Sunday 24th, March 2019
canara news

ಎತ್ತಿನಹೊಳೆ ಯೋಜನೆ ತ್ವರಿತಗೊಳಿಸಲು ಸಿಎಂ ಸೂಚನೆ, ಪರಿಸರ ಹೋರಾಟಗಾರರ ಅಸಮಾಧಾನ

Published On : 08 Aug 2018   |  Reported By : canaranews network

ಮಂಗಳೂರು: ನೇತ್ರಾವತಿ ನದಿ ತಿರುಗಿಸುವ ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ತ್ವರಿತಗೊಳಿಸಲು ಸೂಚಿಸಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ವಂಚನೆ ಮಾಡಿದ್ದಾರೆ ಎಂದು ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಆಗುವ ಮುನ್ನ ಈ ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದಿದ್ದರು. ಇದೊಂದು ಭ್ರಷ್ಟಾಚಾರದ ಯೋಜನೆ, ಇದಕ್ಕೆ ಅವಕಾಶ ನೀಡುವುದಿಲ್ಲ. ಅಧಿಕಾರಕ್ಕೆ ಬಂದಲ್ಲಿ ಯೋಜನೆ ವಿರುದ್ಧ ವಿಚಾರಣೆ ನಡೆಸುವುದಾಗಿ ಹೇಳಿದ್ದ ಕುಮಾರ ಸ್ವಾಮಿ ಇಂದು ಅದರ ಪರವಾಗಿದ್ದಾರೆ. ಕುಮಾರ ಸ್ವಾಮಿ ಇದೀಗ ಕಾಂಗ್ರೆಸ್ ಪಕ್ಷದಿಂದ ಸರಕಾರ ರಚಿಸಿದ್ದು, ಅವರ ಜೊತೆಗೆ ಯೋಜನೆ ಜಾರಿಗೆ ಯತ್ನಿಸುತ್ತಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳೂ ಬುಡಮೇಲಾಗಿದೆ ಎಂದಿದ್ದಾರೆ. ಈ ಬಗ್ಗೆ ನಾವು ಸಿಎಂಗೆ ಮನವಿ ನೀಡಿ ಯೋಜನೆ ತಡೆಯಲು ಯತ್ನಿಸಲಿದ್ದೇವೆ ಎಂದು ಹೇಳಿದ್ದಾರೆ.
More News

ಮಿಲಾಗ್ರಿಸ್ ಕನ್ನಡ ಪ್ರೌಡಶಾಲೆಯ ವಿದ್ಯಾರ್ಥಿ ಎನ್.ಎಮ್.ಎಮ್. ಎಸ್ ಆಯ್ಕೆ
ಮಿಲಾಗ್ರಿಸ್ ಕನ್ನಡ ಪ್ರೌಡಶಾಲೆಯ ವಿದ್ಯಾರ್ಥಿ ಎನ್.ಎಮ್.ಎಮ್. ಎಸ್ ಆಯ್ಕೆ
ಮೊಡೇಲ್ ಬ್ಯಾಂಕ್‍ನ 23ನೇ ಶಾಖೆ ಪನ್ವೇಲ್‍ನ ಕ್ರಿಸ್ಟಲ್ ಅಪಾರ್ಟ್‍ಮೆಂಟ್‍ನಲ್ಲಿ ಉದ್ಘಾಟನೆ
ಮೊಡೇಲ್ ಬ್ಯಾಂಕ್‍ನ 23ನೇ ಶಾಖೆ ಪನ್ವೇಲ್‍ನ ಕ್ರಿಸ್ಟಲ್ ಅಪಾರ್ಟ್‍ಮೆಂಟ್‍ನಲ್ಲಿ ಉದ್ಘಾಟನೆ
ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆಯಾಗಿ ಶ್ರೇಯಾ ಸಂತೋಷ್ ರಾವ್ ಆಯ್ಕೆ
ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆಯಾಗಿ ಶ್ರೇಯಾ ಸಂತೋಷ್ ರಾವ್ ಆಯ್ಕೆ

Comment Here