Friday 26th, April 2024
canara news

ಮುಂಬಯಿ ಬೆಳ್ಳಿ ತೆರೆಯಲ್ಲಿ ಪ್ರೀಮಿಯರ್ ಶೋ ಕಂಡ`ಜಾಂವಂಯ್ ನಂಬರ್ ವನ್' ಸಿನೆಮಾ

Published On : 29 Apr 2018   |  Reported By : Rons Bantwal


ಸಿನೆಮಾಗಳಿಂದ ಮಾತೃಭಾಷಾ ಒಲವು ಹೆಚ್ಚುತ್ತದೆ : ಸುನೀಲ್ ಪಾೈಸ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.29: ಸಿನೆಮಾ ನಿರ್ಮಾಣ ಸುಲಭವಲ್ಲ. ಅದೂ ಅಲ್ಪಸಂಖ್ಯಾತ ಭಾಷಿಗರ ಚಿತ್ರ ರಚನೆ ಸಾಹಸವೇ ಸರಿ. ಸಾಂಗಾತಿ ಕ್ರಿಯೇಶನ್ಸ್ ಕೊಂಕಣಿ ಸಿನೆಮಾ ನಿರ್ಮಾಣಕ್ಕೆ ಧುಮುಕಿ ದೊಡ್ಡ ಸಾಧನೆ ಮಾಡಿದೆ. ವಾಲ್ಟರ್, ಲಿಯೋ ಮತ್ತು ಸಿರಿಲ್ ಈ ತ್ರಿಮೂರ್ತಿ ಸಾಹಸಿಗರ ದಿಟ್ಟತನಕ್ಕೆ ಮತ್ತು ಇಡೀ ಚಿತ್ರ ತಂಡಕ್ಕೆ ಶುಭೇಚ್ಛ ಕೋರುವೆ. ಇದೀಗಲೇ ತವರೂರಲ್ಲಿ ತೆರೆಕಂಡ ಈ ಚಿತ್ರ ಕೊಂಕಣಿಗರ ಮನೆಮನ ಗೆದ್ದಿದೆ. ಇಂತಹ ಸಿನೆಮಾಗಳನ್ನು ಮಾಡುವ ಮೂಲಕ ಮಾತೃಭಾಷಾ ಮೋಹ ಹೆಚ್ಚುತ್ತದೆ. ತಮ್ಮತನದ ಭಾವನೆ ಉದ್ಭವಿಸುತ್ತದೆ. ಆ ಮೂಲಕ ಸಮುದಾಯದ ಸಂಸ್ಕೃತಿ ಮತ್ತು ಮಾತೃಭಾಷೆಯ ಉಳಿವು ಸಾಧ್ಯ. ಸಿನೆಮಾ ಅನ್ನುವುದು ಭಾಷೆ ಮತ್ತು ಸಂಸ್ಕೃತಿ ಜೀವಂತವಾಗಿಸುವ ಬಲಿಷ್ಠ ಮಾಧ್ಯಮ. ಆದುದರಿಂದಲೇ ನಿಮ್ಮ ಮಕ್ಕಳಲ್ಲಿ ಇಂತಹ ಚಲನಚಿತ್ರಗಳನ್ನು ವೀಕ್ಷಿಸುವಂತೆ ಪೆÇ್ರೀತ್ಸಹಿಸಿ ಅವಾಗಲೇ ಮಕ್ಕಳಲ್ಲೂ ಮಾತೃಭಾಷಾ ಒಲವು ಹೆಚ್ಚುತ್ತದೆ ಎಂದು ಕೆನರಾ ಪಿಂಟೋ ಟ್ರಾವೆಲ್ಸ್ ಮಾಲೀಕÀ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ವಿಭಾಗದ ಸಂಯೋಜಕ ಸುನೀಲ್ ಪಾೈಸ್ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಕುರ್ಲಾ ಪಶ್ಚಿಮದ ಜೆರಿಮೆರಿ ಅಲ್ಲಿನ ಮ್ಯಾಕ್ಸಸ್ ಥಿüಯೇಟರ್‍ನಲ್ಲಿ ಬೆಳ್ಳಿ ತೆರೆಯನ್ನೇರಿದ `ಜಾಂವಂಯ್ ನಂಬರ್ ವನ್' ಕೊಂಕಣಿ ಸಿನೆಮಾದ ಪ್ರೀಮಿಯರ್ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ಸುನೀಲ್ ಪಾೈಯ್ಸ್ ಮಾತನಾಡಿ ಶುಭಶಂಸನೆಗೈದರು. ಸೈಂಟ್ ಜೂಡ್ ಚರ್ಚ್ ಜೆರಿಮೆರಿ ಇದರ ಮುಖ್ಯ ಧರ್ಮಗುರು ರೆ| ಫಾ| ಲ್ಯಾನ್ಸಿ ಪಿಂಟೋ ಸಿನೆಮಾ ನಿರ್ಮಾಣದ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿ ಚಿತ್ರದ ಯಶಸ್ಸಿಗೆ ಆಶೀರ್ವಚನ ನೀಡಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಬಾಲಿವುಡ್‍ನ ನಿರ್ದೇಶಕ, ನಿರ್ಮಾಪಕ ಸಾಜನ್ ಖ್ಯಾತಿಯ ಲಾರೇನ್ಸ್ ಡಿ'ಸೋಜಾ, ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‍ನ ಸಂಸ್ಥಾಪಕ ಕಾರ್ಯಾಧ್ಯಕ್ಷ ವಿನ್ಸೆಂಟ್ ಮಥಾಯಸ್, ಹಾಲಿ ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ, ಮಾಜಿ ಕಾರ್ಯಾಧ್ಯಕ್ಷ ಹೆನ್ರಿ ಲೊಬೋ, ಉದ್ಯಮಿಗಳಾದ ಫ್ರಾನ್ಸಿಸ್ ರಸ್ಕೀನ್ಹಾ, ರೋನಿ ಗೋವಿಯಸ್, ಹಿರಿಯ ರಂಗನಟ ಕಾಮಿಡಿಕಿಂಗ್ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ಮಹಾರಾಷ್ಟ್ರ ಕೊಂಕಣ್ ಅಸೋಸಿಯೇಶನ್‍ನ ಅಧ್ಯಕ್ಷೆ ಬೆನಿಡಿಕ್ಟಾ ಬಿ.ರೆಬೆಲ್ಲೋ, ಮುಂಬಯಿ ಉಚ್ಛನ್ಯಾಯಲಯದ ವಕೀಲ ನ್ಯಾ| ಪಿಯುಸ್ ವಾಸ್, ನಟಿ ವರ್ಷ ಉಜ್ಗಾಂವ್ಕರ್, ನಟ ಕೆವಿನ್ ಡಿ'ಮೆಲ್ಲೊ ಗೌರವ ಅಥಿüತಿಗÀಳಾಗಿ ಉಪಸ್ಥಿತರಿದ್ದರು.

ಕೊಂಕಣಿ ಭಾಷೆಗೆ ಎಂದೂ ಅಳಿವುಯಿಲ್ಲ. ಸಿನೆಮಾದಂತಹ ಮಾಧ್ಯಮಗಳೂ ಭಾಷೆಗಳನ್ನು ಜೀವಂತ ಆಗಿರಿಸಲು ಪೂರಕವಾಗಿದ್ದು ಈ ಮೂಲಕ ಸಮಾಜದಲ್ಲಿನ ಹೊಸ ಪ್ರತಿಭೆಗಳ ಅನಾವರಣ ಸಾಧ್ಯ. ನಾನೂ ಓರ್ವ ಅಪ್ಪಟ ಕೊಂಕಣಿ ವ್ಯಕ್ತಿ. ಈ ಚಿತ್ರದಲ್ಲಿ ಅಭಿನಯಿಸುವ ಮೂಲಕ ಮಾತೃಭಾಷೆಯಲ್ಲಿ ನಟಿಸುವ ಕನಸು ನನಸಾಗಿದೆ ಎಂದು ವರ್ಷ ಉಜ್ಗಾಂವ್ಕರ್ ಸಾಂದರ್ಭಿಕವಾಗಿ ಮಾತನಾಡಿ ಸಿನೆಮಾಕ್ಕೆ ಯಶ ಕೋರಿದರು.

ನಗರದ `ತ್ರಿಮೂರ್ತಿ ಕಲಾ ಸಂಘಟಕರು' ಪ್ರಸಿದ್ಧಿಯ ವಾಲ್ಟರ್ ಡಿ'ಸೋಜಾ ಕಲ್ಮಾಡಿ, ಲಿಯೋ ಫೆರ್ನಾಂಡಿಸ್ ಜೆರಿಮೆರಿ ಮತ್ತು ಸಿರಿಲ್ ಕಾಸ್ತೆಲಿನೋ ಇವರ ಸಾಂಗಾತಿ ಕ್ರಿಯೇಶನ್ಸ್ ಮುಂಬಯಿ ಪೆÇ್ರಡಕ್ಷನ್ಸ್ ಮುಖೇನ ಬೋಜ್‍ಪುರಿ, ಬಾಲಿವುಡ್ ಹಾಗೂ ಕೊಂಕಣಿ ಚಲನಚಿತ್ರಗಳ ಅನುಭವಿ ಚಿತ್ರನಿರ್ದೇಶಕ ಹ್ಯಾರಿ ಫೆರ್ನಾಂಡಿಸ್ ಬಾರ್ಕೂರು ಕಥೆ ರಚನೆÉ ಹಾಗೂ ಸ್ವನಿರ್ದೇಶನದಲ್ಲಿ ನಿರ್ಮಿಸಿರುವ `ಜಾಂವಂಯ್ ನಂಬರ್ ವನ್' ಚಲನಚಿತ್ರದ ಯಶಸ್ಸಿಗೆ ಅಥಿüತಿಗಳು ಶುಭಾರೈಸಿದರು. ಹಾಗೂ ಜೆಸಿಂತ ಆರ್.ಗೋವಿಯಸ್, ಜೋರ್ಜ್ ಸಿಕ್ವೇರ ಭಯಂದರ್, ಪಿಟರ್ ರೆಬೆರೋ, ಜೋನ್ ರೋಡ್ರಿಗಸ್, ಕ್ರಿಸ್ಟೋಫರ್ ಸೊಲೊಮನ್ ಮತ್ತಿತರ ಗಣ್ಯರಿಗೆ ಗುಪ್ಛವನ್ನಿತ್ತು ಗೌರವಿಸಿದರು.

ಗಿಲ್ಬರ್ಟ್ ಬ್ಯಾಪ್ಠಿಸ್ಟ್, ಮರ್ಸೆಲಿನ್ ಜಿ.ಬ್ಯಾಪ್ಠಿಸ್ಯ್, ದಿವೋ ಕೊಂಕಣಿ ಸಾಪ್ತಾಹಿಕದ ಸಂಪಾದಕ ಲಾರೇನ್ಸ್ ಕುವೆಲ್ಲೋ, ಸುಜಾನ್ಹಾ ಕುವೆಲ್ಲೋ, ಪ್ರೆಮೀಳಾ ವಿ.ಮಥಾಯಸ್, ನ್ಯಾ| ಜೆನೆವೀವ್ಹ್ ಪಿ.ವಾಸ್, ಫಿಲೋಮೆನಾ ಹೆಚ್.ಲೋಬೊ, ವಿಲಿಯಂ ಮಚಾದೋ, ಫೆÇ್ಲೀರಾ ಡಿ'ಸೋಜಾ ಕಲ್ಮಾಡಿ, ಜೆ.ಪಿ ಕಾಮತ್ ದಹಿಸರ್, ತಾರಾ ಆರ್.ಬಂಟ್ವಾಳ್ ಮತ್ತಿತರ ಮಹಾನೀಯರು ಉಪಸ್ಥಿತರಿದ್ದರು.

ಲಿಯೋ ಫೆರ್ನಾಂಡಿಸ್ ಜೆರಿಮೆರಿ ಸ್ವಾಗತಿಸಿದರು. ರೋನ್ಸ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿ ಅತಿಥಿüಗಳನ್ನು ಪರಿಚಯಿಸಿ ಕೃತಜ್ಞತೆ ಸಲ್ಲಿಸಿದÀರು.

ಇತ್ತಿಚೆಗಷ್ಟೇ ಕರ್ನಾಟಕದ ಕರಾವಳಿಯಾದ್ಯಂತ ಬಿಡುಗಡೆಗೊಂಡು ಯಶಸ್ಸಿ ಕಂಡ `ಜಾಂವಂಯ್ ನಂಬರ್ ವನ್' ಕೊಂಕಣಿ ಚಲನಚಿತ್ರ ಭಾನುವಾರ (ಎ.29) ಆದಿತ್ಯವಾರ ಬೆಳಿಗ್ಗೆ ಮತ್ತು ಸಂಜೆ ಮುಂಬಯಿಯಲ್ಲಿ ಪ್ರಪ್ರಥಮ ಪ್ರದರ್ಶನ ತೆರೆಕಂಡಿತು. ಸಿನೆಮಾಭಿಮಾನಿಗಳ ವೀಕ್ಷಣೆಗಾಗಿ ಸೋಮವಾರ (ಎ.30) ದಿಂದ ಮೇ.03ರ ಗುರುವಾರ ತನಕ ದಿನಾಸಂಜೆ 6.30 ಗಂಟೆಗೆ ಇದೇ ಮ್ಯಾಕ್ಸಸ್ ಚಿತ್ರಮಂದಿರದÀಲ್ಲಿ ಪ್ರದರ್ಶನ ಕಾಣಲಿದೆ. ಮಹಾನಗರದಲ್ಲಿನ ಎಲ್ಲಾ ಕೊಂಕಣಿ ಜನತೆ ಮತ್ತು ಚಲನಚಿತ್ರ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರದರ್ಶನದ ಯಶಸ್ಸಿಗೆ ಸಹಕರಿಸುವಂತೆ ಸಾಂಗಾತಿ ಬಳಗ ತಿಳಿಸಿದೆ.

 

 

 

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here