Wednesday 8th, May 2024
canara news

ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ದ್ವಿದಿನಗಳ ನಾಟಕೋತ್ಸವಕ್ಕೆ ಚಾಲನೆ

Published On : 20 Jun 2018   |  Reported By : Rons Bantwal


ಯಶವಂತ ಚಿತ್ತಾಲರ ಕಾದಂಬರಿ; ಪ್ರಕಾಶ್ ಬೆಳವಾಡಿ ನಿರ್ದೇಶಿತ `ಶಿಕಾರಿ' ನಾಟಕ ಪ್ರದರ್ಶನ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.20: ಮೈಸೂರು ಅಸೋಸಿಯೇಷನ್ ಜೊತೆಗೂಡಿ ರಂಗಾಯಣ ಮೈಸೂರು ಅರ್ಪಿಸುವ ದ್ವಿದಿನಗಳ ನಾಟಕೋತ್ಸವಕ್ಕೆ ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಅಲ್ಲಿನ ಮೈಸೂರು ಅಸೋಸಿಯೇಶನ್‍ನ ಸಭಾಗೃಹದಲ್ಲಿ ಚಾಲನೆಯನ್ನೀಡಲಾಯಿತು.

ಹೊರನಾಡಿನಲ್ಲಿ ಕನ್ನಡಿಗರನ್ನು ನೋಡಿ, ಮಾತನಾಡುದ್ದನ್ನು ಕಂಡು ತುಂಬಾ ಸಂತೋಷ ಅಣಿಸುತ್ತಿದೆ. ಬಿ.ವಿ ಕಾರಂತರು ಭಾರತದ ರಂಗ ಸ್ಥಳದ ಬಾಬಾರಾಗಿದ್ದಾರೆ. ಕನ್ಯಾ ಕುಮಾರಿಯಿಂದ ಕಾಶ್ಮೀರದ ವರೆಗೆ ಅವರ ಶಿಷ್ಯರಿಲ್ಲದ ಜಾಗವಿಲ್ಲ. ಅವರ ರÀಂಗಾಯಣದ ಕನಸು ನನಸುವವರೇ ತಂಡದ ಪ್ರಸಕ್ತ ಕಲಾವಿದರು. ರಂಗಾಯಣ ಬರೇ ನಾಟಕ ತಂಡವಲ್ಲ ಅದು ಸಾಂಸ್ಕೃತಿಕ ಹೆಮ್ಮರವಾಗಿದೆ ಎಂದು ರಂಗಾಯಣದ ನಿರ್ದೇಶಕಿ ಭಾಗೀರಥಿs ಭಾೈ ಮಾತನಾಡಿ ನಾಟಕೋತ್ಸವಕ್ಕೆ ಚಾಲನೆ ನೀಡಿದರು.

ಡಾ| ಬಿ.ಆರ್ ಮಂಜುನಾಥ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಮೈಸೂರು ಅಸೋಸಿಯೇಶÀನ್‍ನ ಪ್ರಧಾನ ಕಾರ್ಯದರ್ಶಿ ಡಾ| ಗಣಪತಿ ಎಸ್.ಶಂಕರಲಿಂಗ ಕೃತಜ್ಞತೆ ಸಮರ್ಪಿಸಿದರು.

ನಾಟಕೋತ್ಸವದ ಪ್ರಥಮ ಪ್ರದರ್ಶನವಾಗಿ ಯಶವಂತ ಚಿತ್ತಾಲರ `ಶಿಕಾರಿ' ಕಾದಂಬರಿಗೆ ಪ್ರಕಾಶ್ ಬೆಳವಾಡಿ ರಂಗರೂಪ ನೀಡಿ ನಿರ್ದೇಶಿಸಿರುವ `ಶಿಕಾರಿ' ನಾಟಕವನ್ನು ರಂಗಾಯಣ ಮೈಸೂರು ತಂಡವು ಪ್ರದರ್ಶಿಸಿತು.

ಇಂದು (ಜೂ.16) ಭಾನುವಾರ ಸಂಜೆ 6.00 ಗಂಟೆಗೆ ಮರಾಠಿಯ ಪ್ರಸಿದ್ಧ ಮಹೇಶ್ ಎಲ್.ಕುಂಚವಾರ್ ಅವರ `ಚಿರೇಬಂದಿ ವಾಡೆ' ನಾಟಕ ಪ್ರಮೀಳಾ ಬೆಂಗ್ರೆ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಮುಂಬಯಿ ಮಹಾನಗರ ದ ಸರ್ವನಾಟಕ ಕಲಾಭಿಮಾನಿಗಳು ಆಗಮಿಸಿ ನಾಟಕವÀನ್ನು ವೀಕ್ಷಿಸ ಬೇಕಾಗಿ ಮೈಸೂರು ಅಸೋಸಿಯೇಷನ್ ಮುಂಬಯಿ ಇದರ ವ್ಯವಸ್ಥಾಪಕ ಬಿ.ಕೆ ಮಧುಸೂದನ್ ಈ ಮೂಲಕ ವಿನಂತಿಸಿದ್ದಾರೆ.

 

 




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here