Friday 26th, April 2024
canara news

ಮೈಸೂರು ಅಸೋಸಿಯೇಶನ್ ಮುಂಬೈ ಪ್ರಸ್ತುತಿಯ

Published On : 15 Apr 2018   |  Reported By : Rons Bantwal


ಜಾಗತಿಕ ಕನ್ನಡ `ಕವನ ಸ್ಪರ್ಧೆ-2018' ಗೆ ಆಹ್ವಾನ

ಮುಂಬಯಿ, : ಮೈಸೂರು ಅಸೋಸಿಯೇಶನ್ ಮುಂಬೈ ಜಾಗತಿಕ ಕನ್ನಡ `ಕವನ ಸ್ಪರ್ಧೆ-2018'ಗೆ ಆಹ್ವಾನಿಸಿದ್ದು ಕವನ ಸ್ಪರ್ಧೆಯಲ್ಲಿ ವಿಶ್ವದಾದ್ಯಂತ ಇರುವ ಎಲ್ಲ ಕನ್ನಡಿಗರು ಭಾಗವಹಿಸಬಹುದಾಗಿದೆ. ಆಸಕ್ತರು ಯಾವುದೇ ವಿಷಯದ ಕುರಿತಂತೆ ಕವಿತೆಗಳನ್ನು ರಚಿಸಬಹುದಾಗಿದೆ. ಕವಿತೆ ಸ್ವೀಕರಿಸಲು ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.

ಪ್ರಥಮ ಬಹುಮಾನ ರೂಪಾಯಿ10,000/-, ದ್ವಿತೀಯ ಬಹುಮಾನ ರೂಪಾಯಿ 5,000/-, ತೃತೀಯ ಬಹುಮಾನ: ರೂಪಾಯಿ 3,000/-, ಪೆÇ್ರೀತ್ಸಾಹಕ ಬಹುಮಾನ ರೂಪಾಯಿ 1,000/- (ಇಬ್ಬರಿಗೆ) ನೀಡಲಾಗುವುದು.

ಸ್ಪರ್ಧೆಯ ನಿಯಮಾವಳಿಗಳು ಅನ್ವಯಿಸಲಿದ್ದು ಮೊದಲಾಗಿ ಕವನಗಳು ಸ್ವರಚಿತವಾಗಿರಬೇಕು. ಅನುವಾದ, ಅನುಕರಣೆ ಆಗಿರಕೂಡದು. ಎರಡನೇಯದಾಗಿ ಕವನಗಳು ಸುಮಾರು 30 ಸಾಲಿನ ಮಿತಿಯಲ್ಲಿರಲಿ. ಕಾಗದದ ಒಂದೇ ಮಗ್ಗುಲಲ್ಲಿ ಚಿತ್ತಿಲ್ಲದಂತೆ ಸ್ಪುಟವಾಗಿ ಬರೆದು ಕಳುಹಿಸಿ. (ಹಸ್ತ ಲಿಖಿತ ಯಾ ಕಂಪ್ಯೂಟರ್ ಮುದ್ರಿತ). ಇಮೈಲ್ ಞಚಿvಚಿಟಿಚಿ.ಟಿesಚಿಡಿu@gmಚಿiಟ.ಛಿom ಮೂಲಕವೂ ಕಳುಹಿಸ ಬಹುದು. ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಇ-ಮೈಲ್ ಪ್ರತ್ಯೇಕ ಕಾಗದದಲ್ಲಿ ಬರೆದು ಕಳುಹಿಸಿ. ಸ್ಪರ್ಧೆಗೆ ಕಳುಹಿಸಿದ ಕವನಗಳು ಫಲಿತಾಂಶ ಬರುವ ತನಕ ಬೇರೆ ಎಲ್ಲಿಯೂ ಪ್ರಕಟ ಆಗಿರಬಾರದು. ಒಬ್ಬರು ಒಂದೇ ಕವನ ಬರೆದು ಕಳುಹಿಸಬೇಕು. ಸ್ಪರ್ಧೆಗೆ ಬಂದ ಕವನಗಳನ್ನು ಮರಳಿಸಲಾಗುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮ. ಕವನಗಳನ್ನು ಸ್ವೀಕರಿಸುವ ಅಂತಿಮ ದಿನಾಂಕ 30.04.2018. ತೀರ್ಪುಗಾರರ ತೀರ್ಮಾನವನ್ನು 15.06.2018ರ ನಂತರ ಜಾಹೀರು ಗೊಳಿಸಲಾಗುವುದು.

ಆಯ್ಕೆಯಾದ ಕವನಗಳ ಫಲಿತಾಂಶವನ್ನು ಮೈಸೂರು ಅಸೋಸಿಯೇಷನ್‍ನ ಮಾಸಿಕ `ನೇಸರು' ಪತ್ರಿಕೆಯಲ್ಲಿ, ಅಂತರ್ಜಾಲ ತಿತಿತಿ.mಥಿsoಡಿeಚಿssoಛಿiಚಿಣioಟಿ.iಟಿ ಹಾಗೂ ಫೇಸ್‍ಬುಕ್ ಮೈಸೂರು ಅಸೋಸಿಯೇಷನ್ ಮುಂಬೈ ಫೇಜ್‍ನಲ್ಲಿ ಪ್ರಕಟಿಸಲಾಗುವುದು. ನಮ್ಮ ಅಂಚೆ ವಿಳಾಸ
ಖಿhe ಒಥಿsoಡಿe ಂssoಛಿiಚಿಣioಟಿ, ಒumbಚಿi, 393, ಃhಚಿu ಆಚಿರಿi ಖoಚಿಜ, ಒಚಿಣuಟಿgಚಿ ಇಚಿsಣ, ಒumbಚಿi Piಟಿ 400019. ದೂರವಾಣಿ ಸಂಪರ್ಕ 022- 2402 4647, 2403 7065

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here