Friday 26th, April 2024
canara news

ಕನ್ನಡ ವಿಭಾಗ ಮುಂಬಯಿ ವಿವಿಯಿಂದ ರಾಷ್ಟ್ರಕವಿ ಕುವೆಂಪು ದತ್ತಿ ಉಪನ್ಯಾಸ ಮಾಲಿಕೆ

Published On : 10 Sep 2018   |  Reported By : Rons Bantwal


ಮುಂಬಯಿಯಲ್ಲಿ ಕನ್ನಡದ ಕೆಲಸವನ್ನು ಕಂಡು ತುಂಬಾ ಖುಷಿಯಾಗಿದೆ: ಅನು ಬೆಳ್ಳೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.10: ಮುಂಬಯಿಯಲ್ಲಿ ಕನ್ನಡದ ಕೆಲಸವನ್ನು ಕಂಡು ತುಂಬಾ ಖುಷಿಯಾಗಿದೆ. ಇಲ್ಲಿ ನಿರಂತರವಾಗಿ ಸಾಹಿತ್ಯಿಕ ಕಾರ್ಯಗಳು ನೆರವೇರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್ ಉಪಾಧ್ಯ ಅವರ ಕೃತಿಯನ್ನು ಲೋಕಾರ್ಪಣೆಗೊಳಿಸುವ ಸದವಕಾಶ ನನ್ನ ಪಾಲಿಗೆ ದೊರೆತಿರುವುದು ನನ್ನ ಪಾಲಿಗೆ ಸಂತಸದ ವಿಷಯವಾಗಿದೆ. ಸಂಶೋಧನ ಕೃತಿ ಎಂದರೆ ಅದು ಇರುವಿಕೆಯ ಸತ್ಯವನ್ನು ವಿಶ್ಲೇಷಿಸುವುದು. ಬಹಳ ಶ್ರಮವನ್ನು ಬಯಸುವ ಈ ಕೃತಿ ಕನ್ನಡ ಸಾಹಿತ್ಯ ಲೋಕಕ್ಕೆ ಅನುಪಮವಾದ ಕೊಡುಗೆ ಎಂದು ಕೃತಿ ಬಿಡುಗಡೆಗೊಳಿಸಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಘಟಿಕೋತ್ಸವದಲ್ಲಿ ಡಾ| ಜೀವಿ ಕುಲಕರ್ಣಿ ಬದುಕು ಬರಹದ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ ಪದವಿ ಪಡೆದ ಸುರೇಖಾ ನಾಯಕ್ ಅವರನ್ನು ಹಾಗೂ ಡಾ.ಜಿ.ಎಂ.ಹೆಗಡೆ ಅವರ ವಿಮರ್ಶಾ ಕೃತಿಗಳ ಕುರಿತು ಅಧ್ಯಯನ ನಡೆಸಿ ಎಂ.ಫಿಲ್ ಪದವಿ ಪಡೆದ ರೂಪಾ ಸಂಗೊಳಿ ಅವರನ್ನು ಪದಕ, ಶಾಲು ಗ್ರಂಥಗೌರವದೊಂದಿಗೆ ಸಮ್ಮಾನಿಸಿ ಮಾತನಾಡಿದರು. ಅವರು ಸಂಶೋಧನೆಗೆ ದೀರ್ಘ ಪರಂಪರೆಯಿದೆ. ಕನ್ನಡ ಬರಹಕ್ಕೆ ಅನೇಕ ಮೊದಲುಗಳು ಮುಂಬಯಿಲ್ಲಾಗಿರುವುದು ವಿಶೇಷ. ಇಲ್ಲಿನ ಲೇಖಕ ಲೇಖಕಿಯರು ಬಹುಭಾಷಾ ಲೋಕದಲ್ಲಿ ಪುಟ್ಟ ಕನ್ನಡ ಜಗತ್ತನ್ನು ಭಾವುಕರಾಗಿ ಕಟ್ಟಿಕೊಟ್ಟಿದ್ದಾರೆ. ಪುಸ್ತಕಗಳಿಗೆ ನವಿರೇಳುವ ಮನಸುಗಳು ಎಂದು ಆಳ್ವಾ'ಸ್ ಕಾಲೇಜು, ಮೂಡಬಿದಿರೆ ಇದರ ಪ್ರಾಧ್ಯಾಪಕ, ಸಾಹಿತಿ ಅನು ಬೆಳ್ಳೆ ತಿಳಿಸಿದರು.

ಸಾಂತಾಕ್ರೂಜ್ ಪೂರ್ವದಲ್ಲಿನ ವಿದ್ಯಾನಗರಿಯ ಮರಾಠಿ ಭಾಷಾ ಭವನದಲ್ಲಿ ಕವಿವರ್ಯ ಕುಸುಮಾಗ್ರಜದಲ್ಲಿ ಇಂದಿಲ್ಲಿ ಶನಿವಾರ ಪೂರ್ವಾಹ್ನ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯವು ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಕೃತಿಗಳ ಬಿಡುಗಡೆ ಮತ್ತು ಅಭಿನಂದನ ಕಾರ್ಯಕ್ರಮ, ರಾಷ್ಟ್ರಕವಿ ಕುವೆಂಪು ದತ್ತಿ ಉಪನ್ಯಾಸ ಮಾಲಿಕೆ ನೆರವೇರಿಸಿತು.

ಪ್ರಾಧ್ಯಾಪಕಿ ಗೀತಾ ವಸಂತ್, ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಥಿರ್üಕ ತಜ್ಞ ಡಾ| ಆರ್.ಕೆ.ಶೆಟ್ಟಿ, ಮಿತ್ರವೃಂದ ಮುಲುಂಡ್ ಇದರ ಮುಖ್ಯಸ್ಥರುಗಳಾದ ಎಸ್.ಕೆ ಸುಂದರ್ ಮತ್ತು ಎ.ನರಸಿಂಹ ಇವರ ಉಪಸ್ಥಿತಿಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಡಾ| ಜಿ.ಎನ್ ಉಪಾಧ್ಯ ಅವರ `ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕೃತಿಕ ಮಹತ್ವ' ಕೃತಿಯನ್ನು ಅನು ಬೆಳ್ಳೆ ಬಿಡುಗಡೆ ಗೊಳಿಸಿ ಮಾತನಾಡಿದರು.

ಮಧ್ಯಾಂತರದಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆಸಲಾಗಿದ್ದು, ಮುಂಬಯಿ ವಿವಿ ಕನ್ನಡ ವಿಭಾಗದಿಂದ ಪಿಹೆಚ್‍ಡಿ ಸನದು ಪ್ರಾಪ್ತಿಸಿದ ಸುರೇಖಾ ನಾಯಕ್ (ರಾಧಾಕೃಷ್ಣ ನಾಯಕ್ ಅವರನ್ನೊಳಗೊಂಡು) ಮತ್ತು ರೂಪಾ ಸಂಗೊಳ್ಳಿ ಅವರಿಗೆ ಗೀತಾ ವಸಂತ್ ಅವರು ಶಾಲು ಹೊದಿಸಿ ಸ್ವರ್ಣಪದಕ ಧರಿಸಿ ಗೌರವಿಸಿದರು.

ನಾಡಿನ ಹೆಸರಾಂತ ಕವಿ, ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ| ದೊಡ್ಡರಂಗೇ ಗೌಡ ಬೆಂಗಳೂರು ಅವರು `ನವೋದಯ ಕನ್ನಡ ಕಾವ್ಯ ಮತ್ತು ನಾನು' ವಿಚಾರವಾಗಿ ಮಾತನಾಡಿ ಸ್ವಸ್ಥ ಸಾಹಿತ್ಯದ ವಾತಾವರಣ ಮುಂಬಯಿಯಲ್ಲಿದೆ. ಆದುದರಿಂದ ಕನ್ನಡ ವಿಭಾಗದ ಸೇವೆ ಅನುಪಮ. ಮಾನವ ಲೋಕದಲ್ಲಿ ಕುವೆಂಪು ಆದರ್ಶ ವ್ಯಕ್ತಿ ಆಗಿದ್ದಾರೆ. ಕನ್ನಡ ನವೋದಯದ ಅಂತರಂಗದಲ್ಲಿ ಅಂತರ್ಗವಾಗಿದ್ದಾರೆ. ಇವರ ಓದುಗ ವರ್ಗವೇ ಭಿನ್ನವಾದುದು. ನಾನೂ ಜಾನಪದ ಗೀತೆಗಳಿಗೆ ಪ್ರಭಾವಿತನಾಗಿ ಈ ಮಟ್ಟಕ್ಕೆ ಬೆಳೆದೆ ಎನ್ನುತ್ತಾ ಕನ್ನಡ ವಿಭಾಗಕ್ಕೆ ತಮ್ಮ ಪರಿವಾರದ ಪರವಾಗಿ 10ನೇ ದತ್ತಿಯನ್ನು ಘೋಷಿಸಿದರು.
ಹೆಸರಾಂತ ವಾಗ್ಮಿ ವೈ.ವಿ ಗುಂಡೂರಾವ್ ಅವರು `ಕನ್ನಡ ಸಾಹಿತ್ಯದಲ್ಲಿ ಹಾಸ್ಯ' ವಿಷಯವಾಗಿ ಉಪನ್ಯಾಸಗೈದÀು ನಗು, ಅಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಮಾನವಾಗಿ ಸ್ವೀಕರಿಸಬೇಕು. Humour is not a joke. Humour is a highest intelectual takent.. ಅದಕ್ಕೆ ಅದರದ್ದೇ ಆದ ಪರಿಭಾಷೆಯಿರುತ್ತದೆ. ನಾವು ಮಾತನಾಡುವಾಗ ಸತ್ಯ ಹೇಳಿದರೆ ಅದನ್ನು ಜೀರ್ಣಿಸೋದು ಕಷ್ಟ. ಯಾಕೆಂದರೆ ಸತ್ಯ ರಂಜಿಸುತ್ತದೆ. ಸುಳ್ಳು ಅಂಜಿಸುತ್ತದೆ. ಸತ್ಯವನ್ನು ಪ್ರಿಯವಾಗುವ ಹಾಗೆ ಹೇಳುವ ಪರಿಯನ್ನು ಬೀಚಿಯವರು ಸೊಗಸಾಗಿ ಹೇಳಿದ್ದಾರೆ ಎಂದು ಕೈಲಾಸಂ, ಬೀಚಿ ಮೊದಲಾದವರ ಹಾಸ್ಯದ ಪರಿ, ಸ್ವತ: ಗುಂಡೂರಾವ್ ಅವರ ಅಣಕು ಹಾಡುಗಳನ್ನು ಹಾಡಿ ಸಭಿಕರನ್ನು ರಂಜಿಸಿದರು.

ಡಾ| ಆರ್.ಕೆ.ಶೆಟ್ಟಿ ಮಾತನಾಡಿ ಅಂತಾರಾಷ್ಟೀಯ ಮಟ್ಟದಲ್ಲಿ ಸುಮಾರು 45 ದೇಶಗಳನ್ನು ಸುತ್ತಿ ಬಂದವನು ನಾನು. ಎಲ್ಲಿ ಹೋದರೂ ನಮ್ಮ ಭಾರತ ದೇಶಕ್ಕೆ ಸಿಗುವ ಮರ್ಯಾದೆ ಗೌರವ ಅದು ನಮ್ಮ ಸಾಹಿತ್ಯ ಸಂಸ್ಕೃತಿಯಿಂದ. ನಮ್ಮ ಆಚಾರ ವಿಚಾರಗಳಿಂದ. ಇಂದು ಈ ವೇದಿಕೆಯಲ್ಲಿ ಸಾಹಿತ್ಯದ ಘಟಾನುಘಟಿಗಳ ನಡುವೆ ಕುಳಿತುಕೊಳ್ಳುವ ಭಾಗ್ಯ ದೊರೆತಿರುವುದು ಮಾತ್ರವಲ್ಲ ಮತ್ತೆ ಶಾಲಾ ಕಾಲೇಜಿನ ದಿನಗಳ ನೆನಪುಗಳು ಮರುಕಳಿಸಿದವು. ಡಾ.ದೊಡ್ಡರಂಗೇಗೌಡರ ಹಾಹೂ ಇತರ ನನ್ನ ಮೆಚ್ಚಿನ ಹಾಡುಗಳನ್ನು ಮತ್ತೆ ಮೆಲುಕುಹಾಕುವಂತಾಯಿತು. ನನ್ನ ಬಿಡುವಿಲ್ಲದ ಕೆಲಸಗಳ ಮೇಲೆ ಇದನ್ನೆಲ್ಲ ಎಲ್ಲೋ ಮರೆಯುತ್ತಿದ್ದೇನೆಯೋ ಎಂಬ ನೋವು ಕೂಡಾ ಕಾಡಿತು. ಈ ಸಾಹಿತ್ಯ ಸಂಸರ್ಗದಿಂದ ಆನಂದತುಂದಿಲನಾಗಿದ್ದೇನೆ ಎಂದು ಅವರು ಹರ್ಷ ವ್ಯಕ್ತ ಪಡಿಸಿದರು.

ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳು ಸಹೋದರತ್ವವುಳ್ಳವು. ಮಹಾರಾಷ್ಟ್ರದ ಇತಿಹಾಸ ಚಿಕ್ಕದು ಎಂದೆಣಿಸಿದರೂ ಆದರ ಭೌಗೊಳಿಕ ವಿಸ್ತಾರ ಬಹಳ ದೊಡ್ಡದು. ಉಭಯ ರಾಜ್ಯಗಳಲ್ಲಿ ಕನ್ನಡದ ಸಾವಿರಾರು ಶಾಸನಗಳಿವೆ. ಪ್ರಸಕ್ತ ಜನರಲ್ಲಿ ಇತಿಹಾಸದಲ್ಲಿ ತೀವ್ರ ಅವಜ್ಞ ತರವಲ್ಲ. ಕಾರಣ ವರ್ತಮಾನದಲ್ಲಿ ಇತಿಹಾಸಗಳೇ ಬದುಕನ್ನು ಬಿಂಬಿಸುತ್ತವೆ. ಆದುದರಿಂದ ಇತಿಹಾಸದ ಬಗ್ಗೆ ಆಸಕ್ತಿ, ಅಭಿಮಾನ ಪಡಬೇಕು. ಭಾಷೆ ಭಾಷೆಗಳಲ್ಲಿ ಸಂಬಂಧ ಬೆಳೆದಾಗ ಇತಿಹಾಸ ಪೂರಕವಾಗುತ್ತದೆ. ಇದನ್ನೆಲ್ಲಾ ಮೈಗೂದಿಸಬಲ್ಲ ಕನ್ನಡಿಗರು ಹೊಸ ತಲೆಮಾರಿನ ವಾರಿಸÀದಾರರು ಆಗಬಹುದು ಎನ್ನುತ್ತಾ ಡಾ| ಜಿ.ಎನ್ ಉಪಾಧ್ಯ ಕೃತಿಯ ಹಿನ್ನಲೆ ತಿಳಿಸಿದರು.

ಕು| ಶ್ರಾವ್ಯ ಶೆಟ್ಟಿ ಕಾವ್ಯ ವಾಚನಗೈದರು. ಡಾ| ಜಿ.ಎನ್ ಉಪಾಧ್ಯ ಗಣ್ಯರಿಗೆಲ್ಲರಿಗೂ ಶಾಲು ಹೊದಿಸಿ ಗ್ರಂಥಗೌರವ ನೀಡಿ ಗೌರವಿಸಿದರು. ಕನ್ನಡ ಸಹ ಪ್ರಾಧ್ಯಾಪಕ ಡಾ| ಗುರುಸಿದ್ಧಯ್ಯ ಸ್ವಾಮಿ ಅಕ್ಕಲಕೋಟೆ ಕೃತಿ ವಿಮರ್ಶೆಗೈದರು. ನಳಿನಾ ಪ್ರಸಾದ್ ಸ್ವಾಗತಿಸಿ, ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ವಂದಿಸಿದರು. ಆಕಾಶವಾಣಿ ಮುಂಬಯಿ ಕನ್ನಡ ವಿಭಾಗದ ಕಾರ್ಯಕ್ರಮ ನಿರ್ವಹಣಾಧಿಕಾರಿ ಸುಶೀಲಾ ಎಸ್.ದೇವಾಡಿಗ ಇವರ ಮುಂದಾಳುತ್ವದಲ್ಲಿ ಇದೇ ಮೊದಲಿಗೆ ಕನ್ನಡ ಕಾರ್ಯಕ್ರಮವನ್ನು ಆಕಾಶವಾಣಿಗಾಗಿ ಮುದ್ರಿಕರಿಸಲಾಯಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here