಸಾಧನೆಯನ್ನು ತಮ್ಮದಾಗಿಸಿ ಕೊಂಡಿರರುವವರು ಕುವೆಂಪು. "ಪಂಪನಿಂದ ಕುವೆಂಪುವರೆಗೆ" ಎಂದು ಸಾಹಿತ್ಯದ ಸುದೀರ್ಘಕಾಲ ಘಟ್ಟವನ್ನು ನಿರ್ದೇಶಿಸುವಷ್ಟರ ಮಟ್ಟಿಗೆ ಅವರು ಸಾಹಿತ್ಯ ಕ್ಷೇತ್ರದಲ್ಲಿ ಅಮರರಾಗಿದ್ದಾರೆ. ಒಟ್ಟಿನಲ್ಲಿ ಕುವೆಂಪು ಕನ್ನಡದ ಮೇರು ಸಾಧನೆಯ ಪ್ರತೀಕವಾಗಿರುವಂತಹ ವಿರಳ ಸಾಹಿತಿ. ಆಧುನಿಕ ಸಾಹಿತ್ಯದಲ್ಲಿ ಕುವೆಂಪು ಕನ್ನಡದಕೀರ್ತಿ ಶಿಖರದ ಪ್ರತಿಕವೇ ಆಗಿದ್ದಾರೆ.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here