Friday 26th, April 2024
canara news

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಂಧೇರಿ ಸ್ಥಳೀಯ ಕಚೇರಿಯ ಪಂಚದಶಿ ಉತ್ಸ್ಸವ

Published On : 15 Jan 2019   |  Reported By : Rons Bantwal


ಪಾರದರ್ಶಕತ್ವದ ಸೇವೆಯೇ ಪ್ರಧಾನವಾದುದು : ಕ್ಯಾ| ವೇಣುಗೋಪಾಲ್ ಸುವರ್ಣ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.14: ಇಟ್ಟಿಗೆಯಿಂದ ಇಟ್ಟಿಗೆಯನ್ನಿರಿಸಿ, ಕೈಯಿಂದ ಕೈ ಜೋಡಿಸಿ ಜೊತೆ ಜೊತೆಯಾಗಿ ಕಾಯಕದಲ್ಲಿ ತೊಡಗಿಸಿ ಮುನ್ನಡೆದ ಫಲವೇ ಈ ಸಡಗರವಾಗಿದೆ. ಸಂಬಂಧಗಳ ಕಟ್ಟಡವನ್ನು ಕಟ್ಟಿದಾಗಲೇ ಸಮಾಜದ ಸುಧಾರಣೆ ಸಾಧ್ಯವಾಗುವುದು. ಇವೆಕ್ಕೆಲ್ಲಕ್ಕೂ ಮಿಗಿಲಾಗಿ ಪಾರದರ್ಶಕತ್ವದ ಸೇವೆಯೇ ಐಕ್ಯತೆಗೆ ಪ್ರಧಾನವಾದುದು. ಭವಿಶ್ಯದಲ್ಲೂ ತಾವೆಲ್ಲರೂ ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸಿರಿ. ಅದೇ ಸಮಾಜದ ಸರ್ವೋನ್ನತಿಗೆ ಮೂಲವಾಗಬಲ್ಲದು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಸುಶಿಕ್ಷಿತರಾಗಿಸಿ ಸಮಾಜ ಮುನ್ನಡೆಸಿ ಎಂದು ಉದ್ಯಮಿ ಕ್ಯಾಪ್ಟನ್ ವೇಣುಗೋಪಾಲ್ ಎಂ.ಸುವರ್ಣ ತಿಳಿಸಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಂಧೇರಿ ಸ್ಥಳೀಯ ಕಚೇರಿಯು ದಿನಪೂರ್ತಿ ಆಗಿಸಿ ಇಂದಿಲ್ಲಿ ರವಿವಾರ ಸಾಂತಾಕ್ರೂಜ್ ಪೂರ್ವದ ಗುರು ನಾರಾಯಣ ಮಾರ್ಗದಲ್ಲಿನ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ರಚಿತ ದಿ| ಲ| ಎಂ.ಎನ್ ಸುವರ್ಣ ದ್ವಾರ ಹಾಗೂ ಸ್ವರ್ಗೀಯ ಸೂರು ಸಿ.ಕರ್ಕೇರ ಸ್ಮಾರಣಾರ್ಥ ವೇದಿಕೆಯಲ್ಲಿ ಸಂಭ್ರಮಿಸಿದ 15ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಕ್ಯಾ| ಸುವರ್ಣ ಮಾತಾನಾಡಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಭುವನೇಶ್ವರಿ ದೇವಸ್ಥಾನ ಫೆÇೀರ್ಟ್ ಇದರ ಆಡಳಿತ ಮೊಕ್ತೇಸರ ವಿದ್ವಾನ್ ರಾಜೇಶ್ ಭಟ್ ಫೆÇೀರ್ಟ್ ಆಶೀರ್ವಚನ ನೀಡಿದ್ದು, ಅತಿಥಿü ಅಭ್ಯಾಗತರುಳಾಗಿ ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಪುತ್ತೂರು ಇದರ ಆಡಳಿತ ಮೊಕ್ತೇಸರ ಶಿವಪ್ರಸಾದ್ ಪೂಜಾರಿ (ಥಾಣೆ) ಹಾಗೂ ಅಂಧೇರಿ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ಬಾಬು ಕೆ.ಪೂಜಾರಿ, ಉಪ ಕಾರ್ಯಾಧ್ಯಕ್ಷರುಗಳಾದ ಸುರೇಶ್ ಬಿ.ಸುವರ್ಣ ಮತ್ತು ಜಗನ್ನಾಥ ಕರ್ಕೇರ, ಗೌರವ ಕೋಶಾಧಿಕಾರಿ ಸುಧಾಕರ ಎಂ.ಜತ್ತನ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಸಮಾಜ ಸೇವಕರಾದ ಎಂ.ವಿ ಗುರುಚರಣ್ ಅವಿೂನ್, ಜಯಂತಿ ವರದ ಉಳ್ಳಾಲ್, ಲಕ್ಷಿ ್ಮೀ ಎನ್.ಕೋಟ್ಯಾನ್, ಮೂಲ್ಕಿ ಭೋಜ ಎಂ.ಪೂಜಾರಿ ಇವರನ್ನು ಸನ್ಮಾನಿಸಿ ಅಭಿನಂದಿಸಿದರು. ಸನ್ಮನಿತರೂ ಗೌರವಕ್ಕೆ ಉತ್ತರಿಸಿ ಅಭಿವಂದಿಸಿದರು.

ಬಿಲ್ಲವರು ಶ್ರಮಿಕರಾಗಿ,ಪರೋಪಕರಾಗಿ ಬೆಳೆದವರು. ಬಿಲ್ಲವರಿಗೆ ಜಯ ಸಿ.ಸುವರ್ಣರು ಸರ್ವಶಕ್ತಿ ಆಗಿದ್ದು, ಗುರುಶ್ರೀಗಳೇ ಅವರನ್ನು ನಮಗೆ ಒದಗಿಸಿದ್ದಾರೆ. ನಾವು ಎಲ್ಲೂ ಒಗ್ಗೂಡಿದಲ್ಲೂ ಅಭಿಲಾಷೆ, ಸ್ವಾರ್ಥ ಬಿಟ್ಟು ನಿಸ್ವಾರ್ಥರಾಗಿ ಸೇವೆಗೈದರೆ ಸಮುದಾಯದ ಒಟ್ಟು ಸರ್ವೋನ್ನತಿ ಸಾಧ್ಯ. ಇವೆಕ್ಕೆಲ್ಲಾ ಧ್ಯಾನಶಕ್ತಿ ಮೈಗೂಡಿಸಿ ಕೊಂಡಾಗ ನಮ್ಮ ಯೋಜನೆಗಳು ಸಂಪನ್ನಗೊಂಡು ಎಲ್ಲವೂಮತ್ತು ಎಲ್ಲರಿಗೂ ಒಳಿತಾಗುವುದು. ಸದ್ಯ ನಮ್ಮಲ್ಲಿ ಎಲ್ಲವೂ ಇದೆ ಅಂತೆಯೇ ಮುಂಬಯಿಯಲ್ಲಿ ಗುರುನಾರಾಯಣರ ಮಠಸ್ಥಾನ ಆಗಬೇಕು ಎಂದು ರಾಜೇಶ್ ಭಟ್ ಆಶಯ ವ್ಯಕ್ತ ಪಡಿಸಿದರು.

ಕಳೆದ ಒಂದುವರೆ ದಶಕದಿಂದ ಈ ಸಂಸ್ಥೆ ಪ್ರಾಮಾಣಿಕವಾಗಿ ಸಮುದಾಯದ ಉನ್ನತಿಗಾಗಿ ಶ್ರಮಿಸುತ್ತಿರುವ ಸೇವೆ ಶ್ಲಾಘನೀಯ. ನಮ್ಮಲ್ಲಿನ ಏಕತೆ ಬಿಲ್ಲವರಲ್ಲಿನ ಅಸ್ಮಿತೆ, ಸಾಂಘಿಕತೆಯನ್ನು ಬಲಿಷ್ಠ ಪಡಿಸುತ್ತಿದ್ದು, ಇದನ್ನು ಮತ್ತಷ್ಟು ಸಾಮರ್ಥ್ಯಯುತವಾಗಿಸಲು ನಮ್ಮ ಜವಾಬ್ದಾರಿ ಹೆಚ್ಚಿದೆ. ಇದಕ್ಕಾಗಿ ನಮ್ಮಲ್ಲಿನ ಯುವಜನತೆಯನ್ನು ಪೆÇ್ರೀತ್ಸಾಹಿಸುವ ಅಗತ್ಯವಿದೆ. ಯುವಶಕ್ತಿ ಬಲಯುತವಾದಾಗಲೇ ಸಮಾಜದ ಮುನ್ನಡೆ ಸಾಧ್ಯ ಎಂದು ಎನ್.ಟಿ ಪೂಜಾರಿ ಶುಭನುಡಿಗಳನ್ನಾಡಿದರು.

ಇಂದು ಮನುಕುಲಕ್ಕೆ ಜೀವನದ ಕ್ಷಣಕ್ಷಣವೂ ಮುಖ್ಯವಾದುದು. ಆದುದರಿಂದ ಸಮಯಪ್ರಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಮಯಪ್ರಜ್ಞೆ ಸಾಧನೆಗೆ ಪೂರಕವಾದುದು. ಪದಾಧಿಕಾರಿಗಳು, ಅತಿಥಿüಗಳು ಸರಿಯಾದ ಸಮಯ ಪಾಲಿಸಿದರೆ ಸಭಿಕರೂ ಅದಕ್ಕೆ ಬದ್ಧರಾದಲ್ಲಿ ಕಾರ್ಯಕ್ರಗಳು ಸುಗಮವಾಗಿ ಸಾಗಿ ಅನಿಸಿದಕ್ಕಿಂತಲೂ ಹೆಚ್ಚು ಯಶಸ್ವಿ ಗೊಳ್ಳುವುದು ಎಂದ ಶಿವಪ್ರಸಾದ್ ಸಮಯದ ಮಹತ್ವವನ್ನು ಅರಿಯುವಂತೆ ಎಚ್ಚರಿಸಿದರು.

ಚಂದ್ರಶೇಖರ್ ಪೂಜಾರಿ ಅಧ್ಯಕ್ಷೀಯ ನುಡಿಗಳನ್ನಾಡಿ ಸಮಾಜದ ಮೇಲಿನ ಅಭಿಮಾನ ಪ್ರಧಾನವಾದುದು. ಪ್ರಕೃತಿ, ವಿಕೃತಿ, ಸಂಸ್ಕೃತಿ ಬಗ್ಗೆ ತಿಳಿದಾಗ ಮಾನವ ನೆಮ್ಮದಿಯುತವಾಗಿ ಬದುಕಲು ಸಾಧ್ಯ. ಇದಕ್ಕೆಲ್ಲಾ ಸಂಘಜೀವಿಯಾಗುವ ಅಗತ್ಯವಿದೆ. ಸಂಂಸ್ಥೆಗಳ ಜೊತೆ ಗೂಡಿದಾಗ ಸಮಾಜದ ಜವಾಬ್ದಾರಿ ತಿಳಿಯಲು ಸಾಧ್ಯ. ಇದೇ ನಮ್ಮ ಉದ್ದೇಶವಾಗಿದೆ. ಇಂತಹ ಒಗ್ಗಟ್ಟಿಗೆ ಅಂಧೇರಿ ಸ್ಥಳೀಯ ಕಚೇರಿ ಕೊಡುಗೆ ಅವಿಸ್ಮರಣೀಯವಾದುದು. ನಮ್ಮ ನಡೆ ಇತರರಿಗೆ ಅನುಕರಣೀಯವಾದಗಲೇ ನಮ್ಮ ಜೀವನವೂ ಸಾರ್ಥಕವಾಗುವುದು. ಆದುದರಿಂದ ತಿಳಿದು ಬಾಳುತ್ತಾ ಸಮಯೋಚಿತವಾಗಿ ಹೆಜ್ಜೆಗಳನ್ನಿತ್ತು ನಾವೆಲ್ಲರೂ ಒಗ್ಗೂಡೋಣ ಎಂದÀು ಕರೆಯಿತ್ತರು.

ವಾರ್ಷಿಕೋತ್ಸವದ ಅಂಗವಾಗಿ ಅಸೋಸಿಯೇಶನ್‍ನ ಎಲ್ಲಾ ಸ್ಥಳೀಯ ಸಮಿತಿಗಳ ಯುವ ವಿಭಾಗದ ಸದಸ್ಯರಿಗೆ ಡೆನ್ನ ಡೆನ್ನಾಣ-2019 ಜಾನಪದ ನೃತ್ಯ ಸ್ಪರ್ಧೆ ಆಯೋಜಿಸಲ್ಪಟ್ಟಿತು. ಡಾ| ಗುರು ವಿೂನಾಕ್ಷಿ ರಾಜು ಶ್ರೀಯಾನ್, ಕು| ಕಾಜಲ್ ಕುಂದರ್, ಕು| ಪ್ರಿಯಾಂಜಲಿ ರಾವ್ ತೀರ್ಪುಗಾರರಾಗಿದ್ದರು. ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮವಾಗಿಸಿ ಅಂಧೇರಿ ಸ್ಥಳೀಯ ಕಚೇರಿ ಸದಸ್ಯರು ಮತ್ತು ಮಕ್ಕಳು ವೈವಿಧ್ಯಮಯ ನೃತ್ಯಾವಳಿಗಳನ್ನು ಹಾಗೂ ಡಾ| ಚಂದ್ರಶೇಖರ್ ಕಂಬಾರ ಕಥೆ ರಚಿತ ನಾರಾಯಣ್ ಶೆಟ್ಟಿ ನಂದಳಿಕೆ ಸಂಭಾಷಣೆಯ ಮತ್ತು ಮನೋಹರ್ ಶೆಟ್ಟಿ ನಂದಳಿಕೆ ನಿರ್ದೇಶಿತ ಪ್ರಶಸ್ತಿ ವಿಜೇತ `ನಾಗ ಸಂಪಿಗೆ' ಕಿರು ನಾಟಕ ಪ್ರದರ್ಶಿಸಿದರು.

ಚಂದ್ರಶೇಖರ್ ಪೂಜಾರಿ ಪಾರಿತೋಷಕಗಳ ಅನಾವರಣಗೈದು, ಭಾರತ್ ಬ್ಯಾಂಕ್‍ನ ನಿರ್ದೇಶಕ ಪುರುಷೋತ್ತಮ ಎಸ್.ಕೋಟ್ಯಾನ್, ಮಾಜಿ ನಿರ್ದೇಶಕ ಎನ್.ನಿತ್ಯಾನಂದ್, ಉದ್ಯಮಿ ಪ್ರಕಾಶ್‍ಕುಮಾರ್ ಮೂಡಬಿದ್ರೆ ಅವರನ್ನು ಸತ್ಕರಿಸಿದರು. ಆದಿಯಲ್ಲಿ ರವೀಂದ್ರ ಶಾಂತಿ ಪೂಜಾಧಿಗಳನ್ನು ನೆರವೇರಿಸಿದರು.

ಸ್ಥಳೀಯ ಕಚೇರಿ ಕಾರ್ಯಾಧ್ಯಕ್ಷ ರವೀಂದ್ರ ಎಸ್.ಕೋಟ್ಯಾನ್ ಸ್ವಾಗತಿಸಿದರು. ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಕು| ಶ್ರದ್ಧಾ ಬಂಗೇರ ಪ್ರಾರ್ಥನೆ ಹಾಡಿದರು. ಸ್ಥಳೀಯ ಕಚೇರಿಯ ಪದಾಧಿಕಾರಿಗಳು ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ನಿತೇಶ್ ಪೂಜಾರಿ ಮಾರ್ನಾಡ್ ಅತಿಥಿüಗಳು ಮತ್ತು ಸನ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಕಚೇರಿ ಗೌ| ಕಾರ್ಯದರ್ಶಿ ಹರೀಶ್ ಶಾಂತಿ ಹೆಜಮಾಡಿ ವಂದನಾರ್ಪಣೆಗೈದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here