Saturday 27th, April 2024
canara news

ಅಬುಧಾಬಿಯಲ್ಲಿ ಹೊಸ ಚಿತ್ರ ‘ಸಾಹೂ’ಗಾಗಿ ಭಾರತೀಯ ಮತ್ತು ಅಂತರಾಷ್ಟ್ರೀಯ ಶ್ರೇಷ್ಠ ಪ್ರತಿಭೆಗಳ ಸಾಲು

Published On : 05 May 2018   |  Reported By : media release


· ಭಾರತೀಯ ಚಿತ್ರವೊಂದರಲ್ಲಿ ನಂಬಲಸಾಧ್ಯವಾದ ಪ್ರತಿಭೆಗಳ ಸಾಲು ಎಮಿರೇಟ್ಸ್‍ನ ಜಾಗತಿಕ ಮನವಿಯನ್ನು ಬಿಡಿಸಿ ಹೇಳುತ್ತದೆ

· ‘ಸಾಹೂ’ ಈ ವರ್ಷ ಅಬುಧಾಬಿಯಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಮೂರನೇ ಅಂತಾರಾಷ್ಟ್ರೀಯ ನಿರ್ಮಾಣ

· ಟೂ ಫೋರ್‍ 54 ಎಲ್ಲಾ ನಿರ್ಮಾಣ ಸೇವೆಗಳನ್ನು ಒದಗಿಸಲಿದೆ


ಅಬುಧಾಬಿ, 4 ಮೇ 2018: ಪ್ರಪಂಚದಲ್ಲೇ ಮುಂಚೂಣಿಯಲ್ಲಿರುವ ಮೂರು ಚಿತ್ರ ನಿರ್ಮಾಣ ಕೇಂದ್ರಗಳ ಶ್ರೇಷ್ಠ ಕಲಾವಿದರು ಹೊಸ ಸಾಹಸಪ್ರಧಾನ ತ್ರಿಭಾಷಾ ಚಿತ್ರ ‘ಸಾಹೂ’ಗಾಗಿ ಅಬುಧಾಬಿಯಲ್ಲಿ ಸೇರಿದ್ದಾರೆ, ಈ ಮೂಲಕ ಎಮಿರೇಟ್ಸ್‍ ನಿಜವಾಗಿಯೂ ಜಾಗತಿಕ ಚಿತ್ರೋದ್ಯಮದ ಕೇಂದ್ರ ಸ್ಥಾನದಲ್ಲಿದೆ ಎಂದು ಸಾಬೀತುಪಡಿಸಿದೆ.

ಭಾರತದ ಉದ್ದಗಲಕ್ಕೂ ಸೂಪರ್‍ ಸ್ಟಾರ್‍ ಎನಿಸಿಕೊಂಡಿರುವ ಪ್ರಭಾಸ್‍, ಬಾಲಿವುಡ್‍ನ ಶ್ರದ್ಧಾ ಕಪೂರ್‍ ಮತ್ತು ಹಾಲಿವುಡ್‍ನ ಪ್ರಖ್ಯಾತ ಸಾಹಸಿಗ ಕೆನ್ನಿ ಬೇಟ್ಸ್‍ ಎಲ್ಲರೂ ತಾರಾಂಗಣದಲ್ಲಿದ್ದಾರೆ ಮತ್ತು ‘ಸಾಹೂ’ ತಂಡ ಅಬುಧಾಬಿಯುದ್ದಕ್ಕೂ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸುತ್ತಿದೆ.

ಅಬುಧಾಬಿ ಮತ್ತು ಟೂಪೋರ್‍ 54 ಮಾಧ್ಯಮ ವಲಯ ಪ್ರಾಧಿಕಾರದ ಮುಖ್ಯ ಆಡಳಿತಾಧಿಕಾರಿ ಎಚ್‍.ಇ. ಮಾರ್ಯಮ್‍ ಅಲ್‍ಮೆಹಿರಿ ಹೇಳುವಂತೆ, “ಅಬುಧಾಬಿಯಲ್ಲಿ ಅಂತಾರಾಷ್ಟ್ರೀಯ ನಿರ್ಮಾಣಕ್ಕೆ ನಾವೇನೂ ಹೊಸಬರಲ್ಲ, ಆದರೂ ‘ಸಾಹೂ’ ನಮಗೊಂದು ಮೈಲಿಗಲ್ಲು, ಏಕೆಂದರೆ ಇದು ಜಾಗತಿಕ ಮಟ್ಟದಲ್ಲಿ ಎಮಿರೇಟ್ಸ್ ದೇಶ ಹೊಂದಿರುವ ಅಸಾಮಾನ್ಯ ಖ್ಯಾತಿಯನ್ನು ವಿವರಿಸುತ್ತದೆ.

“ಅರಬ್‍ ಒಕ್ಕೂಟ ಪ್ರಪಂಚದ ಸೇರುಮಾರ್ಗದಲ್ಲಿದ್ದು, ಬೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ, ಜಾಗತಿಕ ಜನಸಂಖ್ಯೆಯ ಮೂರನೇ ಎರಡರಷ್ಟು ಮತ್ತು ಎಂಟು ಗಂಟೆಗಳೊಳಗಿನ ಹಾರಾಟದ ಅವಧಿ- ಇದರರ್ಥ ನಾವು ಅಕ್ಷರಶಃ ಜಾಗತಿಕ ಚಿತ್ರರಂಗದ ಮಧ್ಯಭಾಗದಲ್ಲಿದ್ದೇವೆ.

“ಇಲ್ಲಿ ಚಿತ್ರ ನಿರ್ಮಾಣಕ್ಕೆ ಸಿಗುವ ಹಣಕಾಸಿನ ಪ್ರೋತ್ಸಾಹದಲ್ಲಿ, ನಿರ್ಮಾಣದ ಖರ್ಚಿನಲ್ಲಿ 30 % ರಿಯಾಯಿತಿ, ಜಾಗತಿಕ ಮಟ್ಟದ ಮೂಲಸೌಕರ್ಯ, ವಿಭಿನ್ನ ಸ್ಥಳಗಳು, ಸರ್ಕಾರದ ಸಹಾಯ, ಮತ್ತು ಅದ್ಭುತ ಪ್ರತಿಭೆಗಳ ಬಂಡಾರ ಮತ್ತು ಪ್ರಪಂಚದ ಮುಂಚೂಣಿಯಲ್ಲಿರುವ ನಿರ್ಮಾಣ ಸಂಸ್ಥೆಗಳು ಏಕೆ ಈ ವರ್ಷ ಈಗಾಗಲೇ ಇಲ್ಲಿ ಚಿತ್ರೀಕರಣ ನಡೆಸಿವೆ ಎಂದು ತಿಳಿದುಕೊಳ್ಳುವುದು ತುಂಬಾ ಸರಳ- ಇದಿನ್ನೂ ಏಪ್ರಿಲ್‍ ಅಷ್ಟೆ.”

‘ಸಾಹೂ’, ಅಬುಧಾಬಿಯಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಏಳನೇ ಭಾರತೀಯ ಚಿತ್ರ, ಸುಜೀತ್‍ ರೆಡ್ಡಿ ಬರೆದು ನಿರ್ದೇಶಿಸಿದ, ಯುವಿ ಕ್ರಿಯೇಷನ್ಸ್‍ ನಿರ್ಮಿಸಿದ ಒಂದು ತ್ರಿಕೋನ ಥ್ರಿಲ್ಲರ್. ಯುವಿ ಕ್ರಿಯೇಷನ್ಸ್‍, ‘ಮಿರ್ಚಿ’ ‘ರನ್‍ ರಾಜಾ ರನ್‍’ ಮತ್ತು ‘ಎಕ್ಸ್‍ಪ್ರೆಸ್‍ ರಾಜಾ’ ದಂತಹ ಯಶಸ್ವೀ ಚಿತ್ರಗಳನ್ನು ನಿರ್ಮಿಸಿದೆ.

ಭಾರತದಲ್ಲಿ ತೆರೆಯ ಮೇಲಿನ ಮೇರು ಕೃತಿ ‘ಬಾಹುಬಲಿ’ ಸರಣಿಯಲ್ಲಿ ಕಾಣಿಸಿಕೊಂಡ ಪ್ರಭಾಸ್‍ ಚಿತ್ರದಲ್ಲಿ ಮೇರು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಬಾಹುಬಲಿ’ ಚಿತ್ರಕ್ಕಾಗಿ ಹಲವು ಪ್ರಶಸ್ತಿಗಳನ್ನು ಪಡೆದದ್ದು ಮಾತ್ರವಲ್ಲದೆ, ಕತ್ತಲು ಕಳೆದು ಬೆಳಗಾಗುವುದೊರಳಗಾಗಿ ದೇಶದೆಲ್ಲೆಡೆ ಸ್ಟಾರ್‍ ಆಗಿ ಮಿಂಚಿದರು.

ತೆರೆಯ ಮೇಲೆ ಅವರಿಗೆ ಜೊತೆಯಾಗಿ ಬಾಲಿವುಡ್‍ನ ಪ್ರಶಸ್ತಿ ವಿಜೇತ ನಟಿ ಶ್ರದ್ಧಾ ಕಪೂರ್‍ ಕಾಣಿಸಿಕೊಳ್ಳಲಿದ್ದಾರೆ. ‘ಆಶಿಕಿ 2’, ‘ಏಕ್‍ ವಿಲನ್‍’ ಮತ್ತು ‘ಹೈದರ್‍’ ನಂತಹ ಯಶಸ್ವೀ ಚಿತ್ರಗಳ ಮೂಲಕ ವಿಮರ್ಶಕರ ಹೊಗಳಿಕೆಗೆ ಪಾತ್ರವಾಗಿರುವ ಅವರು ತಮ್ಮ ಪರಿಣತಿಯನ್ನು ಇಲ್ಲಿ ಪ್ರದರ್ಶಿಸಲಿದ್ದಾರೆ.

ಮತ್ತು ಇವರಿಬ್ಬರ ಮೇಲೂ ಹತ್ತಿರದ ಕಣ್ಣಿಡಲಿರುವವರು ಚಿತ್ರದ ಮೈನವಿರೇಳಿಸುವ ಸಾಹಸ ದೃಶ್ಯಗಳನ್ನು ಸಂಯೋಜಿಸಲಿರುವ ಪ್ರಶಸ್ತಿ-ವಿಜೇತ ಸಾಹಸ ನಿರ್ದೇಶಕ ಕೆನ್ನೀ ಬೇಟ್ಸ್‍. ಬೇಟ್ಸ್‍ ಕೆಲಸ ಮಾಡಿರುವ ಹಲವು ಯಶಸ್ವೀ ಚಿತ್ರಗಳಲ್ಲಿ ‘ಮಿಶನ್‍: ಇಂಪಾಸಿಬಲ್‍- ಘೋಸ್ಟ್‍ ಪ್ರೊಟೊಕಾಲ್‍’, ‘ಪರ್ಲ್‍ ಹಾರ್ಬರ್‍’, ‘ಟ್ರಾನ್ಸ್‍ಫಾರ್ಮರ್ಸ್‍: ಡಾರ್ಕ್‍ ಆಫ್‍ ದಿ ಮೂನ್‍’, ಮತ್ತು ‘ದಿ ಫಾಸ್ಟ್‍ ಆ್ಯಂಡ್‍ ದಿ ಫ್ಯೂರಿಯಸ್‍’ ಕೆಲವು ಮಾತ್ರ.

“ಅಬುದಾಭಿಯಲ್ಲಿ ಚಿತ್ರೀಕರಣ ನಡೆಯುವ ಬಗ್ಗೆ ನಾವೆಲ್ಲಾ ಖುಷಿಯಾಗಿದ್ದೇವೆ. ಚಿತ್ರರಂಗದ ಸ್ನೇಹಿತರು ಹೇಳುವಂತೆ ಇದೊಂದು ಅದ್ಭುತ ಚಿತ್ರೀಕರಣದ ಸ್ಥಳ. ಹೆಮ್ಮಪಡುವಂತ, ಸ್ಫೂರ್ಥಿ ತುಂಬುವ ಭೂದೃಶ್ಯಗಳು, ಇದು ನಿಜಕ್ಕೂ ತನ್ನ ಖ್ಯಾತಿಗೆ ತಕ್ಕಂತೆಯೇ ಇದೆ,” ಎನ್ನುತ್ತಾರೆ ಪ್ರಭಾಸ್‍.

“ಟೂಪೋರ್‍ 54, ಸ್ಥಳೀಯ ಸಿಬ್ಬಂದಿ, ಅಭಿಮಾನಿಗಳು, ಮತ್ತು ಸರ್ಕಾರದ ನಮಗೆ ಸಿಕ್ಕಿದ ಸಹಕಾರದಿಂದ ನಾನು ನಿಜಕ್ಕೂ ಪ್ರಭಾವಿತನಾಗಿದ್ದೇನೆ. ಎಲ್ಲರೂ ಕೆಲಸಗಳನ್ನು ಆದಷ್ಟು ಸುಲಭವಾಗಿಸಲು ಪ್ರಯತ್ನಿಸುತ್ತಿದ್ದಾರೆ !”

ಟೂಪೋರ್‍ 54 ಸಂಪೂರ್ಣ ನಿರ್ಮಾಣ ಸೇವೆಗಳನ್ನು, ಜೊತೆಗೆ ಅದರ ಸರ್ಕಾರಿ ಮತ್ತು ಸಾರಿಗೆ ಸೇವೆಗಳ ಇಲಾಖೆ ನೆರವನ್ನು ಒದಗಿಸುತ್ತದೆ. ಇದರಿಂದ ಚಿತ್ರಕ್ಕೆ ಅಬುಧಾಬಿ ಚಲನಚಿತ್ರ ಆಯೋಗದ 30% ರಿಯಾಯಿತಿಯ ಲಾಭ ದೊರೆಯುತ್ತದೆ. ಯೋಜನೆಯಲ್ಲಿ, ಇಂಟರ್ನಿಗಳು ಕೂಡ ದೊಡ್ಡ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ನಿರ್ಮಾಣ ಸಂಸ್ಥೆಗಳನ್ನು ಅಬುಧಾಬಿಗೆ ಆಹ್ವಾನಿಸಿ, ಭವಿಷ್ಯದ ಎಮಿರೇಟ್ಸ್‍ ಮಾಧ್ಯಮ ವೃತ್ತಿಪರರನ್ನು ರೂಪಿಸುವ ಟೂಪೋರ್‍ 54 ಗುರಿಯ ಭಾಗವಾಗಿದೆ.

50 ದಿನಗಳಲ್ಲಿ, ಮತ್ತು 250 ಕ್ಕೂ ಹೆಚ್ಚು ಸಿಬ್ಬಂದಿಗಳೊಂದಿಗೆ, ಕಳೆದ ವರ್ಷದ ‘ಟೈಗರ್‍ ಜಿಂದಾ ಹೈ’ ಬಳಿಕ ‘ಸಾಹೂ’ ಅಬುಧಾಬಿಯಲ್ಲಿ ಚಿತ್ರೀಕರಣಗೊಂಡ ಎರಡನೇ ಅತೀದೊಡ್ಡ ಭಾರತೀಯ ಸಿನೆಮಾ ಆಗಲಿದೆ. ಇದೊಂದು ಅತ್ಯಂತ ಕ್ರಿಯಾಶೀಲ ಚಿತ್ರವಾಗಿರಲಿದೆ, ದೊಡ್ಡ ಪ್ರಮಾಣದ ಸಾಹಸ ದೃಶ್ಯಗಳಿಗೆ ಚಿತ್ರೀಕರಣದ 20 ದಿನದ ಅವಧಿ ಬೇಕಾಗುವ ಸಾಧ್ಯತೆಯಿದೆ.

ಇದು ಎಮಿರೇಟ್ಸ್‍ನಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಇತ್ತೀಚೆಗಿನ ಅಂತಾರಾಷ್ಟ್ರೀಯ ನಿರ್ಮಾಣದ ಚಿತ್ರ. ಇತ್ತೀಚೆಗಿನ ವರ್ಷಗಳಲ್ಲಿ ಅಬುಧಾಬಿಯನ್ನು ಚಿತ್ರೀಕರಣ ತಾಣವನ್ನಾಗಿ ಆಯ್ದುಕೊಂಡ ಪ್ರಮುಖ ಸ್ಟುಡಿಯೋಗಳು ಮತ್ತು ನಿರ್ಮಾಣ ಸಂಸ್ಥೆಗಳಲ್ಲಿ ‘ಫ್ಯೂರಿಯಸ್‍ 7’ ನ ಯುನಿವರ್ಸಲ್‍ ಪಿಕ್ಟರ್ಸ್‍, ‘ಸ್ಟಾರ್‍ ವಾರ್ಸ್‍: ದಿ ಫೋರ್ಸ್‍ ಅವೇಕನ್ಸ್‍’ನ ಡಿಸ್ನಿ, ‘ಟೈಗರ್‍ ಜಿಂದಾ ಹೈ’ನ ಯಶ್‍ ರಾಜ್‍ ಫಿಲ್ಮ್ಸ್‍, ಮತ್ತು ‘ಮಿಷನ್‍: ಇಂಪಾಸಿಬಲ್‍- ಫಾಲೌಟ್‍’ ನ ಪ್ಯಾರಾಮೌಂಟ್‍ ಪಿಕ್ಚರ್ಸ್‍ ಸೇರಿವೆ.

ಅಬುಧಾಬಿಯಲ್ಲಿ ಚಿತ್ರೀಕರಣಗೊಂಡ ಇತರ ಭಾರತೀಯ ಚಿತ್ರಗಳಲ್ಲಿ ಬಾಲಿವುಡ್‍ ಬ್ಲಾಕ್‍ಬಸ್ಟರ್ಸ್‍ ‘ಡಿಶೂಮ್‍’, ‘ಬೇಬಿ’, ‘ಬ್ಯಾಂಗ್‍ ಬ್ಯಾಂಗ್‍’ ಮತ್ತು ಮುಂಬರುವ ‘ರೇಸ್‍ 3’ ಸೇರಿವೆ

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here