Friday 26th, April 2024
canara news

ವಿಕಲಚೇತನ ವಿದ್ಯಾರ್ಥಿಗಳಿಗೆ ನೆರವಾದ ಜಮಾಅತೆ ಇಸ್ಲಾಮೀ ಹಿಂದ್

Published On : 03 Sep 2018   |  Reported By : media release


ಮಣಿಪಾಲ ಸೆ.2 : ಸರಳೇ ಬೆಟ್ಟು ವಾರ್ಡಿನ ಗಣೇಶಬಾಗ್ ನಿವಾಸಿ ಪ್ರಮೀಳಾ ಪೂಜಾರಿ ಎಂಬವರ ಮಕ್ಕಳಾದ ಧನುಷ್(19) ಮತ್ತು ದರ್ಶನ್(16) ಎಂಬ ಸಹೋದರರು ವಿಕಲಚೇತನವಾಗಿದ್ದರು. ಧನುಷ್ ಎಸ್ ಎಸ್ ಎಲ್ ಸಿ ಮುಗಿಸಿ ಮಣಿಪಾಲ ಎಮ್.ಐ.ಟಿಯಲ್ಲಿ ಪ್ರಥಮ ಡಿಪ್ಲೊಮೋ ಕಂಪ್ಯೂಟರ್ ಸಯನ್ಸ್ ಕಲಿಯುತ್ತಿದ್ದು ಹಾಗೂ ದರ್ಶನ್ ಮಣಿಪಾಲ ಜೂ. ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶಿಕ್ಷಣ ಮುಂದುವರಿಸಲು ವಿಕಲಚೇತನವು ಅಡೆಚಣೆಯಾಗಿತ್ತು.

ಪ್ರಮೀಳಾ ಪೂಜಾರಿಯವರು ಎರಡೂ ಮಕ್ಕಳನ್ನು ಮಣಿಪಾಲದ ಆಸ್ಪತ್ರೆಯಲ್ಲಿ ವೈದ್ಯರ ಪರಿಕ್ಷೆಗೆ ಒಳಪಡಿಸಿದ್ದರು. ಅವರಿಗೆ ಕಾಯಿಲೆ ಇದೆ ಎಂಬುದು ಪತ್ತೆಯಾಗಿತ್ತು.

ಸಾಕಷ್ಟು ಚಿಕಿತ್ಸೆ ನೀಡಿದ್ದರೂ ಈವರೆಗೆ ಗುಣಮುಖರಾಗಿಲ್ಲ. ಇದೀಗ ಮಕ್ಕಳು ಇತರರ ಸಹಾಯದಿಂದಲೇ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ.

ಈ ಕುಟುಂಬವು ಸರಕಾರದಿಂದ ಮಂಜೂರಾದ 660 ಚದರ ಅಡಿಯ ಮನೆಯಲ್ಲಿ ವಾಸವಾಗಿದೆ. ಮಕ್ಕಳನ್ನು ಕಾಲು ದಾರಿಯಲ್ಲಿ ಹೊತ್ತುಕೊಂಡೇ ಗುಡ್ಡವೇರಬೇಕಾದ ಇವರಿಗೆ ಫೋಲ್ಡಿಂಗ್ ವೀಃಲ್ ಚೇರ್‍ನ ಅಗತ್ಯವಿತ್ತು. ಪ್ರತಿಭಾವಂತರಾಗಿರುವ ಇವರು ಮನೆಯಲ್ಲೇ ಕುಳಿತು ಕಂಪ್ಯೂಟರಿನಲ್ಲಿ ಉದ್ಯೊಗ ಮಾಡುವ ಇರಾದೆ ಹೊಂದಿದ್ದರಿಂದ ಕಂಪ್ಯೂಟರಿನ ಅಗತ್ಯವೂ ಇತ್ತು. ಇದನ್ನು ಮನಗಂಡ ಜಮಾಅತೆ ಇಸ್ಲಾಮೀ ಹಿಂದ್ ಲ್ಯಾಪ್ ಟಾಪ್ ಹಾಗೂ ವೀಃಲ್ ಚೇರ್‍ಅನ್ನು ಹಸ್ತಾಂತರಿಸಲಾಯಿತು. ಅವರ ಮನೆಯಲ್ಲೇ ನಡೆದ ಈ ಸರಳ ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಜಿಲ್ಲಾಧ್ಯಕ್ಷರಾದ ಶಬ್ಬೀರ್ ಮಲ್ಪೆ, ಸೋಮಪ್ಪ ಕೋಟ್ಯಾನ್, ಸರಳಬೆಟ್ಟು ಮಣಿಪಾಲ, ಇದ್ರಿಸ್ ಹೂಡೆ, ಉಡುಪಿ ಜಮಾಅತ್‍ನ ಹಂಗಾಮಿ ಅಧ್ಯಕ್ಷ ಅಬ್ದುಲ್ ಅಝೀಝ್ ಆದಿಉಡುಪಿ, ವೆಲ್ಫೇರ್ ಪಾರ್ಟಿಯ ಅಬ್ದುಲ್ ಅಝೀಝ್ ಉದ್ಯಾವರ, ರಿಯಾಝ್ ಅಹ್ಮದ್ ಕುಕ್ಕಿಕಟ್ಟೆ, ಫೈರೋಜ್ ಮನ್ನಾ, ನಿಸಾರ್ ಅಹಮದ್, ಎಸ್.ಐ.ಓ ಉಡುಪಿ ಅಧ್ಯಕ್ಷ ಫಾಝಿಲ್, ಅಬ್ದುಲ್ ಸಮೀ ಉಡುಪಿ ಇವರು ಉಪಸ್ಥಿತರಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here