Friday 26th, April 2024
canara news

ಗೋಕುಲ ಮಹಿಳಾ ವಿಭಾಗದ ಆಯೋಜನೆಯಲ್ಲಿ - ಆಟಿಡೊಂಜಿ ದಿನ

Published On : 03 Aug 2018   |  Reported By : Rons Bantwal


ಬಿ.ಎಸ್. ಕೆ. ಬಿ. ಎಸೋಸಿಯೇಶನ್ , ಸಾಯನ್, ಗೋಕುಲದ ಮಹಿಳಾ ವಿಭಾಗವು ರವಿವಾರ ದಿನಾಂಕ ೨೯.೭.೨೦೧೮ ರಂದು, ಆಷಾಢಮಾಸ ವಿಶೇಷತೆಗಳು - ಆಟಿಡೊಂಜಿ ದಿನವನ್ನು ನೇರೂಲ್ ನಲ್ಲಿರುವ 'ಆಶ್ರಯ' ದಲ್ಲಿ ಸಂಭ್ರಮದಿಂದ ಆಚರಿಸಿತು.

ತುಳುನಾಡಿನ ವೈವಿಧ್ಯಮಯ ತಿಂಡಿ- ತಿನಿಸುಗಳು, ವ್ಯಂಜನಗಳನ್ನು ಪ್ರೇಮಾ ರಾವ್, ಸಹನಾ ಪೋತಿ, ರಾಜಶ್ರೀ ರಾವ್, ಲತಾ ಜಗದೀಶ್, ಅಂಜನಾ ರಾವ್, ವಿಜಯಲಕ್ಷ್ಮಿ ರಾವ್, ಸುಚಿತ್ರ ರಾವ್, ಶಾಂತಲಾ ಉಡುಪ, ಗೀತಾ ರಾವ್, ಶಕುಂತಲಾ ಸಾಮಗ, ಸ್ಮಿತಾ ಭಟ್, ಭಾಗ್ಯಲಕ್ಷ್ಮಿ ಚಡಗ, ಶಾಲಿನಿ ಉಡುಪ, ರಜನಿ ರಾವ್, ರಾಜೇಶ್ವರಿ ಭಟ್, ಭಾಗ್ಯಲಕ್ಷ್ಮಿ ಭಟ್, ಮತ್ತು ಸಪ್ನಾ ಭಟ್ ರವರು ಉತ್ಸಾಹದಿಂದ ತಯಾರಿಸಿಕೊಂಡು ಬಂದು ಪ್ರದರ್ಶನಕ್ಕಿಟ್ಟಿದ್ದರು.

ಸ್ಮಿತಾ ಭಟ್ ರವರ ನಿರೂಪಣೆಯಲ್ಲಿ ನಡೆದ ಸಭಾಕಾರ್ಯಕ್ರಮದ ವೇದಿಕೆಯಲ್ಲಿ, ಅಧ್ಯಕ್ಷರು ಡಾ. ಸುರೇಶ್ ಎಸ್ ರಾವ್, ಉಪಾಧ್ಯಕ್ಷ ವಾಮನ್ ಹೊಳ್ಳ, ಕಾರ್ಯದರ್ಶಿ ಎ.ಪಿ.ಕೆ. ಪೋತಿ, ಕೋಶಾಧಿಕಾರಿ ಹರಿದಾಸ್ ಭಟ್, ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರೇಮಾ ರಾವ್ ಮತ್ತು ಸಂಚಾಲಕಿ ಡಾ. ಸಹನಾ ಪೋತಿಯವರು ಉಪಸ್ಥಿತರಿದ್ದರು. ಆಷಾಢ ಮಾಸದ ವಿಶೇಷತೆಗಳ ಬಗ್ಗೆ ಮಾಹಿತಿಗಳನ್ನು ಪ್ರಭಾವತಿ ರಾವ್, ಅಂಜನಾ ರಾವ್, ಅನಿತಾ ಆಚಾರ್ಯ, ಡಾ. ಸಹನಾ ಪೋತಿ ಮತ್ತು ರಶ್ಮಿ ಭಟ್ ರವರು ನೀಡಿದರು.

ಡಾ. ಸುರೇಶ್ ಎಸ್ ರಾವ್ ರವರು ಕಾರ್ಯಕ್ರಮದ ಬಗ್ಗೆ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ, ಪ್ರತಿ ತಿಂಗಳಿನಲ್ಲಿ ಬರುವ ಹಬ್ಬ ಹರಿದಿನಗಳ ಮಹತ್ವವನ್ನು ತಿಳಿಸಿಕೊಡುವ ಇಂತಹಾ ಕಾರ್ಯಕ್ರಮಗಳನ್ನು ಮುಂದೆಯೂ ಆಯೋಜಿಸುತ್ತಿರಬೇಕು. ನಮ್ಮ ಎಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಗಮನವಿಟ್ಟು ಕೇಳಿ ತಿಳಿದುಕೊಂಡು, ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.

ಪ್ರೇಮಾ ರಾವ್ ರವರು ಮಾತನಾಡುತ್ತಾ, ಕಳೆದ ೨-೩ ವರ್ಷಗಳಿಂದ 'ಆಟಿಡೊಂಜಿ ದಿನ' ದಂತಹ ಕಾರ್ಯಕ್ರಮವನ್ನು ಆಯೋಜಿಸಬೇಕೆಂಬ ಅಧ್ಯಕ್ಷರ ಆಶಯದ ಮೇರೆಗೆ, ಇಂದು ಪ್ರಪ್ರಥಮವಾಗಿ ಆಟಿಡೊಂಜಿ ದಿನವನ್ನು ಹಮ್ಮಿಕೊಂಡಿದ್ದೇವೆ. ನಮ್ಮ ನಿರೀಕ್ಷೆಗೂ ಮೀರಿ ಇಂದು ಹೆಚ್ಚಿನ ಮಹಿಳೆಯರು ಅತ್ಯಂತ ಮುತುವರ್ಜಿಯಿಂದ ಇದರಲ್ಲಿ ಭಾಗವಹಿಸಿದ್ದಾರೆ. ಉತ್ತಮ ಸಂಖ್ಯೆಯಲ್ಲಿ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಮಹಿಳಾ ವಿಭಾಗವು ಮುಂದಿನ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸುವ ಪ್ರಯತ್ನ ಮಾಡುತ್ತದೆ ಎಂದರು.
ಅಂದಿನ ವಿಶೇಷ ತಿಂಡಿಗಳನ್ನು ತಯಾರಿಸಿದ ಮಹಿಳೆಯರಿಗೆ, ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನೆನಪಿನ ಕಾಣಿಕೆಯನ್ನಿತ್ತು ಪುರಸ್ಕರಿಸಿದರು. ಅಂಜನಾ ರಾವ್ ಧನ್ಯವಾದ ಸಮರ್ಪಿಸಿದರು. ನಂತರ ಅಂದಿನ ವಿಶೇಷ ತಿಂಡಿಗಳನ್ನು ಚಹಾದೊಂದಿಗೆ ಸದಸ್ಯರಿಗೆ ವಿತರಿಸಲಾಯಿತು.

ಇದೇ ವೇದಿಕೆಯಲ್ಲಿ ಡಾ. ಸುರೇಶ್ ಎಸ್ ರಾವ್ ರವರ ಅಧ್ಯಕ್ಷತೆಯಲ್ಲಿ ಸಂಘದ ವಾರ್ಷಿಕ ಸಭೆಯು ಜರಗಿದ ನಂತರ ತುಳುನಾಡಿನ ವಿಶೇಷ ಅಡುಗೆಯ ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಪ್ರೀತಿ ಭೋಜನವನ್ನು ವಿ.ಕೆ. ಸುವರ್ಣರವರು ಪ್ರಾಯೋಜಿಸಿದ್ದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರೀ ಸಮಿತಿ ಸದಸ್ಯರುಗಳ ಸಹಿತ ನೂರಾರು ಮಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here