Saturday 4th, May 2024
canara news

ವರುಣನ ಕೋಪದ ನಡುವೆಯೂ ಮಾನವೀಯತೆ ಮೆರೆದ ಕನ್ನಡಿಗ ಸಮಾಜ ಸೇವಕರು

Published On : 14 Jul 2018


ಮುಂಬಯಿ, ಜು.13: ಉಪನಗರ ನಲ್ಲಸೋಫರಾ ಪಶ್ಚಿಮದ ಹೋಟೆಲ್ ಉದ್ಯಮಿ, ಹೋಟೆಲ್ ಆರಾಮ್ ಇದರ ಮಾಲಿಕ ಅಶೋಕ್ ಸಾಲಿಯನ್ ಮತ್ತು ಬಳಗದ ತೆರೆಮರೆಯ ಸಮಾಜ ಸೇವಕರಾದಂಥ ಸುಧಾಕರ್ ಪೂಜಾರಿ (ಗಾರ್ನೀಶ್), ಸದಾಶಿವ ಎ.ಕರ್ಕೇರ, ಅರುಣ್ ಶೆಟ್ಟಿ, ಮತ್ತಿತರ ತುಳುಕನ್ನಡಿಗ ಮಿತ್ರರು ಅತೀವೃಷ್ಠಿ ಪೀಡಿತ ಪ್ರದೇಶದ ಜನರಿಗೆ ಉಪಹಾರ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.

ಮುಂಬಯಿ ಮಹಾನಗರದಲ್ಲಿ ಕಳೆದ ಮೂರು ದಿವಸಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಅನೇಕ ಜನರು ಪ್ರಯಾಣ, ಆಹಾರದ ತೊಂದರೆಗೆ ಸಿಲುಕಿದ್ದರು. ಅನೇಕರು ಹೊಟ್ಟೆಪಾಡಿಗಾಗಿ ಹಾತೊರೆಯುತ್ತಿದ್ದರು ಇದನ್ನು ಮನವರಿಸಿಕೊಂಡ ನಲ್ಲಸೋಫರಾ ಅಲ್ಲಿನ ಸಮಾಜ ಚಿಂತಕರು ಗೆಳೆಯರನ್ನು ಒಗ್ಗೂಡಿಸಿ ಧಾರಾಕಾರ ನೀರಿನ ನಡುವೆಯೂ ತಮ್ಮ ಜೀವದ ಹಂಗು ತೊರೆದು ಜನರಿಗೆ ಬೇಕಾದ ಉಪಹಾರ ದೋಸೆ, ವಡಾಪಾವ್, ಮಿಸಲ್ ಇತರೇ ತಿಂಡಿ ತಿನಿಸುಗಳು, ಚಾ-ಕಾಫಿ, ನೀರು ಒದಗಿಸುವ ಮೂಲಕ ಕಷ್ಟ ಕಾಲದಲ್ಲಿದ್ದ ಜನರಲ್ಲಿ ದಯೆ ತೋರಿ ದೇವರು ಮೆಚ್ಚುವಂಥ ಕೆಲಸಕ್ಕೆ ಪಾತ್ರರಾಗಿದ್ದಾರೆ. ಇಂತಹ ಸೇವೆ ಮಾದರಿ ಮತ್ತು ಇತರರಿಗೆ ಮಾರ್ಗದರ್ಶಕವಾಗಿದೆ.

 




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here