Friday 18th, January 2019
canara news

ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಯು.ಟಿ.ಖಾದರ್ ಗೆ ಭರ್ಜರಿ ಗೆಲುವು

Published On : 16 May 2018   |  Reported By : canaranews network


ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡಿದ ಯು.ಟಿ.ಖಾದರ್ ಭರ್ಜರಿ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ಕುತೂಹಲ ಕೆರಳಿಸಿರುವ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಯು ಟಿ ಖಾದರ್ ಗೆಲುವು ಸಾಧಿಸಿರುವುದಕ್ಕೆ ಎಲ್ಲೆಡೆ ಹರ್ಷ ವ್ಯಕ್ತವಾಗುತ್ತಿದೆ. ಈ ಹಿಂದಿನ ಚುನಾವಣೆಗಳಲ್ಲಿ ಈ ಕ್ಷೇತ್ರವನ್ನು ಗೆಲ್ಲಲು ಬಿಜೆಪಿ ರೂಪಿಸಿದ್ದ ರಣತಂತ್ರಗಳು ಮಕಾಡೆ ಮಲಗಿದ್ದು, ಈ ಭಾರಿಯೂ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.

.ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದ ಸಚಿವ ಯು.ಟಿ.ಖಾದರ್ ಈ ಬಾರಿ 19,739 ಮತಗಳ ಅಂತರದಿಂದ ಗೆದ್ದು ವಿಜಯದ ನಗೆ ಬೀರಿದ್ದಾರೆ. ಸಚಿವ ಯು ಟಿ ಖಾದರ್ ತಮ್ಮ ಕ್ಷೇತ್ರದ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದು, ಅವರ ಅಭಿವೃದ್ಧಿ ಕಾರ್ಯಗಳೇ ಗೆಲುವಿಗೆ ಕಾರಣವಾಗಿದೆ.ಈ ಬಾರಿ ಸಂತೋಷ್ ರೈ ಬೋಳಿಯಾರ್ ವಿರುದ್ಧ ಕಣಕ್ಕೆ ಇಳಿದಿದ್ದ ಸಚಿವ ಯು.ಟಿ ಖಾದರ್ ಅವರು 19,739 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸಚಿವ ಯು.ಟಿ.ಖಾದರ್ ಅವರಿಗೆ ಒಟ್ಟು 80813 ಮತಗಳು ಬಿದ್ದರೆ, ಬಿಜೆಪಿ ಅಭ್ಯರ್ಥಿ ಸಂತೋಷ್ ರೈ ಬೋಳಿಯಾರ್ 61074ಮತಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದಾರೆ.2013 ರ ಚನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಯ ಎದುರು ಯು. ಟಿ ಖಾದರ್ ಸುಮಾರು 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಿದ್ದರು. ಇದೀಗ 2018 ರ ಚುನಾವಣಾ ಫಲಿತಾಂಶವೂ ಕಾಂಗ್ರೆಸ್ ಪರವಾಗಿದೆ.
More News

ಜ.20:ಕಾರ್ಕಳದಲ್ಲಿ ದಶವಾರ್ಷಿಕ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ
ಜ.20:ಕಾರ್ಕಳದಲ್ಲಿ ದಶವಾರ್ಷಿಕ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ
ಬಿಲ್ಲವರ ಭವನದಲ್ಲಿ ಬಿಲ್ಲವರ ಅಸೋಸಿಯೇಶನ್‍ನ ಮುಂಬಯಿ ಮಹಿಳಾ ವಿಭಾಗದಿಂದ
ಬಿಲ್ಲವರ ಭವನದಲ್ಲಿ ಬಿಲ್ಲವರ ಅಸೋಸಿಯೇಶನ್‍ನ ಮುಂಬಯಿ ಮಹಿಳಾ ವಿಭಾಗದಿಂದ
ವಿಳಂಬಗೊಂಡ ರಾಜ್ಯ ಎನ್ಆರ್ಐ ಸಮಿತಿಯ ಉಪಾಧ್ಯಕ್ಷರ ನೇಮಕ; ಸಮಗ್ರ ಅನಿವಾಸಿ ಸಮುದಾಯಕ್ಕಾದ ಮಹಾ ಅನ್ಯಾಯ
ವಿಳಂಬಗೊಂಡ ರಾಜ್ಯ ಎನ್ಆರ್ಐ ಸಮಿತಿಯ ಉಪಾಧ್ಯಕ್ಷರ ನೇಮಕ; ಸಮಗ್ರ ಅನಿವಾಸಿ ಸಮುದಾಯಕ್ಕಾದ ಮಹಾ ಅನ್ಯಾಯ

Comment Here