Friday 26th, April 2024
canara news

ಬಿಲ್ಲವ ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆ

Published On : 20 Aug 2018   |  Reported By : Rons Bantwal


ಮುಂಬಯಿ, ಅ.20: ಬಿಲ್ಲವರ ಎಸೋಸಿಯೇಶನ್, ಮುಂಬಯಿ ಇದರ ಬಿಲ್ಲವರ ಸೇವಾದಳ ಮುಖೇನ ಆಚರಿಸುತ್ತಿರುವ 72ನೇ ಸ್ವಾತಂತ್ರ್ಯ ದಿನಾಚರಣೆಯು ಬಿಲ್ಲವರ ಎಸೋಸಿಯೇಶನ್‍ನ ಕೇಂದ್ರ ಕಚೇರಿಯಲ್ಲಿ ಸನ್ಮಾನ್ಯ ಜಯ ಸಿ. ಸುವರ್ಣರು ಧ್ವಜಾರೋಹಣ ಗೈಯುವುದರೊಂದಿಗೆ ಸಂಭ್ರಮದ ಆಚರಣೆಗೆ ಚಾಲನೆಯಿತ್ತು ಶುಭಹಾರೈಸಿದರು.

ಸಮಾಜ ಸೇವೆಯೊಂದಿಗೆ ದೇಶ ಸೇವೆಗೈದ ಹಿರಿಯರ ತ್ಯಾಗ ಇಂದು ನಮಗೆ ಸ್ಫೂರ್ತಿಯಾಗಿದೆ. ಈ ದೇಶಕ್ಕಾಗಿ ವೀರ ಮರಣವನ್ನಪ್ಪಿ ಪ್ರಾಣ ತ್ಯಾಗ ಮಾಡಿದ ನಮ್ಮ ಸ್ವತಂತ್ರ ವೀರರಿಗೆ ಋಣಿಯಾಗಬೇಕಿದೆ. ಅವರ ಸ್ಫೂರ್ತಿ ನಮಗೆ ದೇಶಭಕ್ತಿ ಹೆಚ್ಚಿಸಿದೆ ಎಂದು ಬಿಲ್ಲವರ ಎಸೋಸಿಯೇಶನ್ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ ನುಡಿದರು. ಅವರು 72ನೇ ಸ್ವಾತಂತ್ರ್ಯೋತ್ಸವದ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ದಿ| ದಾಮೋದರ ಬಂಗೇರರಂತಹ ಮಹಾನ್ ವ್ಯಕ್ತಿಗಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದು ಎಸೋಸಿಯೇಶನ್‍ಗೆ ಕೀರ್ತಿ ತಂದಿದ್ದಾರೆ ಎಂದರು.

ಮಾಜೀ ಅಧ್ಯಕ್ಷರಾದ ಎಲ್. ವಿ. ಅಮೀನ್ ಮಾತನಾಡುತ್ತಾ ಸ್ವಾತಂತ್ರ್ಯ ಭಾರತವು ಇಂದು 72ನೇ ಸಂವತ್ಸರಗಳನ್ನು ಕಂಡಿದೆ. ಇದೀಗ ನಮ್ಮೆಲ್ಲರ ಪ್ರಧಾನಿ ಜನ ಸಾಮಾನ್ಯರಿಗೆ ಹಲವಾರು ಯೋಜನೆಗಳನ್ನು ತಂದಿರುವುದು ಭವ್ಯ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಪಣತೊಡಬೇಕೆಂದು ಉಪಾಧ್ಯಕ್ಷರಾದ ದಯಾನಂದ್ ಪೂಜಾರಿ ಸರ್ವರಿಗೂ ಶುಭ ಕೋರಿದರು. ಸೇವಾದಳದ ಸದಸ್ಯ ದಿನೇಶ್ ಅಂಚನ್ ಸೇವಾದಳದ ಕಾರ್ಯವೈಖರಿಯನ್ನು ತಿಳಿಸಿದರು. ಹರೀಶ್ ಜಿ. ಪೂಜಾರಿ ಕೊಕ್ಕರ್ಣೆ, ವಿಶ್ವನಾಥ್ ತೋನ್ಸೆ, ಸಂದರ್ಭೋಚಿತವಾಗಿ ಮಾತನಾಡಿದರು. ಎಸೋಸಿಯೇಶನ್‍ನ ಬಿಲ್ಲವರ ಸೇವಾದಳದ ಸದಸ್ಯರು ನಮ್ಮ ದೇಶದ ಸೈನಿಕರಂತೆ ಸಮಾಜದ ಸೇನಾನಿಗಳಾಗಿದ್ದಾರೆ ಎಂದು ಅಭಿನಂದಿಸಿದರು.

ಗುರುನಾರಾಯಣ ರಾತ್ರಿ ಶಾಲೆಯ ವಿದ್ಯಾರ್ಥಿನಿಯರಾದ ಪೂಜಾ ಗೌಡ, ಹಾಗೂ ಐಶ್ವರ್ಯ ಪೂಜಾರಿ, ಸಂದರ್ಭೋಚಿತವಾಗಿ ಮಾತನಾಡಿ ತಮ್ಮ ಸ್ವಾತಂತ್ರ್ಯ ವೀರರಿಗೆ ನುಡಿ ನಮನ ಸಲ್ಲಿಸಿದರು.

ವೇದಿಕೆಯಲ್ಲಿ ಗೌ. ಪ್ರ. ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್, ಮಾಜಿ ಗೌ. ಪ್ರ. ಕೋಶಾಧಿಕಾರಿ ಎನ್. ಎಮ್. ಸನಿಲ್ ಉಪಸ್ಥಿತರಿದ್ದರು. ಪದಾಧಿಕಾರಿಗಳಾದ ಹರೀಶ್ ಜಿ. ಸಾಲ್ಯಾನ್, ಶಿವರಾಮ್ ಪೂಜಾರಿ, ಮಹೇಶ್ ಪೂಜಾರಿ, ಹರೀಶ್ ಜಿ. ಪೂಜಾರಿ, ಶಕುಂತಲಾ ಕೋಟ್ಯಾನ್, ಬಬಿತ ಕೋಟ್ಯಾನ್, ವಿಲಾಸಿನಿ ಕೆ. ಸಾಲ್ಯಾನ್, ಅಶೋಕ್ ಕುಕ್ಯಾನ್, ನಾಗೇಶ್ ಕೋಟ್ಯಾನ್, ಜಯ ಎಸ್. ಸುವರ್ಣ, ಮೋಹನ್‍ದಾಸ್ ಜಿ. ಪೂಜಾರಿ, ಸುಮಿತ್ರ ಬಂಗೇರ, ಬಿ. ರವೀಂದ್ರ ಅಮೀನ್, ಗಣೇಶ್ ಎಚ್. ಪೂಜಾರಿ, ಗುರು ನಾರಾಯಣ ರಾತ್ರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಪರಿಸರದ ಸದಸ್ಯರು ಹಾಜರಿದ್ದರು.

ಎಸೋಸಿಯೇಶನ್‍ನ ಉಪಾಧ್ಯಕ್ಷರು ಹಾಗೂ ಸೇವಾದಳದ ಕಾರ್ಯಾಧ್ಯಕ್ಷರಾದ ಶಂಕರ್ ಡಿ. ಪೂಜಾರಿಯವರು ಸ್ವಾಗತಿಸಿದರು, ದಳಪತಿ ಗಣೇಶ್ ಕೆ. ಪೂಜಾರಿ ಯವರು ಧನ್ಯವಾದ ಗೈದರು. ಗೌ. ಪ್ರ. ಕಾರ್ಯದರ್ಶಿ ಧನಂಜಯ್ ಶಾಂತಿ ಕಾರ್ಯಕ್ರಮ ನಿರೂಪಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here