Friday 26th, April 2024
canara news

ಬಂಟ್ವಾಳ ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರಕ್ಕೆ

Published On : 28 Jan 2019   |  Reported By : Rons Bantwal


ಲೋನಾವಲ ಮುನ್ಸಿಪಾಲ್ ಕೌನ್ಸಿಲ್‍ನ ನಗರ ಅಧ್ಯಕ್ಷೆ ಸುರೇಖಾ ಜಾಧವ್ ಭೇಟಿ

ಮುಂಬಯಿ, ಜ.28: ಬಂಟ್ವಾಳ ಜೋಡುಮಾರ್ಗ (ಬಿ.ಸಿ ರೋಡು)ದ ಸಂಚಯಗಿರಿ ಅಲ್ಲಿನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯಕ್ಕೆ ಇಂದಿಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‍ನ ಮಾಜಿ ನಿರ್ದೇಶಕ ಚಂದ್ರಶೇಖರ್ ಎಸ್.ಪೂಜಾರಿ, ಲೋನಾವಲ ಮುನ್ಸಿಪಾಲ್ ಕೌನ್ಸಿಲ್‍ನ ನಗರ ಅಧ್ಯಕ್ಷೆ ಸುರೇಖಾ ಜಾಧವ್, ನಗರ ಉಪಾಧ್ಯಕ್ಷ ಮತ್ತು ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಲೋನಾವಲ ಸ್ಥಳೀಯ ಕಚೇರಿಯ ಗೌರವಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್ ಎಸ್.ಪೂಜಾರಿ ಭೇಟಿ ನೀಡಿದರು.

ಭಾರತ ರಾಷ್ಟ್ರದ ಕರ್ನಾಟಕದ ಕರಾವಳಿ ಕಾಸರಗೋಡುನಿಂದ ಉಡುಪಿಯ ಬಾರ್ಕೂರು ತನಕ ಪರಶುರಾಮನ ಸೃಷ್ಠಿಯ ಒಂದು ಭಾಗವಾಗಿ ಮಹಾ ದಾರ್ಶನಿಕರಿಗೆ ಮತ್ತು ಸಂತ ಮಹಾಂತರಿರಿಗೆ ಜನ್ಮ ನೀಡಿದ, ಹತ್ತುಹಲವಾರು ಸಂಪ್ರದಾಯ, ಕೂಡು ಕಟ್ಟುಕಟ್ಟಾಲೆಗಳನ್ನು ಬೆಳೆಸಿ ಉಳಿಸಿ ತುಳು ಭಾಷೆಯೊಂದಿಗೆ ಸ್ವಂತಿಕೆಯ ನಾಡುವಾಗಿ ಸಾವಿರ ಸಾವಿರ ವರ್ಷಗಳ ಇತಿಹಾಸವುಳ್ಳ ಪುಣ್ಯಭೂಮಿ ಪ್ರಸಿದ್ಧಿಯ ತುಳುನಾಡು ಬಗ್ಗೆ ತಿಳಿದು ತುಳು ಬದುಕು ಹಾಗೂ ತೌಳವರ ಪರಂಪರೆ, ಬದುಕು ರೂಪಿಸುವಲ್ಲಿ ಉಪಯೋಗಿಸಲ್ಪಡುವ ವಸ್ತುಗಳ ಸಂಗ್ರಹಣೆ ಮತ್ತು ಭವಿಷ್ಯತ್ತಿನ ಪೀಳಿಗೆಗೆ ಪ್ರೇರಪಣೆ ಆಗಿಸುವ ಅಧ್ಯಯನ ಕೇಂದ್ರದ ಶ್ರಮವನ್ನು ಪ್ರಶಂಸಿ ಗಣ್ಯರು ವ್ಯಕ್ತ ಪಡಿಸಿದರು.

ಈ ಸಂದಭದಲ್ಲಿ ಲೋನಾವಲದ ನಗರ ಸೇವಕರಾದ ರಾಜೇಶ್ ಬಚ್ಚೆ, ಪೂಜಾ ಗಾಯಕ್ವಾಡ್, ರಚನಾ ಶಿಂಕರ್ ಮತ್ತು ವರ್ಷಾ ಬಚ್ಚೆ, ವಿಜಯ್ ಸಿಂಕರ್, ಪ್ರಮೋದ್, ಗಾಯಕ್ವಾಡ್, ಸ್ನೇಹಾ ಜಾಧವ್, ಆಶ್ವಿನ್ ಜಾಧವ್, ಪೆÇೀಲಿಸ್ ಅಧಿಕಾರಿ ಗೋಪಾಲ್ ಕೆ.ಬಜ್ಪೆ ಮತ್ತಿತರರು ಉಪಸ್ಥಿತರಿದ್ದು ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪೆÇ್ರ| ತುಕಾರಾಮ ಪೂಜಾರಿ ಸುಖಾಗಮನ ಬಯಸಿದರು. ಡಾ| ಆಶಾಲತಾ ಸುವರ್ಣ ವಂದಿಸಿದರು.

ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ಧಯಾಮಯ್ಯ ಅವರೂ ತುಳು ಕೇಂದ್ರಕ್ಕೆ ಕಳೆದ ಬಾರಿ ಭೇಟಿ ನೀಡಿ ಚಂದ್ರಮ ಕಲಾಮಂದಿರ, ರಾಣಿ ಅಬ್ಬಕ್ಕ ಆರ್ಟ್ ಗ್ಯಾಲರಿಯನ್ನು ವೀಕ್ಷಿಸಿದರು. ಅಲ್ಲಿನ ರಾಷ್ಟ್ರದ ಪಿತಾಮಹಾ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ಪುಷ್ಪರಾರವನ್ನಿತ್ತು ನಮಿಸಿದ್ದರು. ನಾಡಿನ ಮತ್ತು ದೇಶವಿದೇಶದ ಹಲವಾರು ಗಣ್ಯರು ಈ ಅಧ್ಯಯನ ಕೇಂದ್ರಕ್ಕೆ ಭೇಟಿಯನ್ನಿತ್ತು ಪೆÇ್ರ| ತುಕಾರಾಮ ಪೂಜಾರಿ ಅವರ ದೂರದೃಷ್ಠಿತ್ವ ಹಾಗೂ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here