Friday 19th, October 2018
canara news

ಪೂಜಾರಿ ಅವರನ್ನು ಕಾಂಗ್ರೆಸ್ ಮತ್ತೆ ಅವಮಾನಿಸಿದೆ: ಹರಿಕೃಷ್ಣ ಬಂಟ್ವಾಳ್

Published On : 10 May 2018   |  Reported By : canaranews network

ಮಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಅವರ ಕುರಿತು ಸುಳ್ಳು ಸುದ್ದಿ ಹರಡಿಸಿ ಕಾಂಗ್ರೆಸ್ ಮತ್ತೊಮ್ಮೆ ಅವರನ್ನು ಅವಮಾನಿಸಿದೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಕಿಡಿಕಾರಿದ್ದಾರೆ.ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ಸಂದರ್ಭದಲ್ಲಿ ಜನಾರ್ದನ ಪೂಜಾರಿ ಕುರಿತು ಸುಳ್ಳು ಸುದ್ದಿ ಹರಡಿಸುವುದು ಕಾಂಗ್ರೆಸಿಗರ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.

"ಪೂಜಾರಿ ಅವರ ಬಗೆಗಿನ ಈ ಅಪಪ್ರಚಾರದ ಹಿಂದೆ ರಮಾನಾಥ ರೈ ಕೈವಾಡವಿದೆ ಎಂದು ಅವರು ಆರೋಪಿಸಿದರು. ಇದಲ್ಲದೇ ಸಂಸದ ನಳಿನ್ ಕುಮಾರ್ ಕಟೀಲ್ ಬಗ್ಗೆಯೂ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿದೆ. ಪೂಜಾರಿ ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದಷ್ಟು ಗೌರವ , ಸಚಿವ ರಮಾನಾಥ ರೈ ತಮ್ಮ ಜನ್ಮದಲ್ಲಿ ಪೂಜಾರಿ ಅವರಿಗೆ ನೀಡಿಲ್ಲ," ಎಂದು ಕಿಡಿಕಾರಿದರು.
More News

ಪೇಜಾವರ ಮಠದಲ್ಲಿ ನೆರವೇರಿದ ವಾರ್ಷಿಕ ಶರನ್ನವರಾತ್ರಿ ದುರ್ಗಾಪೂಜೆ
ಪೇಜಾವರ ಮಠದಲ್ಲಿ ನೆರವೇರಿದ ವಾರ್ಷಿಕ ಶರನ್ನವರಾತ್ರಿ ದುರ್ಗಾಪೂಜೆ
ಮೈಸೂರು ಅಸೋಸಿಯೇಶನಲ್ಲಿ `ರಂಗಭೂಮಿಯಿಂದ ಸಮಾಜ ಸುಧಾರಣೆ' ವಿಚಾರ ಸಂಕಿರಣ
ಮೈಸೂರು ಅಸೋಸಿಯೇಶನಲ್ಲಿ `ರಂಗಭೂಮಿಯಿಂದ ಸಮಾಜ ಸುಧಾರಣೆ' ವಿಚಾರ ಸಂಕಿರಣ
ಕಲಾಸೇವೆಯ ಬಹುಮುಖ ಸಾಧನೆಯ ಹಿಂದಿನ ಪರಿಶ್ರಮವು ವ್ಯಕ್ತಿಯನ್ನು ಶಕ್ತಿಯಾಗಿ ರೂಪಿಸುತ್ತದೆ :  ಮುಗುಳಿ ತಿರುಮಲೇಶ್ವರ
ಕಲಾಸೇವೆಯ ಬಹುಮುಖ ಸಾಧನೆಯ ಹಿಂದಿನ ಪರಿಶ್ರಮವು ವ್ಯಕ್ತಿಯನ್ನು ಶಕ್ತಿಯಾಗಿ ರೂಪಿಸುತ್ತದೆ : ಮುಗುಳಿ ತಿರುಮಲೇಶ್ವರ

Comment Here