Friday 26th, April 2024
canara news

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ-ದಶಮಾನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

Published On : 25 Jun 2018   |  Reported By : Ronida Mumbai


ಪತ್ರಕರ್ತರು ಪ್ರತಿಭಾನ್ವಿತ ಹುಟ್ಟು ಕಲಾವಿದರು:ಅಜೆಕಾರು ಬಾಲಕೃಷ್ಣ ಶೆಟ್ಟಿ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಜೂ.24: ಪತ್ರಕರ್ತರು ವಿಶೇಷವಾಗಿ ಭಾಷೆ, ಸಂಸ್ಕೃತಿ, ಕಲೆಗಳ ಉಳಿವಿಗಾಗಿ ಬಹಳಷ್ಟು ಪೆÇ್ರೀತ್ಸಾಹ ನೀಡಿದ್ದಾರೆ. ಅದರಲ್ಲೂ ಮುಂಬಯಿನ ಕನ್ನಡಿಗ ಪತ್ರಕರ್ತರು ಹಗಳಿರುಲು ಎನ್ನದೆ ಯಾವುದೇ ಅಪೇಕ್ಷೆಯನ್ನಿರಿಸದೆ ಕಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಚಾರದ ಮೂಲಕ ಕಲಾರಾಧನೆಗೈದು ಕಲೆಗಳನ್ನು ಉಳಿಸಿ ಬೆಳೆಸಿದ್ದಾರೆ. ಇಂತಹ ಪತ್ರಕರ್ತರು ಪ್ರತಿಭಾನ್ವಿತ ಹುಟ್ಟು ಕಲಾವಿದದೇ ಸರಿ. ಆದರೆ ಕಾಲಾವಕಾಶ ವಂಚಿತರಾಗಿ ತಮ್ಮ ಕಲಾ ಪ್ರತಿಭಾ ಪ್ರದರ್ಶನದಿಂದ ದೂರ ಉಳಿದಿದ್ದಾರೆ. ಸದ್ಯ ಸಂಘದ ದಶಸಂಭ್ರಮದಲ್ಲಾದರೂ ಒಗ್ಗೂಡಿ ಯಕ್ಷಗಾನ ಪ್ರದರ್ಶನಕ್ಕೆ ಸಜ್ಜಾಗಿರುವುದು ಅಭಿನಂದನೀಯ ಎಂದು ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಸ್ಥಾಪಕಾಧ್ಯಕ್ಷ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ತಿಳಿಸಿದರು.

ದಶಮಾನೋತ್ಸವ ಸಂಭ್ರಮಾಚರÀಣೆಯಲ್ಲಿರುವ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ದಶಸಂಭ್ರಮ ನಿಮಿತ್ತ ಇಂದಿಲ್ಲಿ ಭಾನುವಾರ ಪೂರ್ವಾಹ್ನ ವಿಕ್ರೊಲಿ ಠಾಗೂರ್ ನಗರದಲ್ಲಿನ ವಿಕ್ರೊಲಿ ಕನ್ನಡ ಸಂಘದ ವೀಕೆಸ್ ಇಂಗ್ಲೀಷ್ ಹೈಸ್ಕೂಲು ಸಭಾಗೃಹದಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ನಿರ್ದೇಶನದಲ್ಲಿ ಸಂಘದ ಸದಸ್ಯರು ಪ್ರದರ್ಶಿಸಲುದ್ದೇಶಿಸಿದ `ಮಹಿಷಾಸುರ ಮರ್ಧಿನಿ' ಯಕ್ಷಗಾನ ತರಬೇತಿಗೆ ದೀಪ ಪ್ರಜ್ವಲಿಸಿ ಸಾಂಕೇತಿಕವಾಗಿ ಚಾಲನೆ ನೀಡಿ ಬಾಲಕೃಷ್ಣ ಶೆಟ್ಟಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಶ್ಯಾಮಸುಂದರ್ ಎಸ್.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಉದಯ ಶೆಟ್ಟಿ ಪೇಜಾವರ, ಕೋಶಾಧಿಕಾರಿ ಉಮೇಶ್ ಪೂಜಾರಿ, ವಿಕ್ರೋಲಿ ಬಂಟ್ಸ್ ಅಧ್ಯಕ್ಷ ಗಣೇಶ್ ಶೆಟ್ಟಿ, ಕೋಶಾಧಿಕಾರಿ ಯುಗಾನಂದ ಶೆಟ್ಟಿ ಪ್ರಧಾನ ಅಭ್ಯಾಗತರುಗಳಾಗಿ ಉಪಸ್ಥಿತರಿದ್ದು ಶುಭಾರೈಸಿದರು.

ಇಡೀ ಜಗತ್ತಿನ ಆಗುಹೋಗುಗಳನ್ನು ಪರಿಚಯಿಸುತ್ತಿರುವವರೇ ಪತ್ರಕರ್ತರು. ಜಾಗತಿಕವಾಗಿ ಪತ್ರಕರ್ತರ ಕೊಡುಗೆ ಅಮೂಲ್ಯವಾದುದು. ಭೌಗೋಳಿಕ ವಿಚಾರಗಳನ್ನು ಜನರತ್ತ ಮನವೋಲಿಸುವಲ್ಲಿ ಶ್ರಮಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ತರವಾದುದು. ಮಾಧ್ಯಮಗಳ ಮೂಲಕ ಆಚಾರವಿಚಾರಗಳನ್ನು ವಿನಿಯೋಗಿಸಿ ಕೊಳ್ಳುವ ಪತ್ರಕರ್ತರ ಸಾಂಘಿಕತೆ ಅವಶ್ಯವಾಗಿದೆ. ನಮ್ಮ ಪತ್ರಕರ್ತರು ದಶಸಂಭ್ರಮದಲ್ಲಿದ್ದು ಅವರೆಲ್ಲರ ಸೇವೆ ಫಲಪ್ರದವಾಗಲಿ ಎಂದು
ಶ್ಯಾಮಸುಂದರ್ ಶೆಟ್ಟಿ ಆಶಯ ವ್ಯಕ್ತಪಡಿಸಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಮಾತನಾಡಿ ಪತ್ರಕರ್ತರ ಸಂಘವು ಹುಟ್ಟುಹಾಗಿ ಹತ್ತು ವರ್ಷಗಳು ಪೂರೈಸುತ್ತಿದ್ದು ಇದರ ದಶಮಾನೋತ್ಸವವನ್ನು ಸಾಂಕೇತಿಕವಾಗಿ ಆಚರಣೆ ಮಾಡುವ ನಿರ್ಣಾಯ ಮಾಡಿದ್ದೇವೆ. ಇದರಿಂದ ಆಸಕ್ತರಾದ ಸದಸ್ಯರು ಸಾಂಘಿಕ ಮತ್ತು ಸಾಂಸ್ಕೃತಿಕವಾಗಿ ಪತ್ರಕರ್ತರ ಪರಿವಾರ ಸಂಭ್ರಮವಾಗಿಸಲು ಉಸ್ತುಕತರಾಗಿರುವುದು ಪ್ರಶಂಸನೀಯ. ಮನೋರಂಜನೆ, ನೃತ್ಯ, ಯಕ್ಷಗಾನ ಇತ್ಯಾದಿಗಳ ಮಿಲನದೊಂದಿಗೆ ದಶಸಂಭ್ರಮಕ್ಕೆ ಸಿದ್ಧರಾಗಿದ್ದೇವೆ. ಕಲಾ ಉಳಿವಿಗಾಗಿ ಅಜೆಕಾರು ಬಾಲಕೃಷ್ಣರು ಸ್ವಾರ್ಥ ಕಂಡವರಲ್ಲ. ಹಣವನ್ನೂ ಬಯಸದವರಲ್ಲ. ಗಳಿಕೆಯನ್ನೇ ಆಯ್ಕೆ ಮಾಡಿದ್ದರೆ ಇವರು ದೊಡ್ಡ ಯಕ್ಷಗಾನ ಅಕಾಡೆಮಿಯನ್ನೇ ಹುಟ್ಟುಹಾಕ ಬಹುದಿತ್ತು. ಅದನ್ನೆಲ್ಲಾ ಬದಿಗೊತ್ತಿ ಬರೇ ಕಲಾ ಪೆÇೀಷಣೆಗೈದು ಸಾವಿರಾರು ಕಲಾವಿದರನ್ನು ರೂಪಿಸಿ ಪ್ರತಿಷ್ಠಿತ ಸಂಘಟಕನಾಗಿ ಮೆರೆಯುತ್ತಿರುವುದು ಸ್ತುತ್ಯರ್ಹ. ಇಂತಹ ಕಲಾಪೆÇೀಷಕರಿಂದ ಪತ್ರಕರ್ತ ಕಲಾವಿದರು ಯಕ್ಷಗಾನ ತರಬೇತಿ ಪಡೆಯುತ್ತಿರುವುದು ಕಲಾ ಶ್ರೀಮಂತಿಕೆಯಾಗಿದೆ. ಯಕ್ಷಗಾನದ ಉತ್ಸುಕತೆ ತೋರಿದ ದಿನೇಶ್ ಶೆಟ್ಟಿ ರೆಂಜಾಳ ಅವರ ದಿಟ್ಟತನವೂ ಸಂಘದ ತಾಕತ್ತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ್ ಕಲಾವಿದರುಗಳಾದ ನ್ಯಾ| ಗುಣಕರ್ ಡಿ.ಶೆಟ್ಟಿ, ಸರಳ ಬಿ.ಶೆಟ್ಟಿ, ನಂದಳಿಕೆ ಶಾಂತಾ ಎನ್.ಶೆಟ್ಟಿ, ಮೋಹನದಾಸ್ ರೈ ನೆರೂಲ್, ಪತ್ರಕರ್ತರ ಸಂಘದ ಕ್ರೀಡಾ ಸಮಿತಿ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವಿಶ್ವನಾಥ್ ವಿ.ಪೂಜಾರಿ ನಿಡ್ಡೋಡಿ, ವಿಶೇಷ ಆಮಂತ್ರಿತ ಸದಸ್ಯ ಸುರೇಶ್ ಶೆಟ್ಟಿ ಯೆಯ್ಯಾಡಿ ಸೇರಿದಂತೆ ಸದಸ್ಯರನೇಕರು ಹಾಜರಿದ್ದು ಯಕ್ಷಗಾನ ಪ್ರಸಂಗದ ಸಿದ್ಧತೆ ನಡೆಸಿ ಬಾಲಕೃಷ್ಣ ಶೆಟ್ಟಿ ಅವರು ಕಲಾವಿದ ಸದಸ್ಯರುಗಳಿಗೆ ಪಾತ್ರಗಳನ್ನು ವಿತರಿಸಿದರು.

ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಯಕ್ಷಗಾನದ ಸಂಯೋಜಕ ಡಾ| ದಿನೇಶ್ ಶೆಟ್ಟಿ ರೆಂಜಾಳ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಹಾಗೂ ದಶಸಂಭ್ರಮ ಸಾಂಸ್ಕೃತಿಕ ಸವಿಂಚಾಲಕ ಬಾಬು ಕೆ.ಬೆಳ್ಚಡ ವಂದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here