Friday 26th, April 2024
canara news

ಸಾಫಲ್ಯ ಸೇವಾ ಸಂಘ ಮುಂಬಯಿ ಅಮೃತಮಹೋತ್ಸವ ಸಂಭ್ರಮದ ಸಮಾಪನ

Published On : 27 Dec 2018   |  Reported By : Rons Bantwal


ಮಕ್ಕಳನ್ನು ಸ್ವಸಮುದಾಯದಲ್ಲಿ ಸಕ್ರಿಯವಾಗಿಸಿ : ಕಡಂದಲೆ ಸುರೇಶ್ ಭಂಡಾರಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.25: ಭಾರತ ದೇಶದ ಹೆಬ್ಬಾಗಿಲು ಮುಂಬಯಿ ಆಗಿದ್ದು ಇಲ್ಲಿ ವಲಸೆ ಬಂದ ತುಳುಕನ್ನಡಿಗರು ಬಾಲಿವುಡ್, ರಾಜಕೀಯ, ಶೈಕ್ಷಣಿಕ, ಆಥಿರ್üಕ ಇತ್ಯಾದಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಮೆರೆದಿದ್ದಾರೆ ಅದೇ ನಮ್ಮ ದೊಡ್ಡಸ್ಥಿಕೆ. ಶ್ರೇಷ್ಠವಾಗಿರುವ ಮನುಷ್ಯ ಜನ್ಮದಲ್ಲಿ ಪರೋಪಕಾರ ಬಹುಮುಖ್ಯ ಆದುದರಿಂದ ನಾವು ಹಕ್ಕುಗಳ ಬಗ್ಗೆ ಮಾತನಾಡುವ ಬದಲಾಗಿ ಕರ್ತವ್ಯಗಳನ್ನು ಪೂರೈಸುವು ಮುಖ್ಯ. ಓದಿಗಿಂತ ಬದುಕಿನ ಅನುಭವವೇ ಮುಖ್ಯವಾಗಿದ್ದು, ಪಾಲಕರು ಯುವ ಪೀಳಿಗೆಗೆ ತಂದೆ-ತಾಯಿ, ಗುರು ಹಿರಿಯರನ್ನು ಗೌರವಿಸುವ ಮನೋಭಾವ ತಿಳಿಸಬೇಕು. ಅಂತರ್ಜಾತಿ ವಿವಾಹಕ್ಕೆ ಬದಲಾಗಿ ಸ್ವಜಾತಿ ಆಯ್ಕೆಗೆ ಉತ್ತೇಜಿಸಬೇಕು. ಮಕ್ಕಳನ್ನು ಸಾಮಾಜಿಕ, ಸ್ವಸಮುದಾಯದ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೆಪಿಸಬೇಕು ಎಂದು ನಾಗೇಶ್ವರ ಸಿನಿ ಕ್ರಿಯೇಷನ್ಸ್‍ನ ಆಡಳಿತ ನಿರ್ದೇಶಕ, ಚಲನಚಿತ್ರ ನಿಮಾಪಕ, ಕರ್ನಾಟಕ ಸಂಘ ಅಸಲ್ಫಾ ಇದರ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ತಿಳಿಸಿದರು.

ಇಂದಿಲ್ಲಿ ಮಂಗಳವಾರ ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್‍ನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಸಾಫಲ್ಯ ಸೇವಾ ಸಂಘ (ರಿ.) ತನ್ನ ಎಪ್ಪತ್ತೈದರ ಅಮೃತಹೋತ್ಸವ ಸಂಭ್ರಮಿಸಿದ್ದು ಸಂಜೆ ನಡೆಸಲ್ಪಟ್ಟ ಸಮಾರೋಪ ಸಮಾರಂಭದಲ್ಲಿ ಸಂಘದ `ಅಮೃತ ಮಹೋತ್ಸವ ಸ್ಮರಣ ಸಂಚಿಕೆ' ಬಿಡುಗಡೆ ಗೊಳಿಸಿ ಸುರೇಶ್ ಭಂಡಾರಿ ಮಾತನಾಡಿದರು.

ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಅಮೃತ ಮಹೋತ್ಸವ ಸಮಾರೋಪದಲ್ಲಿ ಅತಿಥಿs ಅಭ್ಯಾಗತರುಗಳಾಗಿ ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ, ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆ ಪೆÇವಾಯಿ ಉಪ ಕಾರ್ಯಾಧ್ಯಕ್ಷ ನಡಿಬೆಟ್ಟು ನಿತ್ಯಾನಂದ ಹೆಗ್ಡೆ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್ ಪಿ.ಕುಲಾಲ್, ಗಾಣಿಗ ಸಂಘ ಮುಂಬಯಿ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ, ಒಕ್ಕಲಿಗ ಸಂಘ ಮಹಾರಾಷ್ಟ್ರ ಅಧ್ಯಕ್ಷ ಜಿತೇಂದ್ರ ಗೌಡ ಉಪಸ್ಥಿತರಿದ್ದರು.

ಚಂದ್ರಶೇಖರ ಪೂಜಾರಿ ಮಾತನಾಡಿ ಈ ಭುವಿಯಲ್ಲಿ ಎಲ್ಲಾ ಜಾತಿಯೂ ಒಂದೇ ಆಗಿದ್ದು, ಮನುಜರೆಣಿಸಿ ಎಲ್ಲರೂ ಸಂಘಟಿತರಾಗಬೇಕು. ಕುಲದೇವರು ಗೋಪಾಲಕೃಷ್ಣರನ್ನು ಆರಾಧಿಸಿದರೆ ಒಳಿತು ಸಾಧ್ಯ. ತಮ್ಮ ಸಂಸ್ಥೆಯು ಶತಮಾನೋತ್ಸವ ಪೂರೈಸಲಿ ಎಂದು ಹಾರೈಸಿದರು.

ತುಳುವರಲ್ಲಿ ಜಾತಿ ಸಂಘಟನೆ ಮೂಲಕ ಆಯಾಯ ಹಿಂದುಳಿದ ಸಮಾಜ ಶೈಕ್ಷಣಿಕವಾಗಿ ಮುಂದುವರಿಯಲು ಸಾಧ್ಯವಾಗಿದೆ. ನಿರ್ಮಲ ಮನಸ್ಸು ಮತ್ತು ಪರಸ್ಪರ ಸಹಕಾರ ಮನೋಭಾವದಿಂದ ಮಾತ್ರ ಸಂಸ್ಥೆಗಲು ಬಲಿಷ್ಠ ಆಗುತ್ತದೆ ಎಂದು ಧರ್ಮಪಾಲ ದೇವಾಡಿಗ ಅಭಿಪ್ರಾಯ ಪಟ್ಟರು.

ಶ್ರೀನಿವಾಸ ಸಾಫಲ್ಯ ನೇತೃತ್ವದಲ್ಲಿ ಕ್ರಿಯಾಶೀಲಗೊಂಡ ಈ ಸಂಘವು ಶತಸಂಭ್ರಮ ಪೂರೈಸಲಿ ಎಂದು ದೇವದಾಸ್ ಕುಲಾಲ್ ಹಾರೈಸಿದರು.

ನಿತ್ಯಾನಂದ ಹೆಗ್ಡೆ ಮಾತನಾಡಿ ಬಡ ಜನರಿಗೆ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಮೂಲಕ ಸಾಫಲ್ಯ ಸಂಘವು ಸಫಲತೆ ಕಡೆಗೆ ಹೆಜ್ಜೆಯಿಟ್ಟಿದೆ. ಸಫಲಿಗರು ಧಾರ್ಮಿಕವಾಗಿ ಪ್ರಾಮಾಣಿಕ ನಿಷ್ಠೆವುಳ್ಳವರು. ತುಳು ಭಾಷೆ, ಸಂಸ್ಕೃತಿ, ಆಚಾರ-ವಿಚಾರ ಉಳಿಸುವಲ್ಲಿ ಎಲ್ಲರೂ ಸಂಘಟಿತರಾಗಿ ಸಹಬಾಳ್ವೆ ನಡೆಸುವಂತಾಗಲಿ ಎಂದು ಶುಭೇಚ್ಛ ಸಲ್ಲಿಸಿದರು.

ದೇಶಕ್ಕೆ ಸಮರ್ಥ ನಾಯಕ ಪ್ರಧಾನಿ ನೀಡಿದ ಗಾಣಿಗ ಸಮಾಜವು ಪಂಗಡ, ಪಂಥಗಳನ್ನು ಮರೆತು ಒಟ್ಟಾಗಬೇಕು ಎಂದÀು ರಾಮಚಂದ್ರ ಗಾಣಿಗ ಆಶಯ ವ್ಯಕ್ತಪಡಿಸಿದರು.

ಜಿತೇಂದ್ರ ಗೌಡ ಮಾತನಾಡಿ ಗಾಣಿಗ ಸಮಾಜ ಸಂಘಟಿತರಾಗಿ ಹಲವು ಸಮಾಜಮುಖಿ ಚಟುವಟಿಕೆ ನಡೆಸುತ್ತಿದೆ. ಶ್ರೀನಿವಾಸರ ಸಾರಥ್ಯದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವುಸು ಪ್ರಶಂಸನೀಯ ಎಂದರು.

ಸಮಾರಂಭದÀಲ್ಲಿ ಸಂಘದ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿದ ಡಾ| ಜಿ.ಕೆ ಮೂಲ್ಕಿ (ಪರವಾಗಿ ಪ್ರಶಾಂತ್ ಡೊಂಗರಕೇರಿ), ಕೆ.ಎಸ್ ಮೆಂಡನ್ (ಸದಾನಂದ್ ಪುತ್ರನ್), ಕೆ.ವಿ ಮಿಜಾರ್ (ಅನಿಲ್‍ಕುಮಾರ್ ಅತ್ತಾವರ), ಐ.ಕೆ ರಾವ್ (ವಿವೆಕ್ ರಾವ್), ಎಂ.ನಾರಾಯಣ್ (ಹರೀಶ್ ಸುವರ್ಣ), ನರಸಿಂಗ ರಾವ್ (ಜಯಂತಿ ಕರ್ಕೇರ), ಲಕ್ಷ್ಮಣ್ ಕುಂದರ್ (ಸುಧಾ ಲವ), ಬಿ.ತಿಮ್ಮಪ್ಪ (ಕಲಾವತಿ ಪುತ್ರನ್ ಮತ್ತು ಯಶೋಧ ಸುವರ್ಣ), ಎಸ್.ಸಫಲಿಗ (ಅಶೋಕ್ ಸಫಲಿಗ), ಭಾಸ್ಕರ್ ಎನ್.ಡೊಂಗರಕೇರಿ (ಪ್ರಶಾಂತ್ ಡೊಂಗರಕೇರಿ), ಈಶ್ವರ್ ಮೆಂಡನ್ (ದಯಾನಂದ ಮೆಂಡನ್), ಡಿ.ಸಿ ಬಂಗೇರ (ಶಕುಂತಳಾ ಪುತ್ರನ್), ಜಯರಾಮ ಸಫಲಿಗ ಮತ್ತು ಪ್ರೇಮಲತಾ ಜಯರಾಮ್ (ದಂಪತಿಯನ್ನು) ಹಾಗೂ ಓಂಪ್ರಕಾಶ್ ರಾವ್, ನಾರಾಯಣ ಮೆಂಡನ್ ಇವರನ್ನು ಅತಿಥಿsಗಳು ಸನ್ಮಾನಿಸಿ ಅಭಿನಂದಿಸಿದರು.

ಅಂತೆಯೇ ಕೊಡುಗೈದಾನಿಗಳಾದ ಶಿಲ್ಪಾ ಕಲರ್ ಲ್ಯಾಬ್ ಮಂಗಳೂರು ಇದರ ಎಸ್.ರಮೇಶ್ (ಪರವಾಗಿ ಕೇಶವ ಸಾಫಲ್ಯ), ಬಂಟ್ವಾಳದ ಪತ್ರಕರ್ತ ಮೋಹನ್ ಶ್ರೀಯಾನ್, ಗಿರಿಜ ಅನಾಥಾಲಯ-ವೃದ್ಧಾಶ್ರಮದ ಸ್ಥಾಪಕ ವಸಂತ್ ಕೆ.ಸಫಲಿಗ, ಸಮಾಜ ಸೇವಕ ಭಾಸ್ಕರ್ ಟಿ.ಸಫಲಿಗ ಮತ್ತು ಶಕುಂತಳಾ ಭಾಸ್ಕರ್ (ದಂಪತಿಯನ್ನು) ಹಾಗೂ ಸಮುದಾಯದ ಮತ್ತಿತರ ಸಾಧಕರು, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರಿಗೆ ಗೌರವಿಸಿ ಅಭಿನಂದಿಸಿದರು.

ಈ ಶುಭಾವಸರದಲ್ಲಿ ಉಪಾಧ್ಯಕ್ಷ ಕೃಷ್ಣ ಕುಮಾರ್ ಬಂಗೇರ, ಗೌರವ ಕೋಶಾಧಿಕಾರಿ ಭಾಸ್ಕರ್ ಸಫಲಿಗ, ಮಹಿಳಾ ವಿಭಾಗಧ್ಯಕ್ಷೆ ಶೋಭಾ ಬಂಗೇರ, ಯುವ ವಿಭಾಗದ ಕಾರ್ಯಾಧ್ಯಕ್ಷ ರವಿಕಾಂತ್ ಸಫಲಿಗ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಧ್ಯಾಂತರದಲ್ಲಿ ಹೇಮ್‍ರಾಜ್ ಎನ್.ಕರ್ಕೇರ ರಚಿತ ಸಂಘದ ಸಾಕ್ಷ ್ಯಚಿತ್ರ ಪ್ರದರ್ಶಿಸಲ್ಪಟ್ಟಿತು.

ಸಂಭ್ರಮದ ಅಂಗವಾಗಿ ಸಂಘದ ಸದಸ್ಯರು ಮತ್ತು ಮಕ್ಕಳು ತುಳುನಾಡ ವೈಭವ, ಫ್ಯಾಶನ್ ಶೋ, ರೆಟ್ರೋನೃತ್ಯ, ಇತ್ಯಾದಿ ಕಾರ್ಯಕ್ರಮಗಳನ್ನು ಹಾಗೂ ಯುವ ವಿಭಾಗದ ಕಲಾವಿದರು `ಸತ್ಯ ಗೊತ್ತಾನಗ' ತುಳು ನಾಟಕ ಪ್ರದರ್ಶಿಸಿದರು. ಮಂಗಳೂರು ಉಳ್ಳಾಲ ಇಲ್ಲಿನ ನಾಟ್ಯ ನಿಲಯ ಸಂಸ್ಥೆಯು ನಾಟ್ಯ ವಿದುಷಿ ಸುನೀತಾ ಜಯಂತ್ ನಿರ್ದೇಶನದಲ್ಲಿ ಶಾಸ್ತ್ರೀಯ ನೃತ್ಯಗಳÀನ್ನು, ಮಂಗಳೂರು ಮತ್ತು ಮುಂಬಯಿನ ನುರಿತ ಕಲಾವಿದರು ರಾಗ ಸಂಗಮ ರಸಮಂಜರಿ ಕಾರ್ಯಕ್ರಮ ಸಾದರ ಪಡಿಸಿದರು. ಪ್ರಾ| ಅರುಣ್ ಉಳ್ಳಾಲ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಸಾಫಲ್ಯಗೀತೆಯೊಂದಿಗೆ ಸಮಾರಂಭ ಅನಾವರಣ ಗೊಂಡಿತು. ಸಂಘದ ಮುಖವಾಣಿ ಸಾಫಲ್ಯ ತ್ರೈಮಾಸಿಕದ ಸಂಪಾದಕಿ ಡಾ| ಜಿ.ಪಿ ಕುಸುಮಾ ಪ್ರಸ್ತಾವಿಕ ನುಡಿಗಳನ್ನಾಡಿದರು. ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಸುಲೋಚನ ಸಫಲಿಗ, ದೀಶಾ ಕರ್ಕೇರ, ಉಷಾ ಸಫಲಿಗ, ವಿಮಲಾ ಬಂಗೇರ ಸನ್ಮಾನಿತರನ್ನು ಪರಿಚಯಿಸಿದರು. ಬಂಟರವಾಣಿ ಮಾಸಿಕದ ಸಂಪಾದಕ ಅಶೋಕ್ ಪಕ್ಕಳ ಸ್ವಾಗತಿಸಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ಅನುಸೂಯ ಕೆಲ್ಲಪುತ್ತಿಗೆ ಕೃತಜ್ಞತೆ ಸಮರ್ಪಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here