Friday 26th, April 2024
canara news

ಕುಂದಾಪುರ ಕಥೊಲಿಕ್ ಸಭಾದಿಂದ ಸ್ವಾತಂತ್ರ್ಯೊತ್ಸವದ ಪ್ರಯುಕ್ತ ದೇಶ ಭಕ್ತಿಗಿತೆಗಳ ಸ್ಪರ್ಧೆ

Published On : 15 Aug 2018   |  Reported By : Bernard Dcosta


ಕುಂದಾಪುರ,ಆ14: ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಕುಂದಾಪುರ ಪುರಸಭೆ ವ್ಯಾಪ್ತಿಯೊಳೊಗಿನ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೊತ್ಸವದ ಪ್ರಯುಕ್ತ ಅಂತರ್ ಶಾಲಾ ದೇಶ ಭಕ್ತಿ ಗೀತೆಗಳ ಸ್ಪರ್ಧೆ ಸಂತ ಮೇರಿಸ್ ಪಿ.ಯು. ಕಾಲೇಜು ಸಭಾಂಗಾಣದಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷ ಕುಂದಾಪುರ ವಲಯ ಪ್ರಧಾನ ವಂ|ಫಾ| ಸ್ಟ್ಯಾನಿ ತಾವ್ರೊ ‘ಹಲವಾರು ವರ್ಷಗಳಿಂದ ಇಂತಹ ದೇಶ ಭಕ್ತಿ ಗೀತೆಗಳ ಸ್ಫರ್ಧೆ ಹಮ್ಮಿಕೊಂಡಿರುವುದು ಶ್ಲಾಘನೀಯ, ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿದೇಶ ಭಕ್ತಿ ಹೆಚ್ಚಲು ಕಾರಣವಾಗುತ್ತವೆ, ದೇಶ ಭಕ್ತಿ ಸೈನಿಕನಾಗಿ, ರಾಜಕೀಯವಾಗಿ ಬರಹಗಾರರಾಗಿ ಹೀಗೆ ಹಲವು ವಿಧಗಳಿಂದ ದೇಶ ಭಕ್ತಿಯ ಕೊಡುಗೆ ನೀಡಬಹುದು, ನಮ್ಮ ರಾಷ್ಟ್ರ ಶ್ರೇಷ್ಟವಾದುದು, ನಮ್ಮೆಲರಲ್ಲಿ ದೇಶಕ್ಕಾಗಿ ಪ್ರೀತಿ ಅಭಿಮಾನ ದೇಶ ಭಕ್ತಿ ಇರಲೇ ಬೇಕು’ ಎಂದು ಅವರು ಸಂದೇಶ ನೀಡಿ ಸಮೂಹ ಗಾನದದಲ್ಲಿ ಗೆದ್ದವರಿಗೆ ಬಹುಮಾನವನ್ನು ನೀಡಿದರು.

ಇನ್ನೊರ್ವ ಅಥಿತಿ ರಾಜಕೀಯ ನೇತಾರ ಮಲ್ಯಾಡಿ ಶಿವರಾಮ ಶೆಟ್ಟಿ ಮಾತಾಡಿ, ‘ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹಲವರು ತಮ್ಮ ಜೀವಗಳನ್ನು ಬಲಿದಾನ ಮಾಡಿದ್ದಾರೆ, ಅವರೆಲ್ಲರ ಋಣ ನಮ್ಮ ಮೇಲಿದೆ, ಎಲ್ಲರಲ್ಲಿಯೂ ದೇಶ ಭಕ್ತಿ ಹೆಚ್ಚಲಿ’ ಎಂದು ವಯಕ್ತಿಕ ಗಾನ ಸ್ಪರ್ಧೆಯಲ್ಲಿ ಗೆದ್ದವರಿ ಬಹುಮಾನಗಳನ್ನು ನೀಡಿದರು. ಶುಭ ಕೋರಿದರು.

ಕಥೊಲಿಕ್ ಸಭಾದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಸ್ಪರ್ಧೆಗಳನ್ನು ನೆಡೆಸಿಕೊಟ್ಟರು. ಕಾರ್ಯಕ್ರಮದ ಸಂಚಾಲಕ ವಿನೋದ್ ಕ್ರಾಸ್ತಾ ಸ್ವಾಗತಿಸಿದರು. ತೀರ್ಪುಗಾರರ ಪರವಾಗಿ ಗ್ಲೆನ್ ಮೆಂಡೊನ್ಸಾ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು. ಸುಮ ಮತ್ತು ಪ್ರಜ್ನಾ ಇತರ ತೀರ್ಪುಗಾರರಾಗಿದ್ದರು. ಕಥೊಲಿಕ್ ಸಭಾದ ಪದಾಧಿಕಾರಿಗಳು ಹಾಜರಿದ್ದು ಕಾರ್ಯಕ್ರಮವನ್ನು ಕಾರ್ಯದರ್ಶಿ ಜೂಲಿಯೆಟ್ ಪಾಯ್ಸ್ ನೆಡೆಸಿಕೊಟ್ಟರು.

ಸ್ಪರ್ಧೆಯಲ್ಲಿ ಗೆದ್ದವರ ವಿವರ

ವಯಕ್ತಿಕ ಗಾಯನ ವಿಭಾಗ 1 ರಿಂದ ನಾಲ್ಕನೆ ತರಗತಿಯಲ್ಲಿ ಪ್ರಥಮ ಸ್ಥಾನ ಸಿಂಚನ, ಯು.ಬಿ.ಎಮ್.ಸಿ, ಪ್ರಾಥಮಿಕ ಶಾಲೆ, ದ್ವೀತಿಯ ಅಂಕಾಕ್ಷ, ವೆಂಕಟರಮಣ ಪ್ರಾಥಮಿಕ ಶಾಲೆ, ತ್ರತೀಯ ಶ್ರೇಯಸ್ ಶಾಸಕರ ಮಾದರಿ ಪ್ರಾಥಮಿಕ ಶಾಲೆ, 5 ರಿಂದ 7 ನೇ ತರಗತಿಯ ವಿಭಾಗದಲ್ಲಿ ಅನುಕ್ರಮವಾಗಿ ಧಾರಿಣಿ ಹೋಲಿ ರೋಜರಿ ಆಂಗ್ಲಾ ಹಿ.ಮಾ.ಶಾಲೆ, ಸುಶ್ಮಿತಾ ಶಾಸಕರ ಮಾ.ಹಿ.ಪ್ರಾ. ನಮಿತಾ ಎಚ್.ಎಮ್,ಎಮ್. ಆಂಗ್ಲಾ ಮಾ. ಶಾಲೆ. 8 ರಿಂದ 10 ನೇ ತರಗತಿಯ ವಿಭಾಗದಲ್ಲಿ ರಶ್ಮಿ ವಿ.ಕೆ.ಆರ್. ಆಂಗ್ಲಾ ಮಾ. ಪ್ರೌಢ ಶಾಲೆ. ಅನುಪಮ ಸಂತ ಮೇರಿಸ್ ಫ್ರೌಡ ಶಾಲೆ, ಬಿ.ಎಸ್.ಶ್ರೇಯ ಉಪಾಧ್ಯಾಯ ಹೋಲಿ ರೋಜರಿ ಆಂಗ್ಲಾ ಮಾ. ಪ್ರೌಢ ಶಾಲೆ. ಪಿ.ಯು.ಸಿ ವಿಭಾಗದಲ್ಲಿ ಭ್ರಮರ ಕೆ.ಉಡುಪ ಭಂಡಾರರ್ಕಸ್ ಕಾಲೇಜ್, ಮುಸ್ತಾಯಾನ್ ಶರೀಫ್ ಸಂತ ಮೇರಿಸ್ ಪಿ.ಯು.ಕಾಲೇಜ್ ಇವರುಗಳು ಅನುಕ್ರಮವಾಗಿ ಸ್ಥಾನಗಳನ್ನು ಪಡೆದರು.
ಸಮೂಹ ಗಾನದಲ್ಲಿ

1 ರಿಂದ 4 ನೇಯ ವಿಭಾಗದಲ್ಲಿ ಭಾಗವಹಿಸಿದ 10 ಪಂಗಡಗಳಲ್ಲಿ ಎಚ್.ಎಮ್.ಎಮ್. ಹಿ.ಪ್ರಾ. ಶಾಲೆ ಪ್ರಥಮ ಸ್ಥಾನ, ವಿ.ಕೆ.ಆರ್. ಎಚ್.ಎಮ್.ಎಮ್ ಶಾಲೆ. ಶಾಲೆ ದ್ವೀತಿಯ ಸ್ಥಾನ, ಹೋಲಿ ರೋಜರಿ ಆಂಗ್ಲಾ ಹಿ.ಮಾ.ಶಾಲೆ ತ್ರತೀಯ ಸ್ಥಾನ ಪಡೆದುಕೊಂಡರೆ 8 ರಿಂದ ಪಿ.ಯು.ಸಿ ತನಕದ ಸಮೂಹ ಗಾನದಲ್ಲಿ ವಿ.ಕೆ ಆರ್ ಆಚಾರ್ಯ ಆ.ಮಾ.ಶಾಲೆ ಪ್ರಥಮ, ಸಂತ ಮೇರಿಸ್ ಪ್ರೌಢ ಶಾಲೆ, ದ್ವೀತಿಯ ಸಂತ ಜೋಸೆಫ್ ಫ್ರೌಡ ಶಾಲಾ ತಂಡ ತ್ರತೀಯ ಸ್ಥಾನವನ್ನು ಪಡೆದವು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here