Friday 26th, April 2024
canara news

ಸಾಫಲ್ಯ ಸೇವಾ ಸಂಘ ಮುಂಬಯಿ ಅಮೃತಮಹೋತ್ಸವ ಸಂಭ್ರಮಕ್ಕೆ ಚಾಲನೆ

Published On : 26 Dec 2018   |  Reported By : Rons Bantwal


ಎಪ್ಪತ್ತೈದರ ಸಾಧನೆ ಅಂದರೆ ಸಾರ್ಥಕತೆ ಎಂದಾರ್ಥ: ಸುಬ್ರಹ್ಮಣ್ಯಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.25: ಮನುಷ್ಯನು ಆಯುಷ್ಯ ಕಳೆದಂತೆ ಮೆದುವಾಗುತ್ತಾನೆ ಆದರೆ ಸಂಸ್ಥೆಗಳು ವರುಷಗಳನ್ನು ಕಳೆದಂತೆ ಬಲಾಢ್ಯಯುತವಾಗುತ್ತವೆ. 75ರ ಸಾಧನೆ ಅಂದರೆ ಸೇವಾ ಸಾರ್ಥಕತೆ ಎಂದಾರ್ಥ. ಇದೊಂದು ಸೇವಾ ಮಹಾತ್ಸಧನಾ ಸಡಗರ. ಮಾನವನ ಸಾಂಘಿಕತೆ ಸಾಧನೆಗಳಿಂದ ಇದೆಲ್ಲಾ ಸಾರ್ಥಕವಾಗುವುದು. ಮನುಕುಲಕ್ಕೆ ಸಾಮಾಜಿಕ ಆಧ್ಯಾತ್ಮಿಕಗಳ ಬದುಕೇ ಶ್ರೇಷ್ಠವಾದುದು ಮತು ಇದೇ ಮಂಗಳಮಯ ಬದುಕು ಆಗಿರುತ್ತದೆ ಎಂದು ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶÀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

ಇಂದಿಲ್ಲಿ ಮಂಗಳವಾರ ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್‍ನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಸಾಫಲ್ಯ ಸೇವಾ ಸಂಘ ಆಚರಿಸಿದ ಅಮೃತಹೋತ್ಸವ ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘ್ಘಾಟಿಸಿ ನೆರೆದ ಜನಸ್ತೋಮವನ್ನುದ್ದೇಶಿಸಿ ದೇವರ ದೀಪಗಳನ್ನು ಉರಿಯಲು ತೈಲಧಾರೆ ಎಸಗುವ ಕುಲಕಸುಬು ಅವಲಂಬಿಸಿರುವ ಈ ಸಮಾಜ ಸರಳ ಜೀವನಕ್ಕೆ ಮಾದರಿ. ತಾವು ಕುಲಕಸುಬು ಕೌಶಲ್ಯತೆಯನ್ನು ಮಕ್ಕಳಲ್ಲಿ ರೂಢಿಸಿ ಕಟ್ಟಿಬೆಳೆಸಿರಿ. ಸೇವೆಯಲ್ಲಿ ಸ್ವಾರ್ಥ ರಹಿತ ಬದುಕು ಅವಶ್ಯವಾಗಿದ್ದು ಸೇವೆಯನ್ನು ಕರ್ತವ್ಯಪ್ರಜ್ಞೆ ಆಗಿಸಿ ಸಮಾಜವನ್ನು ಮುನ್ನಡೆಸಿರಿ. ಆ ಮೂಲಕ ಸ್ವಸಮುದಾಯದ ಜನ್ಮದ ಪುಣ್ಯಕ್ಕೆ ಭಾಜನರಾಗಿರಿ ಎಂದೂ ಸುಬ್ರಹ್ಮಣ್ಯಶ್ರೀಗಳು ಹಿತೋಪದೇಶವನ್ನಿತ್ತರು.

ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಕಟೀಲು ಇದರ ಅನುವಂಶಿಕ ಅರ್ಚಕ ಶ್ರೀ ದೇವು ಮೂಲಿಯಣ್ಣ ಮತ್ತು ಶ್ರೀ ಉಳ್ಳಾಳ್ತಿ ಧರ್ಮರಸು ಕ್ಷೇತ್ರ ಉಳ್ಳಾಲ ಇದರ ಧರ್ಮದರ್ಶಿ ಶ್ರೀ ದೇವು ಮೂಲಿಯಣ್ಣ ಇವರ ದಿವ್ಯೋಪಸ್ಥಿತಿ ಹಾಗೂ ಸಾಫಲ್ಯ ಸೇವಾ ಸಂಘದ ಮಾಜಿ ಅಧ್ಯಕ್ಷ ಎಂ.ಜಿ ಕರ್ಕೇರ ಅಧ್ಯಕ್ಷತೆಯಲ್ಲಿ ಜರುಗಿದ ಈ ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ವರ್ಧಮಾನ್ ರೆಮೆಡೀಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಯತೀಶ್ ಅತ್ತವರ ಹಾಗೂ ಅತಿಥಿs ಅಭ್ಯಾಗತರುಗಳಾಗಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಬೆಂಗಳೂರು ಅಲ್ಲಿನ ಉದ್ಯಮಿ ಸುಂದರ್ ಸಾಲ್ಯಾನ್ ಉಪಸ್ಥಿತರಿದ್ದರು.

ಕಮಲಾದೇವಿ ಅಸ್ರಣ್ಣರು ಸಿರಿಸಿಂಗಾರದ ತೆಂಗು-ಕಂಗು ವೃಕ್ಷಪುಷ್ಪ ಅರಳಿಸಿ ಕಳಸೆಯಲ್ಲಿರಿಸಿ ವಿಧ್ಯುಕ್ತವಾಗಿ ಸಮಾರಂಭ ಉದ್ಘಾಟಿಸಿದರು. ಆರ್.ಸಿ ಮೂಲ್ಕಿ ರಚಿತ ಸಂಘದ ಸಾಧನಾ ನಡೆಯ `ಸಾಫಲ್ಯ ಯಾನೆ ಗಾಣಿಗ ಸಂಘ' ಕೃತಿಯನ್ನು ದೇವು ಮೂಲಿಯಣ್ಣ ಬಿಡುಗಡೆ ಗೊಳಿಸಿದರು. ಮಹಿಳಾ ವಿಭಾಗಧ್ಯಕ್ಷೆ ಶೋಭಾ ಬಂಗೇರ ಕೃತಿ ಪರಿಚಯಿಸಿದರು. ಡಾ| ವಾಮನ ಎಸ್.ಸಾಫಲ್ಯ, ಸಂಘದ ಮುಖವಾಣಿ `ಸಾಫಲ್ಯ' ತ್ರೈಮಾಸಿಕ ಬಗ್ಗೆ ಅವಲೋಕನ ಗೈದರು.


ಕಲಿಯುಗದಲ್ಲಿ ಸಂಘಟನೆ ನಿಜವಾದ ಶಕ್ತಿ ಆಗಿದ್ದು, ಪ್ರತೀ ಜಾತಿ ಸಂಘಟನೆ ಬಲಿಷ್ಠ ರಾಗಬೇಕು. ಸಮಾಜವನ್ನು ಒಟ್ಟುಗೂಡಿಸುವುದು ಬಹುದೊಡ್ಡ ಸವಾಲು. ವಿವಿಧತೆಯಲ್ಲಿ ಏಕತೆ ಅಗತ್ಯವಾಗಿದ್ದು, ಸಮಾನತೆಗೆ ಬದಲಾಗಿ ಸಹಮತ ನಮ್ಮಲ್ಲರಲ್ಲಿ ಬೆಳೆಯಬೇಕು. ಸ್ವಜನಾಭಿಮಾನ, ದೇಶಾಭಿಮಾನ, ಜಾತ್ಯಾಭಿಮಾನ, ಭಾಷಾಭಿಮಾನ, ಸಂಸ್ಕೃತಿ ಉಳಿಸಬೇಕು. ತುಳಸಿಯಂತೆ ತುಲನೆ ಮಾಡಲು ಅಸಾಧ್ಯವಾಗಿರುವ ತುಳು ಭಾಷೆ ಮಕ್ಕಳಿಗೆ ಕಲಿಸಬೇಕು. ಇಲ್ಲಿನ ಸಂಘದ ಶತಮಾನೋತ್ಸವ ಕಾರ್ಯಕ್ರಮಕ್ಕೆ ನಾವೆಲ್ಲರೂ ಬರುವಂತಾಗಲಿ ಎಂದು ಅಸ್ರಣ್ಣ ಶುಭಶಂಸನೆಗೈದರು.


ಉಳ್ಳಾಲ ಉಳಿಯ ಕ್ಷೇತ್ರದ ಧರ್ಮ ದೇವತೆ ಅನುಗ್ರಹದಂತೆ ನನಗೆ ಇಲ್ಲಿಗೆ ಬರಲು ಸಾಧ್ಯವಾಗಿದೆ. ಇಲ್ಲಿನ ಸಂಘಟನೆ ಶತವರ್ಷ ಪೂರೈಸಿದೆ. ಶ್ರೀ ಕೃಷ್ಣ ಮತ್ತು ಭೀಮನಿಗೆ ಗಾಣಿಗರು ಎಣ್ಣೆ ನೀಡಿರುವ ಹಿನ್ನೆಲೆ ಮಹಾಭಾರತದಲ್ಲಿ ಉಲ್ಲೇಖವಿದೆ. ದ.ಕ.ಜಿಲ್ಲೆಯಲ್ಲಿ ವಿವಿಧ ದೇವಸ್ಥಾನ ಜೀರ್ಣೋದ್ಧಾರಗೊಳಿಸುವಲ್ಲಿ ಇಲ್ಲಿನ ಗಾಣಿಗ ಸಂಘದ ಕೊಡುಗೆ ಅನನ್ಯ. ಏಳ್ವೆಕೆ ಸಿರಿಕೆರೆ ಜೀರ್ಣೋದ್ಧಾರಗೊಳಿಸುವಲ್ಲಿ ಗಾಣಿಗ ಸಮಾಜ ಮುಂದಾಗಿದೆ. ಅತ್ತಾವರ ಶ್ರೀ ಉಮಾಮಹೇಶ್ವರ ದೇವಸ್ಥಾನ, ಬ್ರಹ್ಮಕಲಶೋತ್ಸವ, ಪೆÇಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಕಂಚಿನ ದೀಪ ಸಮರ್ಪಣೆಯಲ್ಲಿ ಎಲ್ಲರೂ ಕೈಜೋಡಿಸುವಂತೆ ಮೂಲಿಯಣ್ಣ ಕರೆ ನೀಡಿ ಅನುಗ್ರಹಿಸಿದರು.

ಪದ್ಮನಾಭ ಪಯ್ಯಡೆ ಮಾತನಾಡಿ ಶಿಸ್ತುಬದ್ಧ, ಸೌಮ್ಯತ್ವ ಬಾಳಿಗೆ ಸಾಫಲ್ಯರು ಮಾದರಿ. ಅವರ ನುಡಿನದೆಯ ಫಲವೇ ಈ ಸುಸಜ್ಜಿತ ಸಾಫಲ್ಯ ಸೇವಾ ಸಂಘ. ಇವರೆಲ್ಲರ ಸಾಂಘಿಕತ್ವದ ಸಾರ್ಥಕತೆಯೇ ಈ ಸಂಭ್ರಮವಾಗಿದೆ. ಮತ್ತು ಸ್ವಜಾತೀಯ ಬಲವೇ ಈ ಉತ್ಸಹವಾಗಿದೆ. ಸಮುದಾಯಗಳ ಶ್ರೆಯೋನ್ನತಿಗೆ ಜಾತಿಯ ಸಂಘಟನೆಗಳ ಅಗತ್ಯವಿದೆ. ಸಮಾಜದ ಉದ್ದೇಶಗಳು ಪರಿಪೂರ್ಣವಾದಾಗಲೇ ಸಂಸ್ಥೆಯ ಸೇವೆ ಫಲಪ್ರದವಾಗುವುದು ಎಂದರು.

ಜಾತಿ ಸಂಘಟನೆ ಬೆಳೆಸುವಲ್ಲಿ ಎಲ್ಲರ ಪಾತ್ರ ಮಹತ್ತರವಾಗಿದೆ. ಸ್ವಜಾತಿ ಬಗ್ಗೆ ಹೆಮ್ಮೆ ಬೆಳೆಸುವ ಮೂಲಕ ಮಕ್ಕಳು ಅಂತರ್‍ಜಾತಿ ಕಡೆಗೆ ಹೋಗುವುದನ್ನು ತಡೆಗಟ್ಟಬೇಕು. ಪ್ರತೀ ತಾಲೂಕು ಮಟ್ಟದಲ್ಲಿ ಸಂಘ ಬಲವರ್ಧನೆಗೊಳ್ಳಬೇಕು. ಇಲ್ಲಿನ ಸಂಘಟಕರ ಪರಿಶ್ರಮ ಶ್ಲಾಘನೀಯ ಎಂದು ಸುಂದರ್ ಸಾಲ್ಯಾನ್ ಸಂಘದ ಸೇವೆ ಪ್ರಶಂಸಿಸಿದರು.

ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಸ್ವಾಗತಿಸಿ ಪ್ರಸ್ತಾವನೆಗೈದು ಹಿರಿಯರ ಸಾಂಘಿಕತೆಯಿಂದ ಹುಟ್ಟಿ ಬೆಳೆದ ಈ ಸಂಘವು ಮಾಮರವಾಗಿ ಸಮುದಾಯಕ್ಕೆ ಆಶ್ರಯವಾಗಿದೆ. ವಿವಿಧ ಸೇವಾ ಕೊಡುಗೆಗಳ ಮೇಳೈಕೆಯೊಂದಿಗೆ ಮುನ್ನಡೆಯುವ ಆಶಯ ನಮ್ಮದಾಗಿದೆ. ಸಮುದಾಯದ ಸುಮಾರು16 ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡ ಈ ಸಂಭ್ರಮ ಸಂಘದ ಸಫಲತೆಯ ಸಂಕೇತವಾಗಿದೆ. ನಮ್ಮೆಲ್ಲರ ಸೇವೆ ಸಮಾಜದ ಸರ್ವೋನ್ನತಿಗೆ ಸಮರ್ಥನೀಯವೆಣಿಸಿದೆ ಎಂದು ಸಾಫಲ್ಯ ಸಂಘದ ಉಗಮವನ್ನು ವಿವರಿಸಿದರು.

ಸದಸ್ಯರ ಸಕ್ರೀಯತ್ವದಿಂದಲೇ ಸಂಘಸಂಸ್ಥೆಗಳ ಬೆಳವಣಿಗೆ ಸಾಧ್ಯವಾಗುವುದು. ಸಾಫಲ್ಯ ಸೇವಾ ಸಂಘವೂ ಇದಕ್ಕೆ ಹೊರತಾಗಿಲ್ಲ. ಸಮಾಜದ ಮುನ್ನಡೆಗೆ ಉನ್ನತ ಶಿಕ್ಷಣದ ಅತೀ ಅಗತ್ಯವಿದೆ. ನಾವೂ ಶೈಕ್ಷಣಿಕ ವಿಚಾರಗಳತ್ತ ಹೆಚ್ಚಿನ ಗಮನ ನೀಡಿ ಮಕ್ಕಳನ್ನು ಮುನ್ನಡೆಸಬೇಕು. ಸಾಕ್ಷರತಾ ಸಾಧನಾ ಸಮಾಜಗಳು ಸರ್ವೊನ್ನತಿಯತ್ತ ಸಾಗುವುದು ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಎಂ.ಜಿ ಕರ್ಕೇರ ತಿಳಿಸಿದರು.

ಸಮಾಜ ಸೇವಕರಾದ ರಘುವೀರ ಅತ್ತವರ ಮತ್ತು ಶಶಿಕಲಾ ರಘುವೀರ್, ವಾಸು ಪುತ್ರನ್ ಮತ್ತು ಶಕುಂತಳಾ, ಸದಾನಂದ ಸಫಲಿಗ ಮತ್ತು ಮಲ್ಲಿಕಾ ಸದಾನಂದ್ ದಂಪತಿಗಳನ್ನು, ಅಂತರಾಷ್ಟ್ರೀಯ ಕ್ರೀಡಾಪಟು ಕು| ತನ್ವಿ ಜಗದೀಶ್ ಅವರನ್ನು ಅಥಿüಗಳು ಸನ್ಮಾನಿಸಿದರು. ಅಂತೆಯೇ ವಾಮನ ಎಸ್.ಸಾಫಲ್ಯ, ಆರ್.ಸಿ ಮೂಲ್ಕಿ, ಸುಕನ್ಯಾ ಕಮಲಾದೇವಿ, ರೇಖಾ ಡಿ.ಮೂಲಿಯಣ್ಣ, ಗಿರಿಯಪ್ಪ ಕರ್ಕೆರ, ಶ್ರೀ ಉಳ್ಳಾಳ್ತಿ ಕ್ಷೇತ್ರದ ಗುರಿಕಾರರುಗಳಾದ ಸುರೇಶ್ ಕೊಪ್ಪಳ, ರಾಜೇಶ್ ಗುರಿಕಾರ, ಭಂಡಾರಗುತ್ತು ತುಳಸೀದಾಸ್, ಸಫಲಿಗ ಸಮುದಾಯದ ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರು, ಮಹಾನಗರದ ವಿವಿಧ ಸಂಸ್ಥೆಗಳ ಪ್ರತಿನಿಧಿಗಳನ್ನು ಅಮೃತ ಗೌರವದೊಂದಿಗೆ ಸತ್ಕರಿಸಲಾಯಿತು.

ಸಂಭ್ರಮದ ಅಂಗವಾಗಿ ಸಂಘದ ಸದಸ್ಯರು ಮತ್ತು ಮಕ್ಕಳು ತುಳುನಾಡ ವೈಭವ, ಸಂಪ್ರದಾಯಿಕ ಉಡುಪುಗಳ ಫ್ಯಾಶನ್ ಶೋ, ಬಾಲಿವುಡ್‍ನ ರೆಟ್ರೋನೃತ್ಯ, ವೈವಿಧ್ಯತಾ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಯುವ ವಿಭಾಗದ ಕಲಾವಿದರು `ಸತ್ಯ ಗೊತ್ತಾನಗ' ತುಳು ನಾಟಕ ಮತ್ತು ಮಂಗಳೂರು ಉಳ್ಳಾಲ ಇಲ್ಲಿನ ನಾಟ್ಯ ನಿಲಯ ಸಂಸ್ಥೆಯು ನಾಟ್ಯ ವಿದುಷಿ ಸುನೀತಾ ಜಯಂತ್ ನಿರ್ದೇಶನದಲ್ಲಿ ಶಾಸ್ತ್ರೀಯ ನೃತ್ಯಗಳÀನ್ನು, ಮಂಗಳೂರು ಮತ್ತು ಮುಂಬಯಿನ ನುರಿತ ಕಲಾವಿದರು ಗÀಣೇಶ್ ಎರ್ಮಾಳ್ ಮತ್ತು ಕಿರಣ್ ಸಫಲಿಗ ನಿರ್ದೇಶನದಲ್ಲಿ ರಾಗ ಸಂಗಮ ರಸಮಂಜರಿ ಕಾರ್ಯಕ್ರಮ ಸಾದರ ಪಡಿಸಿದರು.

ಬಾಲಕಿಯರು ಕುಲದೆವರಾದ ಗೊಪಾಲಕೃಷ್ಣ ದೇವರಿಗೆ ಪ್ರಾರ್ಥನೆಯನ್ನಾಡಿದರು. ಕಿರಣ್ ಕುಮಾರ್ ಸಫಲಿಗ ರಚಿತ ಗಾಣಿಗ ಪದ್ಯ ಮೂಲಕ ಸಮಾರಂಭ ಆದಿಗೊಂಡಿತು. ಋತಿಕಾ ಶ್ರೀನಿವಾಸ್ ಸಾಫಲ್ಯ ಮತ್ತು ಅನಿತಾ ಕೃಷ್ಣ ಕುಮಾರ್ ದಂಪತಿಗಳು ಶ್ರೀಗಳನ್ನು ಸಂಪ್ರದಾಯಿಕವಾಗಿ ಸುಖಾಗಮನ ಬಯಸಿದರು. ಉಪಾಧ್ಯಕ್ಷ ಕೃಷ್ಣ ಕುಮಾರ್ ಬಂಗೇರ, ಗೌ| ಪ್ರ| ಕಾರ್ಯದರ್ಶಿ ಅನುಸೂಯ ಕೆಲ್ಲಪುತ್ತಿಗೆ, ಗೌರವ ಕೋಶಾಧಿಕಾರಿ ಭಾಸ್ಕರ್ ಸಫಲಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ರವಿಕಾಂತ್ ಸಫಲಿಗ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಋತಿಕಾ ಶ್ರೀನಿವಾಸ್, ದಮಯಂತಿ ಸಾಲ್ಯಾನ್, ಅನುಸೂಯ ಕೆಲ್ಲಪುತ್ತಿಗೆ, ಹರ್ಷದ್ ಅವಿೂನ್, ಭಾಸ್ಕರ್ ಸಫಲಿಗ, ದಿವ್ಯ ಸಾಫಲ್ಯ ಪುರಸ್ಕೃತರನ್ನು ಪರಿಚಯಿಸಿದರು. ಪೆÇ್ರ| ಅರುಣ್ ಉಳ್ಳಾಲ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ಅನುಸೂಯ ಕೆಲ್ಲಪುತ್ತಿಗೆ ಕೃತಿ ಪರಿಚಯಿಸಿ ವಂದನಾರ್ಪಣೆಗೈದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here