Friday 26th, April 2024
canara news

ಚೆಂಬೂರು ಕರ್ನಾಟಕ ಸಂಘದ ವಾರ್ಷಿಕ `ಸಾಹಿತ್ಯ ಸಹವಾಸ 2018-19 ಸಂಭ್ರಮ'

Published On : 24 Dec 2018   |  Reported By : Rons Bantwal


ಮನುಕುಲಕ್ಕೆ ಶಿಕ್ಷಣ ಮಹತ್ವವಾದುದು : ಮನಮೋಹನ್ ಆರ್.ಶೆಟ್ಟಿ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.24. ವಿದ್ಯೆ ಇಲ್ಲದೆ ಮಾನವನು ಬಾಳಲು ಅಸಾಧ್ಯವಾಗಿದೆ. ಆದುದರಿಂದಲೇ ಶಿಕ್ಷಣ ಮನುಕುಲಕ್ಕೆ ಮಹತ್ವವಾದುದು. ಸುಶಿಕ್ಷಿತರಾಗಿ ಜೀವನದಲ್ಲಿ ಸಾಧನೆ ಸಾಧಿಸುವುದರಿಂದ ನಮ್ಮನ್ನೇ ನಾವು ಜಾಗತಿಕವಾಗಿ ಗುರುತಿಸಿ ಕೊಳ್ಳಲು ಸಾಧ್ಯ. ಮನೋರಂಜನೆ ಮಾನವನ ಜೀವನವಾಗಿರುವುದನ್ನು ಅರಿತ ನಾನೂ ಭಿನ್ನವಾದ ಕ್ಷೇತ್ರವಾಗಿಸಿ ಸಿನೆಮಾ ಮತ್ತು ಥಿüೀಮ್ ಪಾರ್ಕ್ ಆಯ್ದುಕೊಂಡೆ. ಅವುಗಳನ್ನು ಕನಸಾಗಿಸಿ ನನಸಾಗಿಸಿ ಈ ಮಟ್ಟವನ್ನೇರಲು ಸಾಧ್ಯವಾಯಿತು. ಆದುದರಿಂದ ಹೊಸತನ್ನು ಅಧ್ಯಯನ ಮಾಡಿ ಇತರರ ಬಾಳಿಗೆ ಅಸರೆಯೂ ಪ್ರೇರಕರಾಗಿರಿ ಎಂದು ಆ್ಯಡ್‍ಲ್ಯಾಬ್ ಮತ್ತು ಇಮ್ಯಾಜಿಕಾ ಸಂಸ್ಥೆಯ ಸಂಸ್ಥಾಪಕ ಹಾಗೂ ಬಾಲಿವುಡ್ ನಿರ್ಮಾಪಕ ಮನಮೋಹನ್ ಆರ್.ಶೆಟ್ಟಿ ತಿಳಿಸಿದರು.

ಚೆಂಬೂರು ಘಾಟ್ಲಾ ಅಲ್ಲಿನ ಸಂಸ್ಥೆಯ ಸಂಕುಲದಲ್ಲಿ ಇಂದಿಲ್ಲಿ ಸಂಜೆ ಚೆಂಬೂರು ಕರ್ನಾಟಕ ಸಂಘ ಇದರ ವಾರ್ಷಿಕ ಸಾಹಿತ್ಯ-ಸಂಸ್ಕೃತಿ, ಸಮ್ಮಾನ ಸಂಭ್ರಮ `ಸಾಹಿತ್ಯ ಸಹವಾಸ-2018-19'ಕಾರ್ಯಕ್ರಮದಲ್ಲಿ ಪ್ರದಾನ ಅಭ್ಯಾಗತರಾಗಿದ್ದು ಸಮಾರಂಭ ಉದ್ಘಾಟಿಸಿ ಮನಮೋಹನ್ ಶೆಟ್ಟಿ ಮಾತನಾಡಿದರು.

ಸಂಘದ ಅಧ್ಯಕ್ಷ ನ್ಯಾಯವಾದಿ ಹೆಚ್.ಕೆ ಸುಧಾಕರ ಅರಾಟೆ ಸಾರಥ್ಯದಲ್ಲಿ ಜರುಗಿದ ಸಮಾರಂಭದಲ್ಲಿ ಗೌರವ ಅತಿಥಿüಯಾಗಿ ವಿಶ್ವಾತ್ ಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆಯ ಕಾರ್ಯಾಧ್ಯಕ್ಷ ಬಿ.ವಿವೇಕ್ ಶೆಟ್ಟಿ ಉಪಸ್ಥಿತರಿದ್ದು ಸಂಘದ ವಾರ್ಷಿಕ ಪ್ರತಿಷ್ಠಿತ `ರಾಷ್ಟ್ರೀಯ ಕನ್ನಡರತ್ನ ಪ್ರಶಸ್ತಿ-2018'ನ್ನು ನಾಡಿನ ಹೆಸರಾಂತ ಕವಿ, ಸಾಹಿತಿ ಪದ್ಮಶ್ರೀ ಡಾ| ಕೆ.ಎಸ್.ನಿಸಾರ್ ಅಹಮದ್ ಅವರಿಗೆ ಪ್ರದಾನಿಸಿ ಗೌರವಿಸಿದರು ಹಾಗೂ ಸಂಘದ `ದಿ| ವೈ.ಜಿ ಶೆಟ್ಟಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ'ಯನ್ನು ನಿವೃತ್ತ ಶಿಕ್ಷಕಿ ಅಂಜಲಿ ಎ.ಶಿಧೋರೆ ಅವರಿಗೆ, `ಸುಬ್ಬಯ್ಯ ಶೆಟ್ಟಿ ದತ್ತಿ' ಪುರಸ್ಕಾರವನ್ನು ಸಮಾಜ ಸೇವಕ ಜಯರಾಮ್ ಶೆಟ್ಟಿ ಅವರಿಗೆ (ಪತ್ನಿ ಲತಾ ಜಯರಾಮ್ ಜೊತೆಗೂಡಿ) ಮತ್ತು ತುಳುವ ಕನ್ನಡಿಗರಿಗಾಗಿ ನೀಡುವ ಮೇರು ಪುರಸ್ಕಾರ `ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಣಾರ್ಥ' ಪ್ರಶಸ್ತಿಯನ್ನು ಉದ್ಯಮಿ ಸುರೇಂದ್ರ ಎ.ಪೂಜಾರಿ (ಸಾಯಿಕೇರ್) ಅವರಿಗೆ ಪ್ರದಾನಿಸಿ ಅಭಿನಂದಿಸಿದರು. ಈಸಂದರ್ಭ ನಿಸಾರ್ ಅಹಮದ್ ಅವರ ಮೊಮ್ಮಗ ಮಾ| ಅಖಿಬ್ ನಿಸಾರ್ ವೇದಿಕೆಯಲ್ಲಿದ್ದರು.

ವಿವೇಕ್ ಶೆಟ್ಟಿ ಮಾತನಾಡಿ ಗ್ಯಾರೇಜ್ ಜಾಗದಿಂದ ಕಾಲೇಜ್ ತನಕದ ಸಂಘದ ಶೈಕ್ಷಣಿಕ ಸಾಧನೆ ಮತ್ತು ಬೆಳವಣಿಗೆ ಶ್ರೇಷ್ಠವಾದುದು. ಸದ್ಯ ಜಾತೀಯ ಸಂಘ ಬೆಳೆಸಲು ಸುಲಭ. ಆದರೆ ಕರ್ನಾಟಕ ಸಂಘಗಳನ್ನು ನಡೆಸುವುದು ಕಷ್ಟಕರ. ಬಹುಶಃ ತುಳುಕನ್ನಡಿಗರಿಗೆ ಕರ್ಮಭೂಮಿ ಮಹಾರಾಷ್ಟ್ರವು ವರವಾಗಿದ್ದು, ಅವರ ಸಹಯೋಗಕ್ಕೆ ಧನ್ಯರೆಣಿಸಿ ಮರಾಠಿ ಜನತೆಗೆ ಸದಾ ಸಾಲ್ಯೂಟ್ ಮಾಡಬೇಕು. ಸದ್ಯ ವಿದ್ಯೆಯು ಕ್ರಾಂತಿಕಾರಿ ಆಗುತ್ತಾ ಡಿಜಿಟಲೈಜ್ ವ್ಯವಸ್ಥೆಯಾಗಿ ಬದಲಾಗಿದೆ. ಈ ಮಧ್ಯೆ ಕನ್ನಡ ಅಂದರೆ ಆಹ್ವಾನ (ಚ್ಯಾಲೆಂಜ್) ಅನ್ನುವ ಸ್ಥಿತಿ ತಲುಪಿದರೂ ಇಂತಹ ಕನ್ನಡಾಭಿಮಾನದ ಸಂಸ್ಥೆಗಳಿಂದ ಕನ್ನಡದ ಉಳಿವು ಸಾಧ್ಯವಾಗುತ್ತಿದೆ ಎಂದರು.

ಸರ್ವ ಭಾಷಾಮಯವಾಗಿ ಬೆಳೆದುನಿಂತ ಚೆಂಬೂರು ಕರ್ನಾಟಕ ಸಂಘದ ಸಮೃದ್ಧಿ, ವೈವಿಧ್ಯತೆ, ಪ್ರತಿಭೆ ಅತ್ಯಾದ್ಭುತವಾಗಿದೆ. ಬಹುಶಃ ಮುಂಬಯಿಗರಲ್ಲಿ ಕನ್ನಡಾಭಿಮಾನದ ಕೊರತೆಯಿಲ್ಲ ಅನ್ನುವುದನ್ನು ಈ ಸಂಸ್ಥೆ ಸಾರುತ್ತಿದೆ. ಗುಣಮಟ್ಟದ ಕಾರ್ಯಕ್ರಮಕ್ಕೆ ಮುಂಬಯಿಗರು ಪ್ರೇರಕರು ಎನ್ನುವುದನ್ನು ಇಂತಹ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ತಮ್ಮಲ್ಲಿನ ಪ್ರತಿಭೆಗಳನ್ನು ಬೆಂಗಳೂರು, ಮೈಸೂರು ಅಥವ ಕರ್ನಾಟಕದ ಒಳನಾಡಿನಲ್ಲೂ ಪ್ರದರ್ಶಿಸಿದಾಗ ನಮ್ಮವರಿಗೂ ಇದು ಮಾದರಿ ಆಗಬಲ್ಲದು. ಸಚಿವೆ ಜಯಮಾಲ ಅವರಲ್ಲಿ ಈ ಬಗ್ಗೆ ತಿಳಿಸಿ ಕರೆಸಿ ಪೆÇ್ರತ್ಸಹಿಸಲು ಹೇಳುವೆ. ನಾನೂ ಕೊನೆಯುಸಿರು ಇರುವ ವರೆಗೆ ಕನ್ನಡದಲ್ಲೇ ಬರೆಯುವ ಪ್ರಯತ್ನ ಮುಂದುವರಿಸುವೆ ಎಂದರು.

ಸಂಸ್ಥೆಯ ಸ್ಥಾಪಕರ ಧ್ಯೇಯೋದ್ದೇಶಗಳನ್ನೇ ಮಾದರಿಯಾಗಿಸಿ ಈ ಸಂಘವನ್ನು ಉತ್ತರದಾಯಿತ್ವದತ್ತ ನಡೆಸುತ್ತಿದ್ದೇವೆ. ಸರ್ವೋತ್ತಮ ವಿದ್ಯೆಗೆ ಮಹತ್ವವನ್ನು ಕೊಡುವ ಉದ್ಧೇಶ ಹೊಂದಿರುತ್ತೇವೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾನುಸಾರದಂತೆ ನಡೆಯುವ ಪ್ರಯತ್ನ ನಮ್ಮದು ಸುಧಾಕರ್ ಅರಾಟೆ ತಿಳಿಸಿದರು.

ಸಂಘದ ಉಪಾಧ್ಯಕ್ಷ ಪ್ರಭಾಕರ ಬಿ.ಬೋಳಾರ್, ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್ ಕೆ.ಶೆಟ್ಟಿಗಾರ್, ಗೌರವ ಕೋಶಾಧಿಕಾರಿ ಟಿ.ಆರ್ ಶೆಟ್ಟಿ ವೇದಿಕೆಯಲ್ಲಿ ಆಸೀನರಾಗಿದ್ದರು. ಜತೆ ಕೋಶಾಧಿಕಾರಿ ಸುಂದರ್ ಎನ್. ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರಾದ ವಿಶ್ವನಾಥ ಎಸ್.ಶೇಣವ, ಗುಣಾಕರ ಹೆಚ್.ಹೆಗ್ಡೆ, ಯೋಗೇಶ್ ವಿ.ಗುಜರನ್, ಮಧುಕರ್ ಜಿ.ಬೈಲೂರು, ರಾಮ ಪೂಜಾರಿ, ರಂಜನ್‍ಕುಮಾರ್ ಆರ್.ಅವಿೂನ್, ಮೋಹನ್ ಕೆ.ಕಾಂಚನ್, ಚಂದ್ರಶೇಖರ ಎ.ಅಂಚನ್, ಅಶೋಕ್ ಸಾಲ್ಯಾನ್, ಕೆ.ಜಯ ಎಂ.ಶೆಟ್ಟಿ, ಸುಧೀರ್ ವಿ.ಪುತ್ರನ್, ಚಂದ್ರಶೇಖರ ನಾೈಕ್, ಸಂಜೀವ ಎಸ್.ಶೆಟ್ಟಿ ಸೇರಿದಂತೆ ಸಂಘದ ವಿವಿಧ ವಿದ್ಯಾಲಯಗಳ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾಥಿರ್üಗಳು, ಕನ್ನಡ ಶಿಕ್ಷಣಾಭಿಮಾನಿಗಳು ಹಾಜರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಾಯ್‍ಝೋನ್ ಡ್ಯಾನ್ಸ್ ಆಕಾಡೆಮಿ ಮಂಗಳೂರು ತಂಡವು ವರ್ಣರಂಜಿತ ನೃತ್ಯ ಸಂಗೀತ, ನಿನಾದ ವೈಭವ ಪ್ರದರ್ಶಿಸಿದರು. ಸಂಘದ ವಿವಿಧ ಶಾಲಾ ವಿದ್ಯಾಥಿರ್üಗಳು ವೈವಿದ್ಯಮಯ ವಿನೋದಾವಳಿಗಳನ್ನು ಪ್ರಸ್ತುತ ಪಡಿಸಿದರು. ಡಾ| ಶ್ಯಾಮಲ ಪ್ರಕಾಶ್ ಅವರು ನಿಸಾರ್ ಅಹಮದ್ ಅವರ ಕಾವ್ಯವೊಂದನ್ನು ಇಂಪಾಗಿ ಸಾರಪೂರ್ಣ ಹಾಡನ್ನು ಪ್ರಸ್ತುತ ಪಡಿಸಿದರು. ಕು| ಪೂರ್ವಿ ಕೆ.ರಾವ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.

ಪುರಸ್ಕೃತರೂ ಸಂದರ್ಭೋಚಿತವಾಗಿ ತಮ್ಮತಮ್ಮ ಗೌರವಕ್ಕೆ ಅಭಿವಂದಿಸಿದರು. ಭರತ್ ಬಿ.ಸಿ ರೋಡ್ ಪ್ರಾರ್ಥನೆಯನ್ನಾಡಿದರು. ಸಂಘದ ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ದಯಸಾಗರ್ ಚೌಟ ಸುಖಾಗಮನ ಬಯಸಿ ಪುರಸ್ಕೃತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ದೇವದಾಸ್ ಶೆಟ್ಟಿಗಾರ್ ವಂದಿಸಿದರು.

 

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here