Sunday 22nd, July 2018
canara news

ಜು.28: ಸಯಾನ್‍ನ ಮುಖ್ಯ ಅಧ್ಯಾಪÀಕ ಭವನದ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಭಂಡಾರಿ ಸೇವಾ ಸಮಿತಿ 65ನೇ ವಾರ್ಷಿಕ ಮಹಾಸಭೆ

Published On : 05 Jul 2018   |  Reported By : Rons Bantwal


ಮುಂಬಯಿ, ಜು.05: ಬೃಹನ್ಮುಂಬಯಿಯಲ್ಲಿ ಸಮೂದಾಯಿಕ ಸಂಸ್ಥೆಯಾಗಿ ಸೇವಾ ನಿರತ ಭಂಡಾರಿ ಸೇವಾ ಸಮಿತಿ (ರಿ.) ಮುಂಬಯಿ ಇದರ 65ನೇ ವಾರ್ಷಿಕ ಮಹಾಸಭೆಯನ್ನು ಇದೇ ಜುಲಾಯಿ 28ನೇ ಶನಿವಾರ ಅಪರಾಹ್ನ 3.00 ಗಂಟೆಗೆ ಸಯಾನ್ ಪೂರ್ವದ ಮುಖ್ಯ ಅಧ್ಯಾಪÀಕ ಭವನದಲ್ಲಿನ ಶ್ರೀ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಸಮಿತಿ ಅಧ್ಯಕ್ಷ ನ್ಯಾಯವಾದಿ ಶೇಖರ ಎಸ್.ಭಂಡಾರಿ ಅಧ್ಯಕ್ಷತೆ ಯಲ್ಲಿ ನಡೆಸಲಾಗುವುದು ಎಂದು ಸಮಿತಿ ಉಪಾಧ್ಯಕ್ಷರುಗಳಾದ ಆರ್.ಎಂ ಭಂಡಾರಿ ಮತ್ತು ಪ್ರಭಾಕರ್ ಪಿ.ಭಂಡಾರಿ ತಿಳಿಸಿದ್ದಾರೆ.

   

Adv. Shekhar S. Bhandary                  Vijay R.Bhandary

   

Karunakar B.Bhandary            Shobha S. Bhandary

ಮಹಾಸಭೆಯ ನಂತರ ಸಮಿತಿ ಸದಸ್ಯರುಗಳ ಮಕ್ಕಳಿಗೆ ಶೈಕ್ಷಣಿಕ ವಿದ್ಯಾಥಿರ್ü ವೇತನ ನೀಡಲಾಗುವುದು. 2018-19ರ ಸಾಲಿನಲ್ಲಿ ವಿದ್ಯಾಭ್ಯಾಸ ಪಡೆಯುವ ವೇತನ ಬಯಸುವ ಮಕ್ಕಳು ತಮ್ಮ ಭಾವಚಿತ್ರ ಹಾಗೂ ಶಾಲಾ ಕಾಲೇಜುಗಳ ಅಧಿಕೃತ ಮಾನ್ಯತಾಪತ್ರ, ಅಧಿಕೃತ ನಿವಾಸದ ಸಂಪೂರ್ಣ ವಿಳಾಸ ಇತ್ಯಾದಿ ಮಾಹಿತಿಗಳೊಂದಿಗೆ ತಮ್ಮ ಅರ್ಜಿಗಳನ್ನು ಇದೇ ಜು.20ನೇ ಶುಕ್ರವಾರ ಒಳಗಾಗಿ ಸಂಘದ ಕಚೇರಿ (ಭಂಡಾರಿ ಸೇವಾ ಸಮಿತಿ ಮುಂಬಯಿ, ಬಿ-5, ಲಕ್ಷ್ಮೀ ಸದನ್, ಪಾಟೀಲ್'ಸ್ ಸಾಯಿನಾಥ್ ಪ್ಲಾಜ್ಹಾ ಹಿಂಭಾಗ, ವೆಲಂಕಣಿ ಬ್ಯೂಟಿ ಪಾರ್ಲರ್ ಮುಂಭಾಗ, ಝವೇರ್ ರಸ್ತೆ ಮಡಿವು, ಮುಲುಂಡ್ ಪಶ್ಚಿಮ, ಮುಂಬಯಿ-400 080 ಇಲ್ಲಿಗೆ ತಲುಪಿಸುವಂತೆ ಸಮಿತಿ ಗೌರವ ಕೋಶಾಧಿಕಾರಿ ಕರುಣಾಕರ ಜಿ.ಭಂಡಾರಿ ಈ ಮೂಲಕ ತಿಳಿಸಿದ್ದಾರೆ.

ಸಮಿತಿಯ ಸರ್ವ ಸದಸ್ಯರು, ಭಂಡಾರಿ ಸಮಾಜ ಬಾಂಧÀವರು ಕ್ಲಪ್ತ ಸಮಯಕ್ಕೆ ಹಾಜರಾಗಿ ಮಹಾಸಭೆಯನ್ನು ಯಶಸ್ವಿ ಗೊಳಿಸುವಂತೆ ಹಾಗೂ ಫಲಾನುಭವಿ ವಿದ್ಯಾಥಿರ್üಗಳೂ ಕಾರ್ಯಕ್ರಮದಲ್ಲಿ ಸಕಾಲದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಗೌ| ಪ್ರ| ಕಾರ್ಯದರ್ಶಿ ವಿಜಯ ಆರ್.ಭಂಡಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ ಕಡಂದಲೆ ಈ ಮೂಲಕ ವಿನಂತಿಸಿದ್ದಾರೆ.

 
More News

18ನೇ ವಾರ್ಷಿಕ ಮಹಾಸಭೆ ಪೂರೈಸಿದ ಜಯಲಕ್ಷ್ಮೀ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ
18ನೇ ವಾರ್ಷಿಕ ಮಹಾಸಭೆ ಪೂರೈಸಿದ ಜಯಲಕ್ಷ್ಮೀ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ
ತುಳುವೆರೆ ಆಯನೊ ಕೂಟ ಕುಡ್ಲ (ರಿ.) ಗೌರವಾಧ್ಯಕ್ಷರಾಗಿ ಡಾ. ಆರೂರು ಪ್ರಸಾದ್ ರಾವ್ ಆಯ್ಕೆ
ತುಳುವೆರೆ ಆಯನೊ ಕೂಟ ಕುಡ್ಲ (ರಿ.) ಗೌರವಾಧ್ಯಕ್ಷರಾಗಿ ಡಾ. ಆರೂರು ಪ್ರಸಾದ್ ರಾವ್ ಆಯ್ಕೆ
ಬಿಎಂಸಿ ಪರಿಮಂಡಳ ಸಮಿತಿ ಸದದ್ಯರಾಗಿ ನಿರಂಜನ್ ಲಕ್ಷ ್ಮಣ್ ಪೂಜಾರಿ ನಿಯುಕ್ತಿ
ಬಿಎಂಸಿ ಪರಿಮಂಡಳ ಸಮಿತಿ ಸದದ್ಯರಾಗಿ ನಿರಂಜನ್ ಲಕ್ಷ ್ಮಣ್ ಪೂಜಾರಿ ನಿಯುಕ್ತಿ

Comment Here