Tuesday 22nd, January 2019
canara news

ಬಂಟರ ಸಂಘ ಮುಂಬಯಿ ಸಂಭ್ರಮಿಸಿದ `ಬಿಸು ಪರ್ಬ-ಬಂಟ್ಸ್ ಡೇ-2018'

Published On : 15 Apr 2018   |  Reported By : Rons Bantwal


ಸಾಂಸ್ಕೃತಿಕ ಸಂಭ್ರಮ-ವಾರ್ಷಿಕ ಸ್ನೇಹಮಿಲನಕ್ಕೆ ಸಾಂಪ್ರದಾಯಿಕ ಚಾಲನೆ

(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಎ.15: ಬಂಟರ ಸಂಘ ಮುಂಬಯಿ ಇಂದಿಲ್ಲಿ ಶನಿವಾರ ದಿನಪೂರ್ತಿಯಾಗಿಸಿ ಕುರ್ಲಾದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಬಿಸು ಪರ್ಬ, ಬಂಟ್ಸ್ ಡೇ-2018 ಮತ್ತು ವಾರ್ಷಿಕ ಸ್ನೇಹಮಿಲನವನ್ನು ಅದ್ದೂರಿಯಾಗಿ ಸಂಭ್ರಮಿಸಿತು. ಸಂಘದ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಅಧ್ಯಕ್ಷತೆಯಲ್ಲಿ ನೆರವೇರಿದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಥಾಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಕುಶಲ್ ಸಿ.ಭಂಡಾರಿ ಉಪಸ್ಥಿತರಿದ್ದು ದೀಪ ಬೆಳಗಿಸಿ ಸಾಂಪ್ರದಾಯಿಕವಾಗಿ ಬಿಸು ಪರ್ಬಕ್ಕೆ ಚಾಲನೆಯನ್ನೀಡಿದರು.

ಸಮಾರಂಭದಲ್ಲಿ ಜಯರಾಮ ಎನ್.ಶೆಟ್ಟಿ ಸಂಪಾದ ಕತ್ವದಲ್ಲಿ ಚಿತ್ತರಿ ಪಬ್ಲಿಕೇಶನ್ ಮುಂಬಯಿ ಪ್ರಕಾಶಿತ `ಯಶಸ್ವೀ ವ್ಯಕ್ತಿ ಐಕಳ ಹರೀಶ್ ಶೆಟ್ಟಿ' ವಿಶೇಷಾಂಕವನ್ನು ಪದ್ಮನಾಭ ಪಯ್ಯಡೆ ಬಿಡುಗಡೆ ಗೊಳಿಸಿದರು.

ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಗೌ| ಕೋಶಾಧಿಕಾರಿ ಪ್ರವೀಣ್ ಬಿ.ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಎಸ್.ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿ.ಶೆಟ್ಟಿ ವೇದಿಕೆಯಲ್ಲಿ ಆಸೀನರಾಗಿದ್ದು ಸಂಘವು ಕೊಡಮಾಡುವ `ಕಣಂಜಾರು ಆನಂದ ಶೆಟ್ಟಿ ಸ್ಮಾರಕ ಯಕ್ಷಗಾನ ಕಲಾ ಪ್ರಶಸ್ತಿ'ಯನ್ನು ಹಿರಿಯ ಕಲಾವಿದ, ಅರ್ಥಧಾರಿ ಕೆ.ಕೆ ಶೆಟ್ಟಿ ಅವರಿಗೆ ಮತ್ತು `ಶ್ರೀಮತಿ ಪ್ರೇಮಾ ನಾರಾಯಣ ರೈ ಪ್ರಶಸ್ತಿ'ಯನ್ನು ಸುಧಾ ಶೆಟ್ಟಿ ಅವರಿಗೆ ಮತ್ತು `ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸ್ಮಾರಕ ಪ್ರಶಸ್ತಿ'ಯನ್ನು ಲತಾ ಪಿ.ಶೆಟ್ಟಿ ಅವರಿಗೆ ಪ್ರದಾನಿಸಿ ಗೌರವಿಸಿದರು. ಪ್ರಶಸ್ತಿಗಳ ಪ್ರಾಯೋಜಕರುಗಳು ಮತ್ತು ಅತಿಥಿüಗಳು ಪುರಸ್ಕೃತರಿಗೆ ಅಭಿನಂದಿಸಿದರು.

ಉತ್ಸವದ ಆದಿಯಲ್ಲಿ ಸಂಘದ ಆವರಣದಲ್ಲಿ ಅಧ್ಯಕ್ಷರು ಬಂಟಧ್ವಜಾರೋಹಣ ಗೈದರು. ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮಂದಿರದ ಪ್ರಧಾನ ಅರ್ಚಕ ವಿದ್ವಾನ್ ಅರವಿಂದ ಬನ್ನಿಂತ್ತಾಯ ಪೂಜಾಧಿಗಳನ್ನು ನೆರವೇರಿಸಿ ತೀರ್ಥ-ಪ್ರಸಾದ ವಿತರಿಸಿ ಹರಸಿದರು. ಸಾಂಸ್ಕೃತಿಕ ಮತ್ತು ಸಾಹಿತ್ಯ ಸಮಿತಿ ಕಾರ್ಯಧ್ಯಕ್ಷ ಕರ್ನೂರು ಮೋಹನ್ ರೈ ಸ್ವಾಗತಿಸಿ ಪ್ರಸ್ತಾವನೆಗೈದರು. ಸರೋಜಾ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಬಾಲಕೃಷ್ಣ ಹೆಗ್ಡೆ ಬೆಳ್ಳಂಪಳ್ಳಿ, ಉಮಾ ಕೆ.ಶೆಟ್ಟಿ, ಆಶಾ ವಿಠಲ್ ರೈ ಪುರಸ್ಕೃತರನ್ನು ಪರಿಚಯಿಸಿದರು. ಬಂಟರವಾಣಿ ಮಾಸಿಕದ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಗೌ| ಪ್ರ| ಕಾರ್ಯದರ್ಶಿ ಸಿಎ| ಸಂಜೀವ ಶೆಟ್ಟಿ ಕೃತಜ್ಞತೆ ಸಮರ್ಪಿಸಿದರು.

ಜಯ ಎ.ಶೆಟ್ಟಿ, ವಿಠಲ್ ಎಸ್.ಆಳ್ವ, ಸಿಎ| ಸದಾಶಿವ ಶೆಟ್ಟಿ, ಉಳ್ತೂರುಗುತ್ತು ಮೋಹನ್‍ದಾಸ್ ಶೆಟ್ಟಿ, ರತ್ನಾಕರ್ ಶೆಟ್ಟಿ ಮುಂಡ್ಕೂರು, ಗುಣಪಾಲ್ ಶೆಟ್ಟಿ ಐಕಳ, ನಲ್ಯಗುತ್ತು ಪ್ರಕಾಶ್ ಟಿ.ಶೆಟ್ಟಿ, ಡಾ| ಸುನೀತಾ ಎಂ.ಶೆಟ್ಟಿ, ಅಡ್ಯಾರ್ ದಿವಾಕರ ಶೆಟ್ಟಿ, ಸುರೇಶ್ ಶೆಟ್ಟಿ ಶಿಬರೂರು, ದಿವಾಕರ್ ಶೆಟ್ಟಿ ಕುರ್ಲಾ, ನವೀನ್ ಶೆಟ್ಟಿ ಇನ್ನಾಬಾಳಿಕೆ, ಸೇರಿದಂತೆ ಇನ್ನಿತರ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

ಬಂಟರ ಸಂಘÀದ ಪದಾಧಿಕಾರಿಗಳು, ಉಪವಿಭಾಗ ಹಾಗೂ ವಿವಿಧ ಪ್ರಾದೇಶಿಕ ವಿಭಾಗೀಯ ಸಮಿತಿಗಳ ಮುಖ್ಯಸ್ಥರು, ಸದಸ್ಯರನೇಕರು ಹಾಜರಿದ್ದು ಬಂಟಗೀತೆಯನ್ನಾಡಿ, ಪೂಜಾ ನೃತ್ಯ, ಗಣೇಶ ವಂದನೆಯೊಂದಿಗೆ ಸಂಭ್ರಮ ಆರಂಭಗೊಂಡಿತು. ಸಂಘದ ಒಂಭತ್ತು ಪ್ರಾದೇಶಿಕ ಸಮಿತಿಗಳ ಸದಸ್ಯರು,ಮಹಿಳಾ ಮತ್ತು ಯುವ ವಿಭಾಗವು ವೈವಿಧ್ಯಮಯ ನೃತ್ಯಾವಳಿ, ಸಾಂಸ್ಕೃತಿಕ ವೈಭವ ಸಾದರ ಪಡಿಸಿದರು. ಶ್ರೀ ಮಹಾವಿಷ್ಣು ಕೃಪಾ ಬಂಟ ಯಕ್ಷಗಾನ ಕಲಾ ವೇದಿಕೆ ಹಾಗೂ ಬಂಟರ ಸಂಘದ ಸಮಿತಿ ಸದಸ್ಯರು `ಬೀರೆ ದೇವು ಪೂಂಜೆ' ಯಕ್ಷಗಾನ ಪ್ರದರ್ಶಿಸಿದರು.

 

 
More News

ಮಾಹಿಮ್‍ನಲ್ಲಿ ಮೊಡೇಲ್ ಬ್ಯಾಂಕ್‍ನಿಂದ 2018ನೇ ಸಾಲಿನ ವಿದ್ಯಾಥಿ೯ ವೇತನ ವಿತರಣೆ
ಮಾಹಿಮ್‍ನಲ್ಲಿ ಮೊಡೇಲ್ ಬ್ಯಾಂಕ್‍ನಿಂದ 2018ನೇ ಸಾಲಿನ ವಿದ್ಯಾಥಿ೯ ವೇತನ ವಿತರಣೆ
ಆಲ್ ಇಂಡಿಯಾ ಕೋ.ಅಪರೇಟಿವ್ ಬ್ಯಾಂಕಿಂಗ್ ಕಾನ್ಫರೆನ್ಸ್
ಆಲ್ ಇಂಡಿಯಾ ಕೋ.ಅಪರೇಟಿವ್ ಬ್ಯಾಂಕಿಂಗ್ ಕಾನ್ಫರೆನ್ಸ್
ಐವಾನ್ ಡಿಸೋಜಾ ಅವರಿಗೆ ಶುಭಾರೈಸಿದ ಸುನೀಲ್ ಪಾಯ್ಸ್
ಐವಾನ್ ಡಿಸೋಜಾ ಅವರಿಗೆ ಶುಭಾರೈಸಿದ ಸುನೀಲ್ ಪಾಯ್ಸ್

Comment Here