Sunday 21st, October 2018
canara news

ಪುಣೆ ಚಿಂಚ್ವಾಡ್‍ನ ಭಾರತ್ ಬ್ಯಾಂಕ್ ಸ್ಥಳಾಂತರಿತ ಶಾಖೆ ಪುನಾರಂಭ

Published On : 13 Apr 2018   |  Reported By : Rons Bantwal


ಬಿಸಿಬಿ ಮಿಲಿಯನ್ ಡಾಲರ್ ವ್ಯವಹಾರಿಸುವಂತಾಗಲಿ : ಪೂರ್ಣಿಮಾ ಗಣೇಶ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಪುಣೆ,: ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಮತ್ತು ಗುಣಮಟ್ಟದ ಬ್ಯಾಂಕ್ ಸೇವೆಗಾಗಿ ದಿ.ಮಹಾರಾಷ್ಟ್ರ ಸ್ಟೇಟ್ ಕೋ.ಅಪರೇಟಿವ್ ಬ್ಯಾಂಕ್'ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ ಸಂಸ್ಥೆಯ `ಸರ್ವೋತ್ಕೃ ಷ್ಟ ಬ್ಯಾಂಕ್ ಪುರಸ್ಕಾರ'ಕ್ಕೆ ಪಾತ್ರÀವಾದ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಪುಣೆ ಚಿಂಚ್ವಾಡ್ ಅಲ್ಲಿನ ಸ್ಥಳಾಂತರಿತ ಶಾಖೆಯನ್ನು ಇಂದಿಲ್ಲಿ ಗುರುವಾರ ಬೆಳಿಗ್ಗೆ ಪುಣೆ ಚಿಂಚ್ವಾಡದಲ್ಲಿನ ಎಂಪಾಯರ್ ಎಸ್ಟೇಟ್‍ನ ತಳ ಮಹಡಿಯಲ್ಲಿ ಶುಭಾರಂಭ ಗೊಳಿಸಲ್ಪಟ್ಟಿತು.

ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ (ಬಿಸಿಬಿ) ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ರಿಬ್ಬನ್ ಬಿಡಿಸಿ ಶಾಖೆ ಉದ್ಘಾಟಿಸಿದರು. ಬಿಲ್ಲವರ ಅಸೋಸಿಯೇಶನ್ ಪುಣೆ ಚಿಂಚ್ವಾಡ ಇದರ ಅಧ್ಯಕ್ಷ ಎಸ್.ಟಿ ಸಾಲ್ಯಾನ್ ಮತ್ತು ಬಂಟರ ಸಂಘ ಪುಣೆ ಚಿಂಚ್ವಾಡ ಇದರ ಅಧ್ಯಕ್ಷ ಮಹೇಶ್ ಹೆಗ್ಡೆ ದೀಪ ಪ್ರಜ್ವಲಿಸಿ ಶಾಖೆಗೆ ವಿಧ್ಯುಕ್ತವಾಗಿ ಚಾಲನೆಯನ್ನೀಡಿದರು. ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್ ಎಟಿಎಂ ಸೇವೆಯನ್ನೂ, ಬ್ಯಾಂಕ್‍ನ ನಿರ್ದೇಶಕ ಚಂದ್ರಶೇಖರ ಎಸ್.ಪೂಜಾರಿ ಅವರು ಸೇಫ್ ಲಾಕರ್ ಸೇವೆಗಳಿಗೆ ಹಾಗೂ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ಕಂಪ್ಯೂಟರೀಕೃತ ಸೇವೆಗಳಿಗೆ ಚಾಲನೆಯನ್ನೀಡಿ ಶುಭಾರೈಸಿದರು.

ಈ ಶುಭಾವಸರದಲ್ಲಿ ಪ್ರಧಾನ ಅಭ್ಯಾಗತರಾಗಿ ಮಂಗಳೂರು ತಾಲೂಕು ಪಂಚಾಯತ್ ಉಪ ಕಾರ್ಯಾಧ್ಯಕ್ಷೆ ಪೂರ್ಣಿಮಾ ಗಣೇಶ್ ಪೂಜಾರಿ ಉಪಸ್ಥಿತರಿದ್ದು ಮಾತನಾಡಿ ಮನುಕುಲದ ಮುನ್ನಡೆಗೆ ಹಿರಿಯರ ಆಶೀರ್ವಾದ ಬೇಕೆಬೇಕು. ಅಂತವರಲ್ಲೂ ಜಯ ಸುವರ್ಣ ಅವರಂತಹ ಮಾರ್ಗದರ್ಶನ, ಅನುಗ್ರಹದಿಂದ ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿಯೇ ಸರಿ. ಸಮಗ್ರ ಬಿಲ್ಲವ ಸಮಾಜಕ್ಕೆ ಜಯ ಸುವರ್ಣರು ಕುಲಶಕ್ತಿಯಿದ್ದತೆ. ಕಾರಣ ಅವರ ಕೊಡುಗೆ ಮಹತ್ವವಾದದ್ದು. ಅವರಂತಹ ಶಕ್ತಿ ದೇವರು ಎಲ್ಲರಿಗೂ ಪ್ರಾಪ್ತಿಸಬೇಕು. ಇವರಂತಹ ಧೀಮಂತ ವ್ಯಕ್ತಿತ್ವ ಶಕ್ತಿ ಯುವ ಜನತೆಗೆ ಅತ್ಯವಶ್ಯ ಮತ್ತು ಅಮೂಲ್ಯವಾಗಿದೆ. ಭಾರತ್ ಬ್ಯಾಂಕ್ ಬಿಲ್ಲವರ ಹಿರಿಮೆಯಾಗಿದೆ. ಆದುದರಿಂದ ದೇಶ ವಿದೇಶಗಳಲ್ಲಿರುವ ನಮ್ಮವರು ಈ ಬ್ಯಾಂಕ್‍ನೊಂದಿಗೆ ವ್ಯವಹರಿಸಬೇಕು. ಮತ್ತು ಆ ಮೂಲಕ ಬ್ಯಾಂಕ್ ಮಿಲಿಯನ್ ಡಾಲರ್ ವ್ಯವಹಾರಿಸುವಂತಾಗಬೇಕು. ಹಿರಿಯರ ಆಶೀರ್ವಾದ, ಪೆÇ್ರೀತ್ಸಹದಿಂದ ಈ ಬ್ಯಾಂಕ್ 3000ಕ್ಕೂ ಮಿಕ್ಕಿ ಶಾಖೆಗಳನ್ನು ತೆರೆಯುವಂತಾಗಲಿ ಎಂದು ಹಾರೈಸಿದರು.

ಶಿವಸೇನಾ ಪಕ್ಷದ ನೇತಾರ ಸಂಜಯ್ ಸಾಳ್ವಿ, ಸ್ಥಾನೀಯ ಸಮಾಜ ಸೇವಕರುಗಳಾದ ನ್ಯಾ| ಅಪ್ಪು ಮೂಲ್ಯ, ರವೀಂದ್ರ ಪೂಜಾರಿ, ಕಿರಣ್ ಸುವರ್ಣ, ನಾಗಯ್ಯ ವಿ.ಪೂಜಾರಿ, ಅಶೋಕ್ ಶೆಟ್ಟಿ, ಸತೀಶ್ ರಾಜು ಸಾಲ್ಯಾನ್, ಅಯ್ಯಪ್ಪ ಸೇವಾ ಸಮಿತಿ ಕಾರ್ಯದರ್ಶಿ ಗಣೇಶ್ ಅಂಚನ್, ಜಗನ್ನಾಥ ಎಂ.ಅಮೀನ್ ಕೊಂಡೆವೂರು, ಉದ್ಯಮಿಗಳಾದ ಇಂದುರಾವ್ ಮೋಹಿತ್, ನೀತ್‍ರಾಜ್ ಬಾಯ್,ಶೇಖರ್ ಚಿತ್ರಾಪುರ, ನಿಯಾಜ್ ಅಹ್ಮದ್ ಸಿದ್ಧಿಕಿ, ಪಂಕಜ್ ನಿಖಾಮ್, ರವಿ ಕೋಟ್ಯಾನ್ (ಆರ್.ಕೆ ಕ್ಯಾಟರರ್ಸ್), ಭಾರತ್ ಬ್ಯಾಂಕ್‍ನ ನಿರ್ದೇಶಕರಾದ ನ್ಯಾ| ಎಸ್.ಬಿ ಅವಿೂನ್, ರೋಹಿತ್ ಎಂ.ಸುವರ್ಣ, ಗಂಗಾಧರ್ ಜೆ.ಪೂಜಾರಿ, ಮಾಜಿ ನಿರ್ದೇಶಕ ಎನ್.ಎಂ ಸನೀಲ್, ಧಣ್ಕವಾಡಿ ಶಾಖೆಯ ರವೀಂದ್ರ ಕೆ.ಕೋಟ್ಯಾನ್, ಶಿವಾಜಿ ನಗರ ಶಾಖೆಯ ಪ್ರಬಂಧಕ ಸುಧೀರ್ ಎಸ್.ಪೂಜಾರಿ ಸೇರಿದಂತೆ ಬ್ಯಾಂಕ್‍ನ ಅನೇಕ ಷೇರುದಾರರು, ನೂರಾರು ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದು ಶಾಖೆಯ ಸರ್ವೋನ್ನತಿಗೆ ಹಾರೈಸಿದರು.

ಎಸ್.ಟಿ ಸಾಲ್ಯಾನ್ ಮಾತನಾಡಿ ಭಾರತ್ ಬ್ಯಾಂಕ್ 102 ಶಾಖೆ ಹೊಂದಿರುವುದು ತುಂಬಾ ಸಂತೋಷದ ವಿಷಯ. ಇದು ಬಿಲ್ಲವ ಸಮುದಾಯದ ಹೆಗ್ಗಳಿಕೆಯಾಗಿದೆ. ಮುಂದೆಯೂ ಹಲವು ಶಾಖೆಗಳು ತೆರೆಯಲ್ಪಟ್ಟು ರಾಷ್ಟ್ರದ ಬಹುದೊಡ್ಡ ಬ್ಯಾಂಕ್ ಆಗಲಿ ಎಂದು ಆಶಿಸಿದರು.

ಮಹೇಶ್ ಹೆಗ್ಡೆ ಮಾತನಾಡಿ ಸಹಕಾರಿ ವಲಯದಲ್ಲಿ ಸರ್ವೋನ್ನತ ಸ್ಥಾನವನ್ನಲಂಕರಿಸುತ್ತಿರುವ ಭಾರತ್ ಬ್ಯಾಂಕ್ ಇನ್ನಷ್ಟು ಶಾಖೆಗಳೊಂದಿಗೆ ವಿರಾಜಮಾನವಾಗಲಿ. ಇಲ್ಲಿನ ಮೊದಲ ಶಾಖೆಯೂ ಉತ್ತಮವಾಗಿತ್ತು. ಈ ಶಾSಯೂ ವಾಸ್ತುಯುತವಾಗಿ ಇನ್ನಷ್ಟು ಯಶ ಕಾಣಲಿ ಎಂದರು.

ನಾನು ಕಳೆದ 37 ವರ್ಷಗಳಿಂದ ಈ ಬ್ಯಾಂಕ್‍ನ ಅನುಭವೀದಾರನಾಗಿದ್ದೇನೆ. ಇಲ್ಲಿನ ಶಾಖೆಯ ಮೊದಲ ದಿನದಿಂದ ವ್ಯವಹಾರಿಸಿ ಮನ ಮತ್ತು ಹಣ ಸಮೃದ್ಧಿ ಪಡೆದ ಗ್ರಾಹಕನಾಗಿದ್ದೇನೆ ಎಂದು ಇಂದು ರಾವ್ ಮೋಹಿತೆ ತಿಳಿಸಿದರು.

ಗಿಡವಾಗಿದ್ದ ಭಾರತ್ ಬ್ಯಾಂಕ್ ಸದ್ಯ ಮರವಾಗಿ ಬೆಳೆದಿದೆ. ಗ್ರಾಹಕರಿಗೆ ಫಲದಾಯಕ ಆಥಿರ್sಕ ಸೇವೆಯ ನೆರಳನ್ನು ನೀಡಿದ ಕೀರ್ತಿ ಈ ಬ್ಯಾಂಕ್‍ಗೆ ಇದೆ ಎಂದು ಶಿವಸೇನಾ ನೇತಾರ ಸಂಜಯ್ ಸಾಳ್ವಿ ನುಡಿದರು.

ನ್ಯಾ| ಅಪ್ಪು ಮೂಲ್ಯ ಮಾತನಾಡಿ ವರ್ಲ್ಡ್ ಬ್ಯಾಂಕ್ ಸದಸ್ಯತ್ವ ಪಡೆಯುವ ಅರ್ಹತೆ ಈ ಬ್ಯಾಂಕ್‍ಗಿದೆ ಎಂದರು.

ಭಾರತ್ ಬ್ಯಾಂಕ್ ಸಮಗ್ರ ಜನತೆಯ ಹಣಕಾಸು ವ್ಯವಹಾರಕ್ಕೆ ಸ್ಪಂದಿಸಲಿ. ಆ ಮೂಲಕ ಅಲ್ಲಹನ ಕೃಪೆಯಿಂದ ಸರ್ವರ ಮನಮನೆಗಳಲ್ಲಿ ಬ್ಯಾಂಕ್ ಜನಮನ್ನಣೆ ಪಡೆಯಲಿ ಎಂದು ನಿಯಾಜ್ ಅಹ್ಮದ್ ನುಡಿದರು.

2012ರ ಮಾರ್ಚ್ 05ರಂದು ಭಾರತ್ ಬ್ಯಾಂಕ್ ತನ್ನ 44ನೇ ಶಾಖೆಯನ್ನಾಗಿಸಿ ಪುಣೆ ಚಿಂಚ್ವಾಡ್‍ನಲ್ಲಿನ ಆರಂಭ ಗೊಳಿಸಿತ್ತು. ಗತ ಸಾಲಿನಲ್ಲಿ ಈ ಶಾಖೆಯು ಸುಮಾರು 1750 ಖಾತೆಗಳನ್ನು ಹೊಂದಿದ್ದು, ಠೇವಣಿ ರೂಪಾಯಿ 36.91 ಕೋಟಿ, ಅಡ್ವನ್ಸ್ ರೂಪಾಯಿ 31.30 ಕೋಟಿ, ಪ್ರಸ್ತುತ ಒಟ್ಟು ವ್ಯವಹಾರ ರೂಪಾಯಿ 68.21 ಕೋಟಿ ವ್ಯವಹಾರ ನಡೆಸಿದೆ. ಇಂದು ಬ್ಯಾಂಕ್ ಗ್ರಾಹಕರ ಉತ್ಕೃಷ್ಟ ಸೇವೆಗಾಗಿ ಅತ್ಯಾಧುನಿಕ ಸೌಲತ್ತುಗಳೊಂದಿಗೆ ಸೇವೆಯನ್ನೀಡುತ್ತಿದೆ. ಬ್ಯಾಂಕ್ ವಿಶ್ವಾಸನೀಯ ವ್ಯವಹಾರ ನಡೆಸಿ ಸ್ಥಾನೀಯ ಗ್ರಾಹಕರ ಆಥಿರ್üಕ ಸೇವೆಯ ವಿಶ್ವಾಸಕ್ಕೆ ಪಾತ್ರವಾಗಿದೆ. ಅಂತೆಯೇ ತೃಪ್ತಿದಾಯಕ ಸೇವೆಯಲ್ಲಿ ಕಾರ್ಯನಿರತವಾಗಿ ಸ್ವಂತಿಕೆಯ ಮಾನ್ಯತೆಗೆ ಎಂದು ಬ್ಯಾಂಕ್‍ನ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ಕಂಪ್ಯೂಟರೀಕೃತ ಸೇವೆಗಳಿಗೆ ಚಾಲನೆಯನ್ನೀಡಿ ತಿಳಿಸಿದರು.

ಉಳ್ಳೂರು ಶ್ರೀ ಶೇಖರ್ ಶಾಂತಿ ಮತ್ತು ಉಳ್ಳೂರು ದಿನೇಶ್ ಶಾಂತಿ ವಾಸ್ತುಪೂಜೆ, ಗಣಹೋಮ, ಸತ್ಯನಾರಾಯಣ ಮಹಾಪೂಜೆ, ಲಕ್ಷ್ಮೀ ಪೂಜೆ, ದ್ವಾರಪೂಜೆ ನೆರವೇರಿಸಿ ಹರಸಿದರು. ಗಂಗಾಧರ ಕಲ್ಲಾಡಿ ತೀರ್ಥಪ್ರಸಾದ ವಿತರಿಸಿದ ರು. ಗಣೇಶ್ ಅಂಚನ್ ಮತ್ತು ಶಕುಂತಳ ಗಣೇಶ್ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಬ್ಯಾಂಕ್‍ನ ಅಭಿವೃದ್ಧಿ ಇಲಾಖೆಯ ಉನ್ನತಾಧಿಕಾರಿಗಳಾದ ಸುನೀಲ್ ಎ.ಗುಜರನ್, ವಿಜಯ್ ಪಾಲನ್, ಬ್ಯಾಂಕ್ ಸಿಬ್ಬಂದಿಗಳಾದ ಅನಿಲ್ ವಿ.ಪೂಜಾರಿ, ಸುಧೀರ್ ಟಿ.ಕುಮಾರ್, ಮೋಹನ್ ಕೆ.ಪವಾರ್, ಸುಧಾಕರ ಪೂಜಾರಿ, ತನ್ವಿ ಅಂಚನ್, ಸೂರಜ್ ದೇರ್ಕರ್, ಅಶ್ವಿತ್ ಪೂಜಾರಿ ಅವರನ್ನು ಬ್ಯಾಂಕ್‍ನ ನಿರ್ದೇಶಕರು ಪುಪ್ಚಗುಪ್ಚಗಳನ್ನಿತ್ತು ಗೌರವಿಸಿದರು. ಬ್ಯಾಂಕ್‍ನ ಅಭಿವೃದ್ಧಿ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ (ಡಿಜಿಎಂ) ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕ್‍ನ ಮುಖ್ಯಸ್ಥ ಅನಿಲ್ ವಿ.ಪೂಜಾರಿ ಸ್ವಾಗತಿಸಿ ಕೃತಜ್ಞತೆ ಸಮರ್ಪಿಸಿದರು.
More News

ಗೋರೆಗಾಂವ್ ಮೋತಿಲಾಲ್ ನಗರÀದ ಶ್ರೀ ಶಾಂತ ದುರ್ಗಾದೇವಿ ಮಂದಿರದಲ್ಲಿ ಸಂಭ್ರಮ ಸಡಗರದಿಂದ ಸಂಪನ್ನಗೊಂಡ ವಾರ್ಷಿಕ ಶರನ್ನವರಾತ್ರಿ ಉತ್ಸವ
ಗೋರೆಗಾಂವ್ ಮೋತಿಲಾಲ್ ನಗರÀದ ಶ್ರೀ ಶಾಂತ ದುರ್ಗಾದೇವಿ ಮಂದಿರದಲ್ಲಿ ಸಂಭ್ರಮ ಸಡಗರದಿಂದ ಸಂಪನ್ನಗೊಂಡ ವಾರ್ಷಿಕ ಶರನ್ನವರಾತ್ರಿ ಉತ್ಸವ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಸಾಯನ್,  ಆಶ್ರಯದಲ್ಲಿ  ದೀಪಾರಾಧನೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಸಾಯನ್, ಆಶ್ರಯದಲ್ಲಿ ದೀಪಾರಾಧನೆ
ಬಿ.ಎ ಮೊಹಿದೀನ್ ಅವರು ತೆರೆದಿಟ್ಟ ನನ್ನೊಳಗಿನ ನಾನು
ಬಿ.ಎ ಮೊಹಿದೀನ್ ಅವರು ತೆರೆದಿಟ್ಟ ನನ್ನೊಳಗಿನ ನಾನು

Comment Here