Friday 26th, April 2024
canara news

ಆ.22: ಬಂಟರ ಭವನÀದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ದಶ ಸಂಭ್ರಮ

Published On : 18 Aug 2018   |  Reported By : Rons Bantwal


ಹಿರಿಯ ಪತ್ರಕರ್ತರಾದ ಎಂ.ಬಿ.ಕುಕ್ಯಾನ್-ರತ್ನಾಕರ್ ಶೆಟ್ಟಿ-ವಸಂತ ಕಲಕೋಟಿ ಅವರಿಗೆ ಸನ್ಮಾನ

ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ರಿ.) ತನ್ನ ದಶಮಾನೋತ್ಸವ ಸಂಭ್ರಮವನ್ನು ಇದೇ ಆ.22ರ ಬುಧವಾರ ಬೆಳಿಗ್ಗೆ 9.30 ಗಂಟೆಗೆ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಅದ್ದೂರಿಯಾಗಿ ಸಂಭ್ರಮಿಸಲಿದೆ.

ಭವಾನಿ ಶಿಪ್ಪಿಂಗ್ ಸರ್ವಿಸಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಕೆ.ಡಿ.ಶೆಟ್ಟಿ ಸಂಘದ ದಶಸಂಭ್ರಮದ ಭವ್ಯ ಸಮಾರಂಭ ಉದ್ಘಾಟಿಸಲಿದ್ದಾರೆ. ಕÀನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅಧ್ಯಕ್ಷತೆಯಲ್ಲಿ ಜರಗುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಮತ್ತು ಪ್ರಧಾನ ಅಭ್ಯಾಗತರಾಗಿ ವಿಕೇ ಸಮೂಹದ ಕಾರ್ಯಾಧ್ಯಕ್ಷ ಕೆ.ಎಂ ಶೆಟ್ಟಿ ಆಗಮಿಸಲಿದ್ದಾರೆ.

    

M.B Kuckian                                     Ratnakara R Shetty                                   Vasantha Kalakoti

ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಭಂಡಾರಿ ಮಹಾ ಮಂಡಲದ ಸ್ಥಾಪಕ ಅಧ್ಯಕ್ಷ ಕಡಂದಲೆ ಸುರೇಶ್ ಎಸ್. ಭಂಡಾರಿ, ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಅವೆನ್ಯೂ ಹೊಟೇಲು ಸಮೂಹ ಮುಂಬಯಿ ಇದರ ನಿರ್ದೇಶಕ ರಘುರಾಮ ಕೆ.ಶೆಟ್ಟಿ, ಕೃಷ್ಣ ಪ್ಯಾಲೇಸ್ ಹೊಟೇಲು ಸಮೂಹ ಮುಂಬಯಿ ಇದರ ನಿರ್ದೇಶಕಿ ಉಮಾ ಕೃಷ್ಣ ಶೆಟ್ಟಿ, ಕÀನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಮುಖ್ಯ ಸಲಹೆಗಾರ ಸಿಎ| ಐ.ಆರ್.ಶೆಟ್ಟಿ, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಥಿರ್üಕ ತಜ್ಞ ಡಾ| ಆರ್.ಕೆ ಶೆಟ್ಟಿ, ಮಾತೃಭೂಮಿ ಕ್ರೆಡಿಟ್ ಸೊಸೈಟಿ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಬಂಟರ ಸಂಘದ ಜ್ಞಾನ ಮಂದಿರ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ ಗೌರವ ಅತಿಥಿüಗಳಾಗಿ ಆಗಮಿಸಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಕನ್ನಡ ದೈನಿಕ ಸುದ್ದಿಬಿಡುಗಡೆ ಇದರ ಸಂಪಾದಕ ಡಾ| ಯು.ಕೆ ಶಿವಾನಂದ್ ಅವರು `ಆಧುನಿಕ ಕನ್ನಡ ಪತ್ರಿಕೋದ್ಯಮ' ವಿಷಯವಾಗಿ ವಿಚಾರ ಮಂಡಿಸಲಿದ್ದಾರೆ. ಸಮಾರಂಭದಲ್ಲಿ ಹಿರಿಯ ಪತ್ರಕರ್ತರೂ, ಅಕ್ಷಯ ಮಾಸಿಕದ ಮಾಜಿ ಸಂಪಾದಕ ಎಂ.ಬಿ.ಕುಕ್ಯಾನ್, ಬಂಟರವಾಣಿ ಮಾಸಿಕದ ಮಾಜಿ ಸಂಪಾದಕ ರತ್ನಾಕರ್ ಆರ್.ಶೆಟ್ಟಿ, ಹಿರಿಯ ಪತ್ರಕರ್ತ ನ್ಯಾಯವಾದಿ ವಸಂತ ಕಲಕೋಟಿ ಅವರನ್ನು ಸನ್ಮಾನಿಸಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪತ್ರಕರ್ತರ ಸಂಘದ ಸದಸ್ಯರು,ಮಕ್ಕಳು ವಿವಿಧ ನೃತ್ಯಾವಳಿಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಹಾಗೂ ಪತ್ರಕರ್ತ ಸಂಘದ ಡಾ| ದಿನೇಶ್ ಶೆಟ್ಟಿ ರೆಂಜಾಳ ಮುಂದಾಳುತ್ವದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಸ್ಥಾಪಕಾಧ್ಯಕ್ಷ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ನಿರ್ದೇಶನಲ್ಲಿ ಸಂಘದ ಸದಸ್ಯರು `ಮಹಿಷಾಸುರ ಮರ್ಧಿನಿ' ಯಕ್ಷಗಾನ ಪ್ರದರ್ಶಿಸಲಿದ್ದಾರೆ.

ಪತ್ರಕರ್ತರ ದಶಮಾನೋತ್ಸವ ಆಚರಣಾ ಕಾರ್ಯಕ್ರಮದಲ್ಲಿ ಸಂಘದ ಸರ್ವ ಸದಸ್ಯರು, ವಿವಿಧ ಮತ್ತು ಹಿತೈಷಿಗಳು, ಸರ್ವರಿಗೂ ಆಮಂತ್ರಣವಿದ್ದು ಸಕಾಲದಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವಂತೆ ಉಪಾಧ್ಯಕ್ಷ ದಯಾ ಸಾಗರ್ ಚೌಟ, ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್, ಗೌ| ಕೋಶಾಧಿಕಾರಿ ಪ್ರೇಮನಾಥ್ ಶೆಟ್ಟಿ ಮುಂಡ್ಕೂರು, ಗೌರವ ಕಾರ್ಯದರ್ಶಿ ಹರೀಶ್ ಕೆ. ಹೆಜ್ಮಾಡಿ ಈ ಮೂಲಕ ವಿನಂತಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here