Friday 26th, April 2024
canara news

ಬಿಲ್ಲವರ ಅಸೋಸಿಯೇಶನ್‍ನಲ್ಲಿ ಸಂಭ್ರಮಿಸಲ್ಪಟ್ಟ ಬ್ರಹ್ಮಶ್ರೀ ನಾರಾಯಣ ಗುರು 164ನೇ ಜಯಂತಿ

Published On : 28 Aug 2018   |  Reported By : Rons Bantwal


ನಾರಾಯಣ ಗುರುಗಳು ಶಾಂತಿಬಾಳ್ವೆಯ ದೇವಮಾನವ : ಶ್ರೀ ಸುವರ್ಣ ಬಾಬಾ
(ವರದಿ / ಚಿತ್ರ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.28: ನಾರಾಯಣ ಗುರುಗಳು ಸತ್ಯಾನ್ವಷಣಾ ಪ್ರತೀಕಾರರು. ಸಮನ್ವತೆಯ ಲೋಕಜ್ಞಾನಿಗಳಾಗಿದ್ದ ಅವರು ಆಧ್ಯಾತ್ಮಿಕ ಅತ್ಯಾಭಿಲೋಕ ಪುರುಷ. ಮಾನವತಾವಾದವೇ ಪ್ರಧಾನವಾಗಿಸಿ ಸರ್ವಧರ್ಮ ಸಮನ್ವಯಕ ರಾಗಿ ಶಾಂತಿಬಾಳ್ವೆಯ ಜೀವನ ಕರುಣಿಸಿ ಅನುಗ್ರಹಿಸಿದ ನಾರಾಯಣ ಗುರುಗಳು ದೇವ ಸ್ವರೂಪ ಸಂತರು. ಮನುಕುಲಕ್ಕೆ ಶಾಂತಿ ಪ್ರಾಪ್ತಿಸಿ ಸಮಾನತೆಯ ಬದುಕು ಪ್ರಾಪ್ತಿಸಿದ ದೇವಮಾನರಿವರು. ಎಲ್ಲಾ ಸಮಾಜಕ್ಕೆ ನಿಷ್ಠಾವಂತರಾಗಿ, ಸಮಾನತಾ ಜೀವನಕ್ಕೆ ಮಾರ್ಗದರ್ಶಕರೂ, ಪ್ರೇರಕರೂ ಆಗಿ ವಿಶ್ವಶಾಂತಿಗಾಗಿ ಬದುಕು ಬೋಧಿಸಿದ ಜಗದ್ಗುರು. ಇಂತಹ ಗುರುಗಳ ಪರಿಪಾಲಕರಾದ ಬಿಲ್ಲವರು ಸ್ವಜಾತೀಯ ಒಗ್ಗಟ್ಟು ತೋರ್ಪಡಿಸಿ ಪ್ರತಿಯೊಬ್ಬರಿಗೆ ಆಧಾರವಾಗಿ ಬಾಳಿರಿ. ಬಿಲ್ಲವರು ಸದಾ ಸಮಾಜ ಪ್ರಿಯರು, ಬಿಲ್ಲವರ ಬಲಿಷ್ಠ ಶಕ್ತಿಯುಳ್ಳ ಸಮಾಜ ಎಲ್ಲವೂ ಸರಿ. ಆದರೆ ಸಾಂಘಿಕವಾಗಿ ಇನ್ನಷ್ಟು ಬಲಯುತರಾಗು ಅವಶ್ಯಕತೆ ಇದೆ. ಜೀವನ ಅಂದರೆ ಆತ್ಮ ಮತ್ತು ಆತ್ಮವೇ ಪರಮಾತ್ಮ. ಇಂತಹ ಜೀವನ ಪಾವನವಾಗಲು ಜಾತಿಮತ, ಧರ್ಮಭೇದ ಮರೆತು ಬಾಳುತ್ತಾ ಪ್ರತಿಯೊಬ್ಬರನ್ನು ನೆಮ್ಮದಿಯಿಂದ ಬಾಳಲು ಬಿಲ್ಲವರು ಪ್ರೇರಕರಾಗಬೇಕು ಎಂದು ಪಂಚಕುಟೀರದ ಸುಮರ್ಣ ಮಂದಿರ ಶ್ರೀ ಮಹಾಶೇಷ ರುಂಡಮಾಲಿನಿ ದೇವಸ್ಥಾನ ಪೆÇವಾಯಿ ಇದರ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ತಿಳಿಸಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇಂದಿಲ್ಲಿ ಸೋಮವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ನಾರಾಯಣ ಗುರು ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳÀ 164ನೇ ಜಯಂತ್ಯೋತ್ಸವ ಅದ್ದೂರಿಯಾಗಿ ಆಚರಿಸಿದ್ದು, ಬಿಲ್ಲವರ ಭವನದ ನಾರಾಯಣ ಗುರು ಸಭಾಗೃಹದಲ್ಲಿ ನಡೆಸಲ್ಪಟ್ಟ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಅನುಗ್ರಹಿಸಿ ಸುವರ್ಣ ಬಾಬಾ ಮಾತನಾಡಿದರು.

ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ ಅವರ ಮಾರ್ಗದರ್ಶನ ಹಾಗೂ ಅಸೋಸಿಯೇಶನ್ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಶ್ರೀಮತಿ ಶಾರದಾ ಭಾಸ್ಕರ್ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ಕಲ್ಯಾಣ್ ಇದರ ಅಧ್ಯಕ್ಷ ಎಕ್ಕಾರು ನಡ್ಯೋಡಿಗುತ್ತು ಭಾಸ್ಕರ್ ಎಸ್. ಶೆಟ್ಟಿ, ಗೌರವ ಅತಿಥಿüಗಳಾಗಿ ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಅವೆನ್ಯೂ ಹೊಟೇಲು ಸಮೂಹದ ನಿರ್ದೇಶಕ ಬೋಳ ರಘುರಾಮ ಕೆ.ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಭಂಡಾರಿ ಮಹಾ ಮಂಡಲ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೃಷ್ಣಕುಮಾರ್ ಎಲ್. ಬಂಗೇರ, ಭಾರತ್ ಬ್ಯಾಂಕ್ ಲಿಮಿಟೆ ಡ್‍ನ ನಿರ್ದೇಶಕ ಗಂಗಾಧರ್ ಜೆ.ಪೂಜಾರಿ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಅತಿಥಿü ಅಭ್ಯಾಗತರಾಗಿ ಉಪಸ್ಥಿತರಿದ್ದರು.

ಅಸೋಸಿಯೇಶನ್‍ನ ಉಪಾಧ್ಯಕ್ಷರಾದ ಶಂಕರ ಡಿ.ಪೂಜಾರಿ, ಹರೀಶ್ ಜಿ.ಅವಿೂನ್, ದಯಾನಂದ್ ಆರ್. ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್, ಯುವಾಭ್ಯುದಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎಂ.ಕೋಟ್ಯಾನ್, ಮಾಜಿ ಅಧ್ಯಕ್ಷ ನಿತ್ಯಾನಂದ್ ಡಿ. ಕೋಟ್ಯಾನ್, ಭಾರತ್ ಬ್ಯಾಂಕ್‍ನ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ಸೇವಾದಳದ ದಳಪತಿ ಗಣೇಶ್ ಜಿ.ಪೂಜಾರಿ ವೇದಿಕೆಯಲ್ಲಿದ್ದು ಅಸೋಸಿಯೇಶನ್‍ನ ಸಂಚಾಲಿತ ಸೇವಾದಳದಲ್ಲಿ ಇಪ್ಪತೈದು ವರ್ಷಗಳಿಗೂ ಮಿಕ್ಕಿ ಶಿಸ್ತಿನ ಸಿಪಾಯಿಗಳಾಗಿ ನಿಸ್ವಾರ್ಥ ಸೇವೆಗೈದ ಪ್ರಮೋದ್ ಶೀನ ಪೂಜಾರಿ (ಪತ್ನಿ ದಯಾವತಿ ಎಸ್. ಪೂಜಾರಿ),ನಾಗೇಶ್ ಪಿ.ಅವಿೂನ್ (ಪತ್ನಿ ಪ್ರಭಾ ಎನ್.ಅವಿೂನ್, ಪುತ್ರಿ ದಿವ್ಯ ಅವಿೂನ್), ರಮೇಶ್ ಎ.ಕುಂದರ್ (ಪತ್ನಿ ವಿದ್ಯಾ ಆರ್.ಕುಂದರ್), ರುಕ್ಮಯ ಜಿ.ಪೂಜಾರಿ (ಪತ್ನಿ ಸುಜಾತಾ ಆರ್.ಪೂಜಾರಿ), ರಘುನಾಥ್ ಪೂಜಾರಿ (ಪತ್ನಿ ಸುರೇಖಾ ಆರ್.ಪೂಜಾರಿ), ವಾಮನ್ ಸಾಲ್ಯಾನ್ (ಪತ್ನಿ ವಿದ್ಯಾ ವಿ.ಸಾಲ್ಯಾನ್, ಮಕ್ಕಳಾದ ಕು| ಸ್ವಾತಿ ಮತ್ತು ಮಾ| ಯಶ್), ರವಿ ಶೇಖರ್ ಸುವರ್ಣ (ಪತ್ನಿ ಶಾಲಿನಿ ಆರ್.ಸುವರ್ಣ) ಪರಿವಾರವನ್ನೊಳಗೊಂಡು ಶಾಲು ಹೊದಿಸಿ ಫಲಪುಷ್ಪ, ಸನ್ಮಾನಪತ್ರ, ಸ್ಮರಣಿಕೆ, ಅಭಿನಂದನಾ ಪತ್ರ ಪ್ರದಾನಿಸಿ ಸನ್ಮಾನಿಸಿ ಅಭಿನಂದಿಸಿದರು.

ಚಂದ್ರಹಾಸ ಶೆಟ್ಟಿ ಮಾತನಾಡಿ ಜಯ ಸಿ.ಸುವರ್ಣರು ನಮಗೆಲ್ಲಾ ಗುರು ಸಮಾನರು. ಅವರು ನಮ್ಮೆಲ್ಲರ ಬದುಕಿನ ಪರಿವರ್ತನೆಯ ಹರಿಕಾರರು. ಬಾಂಧವ್ಯದ ಸಮನ್ವಯಕರಾಗಿ ನಮ್ಮೆಲ್ಲರನ್ನು ಈ ಮಟ್ಟಕ್ಕೆ ಬೆಳೆಸಿದವರು. ಬುದ್ಧಿಜೀವಿಗಳಾದ ಮಾನವನಿಗೆ ಮನುಷ್ಯ ಎನ್ನುವುದೇ ಮುಖ್ಯ. ನಾರಾಯಣ ಗುರುಗಳ ಅಂತಹ ತತ್ವಾದರ್ಶಗಳನ್ನು ನಾವೂ ಪಾಲಿಸಿ ಮುಂದಿನ ಬಾಳನ್ನು ಹಸನ್ಮುಖಗೊಳಿಸೋಣ ಎಂದರು.

ಜಯ ಸುವರ್ಣ ಸಂಘಟನಾ ಚಾತುರ್ಯತೆ ಎಲ್ಲರಿಗೂ ಮಾದರಿ. ಸುವರ್ಣರು ಮತ್ತು ಚಂದ್ರಶೇಖರ ಪೂಜಾರಿ ಅವರು ನಮ್ಮನ್ನು ಶಿವಗಿರಿಗೆ ಕರೆದೊಯ್ದ ನಾರಾಯಣ ಗುರುಗಳ ಅನುಗ್ರಹಕ್ಕೆ ಪ್ರೇರೆಪಿಸಿದವರು. ಗುರುಗಳ ಆಶಯದಂತೆ ನಾವಿಂದು ಹಲವು ತಾಯಿಯ ಮಕ್ಕಳು ಈ ವೇದಿಕೆಯನ್ನು ಅಲಂಕರಿಸುವಂತಾಗಿದೆ. ಇದು ಸಾಮರಸ್ಯ ಸಾರುವ ಸಹೋದರತ್ವದ ವೇದಿಕೆಯೇ ಸರಿ ಎಂದು ಭಾಸ್ಕರ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಆಥಿರ್üಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕವಾಗಿ ಮುನ್ನಡೆಯಲು ಸಂಘಟನೆ ಪ್ರಾಮುಖ್ಯವಾದುದು. ಆ ಪಯ್ಕಿ ಸಹೃದಯಿಗಳಾದ ಬಿಲ್ಲವರ ಕೊಡುಗೆ ಅನುಪಮ. ಈ ಎಲ್ಲಾ ವಿಧಗಳಿಂದ ಅಖಂಡ ಸಮಾಜದ ಉನ್ನತೀಕರಣಕ್ಕೆ ಬಿಲ್ಲವರ ಕೊಡುಗೆ ಅನನ್ಯ. ಗುರು ನಾರಾಯಣರು ಜ್ಞಾನದ ದಾರಿದೀಪವಾಗಿದ್ದು ಅವರ ತತ್ವಾದರ್ಶಗಳನ್ನು ಮೈಗೂಡಿಸಿ ಮುನ್ನಡೆಯುವ ಬಿಲ್ಲವರು ಸದಾ ಭಜನೆಯೊಂದಿಗೆ ಗುರುಗಳ ಸ್ಮರಣೆಗೈದು ಈ ಮಹಾನಗರಕ್ಕೆ ಒಳಿತಾಗುವಂತೆ ಮಾಡುತ್ತಿದ್ದಾರೆ. ಗುರುಬಲ ಮತ್ತು ದೈವ-ದೇವರಬಲ ವಿನಃ ಎಲ್ಲವೂ ಅಸಾಧ್ಯ. ಆದುದರಿಂದ ಜೀವನಕ್ಕೆ ಗುರುಬಲವೇ ಧೀಶಕ್ತಿ ಆಗಿರುತ್ತದೆ.ಇದನ್ನೆಲ್ಲಾ ನಾವು ರೂಢಿಸಿ ಮುನ್ನಡೆದಾಗ ಬಾಳು ಹಸನಾಗುವುದು ಎಂದÀು ಸುರೇಶ್ ಭಾಂಡಾರಿ ಆಶಯ ವ್ಯಕ್ತಪಡಿಸಿದರು.


ಬಾಂಧವ್ಯತ್ವದ ಬಾಳಿಗೆ ಬಿಲ್ಲವರು ಪ್ರೇರಕರು. ಸರ್ವರಲ್ಲೂ ಪ್ರೀತಿ ಭಾಂದÀವ್ಯವನ್ನು ಬೆಳೆಸಿ ಉಳಿಸಿ ಮುನ್ನಡೆಗೆ ಸರ್ವರಿಗೂ ಆದರನೀಯರು. ಭಜನೆಯಿಂದ ದೇವಶಕ್ತಿ ಉಧ್ಭವಿಸುತ್ತದೆ. ಇಂತಹ ಭಕ್ತಿ ಪ್ರಧಾನ ಭಜನೆಯ ನ್ನು ದಿನಾ ಬಿಲ್ಲವರ ಭವನದಲ್ಲಿ ನಡೆಸಿ ಸಮಗ್ರ ಸಮಾಜಕ್ಕೆ ಆರೋಗ್ಯ, ನೆಮ್ಮದಿಯ ಜೀವನ ದಯಪಾಲಿಸುವ ನಿಮ್ಮಿಂದ ಇನ್ನಷ್ಟು ಸಮಾಜ ಸೇವೆ ನಡೆಯಲಿ ಎಂದು ಧರ್ಮಪಾಲ್ ದೇವಾಡಿಗ ಆಶಯ ವ್ಯಕ್ತಪಡಿಸಿದರು.

ಬಿಲ್ಲವರು ಇಂದಿಲ್ಲಿ ಮೊಗವೀರರಿಗೂ ದೇವರ ಅನುಗ್ರಹಕ್ಕೆ ಅನುಕೂಲ ಮಾಡಿ ಕೊಟ್ಟಿದ್ದೀರಿ. ಎಲ್ಲಾ ಧರ್ಮಗಳ ಮೂಲಗ್ರಂಥ ಒಂದೇ ಆಗಿದೆ. ಆದುದರಿಂದ ಮನುಕುಲಕ್ಕೆ ಜಾತಿ ಮತದ ಧರ್ಮದ ಪರಿಧಿ ಇರಕೂಡದು. ಹುಟ್ಟು ಸಾವು ನಮ್ಮ ಕೈಯಲಿಲ್ಲ. ಅದರೆ ಆ ಮಧ್ಯೆಯ ಜೀವನವಂತೂ ಪ್ರತೀಯೋರ್ವರ ಕೈಯಲ್ಲಿದೆ. ಅದನ್ನು ಧರ್ಮ ನಿಷ್ಠುರವಾಗಿ ಬಾಳುವುದೇ ಮಾನವ ಜೀವನ. ಅದಕ್ಕಾಗಿ ದೇವರನ್ನು ಮರೆಯುವ ಈ ಯುಗದ ನವಪೀಲಿಗೆಯಲ್ಲಿ ದೇವರ ಭಕ್ತಿ ಶಕ್ತಿಯ ಕೃಪೆ ಮೂಡಿಸಬೇಕುಎಂದು ಕೆ.ಎಲ್ ಬಂಗೇರ ಸ್ತೋತ್ರದೊಂದಿಗೆ ಶುಭಾರೈಸಿದರು.

ಪಂಚಂ ಕಾರ್ಯಸಿದ್ಧಿ ಎಂದಂತೆ ಐದಾರು ತಾಯಿಯ ಮಕ್ಕಳು ಒಂದು ವೆÉೀದಿಕೆಯಲ್ಲಿ ಮೆರೆಯುತ್ತಿರುವುದಕ್ಕೆ ನಾರಾಯಣ ಗುರುಗಳ ತತ್ವವೇ ಇದಕ್ಕೆ ಸಾಕ್ಷಿ. ಸಮಾಜದಲ್ಲಿ ಸಮಾನವಾಗಿ ಬಾಳಿದಾಗ ಅದೇ ಮೊದಲ ನೆಮ್ಮದಿಯ ಜೀವ. ಬಿಲ್ಲವರಾದ ನಾವೂ ಸುಶಿಕ್ಷತರಾಗಿ ಎಲ್ಲಾ ಸಮುದಾಯಗಳ ಜೊತೆಗೆ ಸಾಮರಸ್ಯವಾಗಿ ಮುನ್ನಡೆಯೋಣ ಎಂದÀು ಎನ್.ಟಿ ಪೂಜಾರಿ ತಿಳಿಸಿದರು.

ನಮ್ಮಲ್ಲಿನ ಯಾವುದೇ ಸಮಾಜಗಳು ಬೇರೆಬೇರೆಯಲ್ಲ. ಪ್ರತಿಯೊಬ್ಬರೂ ಸಮಾನರು. ಸಮಾಜದಲ್ಲಿ ಸಮಾನರಾಗಿ ಸಾಗಿದಾಗಲೇ ಸರ್ವರ ಸರ್ವಾಂಗೀಣ ಬೆಳವಣಿಗೆ, ಉದ್ಧಾರ ಸಾಧ್ಯ. ಆದುದರಿಂದ ನಾವೆಲ್ಲರೂ ಏಕತೆಯಿಂದ ಒಗ್ಗೂಡಿ ಸಮಾಜವನ್ನು ಕಟ್ಟಿಬೆಳೆಸೋಣ ಎಂದÀು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಚಂದ್ರಶೇಖರ್ ಎಸ್.ಪೂಜಾರಿ ತಿಳಿಸಿದರು.

ಜಯಂತ್ಯೋತ್ಸವ ಪ್ರಯುಕ್ತ ಕಳೆದ ಆದಿತ್ಯವಾರ ಮುಂಜಾನೆಯಿಂದ ಪ್ರಭಾಕರ ಸಸಿಹಿತ್ಲು ಮತ್ತು ತಂಡದ ನಿರ್ವಾಹಣೆಯಲ್ಲಿ ನಿರಂತರ 24 ಗಂಟೆಗಳ ಓಂ ನಮೋ ನಾರಾಯಣಾಯ ನಮಃ ಜಪಯಜ್ಞ ನಡೆಸಿದ್ದು ಇಂದು ಮುಂಜಾನೆ ಜಪಯಜ್ಞ ಸಂಪನ್ನಗೊಳಿಸಲಾಯಿತು. ಭವನದ ಮಂದಿರದಲ್ಲಿ ಪ್ರತಿಷ್ಠಾಪಿತ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆ ಪುಷ್ಪಾಲಂಕಾರಗೊಳಿಸಿ ಧನಂಜಯ ಶಾಂತಿ ತನ್ನ ಪೌರೋಹಿತ್ಯದಲ್ಲಿ ಕಲಾಶಾಭಿಷೇಕ, ಪೂಜೆ ನೆರವೇರಿಸಿ ಮಹಾರತಿಗೈದರು. ರವೀಂದ್ರ ಶಾಂತಿ, ಗಣೇಶ್ ಪೂಜಾರಿ, ಸುಭಾಶ್ಚಂದ್ರ ಮಾಬಿಯಾನ್, ಸಂತೋಷ್ ಕೆ.ಪೂಜಾರಿ ನೆರೆದ ಸದ್ಭಕ್ತರು, ಗುರುಭಕ್ತರಿಗೆ ತೀರ್ಥ ಪ್ರಸಾದ ವಿತರಿಸಿ ಹರಸಿದರು.

ಜಗನ್ನಾಥ್ ಅವಿೂನ್, ಅಶೋಕ್ ಸಸಿಹಿತ್ಲು, ಸಿ.ಆರ್ ಮೂಲ್ಕಿ, ಜಪಯಜ್ಞ ನಡೆಸಿದ ಪ್ರಭಾಕರ ಸಸಿಹಿತ್ಲು, ವಿವಿಧ ಸೇವೆಗೈದ ಗಣ್ಯರನ್ನೂ ಅಧ್ಯಕ್ಷರು ಪುಷ್ಪಗುಪ್ಚವನ್ನಿತ್ತು ಗೌರವಿಸಿದರು. ಭಾರತ್ ಬ್ಯಾಂಕ್‍ನ ನಿರ್ದೇಶಕರು, ಉನ್ನತಾಧಿಕಾರಿಗಳು, ಅಸೋಸಿಯೇಶನ್‍ನ ಎಲ್ಲಾ ಸ್ಥಳೀಯ ಸಮಿತಿಗಳ ಮುಖ್ಯಸ್ಥರು, ಪದಾಧಿಕಾರಿ, ಸದಸ್ಯರು ಸೇರಿದಂತೆ ಕಿಕ್ಕಿರಿದು ನೆರೆದ ಗುರುಭಕ್ತರು ಹರ್ಷೋಲ್ಲಾಸದಿಂದ ಗುರುವರ್ಯರ ಜಯಂತ್ಯೋತ್ಸವ ಸಂಭ್ರಮಿಸಿದರು.

ಸಾಮಾಜಿಕ ಮತ್ತು ಧಾರ್ಮಿಕ ಸಮಿತಿ ಕಾರ್ಯಧ್ಯಕ್ಷ ಮೋಹನ್‍ದಾಸ್ ಜಿ.ಪೂಜಾರಿ ಸ್ವಾಗತಿಸಿದರು. ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್ ಪ್ರಸ್ತಾವನೆಗೈದು, ಅತಿಥಿüಗಳು ಮತ್ತು ಸನ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಜಿ.ಸಾಲ್ಯಾನ್, ಧರ್ಮೇಶ್ ಸಾಲ್ಯಾನ್, ಕೇಶವ ಕೆ.ಕೋಟ್ಯಾನ್ ಅತಿಥಿüಗಳನ್ನು ಪರಿಚಯಿಸಿದರು. ಧಾರ್ಮಿಕ ಸಮಿತಿ ಕಾರ್ಯದರ್ಶಿ ರವೀಂದ್ರ ಎ.ಅವಿೂನ್ (ಶಾಂತಿ) ಧನ್ಯವದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here